
11 ಓವರ್‌ಗಳಿಗೆ ನಿಗದಿಯಾಗಿದ್ದ ಪಂದ್ಯ 4.5 ಓವರ್‌ಗೆ ಮುಕ್ತಾಯ!
ಮಳೆಯಿಂದಾಗಿ ಕೇರಳ ಮತ್ತು ಅರುಣಾಚಲ ಪ್ರದೇಶ ನಡುವಿನ ಪಂದ್ಯವು 11 ಓವರ್‌ಗಳಿಗೆ ಸೀಮಿತಗೊಂಡಿತ್ತು. ಕೇರಳ ತಂಡದ ನಾಯಕ ಸಚಿನ್ ಬೇಬಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರು. ಇದಾದ ಬಳಿಕ ನಡೆದಿದ್ದು ಅರುಣಾಚಲ ಪ್ರದೇಶ ತಂಡದ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್.
ಕೇರಳ ಬೌಲಿಂಗ್ ದಾಳಿಗೆ ತತ್ತರಿಸಿದ ಅರುಣಾಚಲ ಪ್ರದೇಶ 11 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 53ರನ್ ಕಲೆಹಾಕಿತು. ಇಬ್ಬರು ಬ್ಯಾಟರ್‌ಗಳು ಮಾತ್ರ ಎರಡಂಕಿ ಗಡಿದಾಟಿದ್ರು. ಟೆಚಿ ದೊರಿಯಾ 18 ರನ್, ಟೆಚಿ ನೇರಿ 12 ರನ್ ದಾಖಲಿಸಿದ್ರೆ, ಉಳಿದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ಗೆ ಔಟಾದ್ರು. ಪರಿಣಾಮ 53ರನ್‌ಗಳಿಸುವಷ್ಟರಲ್ಲಿ ಅರುಣಾಚಲ ಪ್ರದೇಶ ಸೀಮಿತಗೊಂಡಿತು.
54ರನ್‌ಗಳ ಗುರಿ ಬೆನ್ನತ್ತಿದ ಕೇರಳ ತಂಡವು ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ಮುಟ್ಟಿದೆ. ವಿಕೆಟ್ ಕೀಪರ್ ವಿಷ್ಣು ವಿನೋದ್ 16 ಎಸೆತಗಳಲ್ಲಿ 23 ರನ್ ದಾಖಲಿಸುವ ಮೂಲಕ ಮಿಂಚಿದ್ರು. 2 ಬೌಂಡರಿ ಮತ್ತು 1 ಸಿಕ್ಸರ್ ದಾಖಲಿಸುವ ಮೂಲಕ ಅಬ್ಬರಿಸಿದ್ರು. ಮತ್ತೊಂದು ಬಂದಿಯಲ್ಲಿ ಉತ್ತಮ ಸಾಥ್ ಕೊಟ್ಟ ರೋಹನ್ ಕುನ್ನುಮ್ಮಲ್ 13 ಎಸೆತಗಳಲ್ಲಿ ಅಜೇಯ 32 ರನ್ ಕಲೆಹಾಕುವ ಮೂಲಕ ಮಿಂಚಿದರು. ಇವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.
ಈ ಮೂಲಕ ಕೇರಳ ಕೇವಲ 4.5 ಓವರ್‌ಗಳಲ್ಲಿಯೇ ಗೆಲುವಿನ ಗೆರೆ ದಾಟುವ ಮೂಲಕ ಮಿಂಚಿದೆ.

ಮಿಜೋರಾಂ ವಿರುದ್ಧ ಸುಲಭ ಗೆಲುವು ದಾಖಲಿಸಿದ ಮುಂಬೈ
ಎಲೈಟ್ ಗ್ರೂಪ್ Aನಲ್ಲಿ ಮುಖಾಮುಖಿಯಾಗಿದ್ದ ಮುಂಬೈ ಮತ್ತು ಮಿಜೋರಾಂ ತಂಡಗಳ ಮುಖಾಮುಖಿಯಲ್ಲಿ, ಮುಂಬೈ 9 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸುವ ಮೂಲಕ ಗೆಲುವಿನ ಶುಭಾರಂಭ ಮಾಡಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಮುಂಬೈ ತಂಡವು ದುರ್ಬಲ ತಂಡ ಮಿಜೋರಾಂಗೆ ಬ್ಯಾಟಿಂಗ್ ಆಹ್ವಾನಿಸಿತು.
ಮುಂಬೈ ಬೌಲಿಂಗ್ ದಾಳಿಗೆ ತತ್ತರಿಸಿದ ಮಿಜೋರಾಂ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 98 ರನ್ ದಾಖಲಿಸಿದೆ. ಮಿಜೋರಾಂ ಪರ ಶ್ರೀವತ್ಸ ಗೋಸ್ವಾಮಿ 29 ಎಸೆತಗಳಲ್ಲಿ 31ರನ್ ದಾಖಲಿಸಿದ್ದು ಬಿಟ್ಟರೆ ಬೇರೆ ಯಾವೊಬ್ಬ ಬ್ಯಾಟರ್ ಕೂಡ ತಂಡಕ್ಕೆ ಆಧಾರವಾಗಲಿಲ್ಲ. ಟಿ ಕೊಹ್ಲಿ 0, ಆಂಡ್ರ್ಯೂ ವನ್ಲಾಲ್ಹ್ರುಯಾ 4, ಜೋಸೆಫ್ 12ರನ್‌ಗಳಿಸಿ ಔಟಾದರು. ವಿಕಾಸ್ ಕುಮಾರ್ 24ರನ್‌ಗಳ ಕೊಡುಗೆ ನೀಡಿದ್ರು. ಅಂತಿಮವಾಗಿ ಮಿಜೋರಾಂ 20 ಓವರ್‌ಗಳಲ್ಲಿ ಗಳಿಸಿದ್ದು ಕೇವಲ 98 ರನ್.
ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ? ಕಾರ್ಯದರ್ಶಿಯಾಗಿ ಮುಂದುವರಿಯಲಿರುವ ಜಯ್ ಷಾ

ಪೃಥ್ವಿ ಶಾ ಅಬ್ಬರದ ಬ್ಯಾಟಿಂಗ್, 10.3ಓವರ್‌ಗಳಲ್ಲಿ 9 ವಿಕೆಟ್‌ಗಳ ಗೆಲುವು
99 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಪರ ಪೃಥ್ವಿ ಶಾ ಅಬ್ಬರದ ಬ್ಯಾಟಿಂಗ್‌ಗೆ ಮಿಜೋರಾಂ ತತ್ತರಿಸಿ ಹೋಯಿತು. ಕೇವಲ 10.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದ ಮುಂಬೈ 9 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.
ಮುಂಬೈ ಪರ ಪೃಥ್ವಿ ಶಾ 34 ಎಸೆತಗಳಲ್ಲಿ ಅಜೇಯ 55 ರನ್ ದಾಖಲಿಸಿದ್ದು, ಇವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ನಾಯಕ ಅಜಿಂಕ್ಯ ರಹಾನೆ ಕೇವಲ 9ರನ್‌ಗೆ ವಿಕೆಟ್ ಒಪ್ಪಿಸಿದ್ರು. ಅಮನ್ ಹಕೀಮ್ ಖಾನ್ 22 ಎಸೆತಗಳಲ್ಲಿ ಅಜೇಯ 39ರನ್ ಕಲೆಹಾಕುವ ಮೂಲಕ ಮಿಂಚಿದರು. ಈ ಗೆಲುವಿನ ಮೂಲಕ ಮುಂಬೈ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

5 ಗುಂಪುಗಳು ಮತ್ತು 38 ತಂಡಗಳ ನಡುವೆ ಟ್ರೋಫಿಗಾಗಿ ಸ್ಪರ್ಧೆ
ಒಟ್ಟು ಟೂರ್ನಿಯಲ್ಲಿ 38 ತಂಡಗಳು ಭಾಗಿಯಾಗಲಿದ್ದು, ಐದು ಗುಂಪುಗಳಾಗಿ ವಿಂಗಡಿಸಲಾಗಿದೆ. A, B, ಮತ್ತು C ಗುಂಪಿನಲ್ಲಿ 8 ತಂಡಗಳಿದ್ದು, ಉಳಿದ E ಮತ್ತು F ಗುಂಪಿನಲ್ಲಿ 7 ತಂಡಗಳು ಸ್ಥಾನ ಪಡೆದಿವೆ. ಯಾವ ಗುಂಪಿನಲ್ಲಿ ಯಾವ ರಾಜ್ಯದ ತಂಡಗಳು ಸ್ಥಾನ ಪಡೆದಿವೆ? ಯಾವ ಸ್ಥಳದಲ್ಲಿ ಪಂದ್ಯಗಳನ್ನ ಆಡಲಿವೆ ಎಂಬುದನ್ನ ಈ ಕೆಳಗೆ ಕಾಣಬಹುದು.
ಐದು ಗುಂಪುಗಳು ಮತ್ತು 38 ತಂಡಗಳು
ಎಲೈಟ್ ಎ (ರಾಜ್‌ಕೋಟ್): ಅಸ್ಸಾಂ, ಮಧ್ಯಪ್ರದೇಶ, ಮಿಜೋರಾಂ, ಮುಂಬೈ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ವಿದರ್ಭ
ಎಲೈಟ್ ಬಿ (ಜೈಪುರ): ದೆಹಲಿ, ಗೋವಾ, ಹೈದರಾಬಾದ್, ಮಣಿಪುರ, ಪುದುಚೇರಿ, ಪಂಜಾಬ್, ತ್ರಿಪುರ, ಉತ್ತರ ಪ್ರದೇಶ
ಎಲೈಟ್ ಸಿ (ಮೊಹಾಲಿ): ಅರುಣಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮೇಘಾಲಯ, ಸರ್ವೀಸಸ್
ಎಲೈಟ್ ಡಿ (ಇಂದೋರ್): ಆಂಧ್ರ ಪ್ರದೇಶ, ಬರೋಡಾ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಸೌರಾಷ್ಟ್ರ
ಎಲೈಟ್ ಇ (ಲಕ್ನೋ): ಬಂಗಾಳ, ಚಂಡೀಗಢ, ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಸಿಕ್ಕಿಂ, ತಮಿಳುನಾಡು


Click it and Unblock the Notifications












