CSK vs PBKS: ಚೆನ್ನೈ ಸೂಪರ್ ಕಿಂಗ್ಸ್‌ಗೆ 181 ರನ್ ಟಾರ್ಗೆಟ್

ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿದ್ದು, ಸಿಎಸ್‌ಕೆಗೆ 181ರನ್ ಟಾರ್ಗೆಟ್ ನೀಡಿದೆ.
ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ಮೊದಲ ಓವರ್‌ನಲ್ಲೇ ಮುಕೇಶ್ ಚೌಧರಿಗೆ ವಿಕೆಟ್ ಒಪ್ಪಿಸಿದ್ರೆ, ಎರಡನೇ ಓವರ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಅದ್ಭುತ ಸ್ಟಂಪಿಂಗ್‌ನಿಂದಾಗಿ ಭಾನುಕ ರಾಜಪಕ್ಷೆ ರನೌಟ್ ಆದ್ರು.
ಮೊದಲೆರಡು ವಿಕೆಟ್ ಪತನದ ಬಳಿಕ ಮೂರನೇ ವಿಕೆಟ್‌ಗೆ ಶಿಖರ್ ಧವನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಶತಕದ ಜೊತೆಯಾಟದ ಮೂಲಕ ಕುಸಿದ ತಂಡಕ್ಕೆ ಆಧಾರವಾದ್ರು. ಶಿಖರ್ ಧವನ್ 24 ಎಸೆತಗಳಲ್ಲಿ 33 ರನ್‌ಗಳಿಸಿ ಔಟಾದ್ರೆ, ಲಿಯಾಮ್ ಲಿವಿಂಗ್‌ಸ್ಟೋನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. ಐದನೇ ಓವರ್‌ನಲ್ಲಿ ಮುಕೇಶ್ ಚೌಧರಿ ಬೌಲಿಂಗ್‌ನಲ್ಲಿ 26 ರನ್ ಕಲೆಹಾಕಿದ್ರು.
32 ಎಸೆತಗಳಲ್ಲಿ 60 ರನ್ ಸಿಡಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು. ಸೀಸನ್‌ನಲ್ಲಿಯೇ ಅತಿ ದೂರ (108m) ಸಿಕ್ಸರ್ ಸಿಡಿಸಿ ಮಿಂಚಿದ್ರು.
ಧವನ್ ಮತ್ತು ಲಿವಿಂಗ್‌ಸ್ಟೋನ್ ವಿಕೆಟ್ ಪತನದ ಬಳಿಕ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಧಾರವಾಗಲಿಲ್ಲ. ಜಿತೇಶ್ ಶರ್ಮಾ 26 ರನ್‌ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿದರು. ಅಂತಿಮವಾಗಿ ಪಂಜಾಬ್ ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿದೆ.

ಚೆನ್ನೈ ಪರ ಕ್ರಿಸ್ ಜೋರ್ಡಾನ್, ಲಿಯಾಮ್ ಪ್ರಿಟೋರಿಯಸ್ ತಲಾ 2 ವಿಕೆಟ್ ಪಡೆದ್ರೆ, ಮುಕೇಶ್ ಚೌಧರಿ, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications