
ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸನ್‌ರೈಸರ್ಸ್ ಹೈದ್ರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿದೆ. ಈ ಮೂಲಕ ಎಸ್‌ಆರ್‌ಎಚ್‌ಗೆ 155 ರನ್‌ಗಳ ಗುರಿ ನೀಡಿದೆ.
ಸಿಎಸ್‌ಕೆ ಮತ್ತೊಮ್ಮೆ ಬಲಿಷ್ಠ ಆರಂಭ ಪಡೆಯುವಲ್ಲಿ ವಿಫಲಗೊಂಡಿದೆ. ಉತ್ತಮ ಅಡಿಪಾಯ ಹಾಕುವ ಭರವಸೆ ಮೂಡಿಸಿದ್ದ ರಾಬಿನ್ ಉತ್ತಪ್ಪ 11 ಎಸೆತಗಳಲ್ಲಿ 15 ರನ್ ಕಲೆಹಾಕಿ ಔಟಾದ್ರೆ, ರುತುರಾಜ್ ಗಾಯಕ್ವಾಡ್ ಮತ್ತೊಮ್ಮೆ ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ರು. ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ಬೌಲಿಂಗ್‌ನಲ್ಲಿ ಗಾಯಕ್ವಾಡ್ 16ರನ್‌ಗೆ ಕ್ಲೀನ್ ಬೌಲ್ಡ್ ಆದ್ರು.
ಒಂದೆಡೆ ವಿಕೆಟ್ ಉರುಳಿದ್ರೆ, ಮೂರನೇ ವಿಕೆಟ್‌ಗೆ ಮೊಯಿನ್ ಅಲಿ ಮತ್ತು ಅಂಬಟಿ ರಾಯುಡು ಸಿಎಸ್‌ಕೆ ಆರಂಭಿಕ ಕುಸಿತದಿಂದ ಹೊರತರುವ ಪ್ರಯತ್ನ ನಡೆಸಿದ್ರು. ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿಗೆ ಬ್ರೇಕ್ ನೀಡಿದ್ದು ವಾಷಿಂಗ್ಟನ್ ಸುಂದರ್. ತನ್ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಉತ್ತಮವಾಗಿ ಆಡ್ತಿದ್ದ ಅಂಬಟಿ ರಾಯುಡು (27) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.
35 ಎಸೆತಗಳಲ್ಲಿ 48ರನ್ ಕಲೆಹಾಕಿದ್ದ ಮೊಯಿನ್ ಅಲಿಗೆ ಏಡನ್ ಮಕ್ರಾಮ್ ಖೆಡ್ಡಾ ತೋಡಿದ್ರು. ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಯೊಂದಿಗೆ ಅಪಾಯಕಾರಿಯಾಗಿದ್ದ ಮೊಯಿನ್ ಅಲಿ ಪಾರ್ಟ್‌ಟೈಮ್ ಸ್ಪಿನ್ನರ್ ಏಡನ್ ಮಕ್ರಾಮ್‌ಗೆ ಸ್ಪಿನ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿದ್ರು. ಇದು ಕೇನ್ ವಿಲಿಯಮ್ಸನ್ ಬ್ರಿಲಿಯಂಟ್ ನಾಯಕತ್ವಕ್ಕೆ ಸಾಕ್ಷಿಯಾಯ್ತು.

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಸಿಎಸ್‌ಕೆ ಕೈ ಹಿಡಿಯುವಲ್ಲಿ ವಿಫಲರಾದ್ರು. ಶಿವಂ ದುಬೆ 3, ಎಂಎಸ್ ಧೋನಿ 3 ರನ್‌ಗಳಿಸಿ ಔಟಾದ್ರೆ, ನಾಯಕ ಜಡೇಜಾ 23ರನ್‌ಗಳ ಕೊಡುಗೆ ನೀಡಿದ್ರು. ಕೊನೆಯಲ್ಲಿ ಡ್ವೇನ್ ಬ್ರಾವೋ ಅಜೇಯ 8, ಕ್ರಿಸ್ ಜೋರ್ಡಾನ್ ಅಜೇಯ 6 ರನ್ ಕಲೆಹಾಕಿದರು. ಅಂತಿಮವಾಗಿ ಸಿಎಸ್‌ಕೆ 154ರನ್ ಕಲೆಹಾಕಿತು.
ಸನ್‌ರೈಸರ್ಸ್ ಹೈದ್ರಾಬಾದ್ ಪರ ಟಿ. ನಟರಾಜನ್, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದ್ರೆ, ಭುವನೇಶ್ವರ್ ಕುಮಾರ್, ಏಡನ್ ಮಕ್ರಾಮ್, ಮಾರ್ಕೊ ಜಾನ್ಸನ್ ತಲಾ 1 ವಿಕೆಟ್ ಪಡದರು.
ಸನ್‌ರೈಸರ್ಸ್ ಹೈದ್ರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್(ವಿಕೆಟ್ ಕೀಪರ್), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್, ಟಿ ನಟರಾಜನ್
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ(ನಾಯಕ), ಶಿವಂ ದುಬೆ, ಎಂಎಸ್ ಧೋನಿ(ವಿಕೆಟ್ ಕೀಪರ್), ಡ್ವೇನ್ ಬ್ರಾವೊ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ