ಇಂಗ್ಲೆಂಡ್ ಕ್ರಿಕೆಟಿಗರ ಸೆಂಟ್ರಲ್ ಕಾಂಟ್ರ್ಯಾಕ್ಟ್ 2022: 30 ಆಟಗಾರರಿಗೆ ಸ್ಥಾನ

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಇಂಗ್ಲೆಂಡ್ ಪುರುಷ ಅಂತರಾಷ್ಟ್ರೀಯ ಕ್ರಿಕೆಟಿಗರ ವಾರ್ಷಿಕ ಕೇಂದ್ರೀಯ ಗುತ್ತಿಗೆಯನ್ನು ಪ್ರಕಟಿಸಿದ್ದು, 1 ಅಕ್ಟೋಬರ್ 2022ರಿಂದ ಅನ್ವಯವಾಗಲಿದೆ. ಈ ಹೊಸ ಗುತ್ತಿಗೆಯು ರೆಡ್ ಬಾಲ್ ಕ್ರಿಕೆಟ್ ಆಟಗಾರರಿಗೂ ಮತ್ತು ವೈಟ್ ಬಾಲ್ ಕ್ರಿಕೆಟ್ ಆಟಗಾರರನ್ನ ಒಳಗೊಂಡಿದೆ.
ಇಂಗ್ಲೆಂಡ್ ತಂಡವನ್ನ ಎಲ್ಲಾ ಫಾರ್ಮೆಟ್‌ನಲ್ಲಿ ಪ್ರತಿನಿಧಿಸುವ ಆಟಗಾರರ ಜೊತೆಯಲ್ಲಿ ಯುವ ಆಟಗಾರರಿಗೂ ಕೂಡ ಸ್ಥಾನ ನೀಡಲಾಗಿದೆ. ಒಟ್ಟು 30 ಆಟಗಾರು ಕೇಂದ್ರೀಯ ಒಪ್ಪಂದದ ಪಟ್ಟಿಗೆ ಸೇರ್ಪಡೆಯಾಗಿದ್ದು ಇದರಲ್ಲಿ 18 ಆಟಗಾರರು ವಾರ್ಷಿಕ ಕೇಂದ್ರೀಯ ಗುತ್ತಿಗೆ ಪಡೆದಿದ್ದಾರೆ. ಜೊತೆಗೆ ಆರು ಇಂಗ್ಲೆಂಡ್ ಇನ್ಕ್ರಿಮೆಂಟ್ ಒಪ್ಪಂದಗಳು, ಮತ್ತು ಆರು ಇಂಗ್ಲೆಂಡ್ ಪೇಸ್ ಬೌಲಿಂಗ್ ಅಭಿವೃದ್ಧಿ ಒಪ್ಪಂದಗಳು ಸಹ ಒಳಗೊಂಡಿವೆ.
ಇಂಗ್ಲೆಂಡ್‌ನ ಯಾವೆಲ್ಲಾ ಆಟಗಾರರು ಯಾವೆಲ್ಲಾ ಒಪ್ಪಂದದಡಿಯಲ್ಲಿ ವಾರ್ಷಿಕವಾಗಿ ಸಂಭಾವನೆ ಪಡೆಯಲಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು.

ಇಂಗ್ಲೆಂಡ್ ವಾರ್ಷಿಕ ಕೇಂದ್ರ ಒಪ್ಪಂದಗಳು
ಬೆನ್ ಫೋಕ್ಸ್ ಮತ್ತು ಲಂಕಾಶೈರ್ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ವಾರ್ಷಿಕ ಕೇಂದ್ರ ಒಪ್ಪಂದ ಪಡೆದ ಇಬ್ಬರು ಹೊಸ ಆಟಗಾರರಾಗಿದ್ದಾರೆ. ಹ್ಯಾರಿ ಬ್ರೂಕ್, ಮ್ಯಾಥ್ಯೂ ಪಾಟ್ಸ್ ಮತ್ತು ರೀಸ್ ಟೋಪ್ಲೆ ಅವರಿಗೆ ಇಂಗ್ಲೆಂಡ್ ಹೆಚ್ಚುವರಿ ಒಪ್ಪಂದಗಳು ನೀಡಲಾಗುತ್ತದೆ.
ಮೊಯಿನ್ ಅಲಿ (ವಾರ್ವಿಕ್ಷೈರ್)
ಜೇಮ್ಸ್ ಆಂಡರ್ಸನ್ (ಲಂಕಾಷೈರ್)
ಜೋಫ್ರಾ ಆರ್ಚರ್ (ಸಸೆಕ್ಸ್)
ಜೊನಾಥನ್ ಬೈರ್‌ಸ್ಟೋವ್ (ಯಾರ್ಕ್‌ಷೈರ್)
ಸ್ಟುವರ್ಟ್ ಬ್ರಾಡ್ (ನಾಟಿಂಗ್‌ಹ್ಯಾಮ್‌ಶೈರ್)
ಜೋಸ್ ಬಟ್ಲರ್ (ಲಂಕಾಷೈರ್)
ಝಾಕ್ ಕ್ರಾಲಿ (ಕೆಂಟ್)
ಸ್ಯಾಮ್ ಕರ್ರಾನ್ (ಸರ್ರೆ)
ಬೆನ್ ಫೋಕ್ಸ್ (ಸರ್ರೆ)
ಜ್ಯಾಕ್ ಲೀಚ್ (ಸೋಮರ್‌ಸೆಟ್)
ಲಿಯಾಮ್ ಲಿವಿಂಗ್‌ಸ್ಟೋನ್ (ಲಂಕಾಷೈರ್)
ಆಲಿ ಪೋಪ್ (ಸರ್ರೆ)
ಆದಿಲ್ ರಶೀದ್ (ಯಾರ್ಕ್ಷೈರ್)
ಆಲಿ ರಾಬಿನ್ಸನ್ (ಸಸೆಕ್ಸ್)
ಜೋ ರೂಟ್ (ಯಾರ್ಕ್ಷೈರ್)
ಬೆನ್ ಸ್ಟೋಕ್ಸ್ (ಡರ್ಹಾಮ್)
ಕ್ರಿಸ್ ವೋಕ್ಸ್ (ವಾರ್ವಿಕ್ಷೈರ್)
ಮಾರ್ಕ್ ವುಡ್ (ಡರ್ಹಾಮ್)
SMAT 2022: 4.5 ಓವರ್‌ಗಳಲ್ಲಿ ಟಿ20 ಪಂದ್ಯ ಗೆದ್ದ ಕೇರಳ! ಮುಂಬೈ ಗೆಲುವಿನ ಶುಭಾರಂಭ

ಇಂಗ್ಲೆಂಡ್ ಹೆಚ್ಚುವರಿ ಒಪ್ಪಂದಗಳು
ಹ್ಯಾರಿ ಬ್ರೂಕ್ (ಯಾರ್ಕ್‌ಶೈರ್)
ಡೇವಿಡ್ ಮಲನ್ (ಯಾರ್ಕ್‌ಶೈರ್)
ಮ್ಯಾಥ್ಯೂ ಪಾಟ್ಸ್ (ಡರ್ಹಾಮ್)
ಜೇಸನ್ ರಾಯ್ (ಸರ್ರೆ)
ರೀಸ್ ಟೋಪ್ಲಿ (ಸರ್ರೆ)
ಡೇವಿಡ್ ವಿಲ್ಲಿ (ನಾರ್ಥಾಂಪ್ಟನ್‌ಶೈರ್)
ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ? ಕಾರ್ಯದರ್ಶಿಯಾಗಿ ಮುಂದುವರಿಯಲಿರುವ ಜಯ್ ಷಾ

ಇಂಗ್ಲೆಂಡ್ ಪೇಸ್ ಬೌಲಿಂಗ್ ಡೆವಲಪ್‌ಮೆಂಟ್ ಕಾಂಟ್ರ್ಯಾಕ್ಟ್
ಬ್ರೈಡನ್ ಕಾರ್ಸೆ (ಡರ್ಹಾಮ್)
ಮ್ಯಾಥ್ಯೂ ಫಿಶರ್ (ಯಾರ್ಕ್‌ಶೈರ್)
ಸಾಕಿಬ್ ಮಹಮೂದ್ (ಲಂಕಾಶೈರ್)
ಕ್ರೇಗ್ ಓವರ್‌ಟನ್ (ಸೋಮರ್‌ಸೆಟ್)
ಜೇಮೀ ಓವರ್ಟನ್ (ಸರ್ರೆ)
ಆಲಿ ಸ್ಟೋನ್ (ನಾಟಿಂಗ್‌ಹ್ಯಾಮ್‌ಶೈರ್ )
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications