CSK vs PBKS Highlights: ಸತತ 3 ಪಂದ್ಯ ಸೋತ ಸಿಎಸ್‌ಕೆ, ಪಂಜಾಬ್‌ಗೆ 54ರನ್‌ಗಳ ಜಯ

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 181ರನ್‌ಗಳ ಗುರಿ ಬೆನ್ನತ್ತಲಾಗದೇ ಚೆನ್ನೈ ಸೂಪರ್ ಕಿಂಗ್ಸ್ 54ರನ್‌ಗಳ ಸೋಲಿನ ಮೂಲಕ ಪ್ರಸ್ತುತ ಆವೃತ್ತಿಯಲ್ಲಿ ಸತತ ಮೂರು ಪಂದ್ಯಗಳನ್ನ ಸೋತಿದೆ.
ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಚಾಂಪಿಯನ್ ಆಗಲು ಪ್ರಮುಖ ಕಾರಣನಾಗಿದ್ದ, ಆರೆಂಜ್ ಕ್ಯಾಪ್ ವಿನ್ನರ್ ರುತುರಾಜ್ ಗಾಯಕ್ವಾಡ್ ಮತ್ತೊಮ್ಮೆ ವಿಫಲಗೊಂಡಿದ್ದು, ಕೇವಲ 1ರನ್‌ಗೆ ವಿಕೆಟ್ ಒಪ್ಪಿಸಿದ್ರು. ಇದ್ರ ಬೆನ್ನಲ್ಲೇ ಮೊಯಿನ್ ಅಲಿ ಯುವ ಬೌಲರ್ ವೈಭವ್ ಅರೋರಾಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು.

ಪಂಜಾಬ್ ದಾಳಿಗೆ ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್
ಮೊದಲೆರಡು ವಿಕೆಟ್ ಪತನದ ಬಳಿಕ ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್ ನಿಲ್ಲಲಿಲ್ಲ. ರುತುರಾಜ್ ಹಾಗೂ ರಾಬಿನ್ ಉತ್ತಪ್ಪ ಮೊದಲ ಮೂರು ಓವರ್‌ನಲ್ಲೇ ಔಟಾದ್ರು. ಮೊಯಿನ್ ಅಲಿ ಬಂದಷ್ಟೇ ವೇಗವಾಗಿ ಶೂನ್ಯಕ್ಕೆ ಪೆವಿಲಿಯನ್ ಸೇರಿಬಿಟ್ಟರು. ಇದರ ಜೊತೆಗೆ ನಾಯಕ ರವೀಂದ್ರ ಜಡೇಜಾ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ನುಂಗಲಾರದ ತುತ್ತಾಯಿತು.
ಇದರ ಜೊತೆಗೆ ಅಂಬಟಿ ರಾಯುಡು ಆಟವೂ 13ರನ್‌ಗೆ ಮುಕ್ತಾಯವಾಯಿತು.

ಏಕಾಂಗಿ ಹೋರಾಟ ನಡೆಸಿದ ಶಿವಂ ದುಬೆ
ಒಂದೆಡೆ ವಿಕೆಟ್ ಉರುಳಿದ್ರೆ, ಆಲ್‌ರೌಂಡರ್ ಶಿವಂ ದುಬೆ ಎದುರಾಳಿ ಬೌಲರ್‌ಗಳನ್ನ ಬೆಂಡೆತ್ತಿದ್ರು. 30 ಎಸೆತಗಳಲ್ಲಿ 57 ರನ್ ಸಿಡಿಸಿದ ಶಿವಂ ದುಬೆ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು 3 ಸಿಕ್ಸರ್ ಕಲೆಹಾಕಿದ್ರು. ಆದ್ರೆ ಮಾಜಿ ನಾಯಕ ಮಹೇಂದ್ರ ಸಿಂಗ್ ನಿಧಾನಗತಿಯ ಬ್ಯಾಟಿಂಗ್‌ಗೆ ಮೊರೆ ಹೋದರು. 28 ಎಸೆತಗಳಲ್ಲಿ 23ರನ್ ಕಲೆಹಾಕಿದ ಧೋನಿ ಕೊನೆಯಲ್ಲಿ ವಿಕೆಟ್ ಒಪ್ಪಿಸಿದ್ರು.
ಅಂತಿಮವಾಗಿ ಸಿಎಸ್‌ಕೆ ಗುರಿ ತಲುಪಲಾಗದೇ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ 126 ರನ್‌ಗಳಿಗೆ ತಂಡ ಆಲೌಟ್ ಆಯಿತು. ಪರಿಣಾಮ ಪಂಜಾಬ್ ಕಿಂಗ್ಸ್ 54ರನ್‌ಗಳ ಗೆಲುವಿನೊಂದಿಗೆ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿದೆ. ಇದು ರನ್‌ಗಳ ಆಧಾರದಲ್ಲಿ ಸಿಎಸ್‌ಕೆಗೆ ಎರಡನೇ ಹೀನಾಯ ಸೋಲಾಗಿದೆ.

ಆರಂಭಿಕ ಆಘಾತ ಅನುಭವಿಸಿದ್ದ ಪಂಜಾಬ್ ಕಿಂಗ್ಸ್
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿದ್ದು, ಸಿಎಸ್‌ಕೆಗೆ 181ರನ್ ಟಾರ್ಗೆಟ್ ನೀಡಿದೆ.
ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ಮೊದಲ ಓವರ್‌ನಲ್ಲೇ ಮುಕೇಶ್ ಚೌಧರಿಗೆ ವಿಕೆಟ್ ಒಪ್ಪಿಸಿದ್ರೆ, ಎರಡನೇ ಓವರ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಅದ್ಭುತ ಸ್ಟಂಪಿಂಗ್‌ನಿಂದಾಗಿ ಭಾನುಕ ರಾಜಪಕ್ಷೆ ರನೌಟ್ ಆದ್ರು.
ಮೊದಲೆರಡು ವಿಕೆಟ್ ಪತನದ ಬಳಿಕ ಮೂರನೇ ವಿಕೆಟ್‌ಗೆ ಶಿಖರ್ ಧವನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಶತಕದ ಜೊತೆಯಾಟದ ಮೂಲಕ ಕುಸಿದ ತಂಡಕ್ಕೆ ಆಧಾರವಾದ್ರು. ಶಿಖರ್ ಧವನ್ 24 ಎಸೆತಗಳಲ್ಲಿ 33 ರನ್‌ಗಳಿಸಿ ಔಟಾದ್ರೆ, ಲಿಯಾಮ್ ಲಿವಿಂಗ್‌ಸ್ಟೋನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. ಐದನೇ ಓವರ್‌ನಲ್ಲಿ ಮುಕೇಶ್ ಚೌಧರಿ ಬೌಲಿಂಗ್‌ನಲ್ಲಿ 26 ರನ್ ಕಲೆಹಾಕಿದ್ರು.

ಅಬ್ಬರಿಸಿದ ಲಿಯಾಮ್ ಲಿವಿಂಗ್‌ಸ್ಟೋನ್
32 ಎಸೆತಗಳಲ್ಲಿ 60 ರನ್ ಸಿಡಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು. ಸೀಸನ್‌ನಲ್ಲಿಯೇ ಅತಿ ದೂರ (108m) ಸಿಕ್ಸರ್ ಸಿಡಿಸಿ ಮಿಂಚಿದ್ರು.
ಧವನ್ ಮತ್ತು ಲಿವಿಂಗ್‌ಸ್ಟೋನ್ ವಿಕೆಟ್ ಪತನದ ಬಳಿಕ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಧಾರವಾಗಲಿಲ್ಲ. ಜಿತೇಶ್ ಶರ್ಮಾ 26 ರನ್‌ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿದರು. ಅಂತಿಮವಾಗಿ ಪಂಜಾಬ್ ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿದೆ.
ಚೆನ್ನೈ ಪರ ಕ್ರಿಸ್ ಜೋರ್ಡಾನ್, ಲಿಯಾಮ್ ಪ್ರಿಟೋರಿಯಸ್ ತಲಾ 2 ವಿಕೆಟ್ ಪಡೆದ್ರೆ, ಮುಕೇಶ್ ಚೌಧರಿ, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.


ಪಾಯಿಂಟ್ಸ್ ಟೇಬಲ್
ಐಪಿಎಲ್ 2022ರ ಸೀಸನ್‌ನಲ್ಲಿ ಸಿಎಸ್‌ಕೆ ವಿರುದ್ಧ ಗೆಲುವಿನ ಮೂಲಕ ಪಂಜಾಬ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇ ಜಿಗಿದಿದ್ದು, ಮೂರು ಪಂದ್ಯಗಳಲ್ಲಿ ಎರಡು ಜಯ ಮತ್ತು ಒಂದು ಸೋಲಿನೊಂದಿಗೆ 4 ಪಾಯಿಂಟ್ಸ್ ಕಲೆಹಾಕಿದೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಮೂರು ಸ್ಥಾನದಲ್ಲಿ ಯಾವ ತಂಡ ಸ್ಥಾನ ಪಡೆದಿದೆ ಎಂಬುದನ್ನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications