ಭಾರತ- ಪಾಕ್ ಕ್ರಿಕೆಟ್ ಕದನ ಟಾಪ್ 5 ಪಂದ್ಯಗಳು
ಲಂಡನ್, ಜೂನ್ 04: ಐಸಿಸಿ ಆಯೋಜನೆಯ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳು ಅನೇಕ ರೋಚಕ ಕ್ಷಣಗಳನ್ನು ಪ್ರೇಕ್ಷಕರಿಗೆ ನೀಡಿದೆ.
ಅಭಿಮಾನಿಗಳು ಸಂಭ್ರಮದಿಂದ ಆಚರಿಸಿವ ಈ ಕ್ರಿಕೆಟ್ ಕದನ ಮತ್ತೆ ಜರುಗುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿ ತನಕ ನೆನಪಲ್ಲಿ ಉಳಿಯಬಲ್ಲ ಟಾಪ್ 5 ಪಂದ್ಯಗಳತ್ತ ಅವಲೋಕನ ಇಲ್ಲಿದೆ.[ಭಾರತ ಹಾಗೂ ಪಾಕಿಸ್ತಾನ 10 ಸಂಗತಿಗಳು]
ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದು ನಾಲ್ಕನೇ ಮುಖಾಮುಖಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರ ಭಾರತದ ಮೇಲೆ ಪಾಕಿಸ್ತಾನ ಮೇಲುಗೈ ಸಾಧಿಸಿದೆ. 2-1 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.[ಭಾರತ-ಪಾಕ್ ಮುಖಾಮುಖಿ: ಇತಿಹಾಸ ಹೇಳುವ 5 ಮಹತ್ವದ ಅಂಶ]
1978ರಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಕ್ರಿಕೆಟ್ ಏಕದಿನ ಪಂದ್ಯವನ್ನಾಡಿದ್ದು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 132 ಪಂದ್ಯಗಳಲ್ಲಿ ಇತ್ತಂಡಗಳು ಮುಖಾಮುಖಿಯಾಗಿವೆ.ಪಾಕಿಸ್ತಾನದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಭಾರತದ ಯಶಸ್ಸು ಶೇ. 41.7ರಷ್ಟು ಮಾತ್ರ.[ಟೀಂ ಇಂಡಿಯಾ ಪಂದ್ಯಗಳಿಗೆ ಫುಲ್ ಗೈಡ್]
ಜಾವೇದ್ ಮಿಯಾಂದಾದ್- ಕಿರಣ್ ಮೋರೆ, ಅಮೀರ್ ಸೊಹೈಲ್- ವೆಂಕಟೇಶ್ ಪ್ರಸಾದ್, ಶೋಯೆಬ್ ಅಖ್ತರ್- ಸೆಹ್ವಾಗ್, ಹರ್ಭಜನ್ ಹಾಗೂ ಶೋಯೆಬ್ ಅಖ್ತರ್ ನಡುವೆ ಕಿತ್ತಾಟ, ವಾಗ್ಯುದ್ಧದ ನಡುವೆ ಉತ್ತಮ ಫಲಿತಾಂಶ ನೀಡಿದ ಟಾಪ್ 5 ಪಂದ್ಯಗಳ ವಿವರ ಮುಂದಿದೆ...[ಮಿಯಾಂದಾದ್ ಹೊಡೆದ ಲಾಸ್ಟ್ ಬಾಲ್ ಸಿಕ್ಸ್, ವಿಲನ್ ಆದ ಚೇತನ್ ಶರ್ಮಾ]

1999 ವಿಶ್ವಕಪ್ ಕ್ರಿಕೆಟ್
ಮ್ಯಾಂಚೆಸ್ಟರ್ ನಲ್ಲಿ ನಡೆದ 1999 ರ ವಿಶ್ವಕಪ್ ಸೂಪರ್ ಸಿಕ್ಸ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 227/6 ಸ್ಕೋರ್ ಮಾಡಿತ್ತು. ದ್ರಾವಿಡ್ 61 ಗರಿಷ್ಠ ಸ್ಕೋರರ್. ಪಾಕಿಸ್ತಾನ ಗೆಲುವಿನ ನಿರೀಕ್ಷೆಯಲ್ಲಿ ರನ್ ಚೇಸ್ ಆರಂಭಿಸಿದರೂ 180ಸ್ಕೋರಿಗೆ ಆಲೌಟ್ ಆಯಿತು. ವೆಂಕಟೇಶ್ ಪ್ರಸಾದ್ 27ರನ್ನಿಗೆ 5ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಎನಿಸಿದರು. ವಾಸಿಂ ಅಕ್ರಂ ನಾಯಕತ್ವದ ತಂಡದ ವಿರುದ್ಧ ಅಜರುದ್ದೀನ್ ನೇತೃತ್ವದ ತಂಡ 47ರನ್ ಗಳ ಜಯ ದಾಖಲಿಸಿತು.[ಸ್ಕೋರ್ ಕಾರ್ಡ್]

1996 ವಿಲ್ಸ್ ವಿಶ್ವಕಪ್
ಆರಂಭಿಕ ಆಟಗಾರ ನವಜ್ಯೋತ್ ಸಿಧು 93ರನ್ ನೆರವಿನಿಂದ ಭಾರತ 287/8 ಸ್ಕೋರ್ ಮಾಡಿತ್ತು. ಪಾಕಿಸ್ತಾನದ ಪರ ಅಮೀರ್ ಸೊಹೈಲ್ (55), ಸಯೀದ್ ಅನ್ವರ್(48) ಉತ್ತಮ ಆರಂಭ ನೀಡಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೊಹೈಲ್ ಹಾಗೂ ವೆಂಕಟೇಶ್ ಪ್ರಸಾದ್ ನಡುವಿನ ಕಿತ್ತಾಟ ಮರೆಯಲು ಸಾಧ್ಯವಿಲ್ಲ. ಸೊಹೈಲ್ ವಿಕೆಟ್ ಬಿದ್ದಿದ್ದೆ ಪಾಕ್ ಗೆ ಹಿನ್ನಡೆಯಾಯಿತು.ಪ್ರಸಾದ್. ಕುಂಬ್ಳೆ 3 ವಿಕೆಟ್ ಪಡೆದು 248ರನ್ನಿಗೆ ಪಾಕಿಸ್ತಾನವನ್ನು ನಿಯಂತ್ರಿಸಿದರು.

2003 ವಿಶ್ವಕಪ್ ಕ್ರಿಕೆಟ್
ಪಾಕಿಸ್ತಾನ : 276/7 ಸಯೀದ್ ಅನ್ವರ್ 101
ಭಾರತ : 45.4 ಓವರ್ ಗಳಲ್ಲಿ 276/4. ದ್ರಾವಿಡ್ ಅಜೇಯ 44, ಯುವರಾಜ್ ಸಿಂಗ್ 55
ಪಂದ್ಯಶ್ರೇಷ್ಠ : ಸಚಿನ್ ತೆಂಡೂಲ್ಕರ್ 98ರನ್ (75 ಎಸೆತಗಳು)

2011 ವಿಶ್ವಕಪ್
2011ರ ಮಾರ್ಚ್ 30ರಂದು ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 29ರನ್ ಗಳ ಜಯ.
* ಸಚಿನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಠ (85 ರನ್)
ಭಾರತ: 2608/9, ವಹಾಬ್ ರಿಯಾಜ್ 46/5
ಪಾಕಿಸ್ತಾನ: 49.5 ಓವರ್ ಗಳಲ್ಲಿ 231 ಮಿಸ್ಬಾ ಉಲ್ ಹಕ್ 56,

2004 ಚಾಂಪಿಯನ್ಸ್ ಟ್ರೋಫಿ
* ಭಾರತ ವಿರುದ್ಧ ಪಾಕಿಸ್ತಾನಕ್ಕೆ 3 ವಿಕೆಟ್ ಗಳ ಜಯ
ಭಾರತ 49.5 ಓವರ್ ಗಳಲ್ಲಿ 200 ದ್ರಾವಿಡ್ 67, ನವೀದ್ ಅಲ್ ಹಸನ್, ಶೋಯಿಬ್ ಅಖ್ತರ್ ತಲಾ 4 ವೆಕ್ಟ್
ಪಾಕಿಸ್ತಾನ : 49.2 ಓವರ್ ಗಳಲ್ಲಿ 201/7 ( ಮೊಹಮ್ಮದ್ ಯೂಸುಫ್ 81)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications