
ಧೋನಿ ನಾಯಕತ್ವದಲ್ಲಿ ತಂಡದಿಂದ ಹೊರಬಿದ್ದ ವೀರೂ, ನಿವೃತ್ತಿಗೆ ನಿರ್ಧಾರ
ಕ್ರಿಕ್ ಬಝ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ವೀರೇಂದ್ರ ಸೆಹ್ವಾಗ್ 2008ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತನ್ನನ್ನು ಏಕದಿನ ತಂಡದಿಂದ ಹೊರಗಿಟ್ಟಾಗ ನಿವೃತ್ತಿ ಹೊಂದಲು ಬಯಸಿದ್ದೇ ಎಂದು ಹೇಳಿದ್ದಾರೆ. ಧೋನಿ ನಾಯಕತ್ವದಲ್ಲಿ ಕಾಮನ್‌ವೆಲ್ತ್ ಸಿರೀಸ್‌ನಲ್ಲಿ ಭಾರತ ಟ್ರೋಫಿ ಗೆಲುವನ್ನು ಕಂಡಿತ್ತು.
ಈ ಪ್ರವಾಸದಲ್ಲಿ ಕಳಪೆ ಫಾರ್ಮ್‌ನಿಂದಾಗಿ ಏಕದಿನ ತಂಡದಿಂದ ಸೆಹ್ವಾಗ್‌ರನ್ನ ಹೊರಗಿಡಲಾಯಿತು. ಹೀಗಾಗಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ, ಟೆಸ್ಟ್ ಕ್ರಿಕೆಟ್ ಆಡಲು ಮನಸ್ಸು ಮಾಡಿದ್ದರಂತೆ.
ಮುಂದಿನ ಐಪಿಎಲ್ ಸೀಸನ್‌ಗೆ ರಾಜಸ್ತಾನ್ ರಾಯಲ್ಸ್ ತಂಡದಿಂದ ಈ ಐವರು ಔಟ್!

ಸೆಹ್ವಾಗ್ ಮನಸ್ಸು ಬದಲಿಸಿದ್ದು ಸಚಿನ್ ತೆಂಡೂಲ್ಕರ್
ಸೆಹ್ವಾಗ್‌ರ ಈ ಕಠಿಣ ನಿರ್ಧಾರ ಬದಲಾಯಿಸಲು ಪ್ರಮುಖ ಪಾತ್ರ ವಹಿಸಿದ್ದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಎಂಬುದು ತಿಳಿದುಬಂದಿದೆ. ಈ ಕುರಿತು ಸ್ವತಃ ಬಹಿರಂಗಪಡಿಸಿರುವ ಸೆಹ್ವಾಗ್, ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತೇನೆ, ಟೆಸ್ಟ್ ಕ್ರಿಕೆಟ್ ಕಡೆಗೆ ಗಮನ ಹರಿಸುತ್ತೇನೆ ಎಂದು ಹೇಳಿದಾಗ ಸಚಿನ್ ನನ್ನ ಮನಸ್ಸು ಬದಲಿಸಿದ್ರು. ಎಂದಿದ್ದಾರೆ.
"2008 ರಲ್ಲಿ ನಾವು ಆಸ್ಟ್ರೇಲಿಯಾದಲ್ಲಿದ್ದಾಗ, ಈ ಪ್ರಶ್ನೆ (ನಿವೃತ್ತಿ) ನನ್ನ ಮನಸ್ಸಿಗೆ ಬಂದಿತು. ನಾನು ಟೆಸ್ಟ್ ಸರಣಿಯಲ್ಲಿ ಪುನರಾಗಮನ ಮಾಡಿದೆ, 150 ರನ್ ಗಳಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ, ನಾನು ಮೂರು-ನಾಲ್ಕು ಪ್ರಯತ್ನಗಳಲ್ಲಿ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಎಂಎಸ್ ಧೋನಿ ನನ್ನನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟರು. ನಂತರ ಏಕದಿನ ಕ್ರಿಕೆಟ್‌ನಿಂದ ಹೊರಬರುವ ಆಲೋಚನೆ ನನ್ನ ಮನಸ್ಸಿಗೆ ಬಂದಿತು. ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡುವುದನ್ನು ಮುಂದುವರಿಸುತ್ತೇನೆ ಎಂದು ನಾನು ಭಾವಿಸಿದ್ದೇನೆ'' ಎಂದು ಸೆಹ್ವಾಗ್ ಕ್ರಿಕ್‌ಬಜ್ ಶೋ ಮ್ಯಾಚ್ ಪಾರ್ಟಿಯಲ್ಲಿ ಹೇಳಿದರು.
"ಆ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ನನ್ನನ್ನು ತಡೆದರು. ಅವರು ಹೇಳಿದರು 'ಇದು ನಿಮ್ಮ ಜೀವನದ ಕೆಟ್ಟ ಹಂತವಾಗಿದೆ. ಸ್ವಲ್ಪ ನಿರೀಕ್ಷಿಸಿ, ಈ ಪ್ರವಾಸದ ನಂತರ ಮನೆಗೆ ಹಿಂತಿರುಗಿ, ಚೆನ್ನಾಗಿ ಯೋಚಿಸಿ ಮತ್ತು ನಂತರ ಏನು ಮಾಡಬೇಕೆಂದು ನಿರ್ಧರಿಸಿ. ಅದೃಷ್ಟವಶಾತ್ ನಾನು ಆ ಸಮಯದಲ್ಲಿ ನನ್ನ ನಿವೃತ್ತಿಯನ್ನು ಘೋಷಿಸಲಿಲ್ಲ, "ಎಂದು ಅವರು ಸೇರಿಸಿದರು.
IPL 2022: ಐಪಿಎಲ್ ಇತಿಹಾಸದಲ್ಲಿ ಈ ತಂಡಗಳ ಆಟಗಾರರು ಯಾರೂ ಸಹ ಆರೆಂಜ್ ಕ್ಯಾಪ್ ಗೆದ್ದೇ ಇಲ್ಲ!

2011ರ ವಿಶ್ವಕಪ್ ಗೆಲುವಿನಲ್ಲಿ ವೀರೂ ಕೂಡ ಭಾಗಿ
ಇದಾಗಿ ಮೂರು ವರ್ಷಗಳ ಬಳಿಕ ವೀರೇಂದ್ರ ಸೆಹ್ವಾಗ್ 2011ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲೂ ಬಹಳ ಪ್ರಮುಖ ಪಾತ್ರವಹಿಸಿದ್ರು. ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲೇ ಸೆಹ್ವಾಗ್ ಶತಕ ಸಿಡಿಸಿ ಅಬ್ಬರಿಸಿದ್ರು. ಭಾರತ ತಂಡವು 1983ರ ವಿಶ್ವಕಪ್ ಗೆಲುವಿನ ಬಳಿಕ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಗೆದ್ದು ಬೀಗಿದ್ದು ಇದೀಗ ಇತಿಹಾಸವಾಗಿದೆ. ಆದ್ರೆ ತಂಡದಲ್ಲಿ ಸೆಹ್ವಾಗ್ ಇಲ್ಲದಿದ್ರೆ, ಫಲಿತಾಂಶ ಏನಾಗಿರುತ್ತಿತ್ತು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ.


Click it and Unblock the Notifications
