Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೇಶೀಯ ಕ್ರಿಕೆಟ್ ಆಡಿ, ಫಾರ್ಮ್‌ಗೆ ಮರಳಬೇಕು: ಕೊಹ್ಲಿಗೆ ಕಿರ್ಮಾನಿ ಸಲಹೆ

Virat kohli and kirmani

ತನ್ನ ವೃತ್ತಿಜೀವನದಲ್ಲಿ ಅತ್ಯಂತ ದೊಡ್ಡ ಫಾರ್ಮ್ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಹಲವು ಟೀಕೆಗಳನ್ನ ಎದುರಿಸುತ್ತಿದ್ದಾರೆ. ಟಿ20 ಫಾರ್ಮೆಟ್‌ನಿಂದ ಕೊಹ್ಲಿಯನ್ನ ಹೊರಗಿಡಬೇಕು, ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿಗೆ ಸ್ಥಾನ ನೀಡಬಾರದು ಹೀಗೆ ನಾನಾ ರೀತಿಯ ಟೀಕೆಗಳು ಕೊಹ್ಲಿ ವಿರುದ್ಧ ಕೇಳಿಬರುತ್ತಿದೆ.

ವಿರಾಟ್ ಫಾರ್ಮ್‌ಗೆ ಮರಳಬಹುದು ಎಂದು ಕಾದು ಕುಳಿತ್ತಿದ್ದ ಅಭಿಮಾನಿಗಳು ಸತತ ಬೇಸರ ಅನುಭವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಮುಗ್ಗರಿಸಿದ ಕೊಹ್ಲಿ, ಏಕದಿನ ಸರಣಿಗೂ ಮುನ್ನ ಇಂಜ್ಯುರಿಗೆ ಬೇರೆ ಒಳಗಾಗಿರೋದು ಸರಣಿಯಿಂದ ಹೊರಬೀಳುವ ಆತಂಕ ಸೃಷ್ಟಿಸಿದೆ.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ಅವಕಾಶ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ಅವಕಾಶ

ವಿರಾಟ್ ಕೊಹ್ಲಿ ತನ್ನ ಹಳೆಯ ಫಾರ್ಮ್‌ಗೆ ಮರಳಲು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯು ಪ್ರಮುಖ ವೇದಿಕೆಯಾಗಿತ್ತು. ಆದ್ರೆ ಆತನ ಇಂಜ್ಯುರಿಯು ಗಂಭೀರವಾಗಿರದೇ ಇದ್ದಲ್ಲಿ, ಎರಡನೇ ಹಾಗೂ ಮೂರನೇ ಏಕದಿನ ಪಂದ್ಯಗಳನ್ನಾಡಲು ಎದುರು ನೋಡಬೇಕು.

ಏಕದಿನ ಕ್ರಿಕೆಟ್‌ನಲ್ಲಿ ಅತ್ಯದ್ಭುತ ದಾಖಲೆ ಹೊಂದಿರುವ ವಿರಾಟ್‌ಗೆ ಈಗ ಅಗ್ನಿಪರೀಕ್ಷೆಗೆ ಎದುರಿಗಿದೆ. ಇದರಲ್ಲಿ ಸಫಲರಾಗುತ್ತಾರೆ ಅಥವಾ ಎಡವುತ್ತಾರ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ದೇಶೀಯ ಕ್ರಿಕೆಟ್ ಆಡಿ, ಫಾರ್ಮ್ ಮರಳಿ: ಸೈಯದ್ ಕಿರ್ಮಾನಿ

ದೇಶೀಯ ಕ್ರಿಕೆಟ್ ಆಡಿ, ಫಾರ್ಮ್ ಮರಳಿ: ಸೈಯದ್ ಕಿರ್ಮಾನಿ

ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಸೈಯದ್ ಕಿರ್ಮಾನಿ ವಿರಾಟ್‌ ಕೊಹ್ಲಿ ಉತ್ತಮ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಹೀಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪದೇ ಪದೇ ವಿಫಲರಾಗುವುದಕ್ಕಿಂತ ದೇಶೀಯ ಕ್ರಿಕೆಟ್‌ನಲ್ಲಿ ಆಡಿ, ಆತ್ಮವಿಶ್ವಾಸ ಪಡೆದುಕೊಂಡು ಫಾರ್ಮ್‌ಗೆ ಮರಳಬೇಕಿದೆ. ತದನಂತರ ಆತನ ಫಿಟ್‌ ಆಗಿದ್ದಾನೆಯೇ ಎಂಬುದನ್ನ ಪರಿಗಣಿಸಬಹುದು ಎಂದಿದ್ದಾರೆ.

IND vs ENG ಪ್ರಥಮ ಏಕದಿನ: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಶಿಖರ್ ಧವನ್ ಮತ್ತು ರೂಟ್ ಕಣ್ಣು

ಕೊಹ್ಲಿ ಜೊತೆಗೆ ಮಾತನಾಡಲು ಆಯ್ಕೆಗಾರರ ಹಿಂದೇಟು?

ಕೊಹ್ಲಿ ಜೊತೆಗೆ ಮಾತನಾಡಲು ಆಯ್ಕೆಗಾರರ ಹಿಂದೇಟು?

ಟೀಂ ಇಂಡಿಯಾದಲ್ಲಿ ಹೊಸ ಬೆಂಚ್ ಮಾರ್ಕ್ ಸೃಷ್ಟಿಸಿದ ವಿರಾಟ್ ಕೊಹ್ಲಿ ತಂಡಕ್ಕೆ ಹೊರೆಯಾಗಿ ಪರಿಣಮಿಸಿದ್ದಾರೆ ಎಂದು ಹೇಳಲು ಆಯ್ಕೆಗಾರರು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಕಿರ್ಮಾನಿ ವಾದವಾಗಿದೆ.

1546 ರನ್!: ಸಚಿನ್, ಕೊಹ್ಲಿ ಅಲ್ಲ, ಇಂಗ್ಲೆಂಡ್ ವಿರುದ್ಧ ಅತಿಹೆಚ್ಚು ಏಕದಿನ ರನ್ ಚಚ್ಚಿರುವ ಭಾರತೀಯ ಈತ!

ವಿರಾಟ್ ಕೊಹ್ಲಿಯನ್ನ ಬೆಂಬಲಿಸಿದ ಅಮಿತ್ ಮಿಶ್ರಾ

ವಿರಾಟ್ ಕೊಹ್ಲಿಯನ್ನ ಬೆಂಬಲಿಸಿದ ಅಮಿತ್ ಮಿಶ್ರಾ

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿರುವ ಸ್ಪಿನ್ನರ್ ಅಮಿತ್ ಮಿಶ್ರಾ ಟೀಂ ಇಂಡಿಯಾ ಮಾಜಿ ನಾಯಕನನ್ನು ಬೆಂಬಲಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಇನ್ನೂ ಪ್ರಮುಖ ಆಟಗಾರರಾಗಿದ್ದಾರೆ ಎಂದು ಹೇಳಿದ್ದಾರೆ.

"ಅವರು ಪ್ರಸ್ತುತ ಫಾರ್ಮ್‌ನಲ್ಲಿಲ್ಲ ಎಂದು ನಾವು ಹೇಳಬಹುದು ಆದರೆ ಅವರು ಅಂತಹ ಖ್ಯಾತಿಯನ್ನು ಸೃಷ್ಟಿಸಿದ್ದಾರೆ, ತುಂಬಾ ಪ್ರದರ್ಶನ ನೀಡಿದ್ದಾರೆ ಮತ್ತು ಹಲವಾರು ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಅವರನ್ನು ಬೆಂಬಲಿಸುವುದು ಮುಖ್ಯವಾಗಿದೆ. ಆಟಗಾರನಾಗಿ, ಅವರು ಮ್ಯಾಚ್ ವಿನ್ನರ್ ಆಗಿದ್ದಾರೆ ಮತ್ತು ಕಷ್ಟಕರ ಸಂದರ್ಭಗಳಲ್ಲಿ ಯಾವಾಗಲೂ ಸಂದರ್ಭಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ''

''ಯುವ ಆಟಗಾರರಂತೆ, ಕೆಲವೊಮ್ಮೆ ಹಿರಿಯರಿಗೂ ಅದೇ ಬೆಂಬಲ ಬೇಕಾಗುತ್ತದೆ. ಆದ್ದರಿಂದ ಆ ನಂಬಿಕೆಯನ್ನು ಉಳಿಸಿಕೊಳ್ಳಿ ಮತ್ತು ಅವರು ಆ ವಿಶ್ವಾಸವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ'' ಎಂದು ಮಿಶ್ರಾ ಹೇಳಿದರು.

Story first published: Tuesday, July 12, 2022, 18:05 [IST]
Other articles published on Jul 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+