CSK vs SRH: ಅತಿ ವೇಗದ ಬೌಲಿಂಗ್ ಮಾಡಿದ ಉಮ್ರಾನ್ ಮಲ್ಲಿಕ್, IPLನಲ್ಲಿ ಹೊಸ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವೇಗದ ಬೌಲರ್ ಉಮ್ರಾನ್ ಮಲ್ಲಿಕ್ ಪ್ರಸಕ್ತ ಸೀಸನ್‌ನಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಭಾರತದ ಅತ್ಯಂತ ವೇಗದ ಬೌಲರ್ ಆಗಿರುವ ಉಮ್ರಾನ್ ಮಲ್ಲಿಕ್, ಗುಜರಾತ್ ಟೈಟನ್ಸ್‌ನ ಬೌಲರ್ ಲ್ಯುಕಿ ಫರ್ಗುಸನ್ ಹೆಸರಲ್ಲಿದ್ದ ದಾಖಲೆಯನ್ನ ಮುರಿಯುವ ಮೂಲಕ ಸ್ಪೀಡ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

154kmph ವೇಗದಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಮಲ್ಲಿಕ್
ಪಂದ್ಯದ 10ನೇ ಓವರ್‌ನ ಎರಡನೇ ಎಸೆತದಲ್ಲಿ ಉಮ್ರಾನ್ ಮಲ್ಲಿಕ್ ಎಸೆತವನ್ನ ರುತುರಾಜ್ ಗಾಯಕ್ವಾಡ್ ಬೌಂಡರಿಗಟ್ಟಿದರು. ಇದು ಅವರ ಎರಡನೇ ಓವರ್‌ನ ಎರಡನೇ ಎಸೆತವಾಗಿದ್ದು, ಐಪಿಎಲ್‌ನಲ್ಲಿ ಅತ್ಯಂತ ಬೌಲ್ ಮಾಡಿದ ಸಾಧನೆ ಮಾಡಿದ್ದಾರೆ. 154kmph ವೇಗದಲ್ಲಿ ಬೌಲ್ ಮಾಡಿದ ಉಮ್ರಾನ್ ತನ್ನದೇ ಹೆಸರಲ್ಲಿದ್ದ ದಾಖಲೆಯನ್ನ ಮುರಿದಿದ್ದಾರೆ.

153.9kmph ವೇಗದಲ್ಲಿ ಲ್ಯುಕಿ ಫರ್ಗುಸನ್ ಬೌಲಿಂಗ್
ನ್ಯೂಜಿಲೆಂಡ್ ಮೂಲದ ಬೌಲರ್ ಲ್ಯುಕಿ ಫರ್ಗುಸನ್ ಗುಜರಾತ್ ಟೈಟನ್ಸ್ ಪ್ರಮುಖ ವಿಕೆಟ್ ಟೇಕರ್‌ಗಳಲ್ಲಿ ಒಬ್ಬರಾಗಿದ್ದಾರೆ. ಲ್ಯುಕಿ ಫರ್ಗುಸನ್ ಐಪಿಎಲ್ 2022ರಲ್ಲಿ ಅತ್ಯಂತ ವೇಗದ ಎಸೆತ 153.9kph ನಲ್ಲಿ ಬೌಲಿಂಗ್ ಮಾಡುವ ಮೂಲಕ ಮಿಂಚಿದ್ದಾರೆ. ಆದ್ರೀಗ ಭಾರತದ ಜಮ್ಮು ಕಾಶ್ಮೀರ ಮೂಲದ ಬೌಲರ್ ಉಮ್ರಾನ್ ಮಲ್ಲಿಕ್ ಫರ್ಗುಸನ್ ಹೆಸರಲ್ಲಿದ್ದ ದಾಖಲೆಯನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
LSG VS DC: ಡೆಲ್ಲಿ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಲಕ್ನೋ

ಐಪಿಎಲ್ 2022ರ ವೇಗದ ಎಸೆತಗಳು
ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಅತ್ಯಂತ ವೇಗವಾದ ಎಸೆತಗಳನ್ನು ಈ ಕೆಳಗೆ ಕಾಣಬಹುದು
154.00 - ಉಮ್ರಾನ್ ಮಲಿಕ್
153.90 - ಲ್ಯುಕಿ ಫರ್ಗುಸನ್
153.30 - ಉಮ್ರಾನ್ ಮಲಿಕ್
153.10 - ಉಮ್ರಾನ್ ಮಲಿಕ್
152.8 - ಉಮ್ರಾನ್ ಮಲಿಕ್
152.60 - ಲ್ಯುಕಿ ಫರ್ಗುಸನ್
152.60 - ಉಮ್ರಾನ್ ಮಲಿಕ್
IPL 2022: ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು, ಮುಂಬೈಗೆ ಮೊದಲ ಜಯದ ಬಳಿಕ ಅಂಕಪಟ್ಟಿಯ ಲೆಕ್ಕಾಚಾರ!

ಐಪಿಎಲ್‌ನ ಅತ್ಯಂತ ವೇಗದ ಬೌಲಿಂಗ್ ಯಾರ ಹೆಸರಲ್ಲಿದೆ?
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿದ ಸಾಧನೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. ರಾಜಸ್ತಾನ್ ರಾಯಲ್ಸ್ ಪರ ಆಡಿದ್ದ ಶಾನ್ ಟೈಟ್ 157.71kmph ವೇಗದಲ್ಲಿ ಬೌಲಿಂಗ್ ಮಾಡಿದ್ದು, ಇಲ್ಲಿಯವರೆಗಿನ ದಾಖಲೆಯಾಗಿದೆ.
ಶಾನ್ ಟೈಟ್ : 157.71 kmph ರಾಜಸ್ಥಾನ್ ರಾಯಲ್ಸ್
ಎನ್ರಿಕ್ ನಾರ್ಟ್ಜೆ: 156.22 kmph ಡೆಲ್ಲಿ ಕ್ಯಾಪಿಟಲ್ಸ್
ಡೇಲ್ ಸ್ಟೇಯ್ನ್: 154.40 kmph ಡೆಕ್ಕನ್ ಚಾರ್ಜರ್ಸ್
ಕಗಿಸೊ ರಬಾಡ: 154.23 kmph ಡೆಲ್ಲಿ ಕ್ಯಾಪಿಟಲ್ಸ್
ಉಮ್ರಾನ್ ಮಲಿಕ್: 154.00 kmph ಸನ್‌ರೈಸರ್ಸ್ ಹೈದ್ರಾಬಾದ್
ಲ್ಯುಕಿ ಫರ್ಗುಸನ್: 153.90 kmph ಗುಜರಾತ್ ಟೈಟಾನ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications