ಭಾರತ ಹಾಗೂ ಪಾಕ್ ಪಂದ್ಯಕ್ಕೆ ಎದುರಾಗಿದೆ ಭೀತಿ!
ಬರ್ಮಿಂಗ್ ಹ್ಯಾಮ್, ಜೂನ್ 04 : ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ನಲ್ಲಿರುವ ಒವಲ್ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಉಗ್ರರ ಭೀತಿಯಂತೂ ಸದ್ಯಕ್ಕಿಲ್ಲ, ಆದರೆ, ಮತ್ತೊಂದು ಭೀತಿ ಬಲವಾಗಿ ಕಾಡುತ್ತಿದೆ. ಹವಾನ ವರದಿಗಳ ಪ್ರಕಾರ ಪಂದ್ಯ ನಡೆಯುವ ಪ್ರದೇಶದಲ್ಲಿ ಮಳೆ ಸಂಭವವಿದೆ. ಮಳೆ ಬಿದ್ದು ಪಂದ್ಯ ರದ್ದಾದರೆ ಉಭಯ ತಂಡಗಳು ಅಂಕಗಳನ್ನು ಹಂಚಿಕೊಳ್ಳಬೇಕಾಗುತ್ತದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಉಗ್ರರ ದಾಳಿ ಭೀತಿ ಎದುರಾಗಿತ್ತು. ಆದರೆ, ಲಂಡನ್ನಿನ ದಾಳಿ ನಂತರ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಯಾವುದೇ ಅಪ್ಡೇಟ್ ನೀಡಿಲ್ಲ. ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ ಇದೆ ಹೊರತೂ ಉಗ್ರರ ಭೀತಿ ಎದುರಾಗಿಲ್ಲ. ಮಳೆ ಭೀತಿಯಂತೂ ಇದೆ.[ಉಗ್ರರ ದಾಳಿ: ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಕಥೆ ಏನು?]

ಜೂನ್ 2ರಂದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆ ರದ್ದಾಗಿದ್ದರಿಂದ ಉಭಯ ತಂಡಗಳು ಅಂಕಗಳನ್ನು ಹಂಚಿಕೊಳ್ಳಬೇಕಾಯಿತು.[ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಮರ: 10 ಸ್ವಾರಸ್ಯಗಳು]
ಜೂನ್ 3ರಂದು ಭಾರತ ತಂಡ ಮಳೆಯ ಕಾರಣ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಬೇಕಾಯಿತು. ಭಾನುವಾರ(ಜೂನ್ 04) ದಂದು ಬೆಳಗ್ಗೆ, ಮಧ್ಯಾಹ್ನ ವೇಳೆಗೆ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ. ಪಂದ್ಯಕ್ಕೆ ಅಡಚಣೆಯಾಗುವ ನಿರೀಕ್ಷೆಯಿದೆ.
ಲಂಡನ್ನಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ(ಜೂನ್ 03) ರಾತ್ರಿ ಉಗ್ರರ ದಾಳಿ ಸಂಭವಿಸಿದ್ದು, 7 ಮಂದಿ ಸತ್ತು, ಹಲವಾರು ಮಂದಿಗೆ ಗಾಯಗಳಾಗಿವೆ. ಲಂಡನ್ನಿನ ಬರೋ, ಲಂಡನ್ ಬ್ರಿಡ್ಜ್, ದಿ ವಾಕ್ಸ್ ಹಾಲ್ ಪ್ರದೇಶದಲ್ಲಿ ಉಗ್ರರ ದಾಳಿ ನಡೆದಿದೆ. ಪಾದಚಾರಿಗಳ ಮೇಲೆ ವಾಹನದಿಂದ ಡಿಕ್ಕಿ ಹೊಡೆಯಲಾಗಿದೆ. ಇನ್ನೊಂದೆಡೆ 'ಒಂಟಿ ತೋಳ ದಾಳಿ' ಮಾದರಿಯಲ್ಲಿ ಸಾರ್ವಜನಿಕರಿಗೆ ಚಾಕುವಿನಿಂದ ಇರಿದು ಕೊಲ್ಲಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications