ಕಾಮನ್‌ವೆಲ್ತ್ ಗೇಮ್ಸ್ 2022: ಭಾರತದ ಶೇ.50ರಷ್ಟು ಸ್ಪರ್ಧಿಗಳು ಈ 5 ರಾಜ್ಯದವರು!

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಭರ್ಜರಿ ಪ್ರದರ್ಶನ ಮೂಲಕ ಮಿಂಚಿನ ಆಟವಾಡಿದ್ದಾರೆ. ಈಗಾಗಲೇ 18 ಪದಕ (5 ಚಿನ್ನ, 6 ಬೆಳ್ಳಿ, 7 ಕಂಚು) ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಮುಂದುವರಿದಿದೆ.
ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಭಾರತ 215 ಅಥ್ಲೀಟ್ ಗಳ ತಂಡವನ್ನು ಕಣಕ್ಕಿಳಿಸಿದೆ. ಆದರೆ 215 ಜನರ ಪೈಕಿ ಶೇಕಡಾ 50ರಷ್ಟು ಜನರು ಕೇವಲ ಐದು ರಾಜ್ಯದವರೇ ಆಗಿದ್ದಾರೆ ಎಂಬುದು ನಿಜಕ್ಕೂ ಆಶ್ಚರ್ಯಕ್ಕೆ ಕಾರಣವಾಗಿದೆ.
Stats of India.in ಅಂಕಿಅಂಶಗಳ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 20ರಷ್ಟು ಜನಸಂಖ್ಯೆ ಹೊಂದಿರುವ ಐದು ರಾಜ್ಯಗಳಿಂದಲೇ ಶೇಕಡಾ 50 ಸ್ಪರ್ಧಿಗಳು ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾಗವಹಿಸಿದ್ದಾರೆ ಎಂಬುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಪಂಜಾಬ್ ಹರಿಯಾಣ ರಾಜ್ಯದವರೇ ಹೆಚ್ಚು!
215 ಕ್ರೀಡಾಪಟುಗಳಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಈ ಎರಡು ರಾಜ್ಯಗಳ 30 ಪ್ರತಿಶತ ಕ್ರೀಡಾಪಟುಗಳು (65) ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದಾರೆ. ಹರಿಯಾಣದಿಂದ 18.1 ಪ್ರತಿಶತ ಮತ್ತು ಪಂಜಾಬ್‌ನಿಂದ 12.1 ಪ್ರತಿಶತದಷ್ಟಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಪಂಜಾಬ್‌ನಿಂದ ಹೆಚ್ಚು ಪುರುಷರ ಹಾಕಿ ಆಟಗಾರರು ಮತ್ತು ಹರಿಯಾಣದ ಮಹಿಳಾ ಹಾಕಿ ಆಟಗಾರರಾಗಿದ್ದಾರೆ.
ಭಾರತದ ಈ ಪ್ಲೇಯರ್ ವಿಶ್ವದ ನಂ 1 ಆಗೋದ್ರಲ್ಲಿ ಅನುಮಾನವಿಲ್ಲ, ವಿಶ್ವಕಪ್‌ಗೆ ಆಯ್ಕೆ ಮಾಡಿ: ಕೃಷ್ಣಮಾಚಾರಿ ಶ್ರೀಕಾಂತ್

ಐದು ರಾಜ್ಯಗಳಿಂದ ಶೇಕಡಾ 50ರಷ್ಟು ಸ್ಪರ್ಧಿಗಳು
ಒಟ್ಟು 215 ಸ್ಪರ್ಧಿಗಳಲ್ಲಿ ಶೇಕಡಾ 50 ರಷ್ಟು ಕ್ರೀಡಾಪಟುಗಳು ಹರಿಯಾಣ, ಪಂಜಾಬ್, ತಮಿಳುನಾಡು, ದೆಹಲಿ ಮತ್ತು ಮಹಾರಾಷ್ಟ್ರದವರಾಗಿದ್ದಾರೆ. ತೆಲಂಗಾಣದ ಜನಸಂಖ್ಯೆಯ 1/12 ಭಾಗದಷ್ಟು ಇರುವ ಮಣಿಪುರದಿಂದಲೇ ಏಳು ಕ್ರೀಡಾಪಟುಗಳು ಕಣಕ್ಕೆ ಇಳಿದಿದ್ದಾರೆ. ತೆಲಂಗಾಣ ಕೂಡ ಇಷ್ಟೇ ಪ್ರಮಾಣದಲ್ಲಿ ಸ್ಪರ್ಧಿಗಳನ್ನ ಕಣಕ್ಕಿಳಿಸಿರುವುದು ಟೀಕೆಗೆ ಕಾರಣವಾಗಿದೆ.
ಪದಕ ಗೆದ್ದವರಿಗೆ ಕೋಟಿಗಟ್ಟಲೇ ಬಹುಮಾನ ಘೋಷಿಸುವ ಸರ್ಕಾರಗಳು, ಕ್ರೀಡೆಗೆ ಏಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಹೆಚ್ಚಿನ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಂತೆ ವಾತಾವರಣ ನಿರ್ಮಿಸಿಕೊಡುತ್ತಿಲ್ಲ ಎಂದು ಕ್ರೀಡಾಭಿಮಾನಿಗಳು ಟೀಕಿಸಿದ್ದಾರೆ.
ವಿರಾಟ್ ಕೊಹ್ಲಿ ನಂತರದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಈ ಮೂವರು ಕ್ರಿಕೆಟಿಗರು 2022ರಲ್ಲಿ ನಿವೃತ್ತಿ

2022ರ ಕಾಮನ್‌ವೆಲ್ತ್‌ನಲ್ಲಿ ಭಾರತ ಪರ ಪದಕ ಗೆದ್ದವರು
1 ಸಂಕೇತ್ ಸರ್ಗರ್: ಬೆಳ್ಳಿ (ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್)
2 ಗುರುರಾಜ ಪೂಜಾರಿ: ಕಂಚು (ಪುರುಷರ 61 ಕೆಜಿ ವೇಟ್ ಲಿಫ್ಟಿಂಗ್)
3 ಮೀರಾಬಾಯಿ : ಚಿನ್ನ (ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ )
4 ಬಿಂದ್ಯಾರಾಣಿ ದೇವಿ: ಬೆಳ್ಳಿ (ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್ )
5 ಜೆರೆಮಿ ಲಾಲ್ರಿನ್ನುಂಗಾ: ಚಿನ್ನ (ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ )
6 ಅಚಿಂತಾ ಶೆಯುಲಿ: ಚಿನ್ನ (ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್ )
7 ಸುಶೀಲಾ ದೇವಿ ಲಿಕ್ಮಾಬಮ್: ಬೆಳ್ಳಿ (ಮಹಿಳೆಯರ 48 ಕೆಜಿ ಜೂಡೋ)
8 ವಿಜಯ್ ಕುಮಾರ್ ಯಾದವ್ :ಕಂಚು (ಪುರುಷರ 60 ಕೆಜಿ ಜೂಡೋ)
9 ಹರ್ಜಿಂದರ್ ಕೌರ್ :ಕಂಚು (ಮಹಿಳೆಯರ 71 ಕೆಜಿ ವೇಟ್ ಲಿಫ್ಟಿಂಗ್)
10 ಭಾರತೀಯ ಮಹಿಳಾ ತಂಡ: ಚಿನ್ನ (ಮಹಿಳೆಯರ ನಾಲ್ಕು ಲಾನ್ ಬೌಲ್‌ಗಳು)
11 ವಿಕಾಸ್ ಠಾಕೂರ್ :ಬೆಳ್ಳಿ (ಪುರುಷರ 96 ಕೆಜಿ ವೇಟ್ ಲಿಫ್ಟಿಂಗ್)
12 ಭಾರತೀಯ ಪುರುಷರ ತಂಡ: ಚಿನ್ನ (ಪುರುಷರ ತಂಡ ಟೇಬಲ್ ಟೆನಿಸ್)
13 ಭಾರತೀಯ ಮಿಶ್ರ ತಂಡ: ಬೆಳ್ಳಿ (ಮಿಶ್ರ ತಂಡ ಬ್ಯಾಡ್ಮಿಂಟನ್)
14 ಲವ್‌ಪ್ರೀತ್ ಸಿಂಗ್: ಕಂಚು (ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್)
15 ಸೌರವ್ ಘೋಸಲ್ :ಕಂಚು (ಪುರುಷರ ಸಿಂಗಲ್ಸ್ ಸ್ಕ್ವಾಷ್)
16 ತುಲಿಕಾ ಮಾನ್ :ಬೆಳ್ಳಿ (ಮಹಿಳೆಯರ +78 ಕೆಜಿ ಜೂಡೋ)
17 ಗುರ್ದೀಪ್ ಸಿಂಗ್: ಕಂಚು (ಪುರುಷರ +109 ಕೆಜಿ ವೇಟ್ ಲಿಫ್ಟಿಂಗ್)
18 ತೇಜಸ್ವಿನ್ ಶಂಕರ್: ಕಂಚು (ಪುರುಷರ ಹೈಜಂಪ್ ಅಥ್ಲೆಟಿಕ್ಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications