ಪ್ರಸ್ತುತ ಟಿ20 ವಿಶ್ವಕಪ್ ಸ್ಕ್ವಾಡ್‌ನಲ್ಲಿರುವ ಈ ನಾಲ್ವರು ಮುಂದಿನ ಚುಟುಕು ವಿಶ್ವಕಪ್ ಆಡೋದೆ ಅನುಮಾನ!

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಶುರುವಾಗಿದೆ. ಟಿ20 ವಿಶ್ವಕಪ್‌ನ ಸಂಭ್ರಮದಲ್ಲಿ ಕ್ರಿಕೆಟ್ ಜಗತ್ತು ಸಂಭ್ರಮಿಸಲು ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಎಲ್ಲಾ ತಂಡಗಳು ಅಂತಿಮ ಹಂತದ ತಯಾರಿಯಲ್ಲಿವೆ.
ಭಾರತ ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಉಳಿದ ಎಲ್ಲಾ ತಂಡಗಳು ಟಿ20 ಸರಣಿಯನ್ನು ಆಡುತ್ತಿವೆ. ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಎಲ್ಲವನ್ನೂ ಎದುರಿಸಲು ಸಮರ್ಥವಾಗಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವು ಇಂಗ್ಲೆಂಡ್ ವಿರುದ್ಧ ತವರಿನಲ್ಲೇ ಸರಣಿ ಸೋತಿದ್ದು ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಿದೆ.
ಈ ಬಾರಿಯ ಟಿ20 ವಿಶ್ವಕಪ್ ಭಾರತಕ್ಕೆ ಪ್ರತಿಷ್ಠೆಯ ವಿಷಯವಾಗಿದೆ. ಭಾರತ ತಂಡ 2021ರ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದು, ಈ ವರ್ಷದ ಏಷ್ಯಾಕಪ್‌ನಲ್ಲೂ ಮುಖಭಂಗ ಅನುಭವಿಸಿದೆ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್ ಅನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಇದೆಲ್ಲಾ ಒಂದೆಡೆಯಾದ್ರೆ, ಈ ವಿಶ್ವಕಪ್ ಭಾರತದ ಕೆಲವು ಸೂಪರ್‌ಸ್ಟಾರ್‌ಗಳು ಆಡುವ ಕೊನೆಯ ಟಿ20 ವಿಶ್ವಕಪ್ ಆಗಿರಬಹುದು. ಅಂತಹ ಆಟಗಾರರು ಯಾರಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು.

ಆರ್ ಅಶ್ವಿನ್
ಭಾರತದ ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ಮತ್ತೊಂದು ಟಿ20 ವಿಶ್ವಕಪ್ ಆಡದಿರಬಹುದು. 2021 ರಲ್ಲಿ ಟಿ20 ವಿಶ್ವಕಪ್ ಆಡಿದ ನಂತರ, ಅಶ್ವಿನ್ 2022 ರಲ್ಲಿ ಟಿ20 ವಿಶ್ವಕಪ್ ಮೊದಲು ಅನಿರೀಕ್ಷಿತ ಕಂಬ್ಯಾಕ್ ಮಾಡಿದರು. ಭಾರತವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಸ್ಪಿನ್ನರ್ ಅವರಾಗಿದ್ದು, ಕಡಿಮೆ ಎಕಾನಮಿಯೊಂದಿಗೆ ಬೌಲಿಂಗ್ ಮಾಡುತ್ತಾರೆ.
ಈಗಾಗಲೇ ಅಶ್ವಿನ್ ಅಭ್ಯಾಸ ಸ್ಪರ್ಧೆಯಲ್ಲೂ ಮಿಂಚಿದ್ದಾರೆ. ಒಂದು ವೇಳೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಶ್ವಿನ್ ಮಿಂಚಿದ್ರೂ ಸಹ ಮುಂದಿನ ಟಿ20 ವಿಶ್ವಕಪ್ ಸಮಯದ ಹೊತ್ತಿಗೆ ಭಾರತದ ಟಿ20 ತಂಡದಲ್ಲಿ ಹೆಚ್ಚಿನ ಅವಕಾಶ ಸಿಗದಿರಬಹುದು. ಇದು ಖಂಡಿತವಾಗಿಯೂ ಅವರ ಕೊನೆಯ ಟಿ20 ವಿಶ್ವಕಪ್ ಆಗಲಿದೆ.

ದಿನೇಶ್ ಕಾರ್ತಿಕ್
ಭಾರತದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಮತ್ತೊಂದು ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ. 37 ವರ್ಷದ ಸ್ಟಾರ್, ಈ ವರ್ಷದ ವಿಶ್ವಕಪ್ ನಂತರ ನಿವೃತ್ತಿ ಘೋಷಿಸಬಹುದು. ದೀರ್ಘಕಾಲದವರೆಗೆ ತಂಡದಿಂದ ಹೊರಗುಳಿದಿದ್ದ ಆಟಗಾರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಮರಳಿದ್ದರು.
ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾರ್ತಿಕ್ ನಿರ್ಣಾಯಕ ಸ್ಥಾನವನ್ನು ಹೊಂದಿರುತ್ತಾರೆ. ಆದರೆ ಅವರು ಮತ್ತೊಂದು ವಿಶ್ವಕಪ್ ಆಡುವಷ್ಟು ಚಿಕ್ಕವರಲ್ಲ. ಈಗಾಗಲೇ ಕಾಮೆಂಟೇಟರ್ ಆಗಿ ವೃತ್ತಿ ಜೀವನ ಆರಂಭಿಸಿರುವ ಕಾರ್ತಿಕ್, ನಿವೃತ್ತಿಯ ನಂತರ ಕಾಮೆಂಟೇಟರ್ ಪಾತ್ರದಲ್ಲಿ ಮುಂದುವರಿಯಬಹುದು.

ರೋಹಿತ್ ಶರ್ಮಾ
ಇದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಕೊನೆಯ ಟಿ20 ವಿಶ್ವಕಪ್ ಎನ್ನುವುದರಲ್ಲಿ ಎರಡು ಮಾತಿಲ್ಲ. 35 ಹಿಂದಿನ ರೋಹಿತ್ ಅವರ ಇತ್ತೀಚಿನ ಫಾರ್ಮ್ ಉತ್ತಮವಾಗಿಲ್ಲ. ಅವರು ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದರೂ, ವಯಸ್ಸು ಅವರನ್ನು ದುರ್ಬಲಗೊಳಿಸುತ್ತಿದೆ. ಅವರು ಇನ್ನೊಂದು ಟಿ20 ವಿಶ್ವಕಪ್ ಆಡದಿರಬಹುದು.
2023ರ ಏಕದಿನ ವಿಶ್ವಕಪ್ ವೇಳೆಗೆ ರೋಹಿತ್ ಸಂಪೂರ್ಣ ನಿವೃತ್ತಿಯಾಗುವ ಸಾಧ್ಯತೆಯೂ ಇದೆ. ಮುಂದಿನ ಟಿ20 ವಿಶ್ವಕಪ್ 2024ರಲ್ಲಿ ನಡೆಯಲಿದೆ. ರೋಹಿತ್ ಗೆ ಇದುವರೆಗೂ ತಮ್ಮ ಅತ್ಯುತ್ತಮ ಫಾರ್ಮ್ ಹಾಗೂ ಫಿಟ್ ನೆಸ್ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ ಎಂದೇ ಹೇಳಬಹುದು. ಈ ವರ್ಷದ ಟಿ 20 ವಿಶ್ವಕಪ್‌ನಲ್ಲಿ ರೋಹಿತ್ ಅವರ ಪ್ರದರ್ಶನವು ಅವರ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಿರುತ್ತದೆ.

ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್ ಭಾರತದ ಹಿರಿಯ ವೇಗಿ. ಭುವನೇಶ್ವರ್ ಸ್ವಿಂಗ್‌ನಲ್ಲಿ ಪ್ರಭಾವಿ ಮತ್ತು ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದರೂ, ಅವರು ಈಗ ಡೆತ್ ಓವರ್‌ಗಳಲ್ಲಿ ಬ್ಯಾಟಿಂಗ್ ಬೌಲರ್ ಆಗಿದ್ದಾರೆ. ಭುವನೇಶ್ವರ್ ಕುಮಾರ್ ಅವರಿಗೆ ಇನ್ನೊಂದು ವಿಶ್ವಕಪ್ ಆಡುವ ಅವಕಾಶ ಸಿಗದೇ ಇರಬಹುದು. 2023ರ ಏಕದಿನ ವಿಶ್ವಕಪ್‌ನಲ್ಲಿ ಭುವಿಗೆ ಅವಕಾಶ ಸಿಗಬಹುದು. ಆದರೆ ಭುವಿಗೆ ಮತ್ತೊಂದು ಟಿ20 ವಿಶ್ವಕಪ್ ಆಡುವ ಅದೃಷ್ಟ ಸಿಗುವ ಲಕ್ಷಣ ಕಾಣುತ್ತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications