CSA T20 League: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಿದ ಫಾಫ್ ಡುಪ್ಲೆಸಿಸ್!

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮರಳಿ ಪಡೆದಿದೆ. ಐಪಿಎಲ್ 2022ರ ಸೀಸನ್‌ಗೂ ಮುಂಚೆ ಸ್ವಲ್ಪದರಲ್ಲೇ ಮಿಸ್ ಆರ್‌ಸಿಬಿ ತೆಕ್ಕೆಗೆ ಸೇರಿದ್ದ್ ಫಾಫ್ ಡುಪ್ಲೆಸಿಸ್‌ರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಆದ್ರೆ ಸ್ವಲ್ಪ ವ್ಯತ್ಯಾಸ ಏನಂದ್ರೆ ಡುಪ್ಲೆಸಿಸ್ ಆಯ್ಕೆಯಾಗಿರುವುದು ದಕ್ಷಿಣ ಆಫ್ರಿಕಾ ಟಿ20 ಟೂರ್ನಮೆಂಟ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಆಡಲಿದ್ದಾರೆ. ಡುಪ್ಲೆಸಿಸ್ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭವಾಗುವ ಟಿ20 ಫ್ರಾಂಚೈಸ್ ಲೀಗ್‌ನಲ್ಲಿ ಸಿಎಸ್‌ಕೆ ಮಾಲೀಕತ್ವದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ (ತಂಡದ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ) ಪರ ಆಡಲಿದ್ದಾರೆ.

ಡುಪ್ಲೆಸಿಸ್ ಜೊತೆಗೆ ಮತ್ತೊಬ್ಬ ಸಿಎಸ್‌ಕೆ ಆಟಗಾರ ಸೇರ್ಪಡೆ
ಡು ಪ್ಲೆಸಿಸ್ ಹೊರತಾಗಿ, ಕಳೆದ ಋತುವಿನವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಇಂಗ್ಲೆಂಡ್‌ನ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಮೊಯಿನ್ ಅಲಿ ಕೂಡ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಲಿದ್ದಾರೆ.
ಫಾಫ್ ಡುಪ್ಲೆಸಿಸ್ ಸೂಪರ್ ಕಿಂಗ್ಸ್ ಪರ ಆಡುವುದು ಮಾತ್ರವಲ್ಲದೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ವರದಿಗಳಿವೆ. ಕಳೆದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. ಡುಪ್ಲೆಸಿಸ್ 2011 ರಿಂದ 2021 ರವರೆಗೆ ಸಿಎಸ್‌ಕೆ ಫ್ರಾಂಚೈಸಿಯನ್ನು ಅಮಾನತುಗೊಳಿಸಿದಾಗ ಎರಡು ಋತುಗಳನ್ನು ಹೊರತುಪಡಿಸಿ ಚೆನ್ನೈ ತಂಡದ ಪರ ಆಡಿದ್ದಾರೆ.
ರಶೀದ್ ಖಾನ್, ಲಿವಿಂಗ್‌ಸ್ಟೋನ್ ಸೇರಿ ಐವರು MI ಕೇಪ್‌ಟೌನ್ ಫ್ರಾಂಚೈಸಿಗೆ ಸಹಿ

ಮೊಯಿನ್ ಅಲಿ
ಐಪಿಎಲ್ 2021 ರ ನಂತರ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡ ನಾಲ್ಕು ಆಟಗಾರರಲ್ಲಿ ಮೊಯಿನ್ ಅಲಿ ಕೂಡ ಒಬ್ಬರು. ಆದರೆ 2022 ರಲ್ಲಿ ಕಳೆದ ಬಾರಿಯಂತೆ ಉತ್ತಮ ಪ್ರದರ್ಶನ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ಹಳದಿ ಜೆರ್ಸಿಯಲ್ಲಿ ಅಲಿ ಅವರನ್ನನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೂಪರ್ ಕಿಂಗ್ಸ್ ನಿರ್ವಹಿಸುತ್ತಿದೆ. ಸ್ಟೀಫನ್ ಫ್ಲೆಮಿಂಗ್ ತಂಡದ ಮುಖ್ಯ ಕೋಚ್ ಆಗಿರುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಅವರ ಸಹಾಯಕರಾಗಿದ್ದವರೆಲ್ಲರೂ ದಕ್ಷಿಣ ಆಫ್ರಿಕಾದಲ್ಲಿ ಅವರೊಂದಿಗೆ ಇರುತ್ತಾರೆ.
ಫ್ರಾಂಚೈಸಿಯ ಹೆಸರನ್ನು ಈ ವಾರ ಅಧಿಕೃತವಾಗಿ ಪ್ರಕಟಿಸಲು ಮುಂದಾಗಿದ್ದು, ನಾವು ಪ್ರಸ್ತುತ ಸ್ಟೀಫನ್ (ಫ್ಲೆಮಿಂಗ್) ಅವರೊಂದಿಗೆ ಚರ್ಚೆಯಲ್ಲಿದ್ದೇವೆ. ಸಿಎಸ್‌ಕೆ ಪರಂಪರೆಯನ್ನು ಮುಂದುವರಿಸಲು ಅವರಿಗಿಂತ ಉತ್ತಮ ವ್ಯಕ್ತಿ ಇಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಸಿಎಸ್‌ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೆಚ್ಚಾಯ್ತು ಲೀಗ್ ಕ್ರಿಕೆಟ್‌ನ ಅಬ್ಬರ: ಬಿಸಿಸಿಐಗೆ ನಿದ್ದೆಗೆಡಿಸಿದೆ ಐಪಿಎಲ್ ಫ್ರಾಂಚೈಸಿಗಳ ಈ ನಡೆ!

ಮುಂಬೈ ಕೇಪ್‌ಟೌನ್‌ಗೆ ಐವರು ಆಟಗಾರರು ಸೇರ್ಪಡೆ
ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಫ್ರಾಂಚೈಸಿ ಗಿಟ್ಟಿಸಿಕೊಂಡಿರುವ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಕೂಡ ಒಂದಾಗಿದೆ. ಕೇಪ್‌ಟೌನ್ ಫ್ರಾಂಚೈಸಿಗಾಗಿ ಮುಂಬೈ ಕೆಲವು ಐಪಿಎಲ್ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್ ಮುಂಬೈ ಕೇಪ್‌ಟೌನ್‌ಗೆ ಸಹಿ ಮಾಡಿದ ಆಟಗಾರಲ್ಲಿ ಒಬ್ಬರಾಗಿದ್ದು, ಇಂಗ್ಲೆಂಡ್ ಸ್ಫೋಟಕ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್, ಅಫ್ಘಾನಿಸ್ತಾನದ ಮಿಸ್ಟರಿ ಸ್ಪಿನ್ನರ್ ರಶೀದ್ ಖಾನ್ ಮುಂಬೈ ಕೇಪ್‌ಟೌನ್ ಫ್ರಾಂಚೈಸಿಗೆ ಸಹಿ ಮಾಡಿದ್ದಾರೆ.
ಮೂವರು ವಿದೇಶಿ ಆಟಗಾರರನ್ನ ಎಂಐ ಕೇಪ್‌ಟೌನ್ ಸೇರಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಓರ್ವ ಕ್ಯಾಪ್ಡ್ ಆಟಗಾರ, ಓರ್ವ ಅನ್‌ಕ್ಯಾಪ್ಡ್ ಆಟಗಾರರನ್ನ ಒಳಗೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications