Flashback 2022 : ಟೆಸ್ಟ್ ಮಾದರಿಯಲ್ಲಿ 2022ರಲ್ಲಿ ಸತತ 3 ಟೆಸ್ಟ್‌ಗಳಲ್ಲಿ ಶತಕ ಸಿಡಿಸಿದ ಆಟಗಾರರು ಇವರು

2022ರಲ್ಲಿ ಟಿ20 ವಿಶ್ವಕಪ್ ನಡೆದರೂ ಕೂಡ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಕಡಿಮೆಯಾಗಲಿಲ್ಲ. ಹಲವು ರೋಚಕ ಪಂದ್ಯಗಳು ಟೆಸ್ಟ್ ಕ್ರಿಕೆಟ್‌ನ ಮಹತ್ವವನ್ನು ಹೆಚ್ಚಿಸಿದವು. ಯಾವುದೇ ಬ್ಯಾಟರ್ ಆದರೂ, ಟೆಸ್ಟ್‌ನಲ್ಲಿ ಶತಕ ಗಳಿಸುವುದು ಸಾಕಷ್ಟು ಮಹತ್ವದ್ದಾಗಿರುತ್ತದೆ.
ಎಲ್ಲಾ ಮಾದರಿಯಲ್ಲಿ ಶತಕ ಗಳಿಸುವುದು ಉತ್ತಮ ಸಾಧನೆಯಾದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸುವುದು ಸುಲಭವಾದ ವಿಷಯವಲ್ಲ. ಐದು ದಿನಗಳ ಕಾಲ ಸತತವಾಗಿ ಆಡಲು ಶಕ್ತಿ, ಸಾಮರ್ಥ್ಯ, ಕೌಶಲ್ಯ ಬೇಕಾಗುತ್ತದೆ.
ಸ್ವಿಂಗ್ ಆಗುವ ಕೆಂಪು ಚೆಂಡನ್ನು ಎದುರಿಸುವುದು ಬ್ಯಾಟರ್‌ಗಳಿಗೆ ಸುಲಭದ ಕೆಲಸವಲ್ಲ. ಈ ವರ್ಷ ಹಲವು ಬ್ಯಾಟರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ ಐಸಿಸಿ ಆಟಗಾರರ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆದರು. ಅವರು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೂರು ಶತಕಗಳನ್ನು ಗಳಿಸಿದರು.
ಎಲ್ಲಾ ಆಟಗಾರರೂ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡದೇ ಹೋದರು, ಕೆಲವು ಆಟಗಾರರು ಮಾತ್ರ ಈ ವರ್ಷ ಅತ್ಯುತ್ತಮವಾಗಿ ಆಟವಾಡಿದರು. 2022ರಲ್ಲಿ ಸತತವಾಗಿ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ಆಟಗಾರರು ಇವರು.

ಇಂಗ್ಲೆಂಡ್ ವಿರುದ್ಧ ಮಿಂಚಿದ ಡೇರಿಲ್ ಮಿಚೆಲ್
2022ರ ಆರಂಭದಲ್ಲಿ ನ್ಯೂಜಿಲೆಂಟ್ ಟೆಸ್ಟ್ ಸರಣಿಯನ್ನು ಆಡಲು ಇಂಗ್ಲೆಂಡ್‌ಗೆ ಪ್ರಯಾಣ ಮಾಡಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 3-0 ಅಂತರದಲ್ಲಿ ವೈಟ್‌ವಾಶ್ ಮಾಡಿತು. ನ್ಯೂಜಿಲೆಂಡ್ ಸರಣಿಯಲ್ಲಿ ಸೋಲನುಭವಿಸಿದರು ಕೂಡ, ತಂಡದ ಆಟಗಾರ ಡೇರಿಲ್ ಮಿಚೆಲ್ ಅಮೋಘ ಪ್ರದರ್ಶನ ನೀಡಿದರು.
ಸರಣಿಯ ಮೂರು ಪಂದ್ಯಗಳಲ್ಲಿ ಡೇರಿಲ್ ಮಿಚೆಲ್ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. 3 ಪಂದ್ಯಗಳಲ್ಲಿ ಅವರು 107.60 ಸರಾಸರಿಯಲ್ಲಿ ಒಟ್ಟು 538 ರನ್ ಗಳಿಸುವ ಮೂಲಕ ಸರಣಿಯ ಆಟಗಾರ ಪ್ರಶಸ್ತಿ ಪಡೆದುಕೊಂಡರು.
IPL 2023: ಮಿನಿ ಹರಾಜಿನಲ್ಲಿ ಈ 3 ಸ್ಪಿನ್ನರ್‌ಗಳ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು; ಭವಿಷ್ಯ ನುಡಿದ ಕುಂಬ್ಳೆ

ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ
2022ರ ಆರಂಭದಲ್ಲಿ ಸಿಡ್ನಿಯಲ್ಲಿ ನಡೆದ ನಾಲ್ಕನೇ ಆಶಸ್ ಟೆಸ್ಟ್‌ನಲ್ಲಿ ಭರ್ಜರಿ ಶತಕದ ನಂತರ ಜಾನಿ ಬೈರ್‌ಸ್ಟೋ ಟೆಸ್ಟ್ ಕ್ರಿಕೆಟ್‌ನಲ್ಲಿ ಫಾರ್ಮ್ ಕಂಡುಕೊಂಡರು. ನಂತರ ಅವರು ಟೆಸ್ಟ್ ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.
ನ್ಯೂಜಿಲೆಂಡ್ ವಿರುದ್ಧದ ಸರಣಿಯ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ದಾಖಲಿಸಿದರು. ಅದಾದ ನಂತರ ಭಾರತದ ವಿರುದ್ಧ ನಡೆದ ಮರುನಿಗದಿಪಡಿಸಿದ ಟೆಸ್ಟ್ ಪಂದ್ಯದಲ್ಲಿ ಕೂಡ ಅಮೋಘ ಶತಕ ದಾಖಲಿಸಿದರು. ಸತತವಾಗಿ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ಸಾಧನೆ ಮಾಡಿದರು.
ದಕ್ಷಿಣ ಆಫ್ರಿಕಾದ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ, ಗಾಲ್ಫ್ ಆಡುವಾಗ ಗಾಯಗೊಂಡ ನಂತರ ಜಾನಿ ಬೈರ್‌ಸ್ಟೋ ಕ್ರಿಕೆಟ್ ಆಡಲಿಲ್ಲ. ಐಪಿಎಲ್ ವೇಳೆಗೆ ಅವರು ಫಿಟ್ ಆಗುವ ಸಾಧ್ಯತೆ ಇದೆ.

ಪಾಕಿಸ್ತಾನದ ವಿರುದ್ಧ ಹ್ಯಾರಿ ಬ್ರೂಕ್ ಅಬ್ಬರ
ಜಾನಿ ಬೈರ್‌ಸ್ಟೋ ಗಾಯಗೊಂಡ ನಂತರ ಯುವ ಆಟಗಾರ ಹ್ಯಾರಿ ಬ್ರೂಕ್ ಇಂಗ್ಲೆಂಡ್ ತಂಡದಲ್ಲಿ ಅವಕಾಶ ಪಡೆದರು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ನ ಯುವ ಆಟಗಾರ ಅಕ್ಷರಶಃ ಅಬ್ಬರಿಸಿದರು.
ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಪಂದ್ಯದಲ್ಲಿ ಬ್ರೂಕ್ ಚೊಚ್ಚಲ ಟೆಸ್ಟ್ ಶತಕ ದಾಖಲಿಸಿದರು. ಅವರು ಒಂದೇ ಓವರ್‌ನಲ್ಲಿ ಆರು ಬೌಂಡರಿಗಳನ್ನು ಗಳಿಸಿದರು. ನಂತರ ಮುಲ್ತಾನ್ ಮತ್ತು ಕರಾಚಿಯಲ್ಲಿ ಕೂಡ ಅಮೋಘ ಶತಕ ಗಳಿಸುವ ಮೂಲಕ ಸಾಮರ್ಥ್ಯ ಸಾಬೀತು ಪಡಿಸಿದರು. 3 ಟೆಸ್ಟ್ ಪಂದ್ಯಗಳಿಂದ ಅವರು 93.60 ಸರಾಸರಿಯಲ್ಲಿ 468 ರನ್ ಗಳಿಸಿದ್ದಾರೆ. 2022ರಲ್ಲಿ ಸತತವಾಗಿ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications