ದಿನೇಶ್ ಕಾರ್ತಿಕ್, ಮೊಹಮ್ಮದ್ ಶಮಿಗೆ ಅವಕಾಶ ನೀಡ್ತಿಲ್ಲ ಎಂದು ಕಿಡಿ ಕಾರಿದ ಹರ್ಭಜನ್ ಸಿಂಗ್, ರವಿಶಾಸ್ತ್ರಿ
ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ವಿಫಲವಾಗಿದ್ದು, ಅಂತಿಮ ಓವರ್ ಗಳಲ್ಲಿ ಬೌಲರ್ ಗಳ ನೀರಸ ಪ್ರದರ್ಶನ, ಫೀಲ್ಡಿಂಗ್‌ನಲ್ಲಿ ಆದ ತಪ್ಪುಗಳು ಭಾರತದ ಸೋಲಿಗೆ ಪ್ರಮುಖ ಕಾರಣವಾದವು. ಭಾರತದ ಕಳಪೆ ಆಟದ ಬಗ್ಗೆ ಈಗಾಗಲೇ ಟೀಕೆ ವ್ಯಕ್ತವಾಗುತ್ತಿದೆ. ಈ ನಡುವೆಯೇ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್, ಮಾಜಿ ಕೋಚ್ ರವಿಶಾಸ್ತ್ರಿ ಟೀಂ ಮ್ಯಾನೇಜ್‌ಮೆಂಟ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತದ ನೀರಸ ಪ್ರದರ್ಶನಕ್ಕೆ ಭಾರಿ ನಿರಾಸೆ ವ್ಯಕ್ತಪಡಿಸಿರುವ ಹರ್ಭಜನ್ ಸಿಂಗ್ ತಂಡದ ಆಯ್ಕೆಗಾರರನ್ನು ಪ್ರಶ್ನೆ ಮಾಡಿದ್ದಾರೆ. ಆಯ್ಕೆಗಾರರಿಗೆ ಹರ್ಭಜನ್ ಸಿಂಗ್ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲೂ ಮೊಹಮ್ಮದ್ ಶಮಿಯಂತಹ ಅನುಭವಿ ಆಟಗಾರನನ್ನು ಕೈಬಿಟ್ಟಿರುವುದು ಅವರ ಕೋಪಕ್ಕೆ ಕಾರಣವಾಗಿದೆ.
ತಂಡವನ್ನು ಆಯ್ಕೆ ಮಾಡುವಲ್ಲೇ ಎಡವಲಾಗಿದೆ. ಉತ್ತಮ ಆಟಗಾರರನ್ನು ಕಡೆಗಣಿಸಲಾಗಿದೆ. ಯುವ ಆಟಗಾರರ ಜೊತೆ ಅನುಭವಿಗಳು ಕೂಡ ತಂಡದಲ್ಲಿದ್ದರೆ ತಂಡದ ಸಮತೋಲನಕ್ಕೆ ಅನುಕೂಲವಾಗಲಿದೆ, ಜಸ್ಪ್ರಿತ್ ಬುಮ್ರಾ, ಹರ್ಷಲ್ ಪಟೇಲ್‌ರಂತಹ ಪ್ರಮುಖ ಬೌಲರ್ ಗಾಯದ ಸಮಸ್ಯೆಯಿಂದ ಹೊರಗುಳಿದಾಗ, ಅನುಭವಿ ಶಮಿ ಅವರನ್ನು ಆಯ್ಕೆ ಮಾಡಬೇಕಿತ್ತು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.

ವೇಗದ ಬೌಲರ್ ಉಮ್ರಾನ್ ಮಲಿಕ್ ಎಲ್ಲಿ?
150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ವೇಗದ ಬೌಲರ್ ಉಮ್ರಾನ್ ಮಲಿಕ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗದಿರುವ ಬಗ್ಗೆ ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. 2022ರ ಐಪಿಎಲ್ ಆವೃತ್ತಿಯಲ್ಲಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಉಮ್ರಾನ್ ಮಲಿಕ್ ಎಲ್ಲರ ಗಮನ ಸೆಳೆದಿದ್ದರು.
ವೇಗವಾಗಿ ಬೌಲಿಂಗ್ ಮಾಡಿದ್ದರು ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದ ಉಮ್ರಾನ್ ನಿರೀಕ್ಷಿತ ಮಟ್ಟದಲ್ಲಿ ವಿಕೆಟ್ ಪಡೆದಿರಲಿಲ್ಲ, ಆದರೆ ಅವನಿಗೆ ಅವಕಾಶ ನೀಡಿ ಉತ್ತಮ ತರಬೇತಿ ನೀಡಿದ್ದರೆ ಉತ್ತಮ ಪ್ರದರ್ಶನ ಬರುವ ಸಾಧ್ಯತೆ ಇತ್ತು.
ನಿರ್ಣಾಯಕ ಪಂದ್ಯದಲ್ಲಿ ರವಿ ಬಿಷ್ಣೋಯ್‌ನನ್ನು ಕೈಬಿಟ್ಟ ಭಾರತ: ಭಾರೀ ಟೀಕೆಗೆ ಗುರಿ

ತಂಡದಲ್ಲಿ ದೀಪಕ್ ಚಹಾರ್ ಯಾಕಿಲ್ಲ?
ಉತ್ತಮ ಗುಣಮಟ್ಟದ ಸ್ವಿಂಗ್ ಬೌಲರ್ ದೀಪಕ್ ಚಹಾರ್ ತಂಡದಲ್ಲಿ ಯಾಕೆ ಇರಲಿಲ್ಲ ಎಂದು ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಉತ್ತಮ ಸ್ವಿಂಗ್ ಬೌಲಿಂಗ್ ಮಾಡುವ ಸಾಮರ್ಥ್ಯ ಇದ್ದ ದೀಪಕ್ ಚಹಾರ್ ತಂಡದಲ್ಲಿ ಇರಬೇಕಿತ್ತು, ಆತ ಅವಕಾಶ ಪಡೆಯಲು ಅರ್ಹನಾಗಿದ್ದ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾಕಪ್‌ನಲ್ಲಿ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದು ಹೊರತುಪಡಿಸಿ. ಭಾರತ ತಂಡದ ಬೌಲರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ದಿನೇಶ್ ಕಾರ್ತಿಕ್ ಯಾಕೆ ಅವಕಾಶ ಕೊಡ್ತಿಲ್ಲ
ಉತ್ತಮ ಫಿನಿಷರ್ ಪಾತ್ರ ನಿಭಾಯಿಸುತ್ತಿರುವ ದಿನೇಶ್ ಕಾರ್ತಿಕ್‌ರನ್ನು ಆಡಿಸದೇ ಇರುವುದಕ್ಕೆ ಹರ್ಭಜನ್ ಸಿಂಗ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ದಿನೇಶ್ ಕಾರ್ತಿಕ್‌ರನ್ನು ತಂಡದಿಂದ ಹೊರಗಿಡುವ ಅಗತ್ಯವೇನಿದೆ, ಅವರು ಆಯ್ಕೆಗೆ ಅರ್ಹರಾಗಿಲ್ಲವೇ ಎಂದು ಹರ್ಭಜನ್ ಪ್ರಶ್ನೆ ಮಾಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್, ನಂತರದ ಯಾವ ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯಾದರೂ ಅವರು ಕಣಕ್ಕಿಳಿಯುತ್ತಾರೆ ಎಂದು ಮಾಡಿದ್ದ ನಿರೀಕ್ಷೆ ಸುಳ್ಳಾಗಿತ್ತು.

ಶಮಿಯನ್ನು ಕೈಬಿಟ್ಟದ್ದು ದಿಗ್ಭ್ರಮೆ ಮೂಡಿಸಿದೆ
ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿಯಂತಹ ಬೌಲರ್ ಮನೆಯಲ್ಲಿ ಕುಳಿತಿರುವುದು ನೋಡಿ ನೋಡಿ ದಿಗ್ಭ್ರಮೆಗೊಂಡಿದ್ದೇನೆ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಕೇವಲ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಏಷ್ಯಾಕಪ್‌ಗೆ ಬಂದಿರುವದು ಆಶ್ಚರ್ಯ ಮೂಡಿಸಿದೆ. ಒಬ್ಬರು ಹೆಚ್ಚುವರಿ ಬೌಲರ್ ಇರಬೇಕಿತ್ತು, ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರವೂ ಅವರಿಗೆ ಅವಕಾಶ ಸಿಕ್ಕಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
2022ರ ಐಪಿಎಲ್ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಗೆಲ್ಲಲು ಮೊಹಮ್ಮದ್ ಶಮಿ ಪಾತ್ರ ಮುಖ್ಯವಾಗಿದೆ, ಐಪಿಎಲ್‌ನಲ್ಲಿ 16 ಪಂದ್ಯಗಳನ್ನಾಡಿದ್ದ ಶಮಿ 24.40 ಸರಾಸರಿಯಲ್ಲಿ 20 ವಿಕೆಟ್ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications