ಕೊಹ್ಲಿ ನಮಗೆ ಕೊಟ್ಟುಬಿಡಿ ಎಂದ ಪಾಕಿಸ್ತಾನಿ ಜರ್ನಲಿಸ್ಟ್
ಲಂಡನ್, ಜೂನ್ 08: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಶ್ವದ ನಂ.1 ತಂಡವಾದ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದೆ. ಆದರೆ, ಪಾಕ್ ಅಭಿಮಾನಿಗಳಿಗೆ ಗೆದ್ದ ಸಂಭ್ರಮಕ್ಕಿಂತ ಭಾರತದ ವಿರುದ್ಧ ಸೋಲಿನ ನೋವೇ ಅಧಿಕವಾಗಿದೆ. ನಾಲ್ಕು ದಿನ ಕಳೆದರೂ ಇನ್ನೂ ಈ ಬಗ್ಗೆ ಹಲುಬುತ್ತಿದ್ದಾರೆ. ಕೊಹ್ಲಿ ಬಗ್ಗೆ ಪಾಕಿಸ್ತಾನಿ ಪತ್ರಕರ್ತೆ ಮಾಡಿದ ಟ್ವೀಟ್ ಸದ್ಯಕ್ಕೆ ಚರ್ಚೆಯಲ್ಲಿದೆ.
ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು
ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 124ರನ್ ಗಳಿಂದ ಸೋಲಿಸಿದ ಭಾರತದ ಬಗ್ಗೆ ಪಾಕಿಸ್ತಾನಿಗಳ ಪ್ರತಿಕ್ರಿಯೆ ಹೇಗಿದೆ? ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ.
'ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಮಗೆ ನೀಡಿ, ಪಾಕಿಸ್ತಾನಿ ಆಟಗಾರರೆಲ್ಲರನ್ನು ತೆಗೆದುಕೊಳ್ಳಿ' ಎಂದು ಪಾಕಿಸ್ತಾನಿ ಪತ್ರಕರ್ತೆ ಟ್ವೀಟ್ ಮಾಡಿದ್ದಾರೆ.[ನಮ್ಮದು ಆಕ್ರಮಣಕಾರಿ ಕ್ರಿಕೆಟ್ ಅಲ್ಲ, ಗುಡ್ ಕ್ರಿಕೆಟ್: ಕೊಹ್ಲಿ]
ಪತ್ರಕರ್ತೆ ನಜ್ರಾನ್ ಘಫಾರ್ ಟ್ವೀಟ್ ಗೆ ಭಾರಿ ಪ್ರತಿಕ್ರಿಯೆ ಬಂದಿದ್ದು, ಪಾಕಿಸ್ತಾನಿ ತಂಡದ ಕಳಪೆ ಆಟಕ್ಕೆ ಛೀಮಾರಿ ಕೂಡಾ ಹಾಕಲಾಗಿದೆ. ಮತ್ತೆ ಕೆಲವರು ನಜ್ರಾನ್ ಅವರ ಕಾಲೆಳೆದಿದ್ದಾರೆ. ಒಟ್ಟಾರೆ, ಟ್ವೀಟ್ ಗಳು ತಮಾಷೆಯಾಗಿವೆ.

ಭಾರತ ವಿರುದ್ಧದ ಸೋಲಿನ ನೋವು
ಭಾರತ ವಿರುದ್ಧದ ಸೋಲಿನ ನೋವು ಇನ್ನೂ ಪಾಕಿಸ್ತಾನಿಗಳನ್ನು ಕಾಡುತ್ತಿದೆ. VOA ಪರ ಕಾರ್ಯನಿರ್ವಹಿಸುವ ಪತ್ರಕರ್ತೆ ನಜ್ರಾನಾ ಘಫಾರ್ ಅವರ ಟ್ವೀಟ್ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ಟ್ವಿಟ್ಟರ್ ನಲ್ಲಿ ಪತ್ರಕರ್ತೆ ಟ್ರಾಲ್
ಕಾಶ್ಮೀರ, ಕೊಹ್ಲಿ, K ಅಕ್ಷರದ ಬಗ್ಗೆ ನಿಮ್ಮ ಹೋರಾಟ ಮುಂದುವರೆಯಲಿ, ನಿಮಗೆ ಎರಡು ಸಿಗುವುದಿಲ್ಲ

ಕೊಹ್ಲಿಯನ್ನು ಹೊಗಳಿದ ಪಾಕಿಸ್ತಾನಿ
ಪಾಕಿಸ್ತಾನದ ಬ್ಯಾಟ್ಸ್ ಮನ್ ಗಳಿಗೆ ಬ್ಯಾಟಿಂಗ್ ಹೇಳಿಕೊಡಲು ವಿರಾಟ್ ಕೊಹ್ಲಿಬೇಕಿದೆ. ಫಿಟ್ ಹಾಗೂ ಪ್ರತಿಭೆ ಎರಡೂ ಅವರ ಬಳಿ ಇದೆ ಎಂದು ಕೊಹ್ಲಿಯನ್ನು ಹೊಗಳಿದ ಪಾಕಿಸ್ತಾನಿ.

ನಾನು ಭಾರತದ ಬೆಂಬಲಿಗ
ನಾನು ಭಾರತದ ಬೆಂಬಲಿಗ, ಹೀಗಾಗಿ ನಾನು ಈ ಡೀಲ್ ಒಪ್ಪಿಕೊಳ್ಳುವುದಿಲ್ಲ ಎಂದ ನಜ್ರಾನಾ ಅವರ ಸಹ ಉದ್ಯೋಗಿ ಜಾಫರ್.

ನಮ್ಮ ಕೊಹಿನೂರ್
ವಿರಾಟ್ ಕೊಹ್ಲಿ ನಮ್ಮ ಕೊಹಿನೂರ್ ನಾವು ಯಾರಿಗೂ ಕೊಡುವುದಿಲ್ಲ. ಒಮ್ಮೆ ನಮ್ಮಿಂದ ದೂರ ಹೋದ ಕೊಹಿನೂರ್ ಇನ್ನೂ ಸಿಕ್ಕಿಲ್ಲ.

ಗಾಯಕರು, ಸೆಲೆಬ್ರಿಟಿಗಳು
ಗಾಯಕರು, ನಟ, ನಟಿಯರನ್ನು ಸಾಕುತ್ತಿದ್ದೇವೆ. ಈಗ ಕ್ರಿಕೆಟರ್ ಗಳನ್ನು ಸಾಕಬೇಕಿದೆ. ಇದು ಸಾಧ್ಯವಿಲ್ಲ. ಕೊಹ್ಲಿಯನ್ನು ಕೊಡುವುದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications