Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2020-21ರ ಸೀಸನ್‌ಗೆ ಪಾಕ್ ಕ್ರಿಕೆಟ್ ಆಟಗಾರರ ಗ್ರೇಡ್ ಪಟ್ಟಿ ಹೀಗಿದೆ

Full list of PCBs contracted players for 2020-21 season

ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) 2020-21ರ ಸೀಸನ್‌ಗಾಗಿ ಆಟಗಾರರ ಒಪ್ಪಂದದ ಪಟ್ಟಿ ಪ್ರಕಟಿಸಿದೆ. ದೇಶೀಯ ಕ್ರಿಕೆಟ್‌ನ ಅಭಿವೃದ್ಧಿಗಾಗಿ ಅದರ 7.76 ಬಿಲಿಯನ್ ರೂಪಾಯಿಗಳ ವಾರ್ಷಿಕ ಬಜೆಟ್‌ನ ಅತಿದೊಡ್ಡ ಶೇಕಡಾವಾರು ಮೊತ್ತವನ್ನು ಪಾಕ್ ನಿಗದಿಪಡಿಸಿದೆ. ಆಡಳಿತ ಮಂಡಳಿ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ಬಜೆಟ್‌ನಲ್ಲಿ ಕ್ರಿಕೆಟ್ ಚಟುವಟಿಕೆಗಳಿಗೆ ನಿಗದಿಪಡಿಸಿದ ಒಟ್ಟು ಖರ್ಚು ಬಜೆಟ್‌ನ ಶೇಕಡಾ 71ರಷ್ಟಿದೆ.

ಕ್ರಿಕೆಟ್ ಚಟುವಟಿಕೆಗಳಿಗೆ ನಿಗದಿ ಪಡಿಸಿದ ಈ 71.2 ಶೇ. ಬಜೆಟ್‌ನಲ್ಲಿ 25.2 ಶೇ. ದೇಸಿ ಕ್ರಿಕೆಟ್‌ಗೆ (ಪಂದ್ಯಾಟಗಳು ಮತ್ತು ಆಟಗಾರರು/ಪಂದ್ಯಗಳ ಅಧಿಕಾರಿಗಳು/ಆಟಗಾರರ ಬೆಂಬಲಕ್ಕೆ ವೈಯಕ್ತಿಕ ಒಪ್ಪಂದ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಕೇಂದ್ರದ ವೆಚ್ಚಗಳು), 19.3 ಶೇ. ಅಂತಾರಾಷ್ಟ್ರೀಯ ಕ್ರಿಕೆಟ್‌ (ತವರಿನ ಮತ್ತು ವಿದೇಶಿ ಸರಣಿಗಳು ಮತ್ತು ಆಟಗಾರರ ಒಪ್ಪಂದಗಳು) ಸೇರಿವೆ.

ಬಜೆಟ್‌ನಲ್ಲಿ 5.5 ಶೇ.ವನ್ನು ಮಹಿಳಾ ಕ್ರಿಕೆಟ್‌ (ತವರಿನ/ಹೊರಗಿನ ಕ್ರಿಕೆಟ್ ಮತ್ತು ಆಟಗಾರ್ತಿಯರ ಒಪ್ಪಂದ, 19.7 ಶೇ. ಪಾಕಿಸ್ತಾನ ಪ್ರೀಮಿಯರ್ ಲೀಗ್ ಮತ್ತು 1.5 ಶೇ. ಮೆಡಿಕಲ್ ಮತ್ತು ಸ್ಫೋರ್ಟ್ಸ್ ಸೈನ್ಸ್‌ಗೆ ಮೀಸಲಿಡಲಾಗಿದೆ.

2020-21ರ ಸೀಸನ್‌ಗೆ ಪುರುಷರ ವಿಭಾಗದ ಆಟಗಾರರ ವಾರ್ಷಿಕ ಒಪ್ಪಂದದ ಪಟ್ಟಿ ಈ ಕೆಳಗಿನಂತಿದೆ.

'ಎ' ವರ್ಗ

'ಎ' ವರ್ಗ

1. ಅಜರ್ ಅಲಿ (ಸೆಂಟ್ರಲ್ ಪಂಜಾಬ್)
2. ಬಾಬರ್ ಅಝಾಮ್ (ಸೆಂಟ್ರಲ್ ಪಂಜಾಬ್/ಕರಾಚಿ ಕಿಂಗ್ಸ್)
3. ಶಾಹೀನ್ ಶಾ ಅಫ್ರಿದಿ (ಉತ್ತರ/ಲಾಹೋರ್ ಖಲಂದರ್ಸ್).

'ಬಿ' ವರ್ಗ

'ಬಿ' ವರ್ಗ

1. ಅಬಿದ್ ಅಲಿ (ಸಿಂಧ್/ಲಾಹೋರ್ ಖಲಂದರ್ಸ್)
2. ಅಸಾದ್ ಶಫೀಕ್ (ಸಿಂಧ್/ಮುಲ್ತಾನ್ ಸುಲ್ತಾನರು)
3. ಹರಿಸ್ ಸೊಹೈಲ್ (ಬಲೂಚಿಸ್ತಾನ್)
4. ಮೊಹಮ್ಮದ್ ಅಬ್ಬಾಸ್ (ದಕ್ಷಿಣ ಪಂಜಾಬ್)
5. ಮೊಹಮ್ಮದ್ ರಿಜ್ವಾನ್ (ಖೈಬರ್ ಪಖ್ತುನ್ಖ್ವಾ/ಕರಾಚಿ ಕಿಂಗ್ಸ್)
6. ಸರ್ಫರಾಜ್ ಅಹ್ಮದ್ (ಸಿಂಧ್/ಕ್ವೆಟ್ಟಾ ಗ್ಲಾಡಿಯೇಟರ್ಸ್)
7. ಶಾದಾಬ್ ಖಾನ್ (ಉತ್ತರ/ಇಸ್ಲಾಮಾಬಾದ್ ಯುನೈಟೆಡ್)

'ಸಿ' ವರ್ಗ

'ಸಿ' ವರ್ಗ

1. ಫಖರ್ ಜಮಾನ್ (ಖೈಬರ್ ಪಖ್ತುನ್ಖ್ವಾ/ಲಾಹೋರ್ ಖಲಂದರ್ಸ್)
2. ಇಫ್ತಿಖರ್ ಅಹ್ಮದ್ (ಖೈಬರ್ ಪಖ್ತುನ್ಖ್ವಾ/ಕರಾಚಿ ಕಿಂಗ್ಸ್)
3. ಇಮಾದ್ ವಾಸಿಮ್ (ಉತ್ತರ/ಕರಾಚಿ ಕಿಂಗ್ಸ್)
4. ಇಮಾಮ್-ಉಲ್-ಹಕ್ (ಬಲೂಚಿಸ್ತಾನ್/ಪೇಶಾವರ್ ಜಲ್ಮಿ)
5. ನಸೀಮ್ ಷಾ (ಮಧ್ಯ ಪಂಜಾಬ್/ಕ್ವೆಟ್ಟಾ ಗ್ಲಾಡಿಯೇಟರ್ಸ್)
6. ಉಸ್ಮಾನ್ ಶಿನ್ವಾರಿ (ಖೈಬರ್ ಪಖ್ತುನ್ಖ್ವಾ/ಲಾಹೋರ್ ಖಲಂದರ್ಸ್)

ಉದಯೋನ್ಮುಖ ಆಟಗಾರರ ವರ್ಗ

ಉದಯೋನ್ಮುಖ ಆಟಗಾರರ ವರ್ಗ

1. ಹೈದರ್ ಅಲಿ (ಉತ್ತರ/ಪೇಶಾವರ್ ಜಲ್ಮಿ)
2. ಹ್ಯಾರಿಸ್ ರೌಫ್ (ಉತ್ತರ/ಲಾಹೋರ್ ಖಲಂದರ್ಸ್)
3. ಮೊಹಮ್ಮದ್ ಹಸ್ನೈನ್ (ಸಿಂಧ್/ಕ್ವೆಟ್ಟಾ ಗ್ಲಾಡಿಯೇಟರ್ಸ್)

Story first published: Saturday, June 27, 2020, 18:05 [IST]
Other articles published on Jun 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+