ಐಸಿಸಿ ಚಾಂಪಿಯನ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ: ನಿಜಕ್ಕೂ ಟೀಂ ಇಂಡಿಯಾ ತೆರಳುತ್ತಾ?

ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದಿನ 10 ವರ್ಷಗಳ ಕಾಲ ನಡೆಯುವ ಪ್ರಮುಖ ಐಸಿಸಿ ಟೂರ್ನಮೆಂಟ್‌ಗಳ ವೇಳಾಪಟ್ಟಿ ಪ್ರಕಟಿಸಿದೆ. 2031ರವರೆಗೆ ಭಾರತ ಮೂರು ಐಸಿಸಿ ಟೂರ್ನಿಗಳಿಗೆ ಆತಿಥ್ಯ ವಹಿಸಲಿದೆ. ಇದರ ಜೊತೆಗೆ ಪಾಕಿಸ್ತಾನ ಕೂಡ ಒಂದು ಐಸಿಸಿ ಟೂರ್ನಮೆಂಟ್‌ ನಡೆಸಿಕೊಡಲಿದೆ.

2024 ರಿಂದ 2031ರವರೆಗೆ ನಡೆಯಲಿರುವ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಪ್ರಮುಖ ಟೂರ್ನಿಗಳ ಕುರಿತು ಐಸಿಸಿ ಪ್ರಕಟಣೆ ಹೊರಡಿಸಿದೆ. ಎರಡು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಗಳು, ನಾಲ್ಕು ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಳು ಮತ್ತು ಎರಡು ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಈವೆಂಟ್‌ಗಳನ್ನು ಆಯೋಜಿಸಲು 11 ಪೂರ್ಣ ಸದಸ್ಯರು ಮತ್ತು ಮೂರು ಸಹಾಯಕ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಭಾರತದಲ್ಲಿ ನಡೆಯಲಿದೆ ಮೂರು ಐಸಿಸಿ ಟೂರ್ನಮೆಂಟ್

ಭಾರತದಲ್ಲಿ ನಡೆಯಲಿದೆ ಮೂರು ಐಸಿಸಿ ಟೂರ್ನಮೆಂಟ್

ಭಾರತವು ಮುಂಬರುವ ವರ್ಷಗಳಲ್ಲಿ ಶ್ರೀಲಂಕಾದೊಂದಿಗೆ 2026ರಲ್ಲಿ ಐಸಿಸಿ ಟಿ20 ವಿಶ್ವಕಪ್‌ ಆತಿಥ್ಯವಹಿಸಲಿದೆ. ಇದರ ನಂತರದಲ್ಲಿ ಬಾಂಗ್ಲಾದೇಶದೊಂದಿಗೆ 2029ರಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿ ಮತ್ತು 2031ರಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ ನಡೆಸಿಕೊಡಲಿದೆ. ಇದಕ್ಕೂ ಮುನ್ನ 2023ರಲ್ಲಿ ಮುಂಬರುವ ಐಸಿಸಿ 50 ಓವರ್‌ಗಳ ವಿಶ್ವಕಪ್‌ಗೆ ಭಾರತವೇ ಆತಿಥ್ಯ ವಹಿಸಲಿದ್ದು, 2011ರ ಬಳಿಕ ಐಸಿಸಿ 50 ಓವರ್‌ಗಳ ವಿಶ್ವಕಪ್ ಆತಿಥ್ಯ ಪಡೆಯಲಿದೆ.

2025ರ ಚಾಂಪಿಯನ್ ಟ್ರೋಫಿ ಆತಿಥ್ಯವಹಿಸಲಿರುವ ಪಾಕಿಸ್ತಾನ

2025ರ ಚಾಂಪಿಯನ್ ಟ್ರೋಫಿ ಆತಿಥ್ಯವಹಿಸಲಿರುವ ಪಾಕಿಸ್ತಾನ

ಬಹುತೇಕ ಎರಡು ದಶಕದ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಮೆಂಟ್‌ಗೆ ಆತಿಥ್ಯ ವಹಿಸುವ ಅವಕಾಶ ದಕ್ಕಿಸಿಕೊಂಡಿದೆ. 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ ಟ್ರೋಫಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದ್ದು, ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (ಪಿಸಿಬಿ) ಚಾಂಪಿಯನ್ ಟ್ರೋಫಿ ನಡೆಸಿಕೊಡುವ ಅವಕಾಶ ಪಡೆದಿದೆ.

2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಪಾಕಿಸ್ತಾನ, 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ ದೇಶದಲ್ಲಿ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಇತ್ತೀಚೆಗೆ ಟಿ20 ಸರಣಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ನ್ಯೂಜಿಲೆಂಡ್, ಮೊದಲ ಪಂದ್ಯದ ಟಾಸ್‌ ಆಗುವ ಕೆಲವು ನಿಮಿಷಗಳ ಮೊದಲು ತಮ್ಮ ಪ್ರವಾಸವನ್ನು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಅಲ್ಲೇ ಕೈ ಬಿಟ್ಟರು.

ಇದಾದ ಬೆನ್ನಲ್ಲೇ ಪ್ರವಾಸ ಕೈಗೊಳ್ಳಬೇಕಿದ್ದ ಇಂಗ್ಲೆಂಡ್ ಕೂಡ ಭದ್ರತಾ ಸಮಸ್ಯೆಯಿಂದ ಪ್ರವಾಸವನ್ನು ರದ್ದುಗೊಳಿಸಿತ್ತು.

2022ರ ಟಿ20 ವಿಶ್ವಕಪ್‌ ವೇಳಾಪಟ್ಟಿ: ಸೆಮಿಫೈನಲ್, ಫೈನಲ್ ಪಂದ್ಯಗಳು ಇಲ್ಲಿ ನಡೆಯಲಿವೆ!

ಪಾಕಿಸ್ತಾನಕ್ಕೆ ಟೀಂ ಇಂಡಿಯಾ ತೆರಳುತ್ತಾ?

ಪಾಕಿಸ್ತಾನಕ್ಕೆ ಟೀಂ ಇಂಡಿಯಾ ತೆರಳುತ್ತಾ?

ಭಾರತ-ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆದು ಎರಡು ದಶಕಗಳೇ ಕಳೆದು ಹೋಗಿದೆ. ಹೀಗಿರುವಾಗ 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿಯಲ್ಲಿ ಟೀಂ ಇಂಡಿಯಾ ನಿಜಕ್ಕೂ ಭಾಗವಹಿಸುತ್ತಾ ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ.

ಏತನ್ಮಧ್ಯೆ, 2025 ರ ಚಾಂಪಿಯನ್ಸ್ ಟ್ರೋಫಿಯ ಹೋಸ್ಟಿಂಗ್ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಿದ ನಂತರ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಹರ್ಷ ವ್ಯಕ್ತಪಡಿಸಿದರು. ಪಾಕಿಸ್ತಾನ ಕೊನೆಯ ಬಾರಿಗೆ 1996ರಲ್ಲಿ ಭಾರತ ಮತ್ತು ಶ್ರೀಲಂಕಾದ ಜೊತೆಗೂಡಿ ಐಸಿಸಿ 50 ಓವರ್‌ಗಳ ವಿಶ್ವಕಪ್‌ಗೆ ಆತಿಥ್ಯವಹಿಸಿತ್ತು.

ಇತರೆ ಐಸಿಸಿ ಟೂರ್ನಿಗಳ ಆತಿಥ್ಯ

ಇತರೆ ಐಸಿಸಿ ಟೂರ್ನಿಗಳ ಆತಿಥ್ಯ

2024ರ ಟಿ20 ವಿಶ್ವಕಪ್ ಯುಎಸ್‌ಎ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿದ್ದು, ಜೂನ್ ತಿಂಗಳಿನಲ್ಲಿ ಟೂರ್ನಮೆಂಟ್ ನಡೆಯಲಿದೆ. ಇನ್ನು 2027ರಲ್ಲಿ ಐಸಿಸಿ 50 ಓವರ್‌ಗಳ ವಿಶ್ವಕಪ್‌ ಆತಿಥ್ಯವನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ವಹಿಸಿಕೊಂಡಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ 2028ರ ಐಸಿಸಿ ಟಿ20 ವಿಶ್ವಕಪ್ ಆತಿಥ್ಯವಹಿಸಿಕೊಂಡಿದೆ. ಇನ್ನು ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಜೂನ್‌ನಲ್ಲಿ 2030ರ ಟಿ20 ವಿಶ್ವಕಪ್ ನಡೆಸಿಕೊಡಲಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, November 16, 2021, 20:57 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X