ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐರ್ಲೆಂಡ್ ವಿರುದ್ಧ ಅಬ್ಬರಿಸಿದ ದೀಪಕ್ ಹೂಡ: 2ನೇ ಟಿ20ಯಲ್ಲಿ ಶತಕ ದಾಖಲು

Deepak hooda and samson

ಐರ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ ದೀಪರ್ ಹೂಡ ಅಬ್ಬರಕ್ಕೆ ಐರ್ಲೆಂಡ್ ತತ್ತರಿಸಿದೆ. ಡಬ್ಲಿನ್‌ನ ಮಲಾಹಿಡೆ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಹೂಡ ಅಬ್ಬರದ ಆಟದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿತು.

ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಕೇವಲ ಮೂರು ರನ್‌ಗೆ ಔಟಾದ ಬಳಿಕ ಕ್ರೀಸ್‌ಗಿಳಿದ ದೀಪಕ್ ಹೂಡ ಮಿಂಚಿನ ಆಟವಾಡುವ ಮೂಲಕ ಭಾರತ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಕೇವಲ 55 ಎಸೆತಗಳಲ್ಲಿ ಶತಕ ಪೂರೈಸಿದ ದೀಪಕ್ ಹೂಡ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ಮಾಜಿ ಆಟಗಾರ ಸುರೇಶ್ ರೈನಾ ನಂತರದಲ್ಲಿ ಶತಕ ದಾಖಲಿಸಿದ ಆಟಗಾರ ಎಂಬ ದಾಖಲೆಯು ಹೂಡಾ ಹೆಸರಿಗೆ ಸೇರಿದೆ. ಸೆಂಚುರಿ ಸಿಡಿಸಿದ ಓವರ್‌ನಲ್ಲಿಯೇ ವಿಕೆಟ್ ಒಪ್ಪಿಸಿದ ದೀಪಕ್ ಒಟ್ಟಾರೆ 57 ಎಸೆತಗಳಲ್ಲಿ 104 ರನ್ ಸಿಡಿಸಿದರು. 182.46ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಹೂಡ ಆಟದಲ್ಲಿ 9 ಬೌಂಡರಿ ಮತ್ತು ಆರು ಭರ್ಜರಿ ಸಿಕ್ಸರ್‌ಗಳಿದ್ದವು.

ಟೀಂ ಇಂಡಿಯಾ ಪರ ಅತಿ ಟಿ20 ಹೆಚ್ಚು ಶತಕ ದಾಖಲಿಸಿರುವ ಆಟಗಾರರು

ಟೀಂ ಇಂಡಿಯಾ ಪರ ಅತಿ ಟಿ20 ಹೆಚ್ಚು ಶತಕ ದಾಖಲಿಸಿರುವ ಆಟಗಾರರು

ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ದಾಖಲೆಯು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಒಟ್ಟು ನಾಲ್ಕು ಶತಕ ಸಿಡಿಸಿರುವ ರೋಹಿತ್ ಎಲ್ಲರಿಗಿಂತ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಬ್ಯಾಟರ್‌ಗಳ ಶತಕದ ಲಿಸ್ಟ್ ಈ ಕೆಳಗಿದೆ.

ಭಾರತಕ್ಕೆ T20I ಶತಕಗಳು
4 ರೋಹಿತ್ ಶರ್ಮಾ
2 ಕೆ.ಎಲ್ ರಾಹುಲ್
1 ಸುರೇಶ್ ರೈನಾ/ ದೀಪಕ್ ಹೂಡಾ

ರೋಹಿತ್ ಶರ್ಮಾ ಆರೋಗ್ಯದ ಕುರಿತು ಅಪ್‌ಡೇಟ್ ತಿಳಿಸಿದ ಮಗಳು ಸಮೈರಾ

ಹೂಡ-ಸ್ಯಾಮ್ಸನ್ ದಾಖಲೆಯ ಜೊತೆಯಾಟ

ಹೂಡ-ಸ್ಯಾಮ್ಸನ್ ದಾಖಲೆಯ ಜೊತೆಯಾಟ

ದೀಪಕ್ ಹೂಡ ಜೊತೆಗೆ ಉತ್ತಮ ಸಾಥ್ ನೀಡಿದ ಸಂಜು ಸ್ಯಾಮ್ಸನ್ ಕೂಡ ಅಬ್ಬರದ ಆಟವಾಡಿ ಔಟಾದರು. 42 ಎಸೆತಗಳಲ್ಲಿ 77 ರನ್ ಸಿಡಿಸಿದ ಸಂಜು ಸ್ಯಾಮ್ಸನ್ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳಿದ್ದವು.

ಎರಡನೇ ವಿಕೆಟ್‌ಗೆ ಜೊತೆಯಾದ ಈ ಜೋಡಿ ಭಾರತದ ಪರ ದಾಖಲೆಯ ಜೊತೆಯಾಟವನ್ನಾಡಿದೆ. ಕೇವಲ ಎರಡನೇ ವಿಕೆಟ್‌ಗೆ ಅಷ್ಟೇ ಅಲ್ಲದೆ ಯಾವುದೇ ವಿಕೆಟ್‌ಗೆ ಟೀಂ ಇಂಡಿಯಾದ ಪರ ಗರಿಷ್ಠ ಜೊತೆಯಾಟ ಇದಾಗಿದೆ

T20I ಗಳಲ್ಲಿ ಭಾರತದ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟ
176 ಸ್ಯಾಮ್ಸನ್ - ಹೂಡಾ 2ನೇ ವಿಕೆಟ್‌ ವರ್ಸಸ್ ಐರ್ಲೆಂಡ್, ಡಬ್ಲಿನ್ 2022
165 ರೋಹಿತ್ - ರಾಹುಲ್ 1 ನೇ ವಿಕೆಟ್ ವರ್ಸಸ್ ಶ್ರೀಲಂಕಾ ಇಂದೋರ್ 2017
160 ರೋಹಿತ್ - ಶಿಖರ್ 1 ನೇ ವಿಕೆಟ್ ವರ್ಸಸ್ ಐರ್ಲೆಂಡ್, ಡಬ್ಲಿನ್ 2022
158 ರೋಹಿತ್ - ಶಿಖರ್ 1 ನೇ ವಿಕೆಟಿ ವರ್ಸಸ್ ನ್ಯೂಜಿಲೆಂಡ್, ದೆಹಲಿ 2017

ಈ ಅದ್ಭುತ ಜೊತೆಯಾಟದಿಂದಾಗಿ ಟೀಂ ಇಂಡಿಯಾ ಐರ್ಲೆಂಡ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಿದ್ದು, ಐಲೆಂಡ್‌ನಲ್ಲಿ ಇದು ಎರಡನೇ ಗರಿಷ್ಠ ಸ್ಕೋರ್ ಆಗಿದೆ (227)

ಭಾರತ vs ಐರ್ಲೆಂಡ್ 2ನೇ ಟಿ20: ಹೂಡಾ ಶತಕ, ಸ್ಯಾಮ್ಸನ್ ಅಬ್ಬರ; ಐರ್ಲೆಂಡ್‌ಗೆ ಬೃಹತ್ ರನ್‌ಗಳ ಗುರಿ

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಐರ್ಲೆಂಡ್
ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ಸಿ), ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಾಕ್), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಆಂಡಿ ಮ್ಯಾಕ್‌ಬ್ರೈನ್, ಕ್ರೇಗ್ ಯಂಗ್, ಜೋಶುವಾ ಲಿಟಲ್, ಕಾನರ್ ಓಲ್ಫರ್ಟ್

ಟೀಂ ಇಂಡಿಯಾ
ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್

Story first published: Wednesday, June 29, 2022, 10:06 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X