ಪಾಕಿಸ್ತಾನದಲ್ಲಿ ಚಾಂಪಿಯನ್ ಟ್ರೋಫಿ: 'ಸಮಯ ಬಂದಾಗ ಅಂತಿಮ ನಿರ್ಧಾರ' ಎಂದ ಅನುರಾಗ್ ಠಾಕೂರ್!

ಐಸಿಸಿ ಟೂರ್ನಿಗಳ ಸುದೀರ್ಘ ಸರಣಿಗಳ ಕುರಿತು ನಿನ್ನೆಯಷ್ಟೇ (ನ.16) ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವೇಳಾಪಟ್ಟಿ ಜೊತೆಗೆ ಆತಿಥ್ಯ ವಹಿಸುವ ರಾಷ್ಟ್ರಗಳ ಕುರಿತು ಪ್ರಕಟಿಸಿದೆ. ಇದರಲ್ಲಿ ಭಾರತವು ಮೂರು ಐಸಿಸಿ ಟೂರ್ನಿಗಳಿಗೆ ಆತಿಥ್ಯ ವಹಿಸಲಿದೆ. ಆದ್ರೆ ಇದಕ್ಕಿಂತ ಹೆಚ್ಚಾಗಿ ಈಗ ಸುದ್ದಿಯಾಗಿರೋದು 2025ರ ಚಾಂಪಿಯನ್ ಟ್ರೋಫಿ.
ಪಾಕಿಸ್ತಾನವು ಸುಮಾರು ಎರಡು ದಶಕಗಳ ಬಳಿಕ ಐಸಿಸಿ ಟೂರ್ನಿಯ ಆತಿಥ್ಯದ ಜವಾಬ್ದಾರಿ ದಕ್ಕಿಸಿಕೊಂಡಿದೆ. ಇದು ಕ್ರಿಕೆಟ್ ಲೋಕದಲ್ಲಿ ಸಾಮಾನ್ಯ ವಿಚಾರವಾದ್ರು, ಭದ್ರತೆಯ ದೃಷ್ಟಿಯಿಂದ ಅನೇಕ ಐಸಿಸಿ ಸದಸ್ಯ ರಾಷ್ಟ್ರಗಳ ತಲೆನೋವಿಗೂ ಕಾರಣವಾಗಿದೆ.
ಹೌದು, ಅದ್ರಲ್ಲೂ ಟೀಂ ಇಂಡಿಯಾ 2025ರಲ್ಲಿ ಪಾಕ್‌ನಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿಯಲ್ಲಿ ನಿಜವಾಗಿಯೂ ಭಾಗವಹಿಸುತ್ತಾ ಎಂಬ ಅನುಮಾನಗಳು ಶುರುವಾಗಿದೆ. ಈ ಕುರಿತು ನವೆಂಬರ್ 17ರಂದು ಮಾತನಾಡಿರುವ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, '' ಪಾಕಿಸ್ತಾನ ಆತಿಥ್ಯ ವಹಿಸುವ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಭಾಗವಹಿಸವ ಬಗ್ಗೆ ನಿರ್ಧಾರವನ್ನು ಗೃಹ ಸಚಿವಾಲಯ ತೆಗೆದುಕೊಳ್ಳಲಿದೆ'' ಎಂದು ತಿಳಿಸಿದ್ದಾರೆ.

2031ರವರೆಗೆ ನಡೆಯಲಿರುವ ಐಸಿಸಿ ಟೂರ್ನಿಯ ವೇಳಾಪಟ್ಟಿ ಘೋಷಣೆ
ನವೆಂಬರ್ 16ರಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2023ರಿಂದ 2031ರವರೆಗೆ ನಡೆಯಲಿರುವ ಐಸಿಸಿ ಟೂರ್ನಿಗಳ ಆತಿಥ್ಯವಹಿಸುವ ರಾಷ್ಟ್ರಗಳನ್ನ ಪ್ರಕಟಿಸಿತು. ಈ ಘೋಷಣೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಮೆಂಟ್ಸ್ ಬಂದಿವೆ. ಅದ್ರಲ್ಲೂ 2025ರಲ್ಲಿ ಪಾಕ್ ಚಾಂಪಿಯನ್ ಟ್ರೋಫಿ ಆತಿಥ್ಯದ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ.
ವಿಶ್ವಕಪ್‌ನಲ್ಲಿ ಸ್ಪೋಟಕ ಆಟ: ಐಪಿಎಲ್ ಹರಾಜಿನಲ್ಲಿ ಭಾರೀ ಮೊತ್ತ ಪಡೆಯಲಿದ್ದಾರೆ ಈ 4 ದಾಂಡಿಗರು!

1996ರಲ್ಲಿ ಕೊನೆಯ ಬಾರಿಗೆ ಪಾಕ್ ಆತಿಥ್ಯ
ಹೌದು 1996ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಐಸಿಸಿ ಟೂರ್ನಿವೊಂದರ ಆತಿಥ್ಯ ವಹಿಸಿತ್ತು. 1996ರ ಐಸಿಸಿ 50 ಓವರ್‌ಗಳ ವಿಶ್ವಕಪ್‌ಗೆ ಪಾಕಿಸ್ತಾನವು, ಭಾರತ ಮತ್ತು ಶ್ರೀಲಂಕಾದೊಂದಿಗೆ ಸಹ ಆತಿಥ್ಯ ಪಡೆದಿತ್ತು. ಈ ಟೂರ್ನಿಯಲ್ಲಿ ಶ್ರೀಲಂಕಾ ಚಾಂಪಿಯನ್ ತಂಡವಾಗಿ ಚೊಚ್ಚಲ ವಿಶ್ವಕಪ್ ಗೆದ್ದಿತು. ಇದಾದ ಬಳಿಕ ಸುಮಾರು 25 ವರ್ಷಗಳ ಬಳಿಕ ಪಾಕ್ ಐಸಿಸಿ ಟೂರ್ನಿಯ ಆತಿಥ್ಯ ವಹಿಸಿಕೊಂಡಿದೆ.

ಭಾರತದ ಭಾಗಿ ಕುರಿತು ಗೃಹ ಸಚಿವಾಲಯದ್ದೇ ಅಂತಿಮ ನಿರ್ಧಾರ!
ಪಾಕಿಸ್ತಾನದಲ್ಲಿ ನಡೆಯುವ ಐಸಿಸಿ ಟೂರ್ನಿಯಲ್ಲಿ ಟೀಂ ಇಂಡಿಯಾ ಭಾಗಿ ಕುರಿತು ಗೃಹ ಸಚಿವಾಲಯ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
"ಸಮಯ ಬಂದಾಗ, ನಾವು ಏನು ಮಾಡಬೇಕೆಂದು ನೋಡೋಣ. ಗೃಹ ಸಚಿವಾಲಯವು ನಿರ್ಧಾರ ಕೈಗೊಳ್ಳುವಲ್ಲಿ ಭಾಗಿಯಾಗಲಿದೆ. ಭದ್ರತಾ ಸಮಸ್ಯೆಗಳಿಂದಾಗಿ ಹಲವು ದೇಶಗಳು ಪಾಕಿಸ್ತಾನಕ್ಕೆ ತೆರಳಲು ಹಿಂದೆ ಸರಿದಿವೆ. ನಾವು ನಂತರ ಭದ್ರತೆಯನ್ನು ನಿರ್ಣಯಿಸುತ್ತೇವೆ ಮತ್ತು ನಿರ್ಧರಿಸುತ್ತೇವೆ "ಎಂದು ಠಾಕೂರ್ ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.
ಐಸಿಸಿ ಚಾಂಪಿಯನ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ: ನಿಜಕ್ಕೂ ಟೀಂ ಇಂಡಿಯಾ ತೆರಳುತ್ತಾ?

ಪಾಕಿಸ್ತಾನದಲ್ಲಿ ಆಡಲು ತಂಡಗಳ ಹಿಂದೇಟು!
ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಆಯೋಜನೆಗೊಂಡಾಗ ಭಾಗಿಯಾಗಲು ಈ ಹಿಂದೆ ಕೆಲವು ರಾಷ್ಟ್ರಗಳು ಹಿಂದೇಟು ಹಾಕಿವೆ. ಭದ್ರತಾ ಕಾಳಜಿಯ ಕಾರಣದಿಂದಾಗಿ ನ್ಯೂಜಿಲೆಂಡ್, ಮೊದಲ ಪಂದ್ಯದ ಟಾಸ್ ಆಗುವ ಕೆಲವು ನಿಮಿಷಗಳ ಮೊದಲು ತಮ್ಮ ಪ್ರವಾಸವನ್ನು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಅಲ್ಲೇ ಕೈ ಬಿಟ್ಟರು. ಇದಾದ ಬೆನ್ನಲ್ಲೇ ಪ್ರವಾಸ ಕೈಗೊಳ್ಳಬೇಕಿದ್ದ ಇಂಗ್ಲೆಂಡ್ ಕೂಡ ಭದ್ರತಾ ಸಮಸ್ಯೆಯಿಂದ ಪ್ರವಾಸವನ್ನು ರದ್ದುಗೊಳಿಸಿತ್ತು.

2009ರಲ್ಲಿ ಶ್ರೀಲಂಕಾ ತಂಡದ ಮೇಲೆ ದಾಳಿ
ನಿಮಗೆಲ್ಲಾ ತಿಳಿದಿರುವಂತೆ 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಪಾಕಿಸ್ತಾನದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ರು. ಅಂದಿನಿಂದ ಪಾಕಿಸ್ತಾನದಲ್ಲಿ ಸರಣಿ ಆಯೋಜನೆಯಾದ್ರೆ ಭಾಗಿಯಾಗಲು ತಂಡಗಳು ಹಿಂದೇಟು ಹಾಕುತ್ತಿವೆ. ಆದರೂ ಕಳೆದ ಕೆಲವು ವರ್ಷಗಳಿಂದ ಪರಿಸ್ಥಿತಿ ಸುಧಾರಿಸಿದೆ, ಶ್ರೀಲಂಕಾ, ಬಾಂಗ್ಲಾದೇಶ, ಜಿಂಬಾಬ್ವೆ ಪಾಕ್‌ಗೆ ತೆರಳಿ ಟೂರ್ನಿಯಲ್ಲಿ ಭಾಗಿಯಾಗಿವೆ. ಜೊತೆಗೆ ಪಾಕಿಸ್ತಾನ ಸೂಪರ್ ಲೀಗ್ (PSL) ನ ಯಶಸ್ವಿ ನಿರ್ವಹಣೆಯ ಹೊರತಾಗಿ ವಿವಿಧ ಸರಣಿಗಳಲ್ಲಿ ದಕ್ಷಿಣ ಆಫ್ರಿಕಾ ಕೂಡ ಭಾಗಿಯಾಗಿದೆ.
ಇದಲ್ಲದೆ, ಮುಂಬರುವ ತಿಂಗಳುಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಪಾಕಿಸ್ತಾನ ಪ್ರವಾಸದ ಸಾಲಿನಲ್ಲಿವೆ, ಆದಾಗ್ಯೂ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಎರಡೂ ಇತ್ತೀಚೆಗೆ T20 ವಿಶ್ವಕಪ್ 2021 ರ ಮೊದಲು ತಮ್ಮ ಪ್ರವಾಸಗಳಿಂದ ಹಿಂದೆ ಸರಿದಿವೆ.
ಏತನ್ಮಧ್ಯೆ, 2025 ರ ಚಾಂಪಿಯನ್ಸ್ ಟ್ರೋಫಿಯ ಹೋಸ್ಟಿಂಗ್ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಿದ ನಂತರ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಹರ್ಷ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications