ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿರ್ಣಾಯಕ ಪಂದ್ಯದಲ್ಲಿ ರವಿ ಬಿಷ್ಣೋಯ್‌ನನ್ನು ಕೈಬಿಟ್ಟ ಭಾರತ: ಭಾರೀ ಟೀಕೆಗೆ ಗುರಿ

Ravi bishnoi

ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ನಿರ್ಣಾಯಕ ಸೂಪರ್ ಫೋರ್ ಕದನದಲ್ಲಿ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಕೈಬಿಟ್ಟ ಭಾರತದ ನಿರ್ಧಾರವು ಭಾರೀ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಭಾರತದ ಪರ ಬಿಷ್ಣೋಯ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ನಾಲ್ಕು ಓವರ್ ಗಳಲ್ಲಿ 26 ರನ್ ನೀಡಿದ್ದ ಬಿಷ್ಣೋಯಿ ಒಂದು ವಿಕೆಟ್ ಪಡೆದರು. ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ಅಮೂಲ್ಯ ವಿಕೆಟ್ ಅನ್ನು ಬಿಷ್ಣೋಯ್ ಪಡೆದರು. ಟೂರ್ನಿಯಲ್ಲಿ ಇದು ಯುವ ಸ್ಪಿನ್ನರ್‌ನ ಮೊದಲ ಪಂದ್ಯವೂ ಆಗಿತ್ತು.

ಆರ್‌. ಅಶ್ವಿನ್‌ರನ್ನ ಕಣಕ್ಕಿಳಿಸಿದ ಟೀಂ ಮ್ಯಾನೇಜ್‌ಮೆಂಟ್

ಆರ್‌. ಅಶ್ವಿನ್‌ರನ್ನ ಕಣಕ್ಕಿಳಿಸಿದ ಟೀಂ ಮ್ಯಾನೇಜ್‌ಮೆಂಟ್

ಆದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ಬಿಷ್ಣೋಯ್ ಅವರನ್ನು ಕೈಬಿಟ್ಟು ಅನುಭವಿ ಆರ್ ಅಶ್ವಿನ್ ಅವರನ್ನು ಕಣಕ್ಕಿಳಿಸುವ ಮೂಲಕ ಎಲ್ಲರಿಗೂ ಆಘಾತ ನೀಡಿತು. ಕಳೆದ ಮೂರು ಪಂದ್ಯಗಳಲ್ಲಿ ಉತ್ತಮ ರನ್ ನೀಡಿದ್ದ ಯುಜ್ವೇಂದ್ರ ಚಹಾಲ್ ಅವರನ್ನು ಭಾರತ ಕೈಬಿಡುವ ನಿರೀಕ್ಷೆ ಇತ್ತು. ಆದರೆ ಚಾಹಲ್ ಅವರ ಅನುಭವಕ್ಕೆ ಆದ್ಯತೆ ನೀಡಿದ ಟೀಮ್ ಮ್ಯಾನೇಜ್ ಮೆಂಟ್ ಬಿಷ್ಣೋಯ್ ಅವರ ಫಾರ್ಮ್ ಕಂಡಿಲ್ಲ ಎಂಬಂತೆ ಬಿಂಬಿಸಿತು. ಆದರೆ ಈ ನಿರ್ಧಾರದಿಂದ ಅಭಿಮಾನಿಗಳು ಸಂತಸಗೊಂಡಿಲ್ಲ. ತಮ್ಮ ಆಕ್ರೋಶ ಹಾಗೂ ಹತಾಶೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕವೂ ವ್ಯಕ್ತಪಡಿಸಿದ್ದಾರೆ.

Asia Cup 2022: ಏಷ್ಯಾ ಕಪ್‌ನಿಂದ ಹೊರಬಿದ್ದ ಭಾರತದ ಮತ್ತೊಬ್ಬ ಬೌಲರ್; ದೀಪಕ್ ಚಹಾರ್ ಎಂಟ್ರಿ

ರವಿ ಬಿಷ್ಣೋಯ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಹೇಗೆ?

ರವಿ ಬಿಷ್ಣೋಯ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಹೇಗೆ?

''ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ನಿಮ್ಮ ಅತ್ಯುತ್ತಮ ಸ್ಪಿನ್ನರ್ ಆಗಿದ್ದರು. ಕರುಣಾಜನಕ ತಂಡದ ಆಯ್ಕೆ, ಶುದ್ಧ ಮೂರ್ಖತನ, "ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಕಳೆದ ಪಂದ್ಯದಲ್ಲಿ ರವಿ ಬಿಷ್ಣೋಯಿ ನಮ್ಮ ಅತ್ಯುತ್ತಮ ಬೌಲರ್ ಆಗಿದ್ದರು. ಆದರೆ ಅವರ ಬದಲಿಗೆ ಆರ್ ಅಶ್ವಿನ್ ಅವರನ್ನು ತಂಡದಲ್ಲಿ ಸೇರಿಸಿದೆವು. ಚಾಹಲ್ ಇನ್ನೂ ತಂಡದಲ್ಲಿ ಆಡುತ್ತಿದ್ದಾನೆ. ಬಳಕೆದಾರರು ರೋಹಿತ್ ಶರ್ಮಾಗೆ ಈ ನಾಯಕತ್ವ ಯಾವ ರೀತಿಯದ್ದು ಎಂದು ಕೇಳಿದರು.

ರವಿ ಬಿಷ್ಣೋಯ್ ಅವರು ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ನೀವು ಅವರನ್ನು ಹೇಗೆ ಹೊರಹಾಕಿದ್ದೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ರವಿಚಂದ್ರನ್ ಅಶ್ವಿನ್ ಅವಕಾಶಕ್ಕೆ ಅರ್ಹರು. ಆದರೆ ಯುಜುವೇಂದ್ರ ಚಾಹಲ್ ಅವರ ಬದಲಿ ಆಟಗಾರ. ಇದು ಬಿಷ್ಣೋಗೆ ಬದಲಿ ಅಲ್ಲ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಹೆಸರು ತಿಳಿಸದೇ ಸಂದೇಶ ನೀಡಿದ ಕೊಹ್ಲಿ: ಇನ್‌ಸ್ಟಾಗ್ರಾಮ್ ಪೋಸ್ಟ್‌

Virat Kohli ಹೇಳಿಕೆ ಬಗ್ಗೆ BCCI ಪ್ರತಿಕ್ರಿಯೆ | *Cricket | OneIndia Kannada

ಅದ್ಬುತ ಪ್ರದರ್ಶನ ನೀಡಿದ ರವಿ ಬಿಷ್ಣೋಯ್ ಅವರನ್ನು ಹೊರಹಾಕಿದ್ದೀರಿ!

ಪಾಕಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋತಿತ್ತು. ಅತ್ಯುತ್ತಮ ಬೌಲರ್ ರವಿ ಬಿಷ್ಣೋಯ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿಲ್ಲ. ಇದು ರೋಹಿತ್ ಶರ್ಮಾ ನಾಯಕತ್ವದ ಸೋಲಿನ ಸುಳಿವು ಎಂದು ಬಳಕೆದಾರರು ಟೀಕಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಕಳೆದ ಪಂದ್ಯದಲ್ಲಿ ಅತ್ಯುತ್ತಮ ಬೌಲರ್ ಆಗಿದ್ದ ರವಿ ಬಿಷ್ಣೋಯ್ ಭಾರತ ಪರ ಆಡುತ್ತಿಲ್ಲ. ಇದು ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಮೂರ್ಖತನದ ನಿರ್ಧಾರ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಬರೆದಿದ್ದಾರೆ.

ಅದ್ಬುತ ಪ್ರದರ್ಶನ ನೀಡಿದ ರವಿ ಬಿಷ್ಣೋಯ್ ಅವರನ್ನು ಭಾರತ ಕೈಬಿಟ್ಟಿದೆ. ಯುವ ಆಟಗಾರನನ್ನು ನಾವು ಹೀಗೆ ನಡೆಸಿಕೊಳ್ಳಬೇಕೇ? ಇದು ಅವನ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ತಂಡದ ಆಯ್ಕೆಯಲ್ಲಿ ಸ್ಥಿರತೆ ಇಲ್ಲ. ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್‌ಗೆ ನಾಚಿಕೆಯಾಗಬೇಕು ಎಂದು ಬಳಕೆದಾರರು ವಾಗ್ದಾಳಿ ನಡೆಸಿದರು.

Story first published: Tuesday, September 6, 2022, 22:51 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X