15 ವರ್ಷಗಳ ಹಿಂದಿನ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ದೀಪಕ್ ಹೂಡಾ

ಡಬ್ಲಿನ್‌ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಟಿ20 ಸರಣಿಯನ್ನು 2-0ಯಿಂದ ಗೆದ್ದು ವೈಟ್‌ವಾಶ್ ಮಾಡಿದೆ. ಈ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ ದೀಪಕ್ ಹೂಡಾಗೆ ಪಂದ್ಯ ಶ್ರೇಷ್ಟ ಮತ್ತು ಸರಣಿ ಶ್ರೇಷ್ಟ ಗೌರವ ಲಭಿಸಿತು.
ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಕೇವಲ ಮೂರು ರನ್‌ಗೆ ಔಟಾದ ಬಳಿಕ ಕ್ರೀಸ್‌ಗಿಳಿದ ದೀಪಕ್ ಹೂಡ ಮಿಂಚಿನ ಆಟವಾಡುವ ಮೂಲಕ ಭಾರತ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಕೇವಲ 55 ಎಸೆತಗಳಲ್ಲಿ ಶತಕ ಪೂರೈಸಿದ ದೀಪಕ್ ಹೂಡ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ಮಾಜಿ ಆಟಗಾರ ಸುರೇಶ್ ರೈನಾ ನಂತರದಲ್ಲಿ ಶತಕ ದಾಖಲಿಸಿದ ಆಟಗಾರ ಎಂಬ ದಾಖಲೆಯು ಹೂಡಾ ಹೆಸರಿಗೆ ಸೇರಿದೆ. ಸೆಂಚುರಿ ಸಿಡಿಸಿದ ಓವರ್‌ನಲ್ಲಿಯೇ ವಿಕೆಟ್ ಒಪ್ಪಿಸಿದ ದೀಪಕ್ ಒಟ್ಟಾರೆ 57 ಎಸೆತಗಳಲ್ಲಿ 104 ರನ್ ಸಿಡಿಸಿದರು. 182.46ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಹೂಡ ಆಟದಲ್ಲಿ 9 ಬೌಂಡರಿ ಮತ್ತು ಆರು ಭರ್ಜರಿ ಸಿಕ್ಸರ್‌ಗಳಿದ್ದವು.

ಟಾಸ್ ಗೆದ್ದು 225ರನ್‌ಗಳ ಮೊತ್ತ ದಾಖಲಿಸಿದ ಟೀಂ ಇಂಡಿಯಾ
ಸಂಜು ಸ್ಯಾಮ್ಸನ್ ಚೊಚ್ಚಲ ಅಂತರಾಷ್ಟ್ರೀಯ ಟಿ20 ಅರ್ಧಶತಕ ಹಾಗೂ ದೀಪಕ್ ಹೂಡ ಚೊಚ್ಚಲ ಟಿ20 ಶತಕದ ನೆರವಿನಿಂದ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಬೃಹತ್ ಮೊತ್ತವನ್ನೇ ಕಲೆಹಾಕಿತು. ಐರ್ಲೆಂಡ್ ನೆಲದಲ್ಲಿ ದಾಖಲಾದ ಎರಡನೇ ಟಿ20 ಗರಿಷ್ಠ ಮೊತ್ತ ಇದಾಗಿದೆ. 7 ವಿಕೆಟ್ ನಷ್ಟಕ್ಕೆ 225ರನ್ ಸಿಡಿಸಿದ ಭಾರತವು ಕೇವಲ ನಾಲ್ಕು ರನ್‌ಗಳ ಅಂತರದಲ್ಲಿ ಪಂದ್ಯ ಗೆದ್ದಿದ್ದು, ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಸಾಕ್ಷಿಯಾಗಿತ್ತು.

15 ವರ್ಷಗಳ ಹಿಂದಿನ ಸಚಿನ್ ದಾಖಲೆ ಮುರಿದ ಹೂಡಾ
ಐರ್ಲೆಂಡ್ ವಿರುದ್ಧ ಶತಕ ಸಿಡಿಸುವುದರೊಂದಿಗೆ ಹೂಡಾ ಐರ್ಲೆಂಡ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ. ಅಲ್ಲದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹೂಡಾ ಹಿಂದಿಕ್ಕಿದ್ದಾರೆ. ಹೂಡಾ ಐರ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಐರ್ಲೆಂಡ್ ವಿರುದ್ಧ ತೆಂಡೂಲ್ಕರ್ 99 ರನ್ ಗಳಿಸಿದ್ದರು.
ಭಾರತ vs ಐರ್ಲೆಂಡ್: ಸೊನ್ನೆ ಸುತ್ತಿದ್ದರೂ ದಿನೇಶ್ ಕಾರ್ತಿಕ್‌ಗೆ ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ: ಕಾರಣ?

ಟಿ20 ವಿಶ್ವಕಪ್ ಮೇಲೆ ಹೂಡಾ ಕಣ್ಣು
ಐರ್ಲೆಂಡ್‌ನಲ್ಲಿ ಭಾರತೀಯ ಬ್ಯಾಟರ್ ಸಿಡಿಸಿದ ದೊಡ್ಡ ಸ್ಕೋರ್ ಇದಾಗಿತ್ತು. ಈ ಮೂಲಕ ದೀಪಕ್ ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಐರ್ಲೆಂಡ್ ಸರಣಿಯಲ್ಲಿ ಮಿಂಚಿದ್ದ ಹೂಡಾ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಹೂಡಾ ಅವರ ಪ್ರದರ್ಶನವು ಶ್ರೇಯಸ್ ಅಯ್ಯರ್ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ತಡೆಯಾಗುವ ಸಾಧ್ಯತೆ ಹೆಚ್ಚಿಸಿದೆ.
ಐರ್ಲೆಂಡ್ ವಿರುದ್ಧ ಅಬ್ಬರಿಸಿದ ದೀಪಕ್ ಹೂಡ: 2ನೇ ಟಿ20ಯಲ್ಲಿ ಶತಕ ದಾಖಲು

ವಿಂಡೀಸ್ ಹಾಗೂ ಆಸ್ಟ್ರೇಲಿಯಾ ಪಿಚ್‌ನಲ್ಲಿ ಸಂಜುಗೆ ಅವಕಾಶ?
ಐರ್ಲೆಂಡ್ ಸರಣಿಯ ನಂತರ ಭಾರತ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಆ ಸರಣಿಯಲ್ಲೂ ಭಾರತ ಸಂಜುಗೆ ಅವಕಾಶ ನೀಡುವ ಸಾಧ್ಯತೆ ಇದೆ. ಸಂಜು ವೇಗದ ಪಿಚ್‌ಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಆಟಗಾರ. ಸುಂದರವಾದ ಬ್ಯಾಕ್ ಫುಟ್ ಹೊಡೆತಗಳಿಗಾಗಿ ಸಂಜು ಅವರನ್ನು ಭಾರತದ ನಾಯಕ ರೋಹಿತ್ ಶರ್ಮಾ ಅವರ ಶ್ಲಾಘಿಸಿದರು. ಸಂಜು ಅವರನ್ನು ಚೆನ್ನಾಗಿ ಬಲ್ಲ ಭಾರತೀಯ ಕೋಚ್ ರಾಹುಲ್ ದ್ರಾವಿಡ್ ಅಷ್ಟು ಸುಲಭವಾಗಿ ಬಿಟ್ಟುಕೊಡಲಾರರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications