Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಉಗ್ರರ ದಾಳಿ: ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಕಥೆ ಏನು?

ಬರ್ಮಿಂಗ್ ಹ್ಯಾಮ್, ಜೂನ್ 04: ಲಂಡನ್ನಿನಲ್ಲಿ ಮೂರು ಕಡೆಗಳಲ್ಲಿ ಉಗ್ರರ ದಾಳಿ ನಡೆದಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಮೇಲೆ ಉಗ್ರರ ಕರಿನೆರಳು ಬೀಳುವ ಸಂಭವವಿದೆ.ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಕಥೆ ಏನು?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಉಗ್ರರ ದಾಳಿ ಭೀತಿ ಎದುರಾಗಿತ್ತು. ಆದರೆ, ಲಂಡನ್ನಿನ ದಾಳಿ ನಂತರ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಯಾವುದೇ ಅಪ್ಡೇಟ್ ನೀಡಿಲ್ಲ. ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ ಇದೆ ಹೊರತೂ ಉಗ್ರರ ಭೀತಿ ಎದುರಾಗಿಲ್ಲ.[ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಮರ: 10 ಸ್ವಾರಸ್ಯಗಳು]

ಅಲ್ಲದೆ, ಲಂಡನ್ನಿನಿಂದ ಬರ್ಮಿಂಗ್ ಹ್ಯಾಮ್ ವಿಮಾನ ಮಾರ್ಗದಲ್ಲಿ 164.2 ಕಿ.ಮೀ ಹಾಗೂ ರಸ್ತೆ ಮಾರ್ಗದಲ್ಲಿ 208.2 ಕಿ.ಮೀ ದೂರದಲ್ಲಿದೆ. ಎಜ್ ಬಾಸ್ಟನ್ ನ ಒವಲ್ ನಲ್ಲಿ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದೆ. ಜೂನ್ 05ರಂದು ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ನಡುವೆ ಲಂಡನ್ನಿನ ಒವಲ್ ಮೈದಾನದಲ್ಲಿ ನಡೆಯಲಿದ್ದು, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಸೂಚಿಸಲಾಗಿಲ್ಲ.[ಭಾರತವೇ ಫೇವರಿಟ್ ಎಂದ ಪಾಕಿಸ್ತಾನದ ಅಪ್ಪಟ ಅಭಿಮಾನಿ]

London hit by terror attack: What will happen to India-Pakistan Champions Trophy match?


ಲಂಡನ್ನಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ(ಜೂನ್ 03) ರಾತ್ರಿ ಉಗ್ರರ ದಾಳಿ ಸಂಭವಿಸಿದ್ದು, 7 ಮಂದಿ ಸತ್ತು, ಹಲವಾರು ಮಂದಿಗೆ ಗಾಯಗಳಾಗಿವೆ.[ಭಾರತ ಹಾಗೂ ಪಾಕ್ ಪಂದ್ಯಕ್ಕೆ ಎದುರಾಗಿದೆ ಭೀತಿ!]

ಲಂಡನ್ನಿನ ಬರೋ, ಲಂಡನ್ ಬ್ರಿಡ್ಜ್, ದಿ ವಾಕ್ಸ್ ಹಾಲ್ ಪ್ರದೇಶದಲ್ಲಿ ಉಗ್ರರ ದಾಳಿ ನಡೆದಿದೆ. ಪಾದಚಾರಿಗಳ ಮೇಲೆ ವಾಹನದಿಂದ ಡಿಕ್ಕಿ ಹೊಡೆಯಲಾಗಿದೆ. ಇನ್ನೊಂದೆಡೆ 'ಒಂಟಿ ತೋಳ ದಾಳಿ' ಮಾದರಿಯಲ್ಲಿ ಸಾರ್ವಜನಿಕರಿಗೆ ಚಾಕುವಿನಿಂದ ಇರಿದು ಕೊಲ್ಲಲಾಗಿದೆ.[ಚಾಂಪಿಯನ್ಸ್ ಟ್ರೋಫಿ 2017: ಟೀಂ ಇಂಡಿಯಾ ಪಂದ್ಯಗಳಿಗೆ ಫುಲ್ ಗೈಡ್]

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+