ನಮ್ಮದು ಆಕ್ರಮಣಕಾರಿ ಕ್ರಿಕೆಟ್ ಅಲ್ಲ, ಗುಡ್ ಕ್ರಿಕೆಟ್: ಕೊಹ್ಲಿ
ಲಂಡನ್, ಜೂನ್ 8: ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡ ಉತ್ತಮ ಕ್ರಿಕೆಟ್ ಆಡುತ್ತಿದೆ. ಆದರೆ ಅದು ಆಕ್ರಮಣಕಾರಿ ಕ್ರಿಕೆಟ್ ಅಲ್ಲ. ಅದು ಗುಡ್ ಕ್ರಿಕೆಟ್ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು
ಟೂರ್ನಿಯ ಅಂಗವಾಗಿ, ಗುರುವಾರ (ಜೂನ್ 8) ಶ್ರೀಲಂಕಾ ತಂಡವನ್ನು ಭಾರತ ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಮಾತನಾಡಿದರು. ಜತೆಗೆ ಶ್ರೀಲಂಕಾ ತಂಡದ ನಾಯಕ ಏಂಜೆಲೊ ಮ್ಯಾಥ್ಯೂಸ್ ಕೂಡಾ ಇದ್ದರು.[ದಕ್ಷಿಣ ಆಫ್ರಿಕಾ ವಿರುದ್ಧ ಸೋತರೆ ಪಾಕಿಸ್ತಾನ ಮನೆಗೆ]

ಮೊದಲಿಗೆ, ಆಕ್ರಮಣಕಾರಿ ಆಟದ ಬಗ್ಗೆ ಒಲವು ಹೊಂದಿರುವ ಕೊಹ್ಲಿಗೆ ಆ ಬಗ್ಗೆ ಕೆಣಕಿದ ಪತ್ರಕರ್ತರಿಗೆ ಅವರು ಜಾಣ್ಮೆಯ ಉತ್ತರ ಕೊಟ್ಟರು. ನಾವು ಹಲವಾರು ಟೂರ್ನಿಗಳನ್ನು ಗೆದ್ದಿದ್ದೇವೆ. ಆದರೆ, ಅದು ಆಕ್ರಮಣಕಾರಿ ಕ್ರಿಕೆಟ್ ಅಲ್ಲ. ಗುಡ್ ಕ್ರಿಕೆಟ್ ಅಷ್ಟೇ. ನಾವು ನಮ್ಮ ವಿರುದ್ಧ ಆಡುವ ಎಲ್ಲಾ ತಂಡಗಳಿಗೆ ಗೌರವ ಕೊಡುತ್ತೇವೆ ಎಂದರು.[ವಿಡಿಯೋ : ಬೌಲ್ಟ್ ಹಿಡಿದ ಅದ್ಭುತ ಕ್ಯಾಚಿಗೆ ಅಲಿ ಬಲಿ]
ಇದೇ ವೇಳೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಶ್ವದ ಟಾಪ್ 8 ರಾಷ್ಟ್ರಗಳಷ್ಟೇ ಭಾಗವಹಿಸಿವೆ. ಹಾಗಾಗಿ, ಇಲ್ಲಿ ಯಾರನ್ನೂ ಹಗುರವಾಗಿ ಪರಿಗಣಿಸಲಾಗದು ಎಂದು ತಿಳಿಸಿದರು.[ಟೀಂ ಇಂಡಿಯಾ ಕೋಚ್ ಹುದ್ದೆಗೆ ಮತ್ತೆ ಅರ್ಜಿ ಹಾಕಿದ ಕುಂಬ್ಳೆ]
ಇದೇ ಸಂದರ್ಭದಲ್ಲಿ ಮಾತನಾಡಿದ ಮ್ಯಾಥ್ಯೂಸ್, ಭಾರತ ತಂಡವನ್ನು, ತಮ್ಮ ನಾಯಕತ್ವದ ಶ್ರೀಲಂಕಾ ತಂಡವನ್ನು ಹಾಡಿ ಹೊಗಳಿದರು. ಇತ್ತೀಚೆಗೆ, ಭಾರತ ತಂಡದ ಅಗ್ರ ಶ್ರೇಯಾಂಕಿತ ತಂಡವಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳನ್ನು ಗೆದ್ದಿದೆ. ಉತ್ತಮ ಕ್ರಿಕೆಟ್ ಆಡುತ್ತಿದೆ. ಶ್ರೀಲಂಕಾ ಕೂಡ ಆಸ್ಟ್ರೇಲಿಯಾದಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಆಯಾ ತಂಡಗಳನ್ನು ಮಣಿಸಿದೆ. ಹಾಗಾಗಿ, ಭಾರತ- ಶ್ರೀಲಂಕಾ ನಡುವೆ ಅಂಥಾ ವ್ಯತ್ಯಾಸವೇನಿಲ್ಲ. ಎರಡೂ ತಂಡಗಳ ನಡುವಿನ ಪಂದ್ಯ ಅತ್ಯಂತ ಸ್ಪರ್ಧಾತ್ಮಕವಾಗಿರಲಿದೆ ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications