Flashback 2022 : 2022ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಆಟಗಾರರು

2022ರ ವರ್ಷದಲ್ಲಿ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಏಕದಿನ, ಟಿ20, ಟೆಸ್ಟ್ ಮಾದರಿಯ ಪಂದ್ಯಗಳು ಜನರನ್ನು ರಂಜಿಸಿದೆ. ಅದರಲ್ಲೂ ಟಿ20 ವಿಶ್ವಕಪ್ ಈ ವರ್ಷದ ಪ್ರಮುಖ ಆಕರ್ಷಣೆಯಾಗಿತ್ತು ಎಂದರೆ ತಪ್ಪಾಗಲಾರದು.
ಟಿ20, ಏಕದಿನ ಮಾದರಿಯ ಕ್ರಿಕೆಟ್ ನಡುವೆಯೂ ಟೆಸ್ಟ್ ಕ್ರಿಕೆಟ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಕೌಶಲ್ಯ, ಮಾನಸಿಕ ಸ್ಥಿಮಿತತೆ, ತಾಳ್ಮೆ, ದೈಹಿಕ ಸಾಮರ್ಥ್ಯ, ಕ್ರಿಕೆಟ್ ತಂತ್ರಗಳನ್ನು ಬೇಡುವ ಟೆಸ್ಟ್ ಕ್ರಿಕೆಟ್, ಹೊಡಿ ಬಡಿ ಆಟವಾದ ಟಿ20 ಮಾದರಿಗೆ ಸಂಪೂರ್ಣ ಭಿನ್ನವಾಗಿದೆ.
5 ದಿನಗಳ ಕಾಲ ನಡೆಯುವ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಲು ಅಪಾರ ತಾಳ್ಮೆ, ದೈಹಿಕ ಸಾಮರ್ಥ್ಯ ಬೇಕು, ಆಟಗಾರ ಮಾನಸಿಕವಾಗಿ ಗಟ್ಟಿಯಾಗಿರಬೇಕು. ಪಿಚ್‌ನ ವರ್ತನೆಯನ್ನು ಅರ್ಥ ಮಾಡಿಕೊಳ್ಳಬೇಕು, ರಕ್ಷಣಾತ್ಮಕವಾಗಿ ಆಡಿಕೊಂಡೇ ರನ್ ಗಳಿಸುವ ಚಾಕಚಕ್ಯತೆ ಇರಬೇಕು.
ಜಗತ್ತಿಗೆ ಕ್ರಿಕೆಟ್ ಪರಿಚಯಿಸಿದಿ ಇಂಗ್ಲೆಂಡ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಝ್‌ಬಾಲ್ ಎನ್ನುವ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ವಿಧಾನವನ್ನು ಪರಿಚಯಿಸಿದೆ. ತಂಡದ ಕೋಚ್ ಬ್ರೆಂಡನ್ ಮೆಕಲಂರನ್ನು ಬಾಝ್ ಎಂದು ಕರೆಯಲಾಗುತ್ತದೆ. ಅವರು ಎಲ್ಲಾ ಮಾದರಿಯಲ್ಲಿ ಕೂಡ ವೇಗವಾಗಿ ರನ್ ಗಳಿಸುವ ತಂತ್ರವನ್ನು ಅನುಸರಿಸುತ್ತಿದ್ದರು, ಯಾವುದೇ ಪ್ರಯೋಗಕ್ಕಾದರೂ ಸೈ ಎನ್ನುತ್ತಿದ್ದರು. ಏನೇ ಇದ್ದರೂ, ಇಂಗ್ಲೆಂಡ್ ಈ ವರ್ಷದಲ್ಲಿ ಟೆಸ್ಟ್ ಕ್ರೀಡೆಯನ್ನು ತನ್ನ ಆಟದ ವಿಧಾನದಿಂದ ಮತ್ತಷ್ಟು ಜನಪ್ರಿತಯಗೊಳಿಸಿದೆ ಎನ್ನುವುದು ಸುಳ್ಳಲ್ಲ.
2022ರಲ್ಲಿ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಆಟಗಾರರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಬ್ಯಾಟರ್ ಪ್ರಾಬಲ್ಯ ಸಾಧಿಸಿದ್ದಾರೆ.

6 ಶತಕ ಸಿಡಿಸಿ ಮಿಂಚಿದ ಜಾನಿ ಬೈರ್‌ಸ್ಟೋ
ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ 2022ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಿದ ಆಟಗಾರ. 2022ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಆಶಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಅವರು ಭರ್ಜರಿ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದರು. 2022ರಲ್ಲಿ ಒಟ್ಟು 6 ಶತಕಗಳನ್ನು ಗಳಿಸುವ ಮೂಲಕ ಅವರು ಅಗ್ರಸ್ಥಾನದಲ್ಲಿದ್ದಾರೆ.
2022ರಲ್ಲಿ ಒಟ್ಟು 10 ಟೆಸ್ಟ್ ಪಂದ್ಯಗಳನ್ನು ಅವರು ಆಡಿದ್ದಾರೆ. 19 ಇನ್ನಿಂಗ್ಸ್‌ಗಳಿಂದ ಜಾನಿ ಬೈರ್‌ಸ್ಟೋ ಒಟ್ಟು 1061 ರನ್ ಗಳಿಸಿದ್ದಾರೆ. ಜೂನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನು ಮೂರನೇ ಪಂದ್ಯದಲ್ಲಿ ದಾಖಲೆ ಸಿಡಿಸಿದ್ದ ಅವರು, ಜುಲೈನಲ್ಲಿ ನಡೆದ ಭಾರತ ವಿರುದ್ಧ ಮರು ನಿಗದಿತ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದರು. ಸತತವಾಗಿ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕ ದಾಖಲಿಸಿದ ಆಟಗಾರ ಎನ್ನುವ ಕೀರ್ತಿಗೆ ಭಾಜನವಾದರು.
ಆಗಸ್ಟ್ 25 ರಂದು ಅವರು ದಕ್ಷಿಣ ಆಫ್ರಿಕಾ ವಿರುದ್ಧ ಈ ವರ್ಷದ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಸೆಪ್ಟೆಂಬರ್ ತಿಂಗಳಿನಲ್ಲಿ ಅವರು ಗಾಲ್ಫ್ ಆಡುವ ಸಂದರ್ಭದಲ್ಲಿ ಗಾಯಗೊಂಡಿದ್ದರಿಂದ ನಂತರ ಕ್ರಿಕೆಟ್ ಆಡಲು ಸಾಧ್ಯವಾಗಿಲ್ಲ. 2023ರಲ್ಲಿ ತಂಡಕ್ಕೆ ವಾಪಸಾಗಲಿದ್ದು, ಮತ್ತಷ್ಟು ಶತಕ ಗಳಿಸುವ ವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ಅವರು ಈ ವರ್ಷ ಗಾಯಗೊಳ್ಳದೆ ಇದ್ದಿದ್ದರೆ 2022ರಲ್ಲಿ ಮತ್ತಷ್ಟು ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆ ಇತ್ತು.
Aus vs SA 2nd Test: ಮುಂಬೈ ಇಂಡಿಯನ್ಸ್ ಆಟಗಾರನ ಭರ್ಜರಿ ಬೌಲಿಂಗ್, 189 ರನ್‌ಗಳಿಗೆ ಆಲೌಟ್ ಆದ ದಕ್ಷಿಣ ಆಫ್ರಿಕಾ

5 ಶತಕ ಸಿಡಿಸಿದ ಜೋ ರೂಟ್
ಶತಕ ಗಳಿಸಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಕೂಡ ಇಂಗ್ಲೆಂಡ್ ಬ್ಯಾಟರ್. ತಂಡದ ಅನುಭವಿ ಆಟಗಾರ ಜೋ ರೂಟ್ 2022ರಲ್ಲಿ 15 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 27 ಇನ್ನಿಂಗ್ಸ್‌ಗಳಿಂದ ಅವರು 5 ಶತಕ ಬಾರಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. 2022ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ಒಟ್ಟು 1098 ರನ್ ಕಲೆಹಾಕಿದ್ದಾರೆ.
2022ರ ಮಾರ್ಚ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಈ ವರ್ಷದ ಮೊದಲ ಶತಕ ಗಳಿಸಿದರು. ಅದೇ ಸರಣಿಯ ಮತ್ತೊಂದು ಪಂದ್ಯದಲ್ಲಿ ಕೂಡ ಶತಕ ಸಿಡಿಸಿ ಮಿಂಚಿದ್ದರು. ನಂತರ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 2 ಶತಕಗಳನ್ನು ಸಿಡಿಸಿದರು. ಜುಲೈನಲ್ಲಿ ಭಾರತದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ರೂಟ್ ಅಜೇಯ 142 ರನ್ ಗಳಿಸುವ ಮೂಲಕ 2022ರಲ್ಲಿ 5ನೇ ಶತಕ ಗಳಿಸಿದರು. ಅದಾದ ನಂತರ ರೂಟ್ ಹಲವು ಪಂದ್ಯಗಳನ್ನಾಡಿದರೂ, ಶತಕ ಗಳಿಸುವಲ್ಲಿ ವಿಫಲರಾಗಿದ್ದಾರೆ.

ಮಾರ್ನಸ್ ಲಾಬುಸ್ಚಾಗ್ನೆ ಉತ್ತಮ ಆಟ
ಆಸ್ಟ್ರೇಲಿಯಾದ ಮಾರ್ನಸ್ ಲಾಬುಸ್ಚಾಗ್ನೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 2022ರಲ್ಲಿ 11 ಪಂದ್ಯಗಳನ್ನಾಡಿರುವ ಅವರು 19 ಇನ್ನಿಂಗ್ಸ್‌ಗಳಿಂದ 948 ರನ್ ಗಳಿಸಿದ್ದಾರೆ. 204 ಅವರು 2022ರಲ್ಲಿ ಗಳಿಸಿದ ವೈಯಕ್ತಿತ ಅಧಿಕ ಸ್ಕೋರ್ ಆಗಿದೆ.
19 ಇನ್ನಿಂಗ್ಸ್‌ಗಳಿಂದ 948 ರನ್ ಗಳಿಸಿದ್ದಾರೆ (ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ). 2022ರಲ್ಲಿ ಅವರು ಒಟ್ಟು ನಾಲ್ಕು ಶತಕ ದಾಖಲಿಸುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ನಡೆಯುತ್ತಿದ್ದು, ಮತ್ತೊಂದು ಶತಕ ಬರುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾದ ಉಸ್ಮಾನ್ ಖವಾಜ
ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಈ ವರ್ಷದ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ದಾಖಲಿಸುವ ಮೂಲಕ 2022ರಲ್ಲಿ ಉತ್ತಮ ಆರಂಭ ಕಂಡರು.
ಮಾರ್ಚ್‌ನಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಈ ವರ್ಷದ ಮೂರು ಮತ್ತು ನಾಲ್ಕನೇ ಶತಕ ಗಳಿಸಿದರು. 2022ರಲ್ಲಿ ಅವರು 11 ಪಂದ್ಯಗಳನ್ನಾಡಿದ್ದಾರೆ. 20 ಇನ್ನಿಂಗ್ಸ್‌ಗಳಲ್ಲಿ 67.50 ಸರಾಸರಿಯಲ್ಲಿ 1080 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications