ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈದಾನದಲ್ಲಿ ಸೆಣೆಸಾಡಲಿದ್ದಾರೆ ನಟರು ಹಾಗೂ ಕ್ರಿಕೆಟ್ ದಿಗ್ಗಜರು: ಟೂರ್ನಿ ಬಗ್ಗೆ ಕಿಚ್ಚ ಸುದೀಪ್, ಕ್ರಿಸ್ ಗೇಲ್ ಅಧಿಕೃತ ಮಾಹಿತಿ

Cricket tounament between Indian actors and International Cricket Legends: Kiccha Sudeepa and Chris Gayle announcement

ಭಾರತದ ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ 'ಸೂಪರ್ 10' ಕ್ರಿಕೆಟ್ ಲೀಗ್ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಭಾರತೀಯ ನಟರು ಹಾಗೂ ಮಾಜಿ ಕ್ರಿಕೆಟಿಗರ ನಡುವಿನ ಸೆಣೆಸಾಟ ಇದಾಗಿರಲಿದ್ದು ವಿಭಿನ್ನ ಟೂರ್ನಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದು 10 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ.

ಭಾರತದ ಎಲ್ಲಾ ಭಾಷೆಯ ನಟರನ್ನು ಸೇರಿಸಿಕೊಂಡ ಒಂದು ತಂಡ ಹಾಗೂ ವಿಶ್ವ ಕ್ರಿಕೆಟ್‌ನಲ್ಲಿ ಮೆರೆದು ನಿವೃತ್ತರಾದ ಆಟಗಾರರ ಒಂದು ತಂಡ ಈ ಟೂರ್ನಿಯಲ್ಲಿ ಮುಖಾಮುಖಿಯಾಗಲಿದೆ. ಎರಡು ದಿನಗಳ ಕಾಲ ಈ ಟೂರ್ನಮೆಂಟ್ ನಡೆಸಲು ನಿರ್ಧರಿಸಲಾಗಿದ್ದು ಮೊದಲ ಆವೃತ್ತಿಯನ್ನು ಬೆಂಗಳೂರಿನಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಆಯೋಜನೆಯಾಗಲಿದೆ.

ವೆಸ್ಟ್ ಇಂಡೀಸ್ ಪಾಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷವಾಗಿದ್ದು ನಡೆಯಲಿದೆ ಎಂದ ಮಾಜಿ ನಾಯಕವೆಸ್ಟ್ ಇಂಡೀಸ್ ಪಾಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷವಾಗಿದ್ದು ನಡೆಯಲಿದೆ ಎಂದ ಮಾಜಿ ನಾಯಕ

ಹರ್ಷ ವ್ಯಕ್ತಪಡಿಸಿದ ಕ್ರಿಸ್ ಗೇಲ್

ಹರ್ಷ ವ್ಯಕ್ತಪಡಿಸಿದ ಕ್ರಿಸ್ ಗೇಲ್

ವಿಶ್ವಾದ್ಯಂತ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಿ ಚುಟುಕು ಕ್ರಿಕೆಟ್ ಮಾದರಿಯ ದಿಗ್ಗಜ ಆಟಗಾರ ಎನಿಸಿಕೊಂಡಿರುವ ಕ್ರಿಸ್ ಗೇಲ್ ಈ ವಿಭಿನ್ನ ಟೂರ್ನಿ ಬಗ್ಗೆ ಉತ್ಸುಕತೆ ವ್ಯಕ್ತಪಡಿಸಿದ್ದಾರೆ. "ವಿಶ್ವದ ಕ್ರಿಕೆಟ್ ಲೋಕದ ಪ್ರಮುಖರ ಜೊತೆಗೆ ಭಾರತದ ಸಿನಿಮಾ ಲೋಕದ ಖ್ಯಾತನಾಮರ ಜೊತೆಗೆ ಕ್ರಿಕೆಟ್ ಆಡುವುದಕ್ಕೆ ನಾನು ಉತ್ಸಾಹಿತನಾಗಿದ್ದೇನೆ. ಈ ಟೂರ್ನಮೆಂಟ್ ಟಿ10 ಮಾದರಿಯಲ್ಲಿ ನಡೆಯಲಿರುವ ಕಾರಣ ಸಾಕಷ್ಟು ಮನರಂಜನೆ ದೊರೆಯುವುದರಲ್ಲಿ ಅನುಮಾನವಿಲ್ಲ. ಡೆಸೆಂಬರ್‌ನಲ್ಲಿ ಆರಂಭವಾಗಲಿರುವ ಈ ಟೂರ್ನಿ ಬಗ್ಗೆ ಉತ್ಸಾಹ ತಡೆದುಕೊಳ್ಳಲು ಆಗುತ್ತಿಲ್ಲ" ಎಂದಿದ್ದಾರೆ ಕ್ರಿಸ್ ಗೇಲ್.

ಕಿಚ್ಚ ಸುದೀಪ್ ಹೇಳಿದ್ದಿಷ್ಟು

ಕಿಚ್ಚ ಸುದೀಪ್ ಹೇಳಿದ್ದಿಷ್ಟು

ಇನ್ನು ಈ ವಿಭಿನ್ನ ಟೂರ್ನಿಯ ಬಗ್ಗೆ ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ್ ಕೂಡ ಹೇಳಿಕೆ ನೀಡಿದ್ದಾರೆ. "ಕ್ರಿಕೆಟ್, ಮನರಂಜನೆ ಹಾಗೂ ಕಾರ್ಪೊರೇಟ್ ಸೆಕ್ಟರ್‌ನಲ್ಲಿರುವ ಸ್ನೇಹಿತರೊಂದಿಗೆ ಒಗ್ಗೂಡಲು ಸೂಪರ್ 10 ಲೀಗ್ ಅದ್ಭುತವಾದ ಅವಕಾಶವಾಗಿದೆ. ನಾವು ಭಾರತೀಯರು ಕ್ರಿಕೆಟ್ ಅನ್ನು ಸಾಕಷ್ಟು ಪ್ರೀತಿಸುತ್ತೇವೆ. ಹಾಗಾಗಿ ನನ್ನಂಥಾ ನಟರಿಗೆ ಕ್ರೀಡೆಯ ಮೇಲಿನ ನಮ್ಮ ಉತ್ಸಾಹ ಮತ್ತು ನಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಇದಾಗಿದೆ. ಸಾಕಷ್ಟು ಮಜವಾದ ಆಟಗಳನ್ನು ಇಲ್ಲಿ ನಿರೀಕ್ಷಿಸಬಹುದು" ಎಂದಿದ್ದಾರೆ ಕಿಚ್ಚ ಸುದೀಪ್.

ಕ್ರಿಕೆಟ್ ಹಾಗೂ ಸಿನಿಮಾ ಲೋಕದ ಖ್ಯಾತನಾಮರು ಕಣಕ್ಕೆ

ಕ್ರಿಕೆಟ್ ಹಾಗೂ ಸಿನಿಮಾ ಲೋಕದ ಖ್ಯಾತನಾಮರು ಕಣಕ್ಕೆ

"ಈ ಕ್ರಿಕೆಟೈನ್‌ಮೆಂಟ್ ಪ್ರಯೋಗದ ಬಗ್ಗೆ ನಾವು ಕಳೆದ ಒಂದು ವರ್ಷದಿಂದ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಇದು ಮೊದಲ ಆವೃತ್ತಿಯಾಗಿದ್ದು ವೀಕ್ಷಕರಿಗೆ ಹೆಚ್ಚಿನ ಮನೋರಂಜನಾತ್ಮಕ ಆಟವನ್ನು ನೀಡಲು ನಾವು ಬದ್ಧರಾಗಿದ್ದೇವೆ. ವಿಶ್ವ ಮಟ್ಟದಲ್ಲಿ ಕ್ರಿಕೆಟ್‌ನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುವುದು ಪಂದ್ಯಾವಳಿಯ ಆಶಯವಾಗಿದೆ. ಮನರಂಜನೆ ಮತ್ತು ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಖ್ಯಾತರಾಗಿರುವವನ್ನು ಸೇರ್ಪಡೆಗೊಳಿಸಲು ಯೋಜನೆ ರೂಪಿಸುತ್ತಿದ್ದೇವೆ. ಶೀಘ್ರದಲ್ಲೇ ಆ ಬಗ್ಗೆ ನಾವು ಘೊಷಣೆಗಳನ್ನು ಮಾಡಲಿದ್ದೇವೆ" ಎಂದು ಈ ಸೂಪರ್ 10 ಟೂರ್ನಿಯ ಫೌಂಡರ್ ಹಾಗೂ ಸಿಇಒ ದಿನೇಶ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

Story first published: Friday, October 14, 2022, 13:21 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X