Eng vs Nz 4th Test: ಕುತೂಹಲ ಘಟ್ಟದಲ್ಲಿ 4ನೇ ಟೆಸ್ಟ್‌ನ 4ನೇ ದಿನದಾಟ Live score

ಹೆಡಿಂಗ್ಲಿಯ ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವು ಕುತೂಹಲ ಹಂತಕ್ಕೆ ತಲುಪಿದ್ದು ಪ್ರವಾಸಿ ಕಿವೀಸ್ ತಂಡವು ಎಚ್ಚರಿಕೆಯಿಂದ ಆಡಬೇಕಿದೆ.
ಮೂರನೇ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ ತಂಡವು ಎರಡನೇ ಇನ್ನಿಂಗ್ಸ್ ಐದು ವಿಕೆಟ್ ನಷ್ಟಕ್ಕೆ 168ರನ್ ಕಲೆಹಾಕಿದ್ದು, 137ರನ್‌ಗಳ ಮುನ್ನಡೆಯನ್ನ ಪಡೆದಿತ್ತು. ನಾಲ್ಕನೇ ದಿನದಾಟ ಆರಂಭಿಸಿರುವ ಕಿವೀಸ್ ತಂಡಕ್ಕೆ ಡೆರಿಲ್ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಆಧಾರವಾಗಿದ್ದಾರೆ. ಇವರ ಸಹಾಯದಿಂದ ನ್ಯೂಜಿಲೆಂಡ್ ತಂಡವು 150ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿದ್ದು ಲೈವ್ ಸ್ಕೋರ್ ಕಾರ್ಡ್ ಈ ಕೆಳಗಿದೆ.

ಇಂಗ್ಲೆಂಡ್‌ಗೆ 31ರನ್‌ಗಳ ಅಲ್ಪ ಮುನ್ನಡೆ
ಮೊದಲ ಇನ್ನಿಂಗ್ಸ್‌ನಲ್ಲಿ 55ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಜಾನಿ ಬೈಸ್ಟ್ರೋವ್ 162, ಜೇಮಿ ಓವರ್ಟನ್ 97ರನ್‌ಗಳ ನೆರವಿನಿಂದ 360ರನ್ ಕಲೆಹಾಕಿತು. ಜೊತೆಗೆ ಅಮೂಲ್ಯವಾದ 31ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತು. ಒಂದು ಹಂತದಲ್ಲಿ ಹೀನಾಯ ಕುಸಿತ ಕಂಡಿದ್ದ ತಂಡಕ್ಕೆ ಜಾನಿ ಬೈಸ್ಟ್ರೋವ್ ಆಧಾರವಾದರು. ಹೀಗಾಗಿ ಇಂಗ್ಲೆಂಡ್ ಆಶ್ಚರ್ಯಕರ ರೀತಿಯಲ್ಲಿ ಅದ್ಭುತ ಮುನ್ನಡೆ ಪಡೆಯಿತು.
ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 4, ಟಿಮ್ ಸೌಥಿ 3, ವ್ಯಾಗ್ನರ್ 2, ಬ್ರೇಸ್‌ವೆಲ್ 1 ವಿಕೆಟ್ ಪಡೆದರು.
ಮಿಥಾಲಿ ರಾಜ್ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿ ಎಂದು ಶುಭ ಹಾರೈಸಿದ ಪ್ರಧಾನಿ ಮೋದಿ

ನ್ಯೂಜಿಲೆಂಡ್ ಪರ ಟಾಮ್ ಲಥಾಮ್ ಅರ್ಧಶತಕ, ನಡೆಯಲಿಲ್ಲ ವಿಲಿಯಮ್ಸನ್ ಮ್ಯಾಜಿಕ್
ಮೊದಲ ಇನ್ನಿಂಗ್ಸ್‌ನಲ್ಲಿ 329ರನ್ ಕಲೆಹಾಕಿದ್ದ ನ್ಯೂಜಿಲೆಂಡ್, ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಆರಂಭಿಕ ಬ್ಯಾಟರ್ ವಿಲ್ ಯಂಗ್ (8) ಬೇಗನೆ ಔಟಾದ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಟಾಮ್ ಲಥಾಮ್ ತಂಡಕ್ಕೆ ಆಧಾರವಾದ್ರು .
ಎರಡನೇ ವಿಕೆಟ್‌ಗೆ ಟಾಮ್ ಲಥಾಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದರು. ಟಾಮ್ ಲಥಾಮ್ 100 ಎಸೆತಗಳನ್ನ ಎದುರಿಸಿ 76ರನ್ ಕಲೆಹಾಕಿ ಔಟಾದ್ರೆ, ಇದ್ರ ನಂತರದಲ್ಲಿ ಡೆವೊನ್ ಕಾನ್ವೆ 11, ನಾಯಕ ಕೇನ್ ವಿಲಿಯಮ್ಸನ್ 48, ಹೆನ್ರಿ ನಿಕೋಲ್ಸ್ 7ರನ್‌ಗಳಿಸಿ ವಿಕೆಟ್ ಒಪ್ಪಿಸಿ ತಂಡದ ಕುಸಿತಕ್ಕೆ ಕಾರಣವಾದ್ರು.
ಮಧ್ಯಪ್ರದೇಶದ ಮಡಿಲಿಗೆ ರಣಜಿ ಟ್ರೋಫಿ: ಮುಂಬೈ ಮಣಿಸಿ ಐತಿಹಾಸಿಕ ಸಾಧನೆ

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಇಂಗ್ಲೆಂಡ್
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ಜೇಮೀ ಓವರ್‌ಟನ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್
ನ್ಯೂಜಿಲೆಂಡ್
ಟಾಮ್ ಲ್ಯಾಥಮ್, ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವ್ಯಾಗ್ನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications