ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದನ್ನು ದೃಢಪಡಿಸಿದ ಗಣೇಶ್
ಬೆಂಗಳೂರು, ಜೂನ್ 1: ಭಾರತೀಯ ಪುರುಷರ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ತಾವು ಅರ್ಜಿ ಸಲ್ಲಿಸಿರುವುದನ್ನು ಕರ್ನಾಟಕದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಸ್ಪಷ್ಟಪಡಿಸಿದ್ದಾರೆ.
ಪ್ರತಿಷ್ಠಿತ ಹುದ್ದೆಗೆ ಈಗಾಗಲೇ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ ಸೇರಿದಂತೆ ಐವರು ಅರ್ಜಿ ಸಲ್ಲಿಸಿದ್ದು ಅದರಲ್ಲಿ ದೊಡ್ಡ ಗಣೇಶ್ ಕೂಡಾ ಒಬ್ಬರು ಎಂಬ ಮಾಹಿತಿಯನ್ನು ಬಿಸಿಸಿಐ ಮೂಲಗಳು ಗುರುವಾರ ಸಂಜೆ ಹೊರಹಾಕಿದ್ದವು. ಈ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳಿಗೆ ದೊಡ್ಡ ಗಣೇಶ್ ಸ್ಪಷ್ಟೀಕರಣ ನೀಡಿದ್ದಾರೆ.[ಟೀಂ ಇಂಡಿಯಾ ಕೋಚ್ ಹುದ್ದೆ: ಜಂಬೋಗೆ ಸೆಹ್ವಾಗ್ ಪೈಪೋಟಿ]

ಕಳೆದ ವರ್ಷ ಜೂನ್ 23ರಂದು ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಸೇವಾವಧಿ ಇದೇ ತಿಂಗಳ 22ರಂದು ಕೊನೆಗೊಳ್ಳಲಿದೆ. ಹಾಗಾಗಿಯೇ, ಅವರ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಲು ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿತ್ತು.[ಕುಂಬ್ಳೆಯಿಂದ ಕೊಹ್ಲಿ ಜತೆಗಿನ ಖಾಸಗಿ ಚಾಟ್ ಬಹಿರಂಗ?]
ಈಗ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಅರ್ಜಿದಾರರ ವೈಯಕ್ತಿಕ ಸಂದರ್ಶನ ನಡೆಸಿದ ನಂತರವಷ್ಟೇ ಕೋಚ್ ಹುದ್ದೆಗೆ ನೇಮಕ ಮಾಡಲಾಗುತ್ತದೆ. ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರುಳ್ಳ ಸಲಹಾ ಸಮಿತಿಯು ಹೊಸ ಕೋಚ್ ಅನ್ನು ಆರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications