For Quick Alerts
ALLOW NOTIFICATIONS  
For Daily Alerts
 

2021 ಫ್ಲ್ಯಾಶ್‌ಬ್ಯಾಕ್‌: ಈ ವರ್ಷ 2 ಐಸಿಸಿ ಟ್ರೋಫಿಗಳನ್ನ ಕೈ ಚೆಲ್ಲಿದ ಟೀಂ ಇಂಡಿಯಾ

ಭಾರತ ಕ್ರಿಕೆಟ್ ತಂಡವು ವಿಶ್ವ ಕ್ರಿಕೆಟ್ ವಲಯದಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ವರ್ಷ ಬಲಿಷ್ಠ ತಂಡಗಳ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಐತಿಹಾಸಿಕ ಗೆಲುವನ್ನು ಸಾಧಿಸಿದೆ. ಆದ್ರೆ ಐಸಿಸಿ ಟೂರ್ನಿಗಳ ವಿಚಾರಕ್ಕೆ ಬಂದ್ರೆ ಟೀಂ ಇಂಡಿಯಾ ಎರಡು ಪ್ರಮುಖ ಟೂರ್ನಿಗಳಲ್ಲಿ ಗೆಲುವನ್ನ ದಕ್ಕಿಸಿಕೊಳ್ಳಲಾಗದೆ ಮುಗ್ಗರಿಸಿದೆ.

ಒಂದೆಡೆ, ಭಾರತವು ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್) ಅಂತಿಮ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಅದೇ ಸಮಯದಲ್ಲಿ, ICC ಟಿ20 ವಿಶ್ವಕಪ್‌ನಲ್ಲಿ ತೀರಾ ಕಳಪೆಯ ಪ್ರದರ್ಶನ ತೋರಿ ಗೆಲ್ಲುವಲ್ಲಿ ವಿಫಲಗೊಂಡಿತು.

ಭಾರತ ತಂಡ ಈ ವರ್ಷ 16 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ 10 ಪಂದ್ಯಗಳನ್ನು ಗೆದ್ದು 6 ಪಂದ್ಯಗಳಲ್ಲಿ ಸೋತಿದೆ. ಏಕದಿನ ಕ್ರಿಕೆಟ್‌ನಲ್ಲಿ 6 ಪಂದ್ಯಗಳಲ್ಲಿ 4 ಗೆದ್ದು 2 ಪಂದ್ಯಗಳಲ್ಲಿ ಸೋತಿದ್ದಾರೆ. ಈ ಸೀಮಿತ ಓವರ್‌ಗಳ ಸ್ವರೂಪವನ್ನು ಹೊರತುಪಡಿಸಿ, ಭಾರತೀಯ ತಂಡವು ಕ್ರಿಕೆಟ್‌ನ ಅತ್ಯಂತ ಹಳೆಯ ರೂಪವಾದ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಈ ವರ್ಷ ಭಾರತ ತಂಡ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳನ್ನು ಗೆದ್ದು 3 ಪಂದ್ಯಗಳನ್ನು ಸೋತಿದೆ. ಉಳಿದ 3 ಪಂದ್ಯಗಳು ಡ್ರಾಗೊಂಡವು.

ಸರಣಿಗೆ ಸಂಬಂಧಿಸಿದಂತೆ, ಭಾರತ ತಂಡವು 2021 ರಲ್ಲಿ ಆಡಿದ ಎರಡೂ ಏಕದಿನ ಸರಣಿಗಳನ್ನು ಗೆದ್ದಿದೆ. ಇನ್ನು ಟಿ20 ಬಗ್ಗೆ ಹೇಳುವುದಾದರೆ ಎರಡು ಸರಣಿ ಗೆದ್ದು ಒಂದು ಸರಣಿಯಲ್ಲಿ ಸೋಲನ್ನು ಎದುರಿಸಬೇಕಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ಅವರು ನಾಲ್ಕು ಸರಣಿಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ. ಈ ವರ್ಷ ಜನವರಿ 1 ರಿಂದ ಕಳೆದ ನ್ಯೂಜಿಲೆಂಡ್ ಸರಣಿವರೆಗೆ ಭಾರತದ ಪ್ರದರ್ಶನ ಹೇಗಿತ್ತು, ಅದರಲ್ಲೂ ಐಸಿಸಿ ಟ್ರೋಫಿಗಳಲ್ಲಿ ಹೇಗೆ ಆಡಿತು ಎಂಬುದನ್ನ ಈ ಕೆಳಗೆ ತಿಳಿಯಿರಿ.

ಆಸ್ಟ್ರೇಲಿಯಾ ನೆಲದಲ್ಲಿ ರೋಚಕ ಟೆಸ್ಟ್ ಸರಣಿ ಗೆಲುವು

ಆಸ್ಟ್ರೇಲಿಯಾ ನೆಲದಲ್ಲಿ ರೋಚಕ ಟೆಸ್ಟ್ ಸರಣಿ ಗೆಲುವು

ಭಾರತ ತಂಡ ಈ ವರ್ಷ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಸರಣಿಯು ಡಿಸೆಂಬರ್ 2020 ರಲ್ಲಿ ಪ್ರಾರಂಭವಾಯಿತು, ಜನವರಿಯಲ್ಲಿ ಎರಡು ಪಂದ್ಯಗಳನ್ನು ಆಡಲಾಯಿತು. ಪ್ರವಾಸಿ ಭಾರತ ತಂಡವು ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಇದು ಗಬ್ಬಾ ಮೈದಾನದಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಗೆಲುವಾಗಿದೆ

ರೋಹಿತ್ ಶರ್ಮಾ ವಿಶ್ವದಾಖಲೆಗೆ ನಾಲ್ಕು ವರ್ಷ: 3ನೇ ದ್ವಿಶತಕದ ಹಾದಿಯ ಹಿನ್ನೋಟ

ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಮೇಲುಗೈ

ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಮೇಲುಗೈ

2021ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಎರಡೂ ತಂಡಗಳು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ, ಐದು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿದ್ದವು. ಈ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 3-1 ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈ ತಂಡ ಟಿ20 ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿದೆ. ಆ ಬಳಿಕ ಭಾರತ ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿತ್ತು.

ಫೆಬ್ರವರಿ 5-9, ಮೊದಲ ಟೆಸ್ಟ್: ಇಂಗ್ಲೆಂಡ್ 227 ರನ್ ಜಯ
ಫೆಬ್ರವರಿ 13-17, ಎರಡನೇ ಟೆಸ್ಟ್: ಭಾರತ 317 ರನ್ ಜಯ
ಫೆಬ್ರವರಿ 24-28, ಮೂರನೇ ಟೆಸ್ಟ್: ಭಾರತ 10 ವಿಕೆಟ್ ಜಯ
ಮಾರ್ಚ್ 4-8, ನಾಲ್ಕನೇ ಟೆಸ್ಟ್: ಭಾರತ ಇನ್ನಿಂಗ್ಸ್ ಮತ್ತು 25 ರನ್ ಜಯ
ಮಾರ್ಚ್ 12, 1 ನೇ ಟಿ 20: ಇಂಗ್ಲೆಂಡ್ 8 ವಿಕೆಟ್‌ಗಳ ಜಯ
ಮಾರ್ಚ್ 14, 2 ನೇ ಟಿ 20: ಭಾರತಕ್ಕೆ 7 ವಿಕೆಟ್‌ಗಳ ಜಯ
ಮಾರ್ಚ್ 16, 3 ನೇ ಟಿ 20: ಇಂಗ್ಲೆಂಡ್ 8 ವಿಕೆಟ್‌ಗಳ ಜಯ
ಮಾರ್ಚ್ 18, 4 ನೇ ಟಿ 20: ಭಾರತ 8 ರನ್‌ಗಳಿಂದ ಗೆಲುವು
ಮಾರ್ಚ್ 20, ಐದನೇ ಟಿ20: ಭಾರತಕ್ಕೆ 36 ರನ್ ಜಯ
ಮಾರ್ಚ್ 23, ಮೊದಲ ODI: ಭಾರತಕ್ಕೆ 66 ರನ್ ಜಯ
ಮಾರ್ಚ್ 26, ಎರಡನೇ ODI: ಇಂಗ್ಲೆಂಡ್ 6 ವಿಕೆಟ್‌ಗಳ ಜಯ
ಮಾರ್ಚ್ 28, ಮೂರನೇ ODI: ಭಾರತಕ್ಕೆ 7 ರನ್ ಜಯ

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021

ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಋತುವಿನ ಅಂತಿಮ ಪಂದ್ಯವನ್ನು ಜೂನ್ 2021 ರಲ್ಲಿ ಆಡಲಾಯಿತು. ಈ ಪಂದ್ಯ ಜೂನ್ 18 ರಿಂದ 23 ರವರೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 217 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಭಾರತ ವಿರುದ್ಧ 249 ರನ್‌ಗಳ ಮುನ್ನಡೆ ಸಾಧಿಸಿತು. ಆ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 170 ರನ್‌ಗಳಿಗೆ ಆಲೌಟ್ ಆಯಿತು. ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ನಿರ್ಣಾಯಕ ಪಂದ್ಯವನ್ನು 46 ಓವರ್‌ಗಳಲ್ಲಿ ಗೆದ್ದುಕೊಂಡಿತು. ಈ ಮೂಲಕ ಭಾರತ ತಂಡ ಚಾಂಪಿಯನ್ ಆಗುವ ಅವಕಾಶ ಕಳೆದುಕೊಂಡಿತು.

ರೋಹಿತ್ ಶರ್ಮಾ ಟೀಂ ಇಂಡಿಯಾದ ಯಶಸ್ವಿ ನಾಯಕನಾಗಬಹುದು: ಇಲ್ಲಿವೆ 4 ಕಾರಣಗಳು

ಐಸಿಸಿ ಟಿ20 ವಿಶ್ವಕಪ್

ಐಸಿಸಿ ಟಿ20 ವಿಶ್ವಕಪ್

ICC ಪುರುಷರ ಟಿ20 ವಿಶ್ವಕಪ್ನಲ್ಲಿ ಭಾರತದ ಚುಟುಕು ತಂಡದ ನಾಯಕನಾಗಿ ವಿರಾಟ್ ಕೊಹ್ಲಿಯ ಕೊನೆಯ ಬಾರಿಗೆ ಕಣಕ್ಕಿಳಿದರು. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ, ಉಳಿದ ಮೂರು ಪಂದ್ಯ ಗೆದ್ದರು ಸಹ ಭಾರತ ತಂಡವು ಸೂಪರ್-12 ನಲ್ಲಿಯೇ ಹೊರಗುಳಿಯಬೇಕಾಯಿತು.


ಅಕ್ಟೋಬರ್ 24 - ಭಾರತ ವಿರುದ್ಧ ಪಾಕಿಸ್ತಾನಕ್ಕೆ 10 ವಿಕೆಟ್‌ಗಳಿಂದ ಗೆಲುವು
ಅಕ್ಟೋಬರ್ 31 - ಭಾರತ ವಿರುದ್ಧ ನ್ಯೂಜಿಲೆಂಡ್ ಗೆ 8 ವಿಕೆಟ್‌ಗಳಿಂದ ಗೆಲುವು
ನವೆಂಬರ್ 3 - ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 66 ರನ್‌ಗಳಿಂದ ಗೆಲುವು
ನವೆಂಬರ್ 5 - ಸ್ಕಾಟ್‌ಲ್ಯಾಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳಿಂದ ಗೆಲುವು
ನವೆಂಬರ್ 8 - ಭಾರತವು 9 ವಿಕೆಟ್‌ಗಳಿಂದ ನಮೀಬಿಯಾವನ್ನು ಸೋಲಿಸಿತು

ನ್ಯೂಜಿಲೆಂಡ್ ವಿರುದ್ಧ ಟಿ20, ಟೆಸ್ಟ್ ಸರಣಿ ಜಯ

ನ್ಯೂಜಿಲೆಂಡ್ ವಿರುದ್ಧ ಟಿ20, ಟೆಸ್ಟ್ ಸರಣಿ ಜಯ

ಟೀಂ ಇಂಡಿಯಾದ ನೂತನ ಟಿ20 ನಾಯಕನಾದ ರೋಹಿತ್ ಶರ್ಮಾ ನ್ಯೂಜಿಲೆಂಡ್ ತಂಡದ ವಿರುದ್ಧ ಟಿ20 ಸರಣಿಯನ್ನ 3-0ಯಿಂದ ವಶಪಡಿಸಿಕೊಂಡರು. ನಂತರದಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ನಲ್ಲಿ ತಂಡಕ್ಕೆ ಸೇರಿಕೊಂಡ್ರು. ಮೊದಲ ಟೆಸ್ಟ್‌ ಕಾನ್ಪುರದಲ್ಲಿ ಡ್ರಾದಲ್ಲಿ ಕೊನೆಗೊಂಡರೆ, ಎರಡನೇ ಟೆಸ್ಟ್ ಮುಂಬೈನಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಬೃಹತ್ ಗೆಲುವು ಸಾಧಿಸಿತು. ಈ ಮೂಲಕ 1-0ಯಿಂದ ಸರಣಿ ಜಯ ಸಾಧಿಸಿದೆ.

ಟೀಂ್ ಇಂಡಿಯಾ ಸದ್ಯದಲ್ಲೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಡಿಸೆಂಬರ್ 26ರಂದು ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಜೊತೆಗೆ ಹರಿಣಗಳ ನಾಡಲ್ಲಿ ಚೊಚ್ಚಲ ಸರಣಿ ಗೆಲುವಿಗೆ ಎದುರು ನೋಡುತ್ತಿದೆ.

Story first published: Monday, December 13, 2021, 17:38 [IST]
Other articles published on Dec 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+