ಜೋ ರೂಟ್ 26ನೇ ಟೆಸ್ಟ್ ಶತಕ, 31ನೇ ವಯಸ್ಸಿನಲ್ಲೇ 10,000 ಟೆಸ್ಟ್ ರನ್: ಟ್ವಿಟ್ಟರ್ ಪ್ರತಿಕ್ರಿಯೆ

ಲಂಡನ್ ಲಾರ್ಡ್ಸ್ ಮೈದಾನದಲ್ಲಿ ತಂಡಕ್ಕೆ ಅಮೋಘ ಗೆಲುವು ತಂದುಕೊಡುವುದರ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮೈಲುಗಲ್ಲನ್ನ ತಲುಪಿದ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್‌ಗೆ ಸಾಮಾಜಿಕ ಜಾಲತಾಣದಲಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 26ನೇ ಶತಕ ಹಾಗೂ 10,000 ಟೆಸ್ಟ್ ರನ್‌ಗಳನ್ನ ಒಟ್ಟಿಗೆ ಪೂರೈಸಿದ ರೂಟ್ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಎರಡನೇ ಕ್ರಿಕೆಟಿಗನಾಗಿದ್ದಾರೆ.
31 ವರ್ಷದ ಜೋ ರೂಟ್ 2021ರಿಂದ ಇದುವರೆಗೂ 9 ಶತಕಗಳನ್ನ ದಾಖಲಿಸಿದ್ದು, ಅಮೋಘ ಫಾರ್ಮ್ ಅನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮುಂದುವರಿಸಿದ್ದಾರೆ. 10 ವರ್ಷಗಳಲ್ಲಿ 10,000 ಟೆಸ್ಟ್ ರನ್ ದಾಖಲಿಸಿದ ಮೊದಲ ಬ್ಯಾಟರ್ ಆಗಿರುವ ರೂಟ್ ಈ ಸಾಧನೆ ಮಾಡಿದ ವಿಶ್ವದ 14ನೇ ಹಾಗೂ ಇಂಗ್ಲೆಂಡ್ ಎರಡನೇ ಕ್ರಿಕೆಟಿಗರಾಗಿದ್ದಾರೆ. ಅಲೆಸ್ಟರ್ ಕುಕ್ ಬಳಿಕ ಈ ಸಾಧನೆ ಮಾಡಿದ ಇಂಗ್ಲೀಷ್ ಬ್ಯಾಟ್ಸ್‌ಮನ್ ಆಗಿದ್ದಾರೆ.
ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ಗೆಲುವಿಗೆ 77ರನ್‌ಗಳ ಅವಶ್ಯಕತೆಯಿದ್ದಾಗ ಸ್ವಲ್ಪವೂ ಅಳುಕದೆ ಅಜೇಯರಾಗಿದ್ದ ಜೋ ರೂಟ್, ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್ ಜೊತೆಗೂಡಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಜೋ ರೂಟ್ 170 ಎಸೆತಗಳಲ್ಲಿ ಅಜೇಯ 115 ರನ್ ಕಲೆಹಾಕಿದ್ರೆ, ಬೆನ್ ಫೋಕ್ಸ್ 92 ಎಸೆತಗಳಲ್ಲಿ ಅಜೇಯ 32 ರನ್ ಕಲೆಹಾಕಿದ್ರು.
ಜೋ ರೂಟ್ ಅಮೋಘ ಆಟದಿಂದಾಗಿ ಇಂಗ್ಲೆಂಡ್ ಮೊದಲ ಟೆಸ್ಟ್ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಬ್ರೆಂಡನ್ ಮೆಕಲಮ್ ಟೆಸ್ಟ್ ತಂಡದ ಕೋಚ್ ಆದ ಬಳಿಕ ಇಂಗ್ಲೆಂಡ್‌ಗೆ ಇದು ಮೊದಲ ಜಯವಾಗಿದೆ.
ಜೋ ರೂಟ್ 26 ಶತಕ ಹಾಗೂ 10,000 ರನ್‌ಗಳನ್ನು ಒಂದೇ ಎಸೆತದಲ್ಲಿ ಪೂರೈಸಿದಾಗ ಟ್ವಿಟ್ಟರ್‌ನಲ್ಲಿ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಹೊಗಳಿಕೆಯ ಟ್ವೀಟ್ ಮಾಡಿದ್ದಾರೆ. ಹೇಗಿತ್ತು ಟ್ವಿಟ್ಟರ್ ರಿಯಾಕ್ಷನ್ ಎಂಬುದನ್ನ ಈ ಕೆಳಗೆ ಕಾಣಬಹುದು.
ಒತ್ತಡದಲ್ಲಿ ಶತಕ ಸಿಡಿಸಿದ ಅನುಭವ ಅದ್ಭುತವಾಗಿರುತ್ತದೆ-ವಿವಿಎಸ್
ಒತ್ತಡದ ರನ್ ಚೇಸ್‌ನಲ್ಲಿ ಪಂದ್ಯ ಗೆಲ್ಲುವ 100 ಕ್ಕಿಂತ ಉತ್ತಮ ಭಾವನೆ ಮತ್ತೊಂದು ಇಲ್ಲ. ಅನೇಕ ಅಭಿನಂದನೆಗಳು root66, ನಿಜಕ್ಕೂ ನಂಬಲಾಗದ 100 ಮತ್ತು 10000 ಟೆಸ್ಟ್ ರನ್‌ಗಳನ್ನು ತಲುಪಿದ ಮೇಲೆ, ಇದೊಂದು ಬೃಹತ್ ಸಾಧನೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅಭಿನಂದಿಸಿದ್ದಾರೆ.
Eng vs NZ ಮೊದಲ ಟೆಸ್ಟ್: ರೂಟ್ ಅಜೇಯ ಶತಕ, ಅದ್ಭುತ ಕಂಬ್ಯಾಕ್ ಮಾಡಿದ ಇಂಗ್ಲೆಂಡ್‌ಗೆ ಗೆಲುವು
4 ನೇ ಇನ್ನಿಂಗ್ಸ್ ಶತಕ ಎಂದು ಯೋಚಿಸುವುದು ಆಶ್ಚರ್ಯ: ಇಸಾ ಗುಹಾ
ಇದು ಜೋ ರೂಟ್ ಅವರ ಮೊದಲ 4 ನೇ ಇನ್ನಿಂಗ್ಸ್ ಶತಕ ಎಂದು ಯೋಚಿಸುವುದು ಆಶ್ಚರ್ಯಕರವಾಗಿದೆ. 10000 ಟೆಸ್ಟ್ ರನ್‌ಗಳನ್ನು ದಾಟಿದ ಎರಡನೇ ಇಂಗ್ಲಿಷ್ ಆಟಗಾರ ಮತ್ತು 31 ವರ್ಷ ಮತ್ತು 157 ದಿನಗಳಲ್ಲಿ ಸರ್ ಅಲಿಸ್ಟೈರ್ ಕುಕ್ ಅವರೊಂದಿಗೆ ಸಮಾನ ಕಿರಿಯ ಆಟಗಾರ. ಇಂಗ್ಲೆಂಡ್‌ಗಾಗಿ ಕೆಲಸ ಮುಗಿಸಿದ್ದೀರಾ, ಚೆನ್ನಾಗಿ ಆಡಿದ್ರಿ ಎಂದು ಇಂಗ್ಲೆಂಡ್ ಮಾಜಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಇಸಾ ಗುಹಾ ಟ್ವೀಟ್ ಮಾಡಿದ್ದಾರೆ.
ENG vs NZ: ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ವಿಶ್ವದ 14ನೇ ಆಟಗಾರ ಜೋ ರೂಟ್
31 ವರ್ಷಕ್ಕೆ 10,000ರನ್ ಎಂದು ಆಶ್ಚರ್ಯ ವ್ಯಕ್ತಪಡಿಸಿದ ವಾಸಿಂ ಜಾಫರ್
ಜೋ ರೂಟ್ 10,000 ಟೆಸ್ಟ್ ರನ್ ಗಳಿಸಿದ್ದಾರೆ. ಮತ್ತು ಅವರು ಕೇವಲ 31 ವರ್ಷದಲ್ಲಿ ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ಟಿಂ ಇಂಡಿಯಾ ಮಾಜಿ ಬ್ಯಾಟರ್ ವಾಸಿಂ ಜಾಫರ್, ನೀವು ಚೆನ್ನಾಗಿ ಆಡಿದ್ದೀರಿ ಮತ್ತು ಅಭಿನಂದನೆಗಳು root66 ಎಂದು ಟ್ವೀಟ್ ಮಾಡಿದ್ದಾರೆ.
ಈ ಕ್ರಿಕೆಟಿಗರು ಅಷ್ಟೇ ಅಲ್ಲದೆ ಅನೇಕ ಮಾಜಿ ಕ್ರಿಕೆಟಿಗರು, ಹಾಗೂ ಕ್ರಿಕೆಟ್ ವಿಶ್ಲೇಷಕರು ಜೋ ರೂಟ್‌ಗೆ ಅಭಿನಂದನೆ ತಿಳಿಸಿರುವುದನ್ನ ಈ ಕೆಳಗೆ ಕಾಣಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications