ಗಾಯಾಳು ಹಾರ್ದಿಕ್ ಪಾಂಡ್ಯ ಸರಣಿಯಿಂದ ಹೊರಕ್ಕೆ, ಸ್ಥಾನ ತುಂಬುವರು ಯಾರು?


ದುಬೈ, ಸೆಪ್ಟೆಂಬರ್ 20: ಪಾಕಿಸ್ತಾನದ ವಿರುದ್ಧ ಪಂದ್ಯ ಗೆದ್ದ ಖುಷಿಯಲ್ಲಿರುವ ಭಾರತಕ್ಕೆ ಒಂದು ತಲೆನೋವು ಎದುರಾಗಿದೆ. ಸರಣಿಯ ಮುಂದಿನ ಪಂದ್ಯಗಳಿಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಲಭ್ಯರಿರುವುದಿಲ್ಲ.
ನಿನ್ನೆ ಪಾಕಿಸ್ತಾನದ ವಿರುದ್ಧ ಬೌಲಿಂಗ್ ಮಾಡುವಾಗ ಸೊಂಟದ ಸ್ನಾಯು ಸೆಳೆತಕ್ಕೆ ಸಿಕ್ಕಿದ ಹಾರ್ದಿಕ್ ಪಾಂಡ್ಯಾ ಮೈದಾನದಲ್ಲೇ ಕುಸಿದು ಬಿದ್ದರು. ಆ ನಂತರ ಅವರಿಗೆ ಏಳಲು ಸಹ ಸಾಧ್ಯವಾಗಲಿಲ್ಲ ಹಾಗಾಗಿ ಅವರನ್ನು ಸ್ಟ್ರೆಚರ್ ಮೂಲಕ ಹೊರಕ್ಕೆ ಹೊತ್ತೊಯ್ಯಲಾಯಿತು.
ಈ ವರ್ಷದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಭಾರತೀಯ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಮೊದಲಿಗರು. ಅವರು ಐಪಿಎಲ್ ಪೂರ್ಣ ಸರಣಿ ಜೊತೆಗೆ ಇಂಗ್ಲೆಂಡ್ ಸರಣಿಯಲ್ಲಿ ಆಡಿ ಒಟ್ಟು 40+ ಪಂದ್ಯಗಳನ್ನು ಆಡಿದ್ದಾರೆ. ಹಾಗಾಗಿ ಅವರ ಮೇಲೆ ದೈಹಿಕ ಒತ್ತಡ ಹೆಚ್ಚಾಗಿದೆ ಎಂದು ತಂಡದ ಮ್ಯಾನೆಜ್‌ಮೆಂಟ್ ಹೇಳಿದೆ.

ಹಾರ್ದಿಕ್‌ಗೆ ನಡೆಯಲು ಆಗಲಿಲ್ಲ
ಸ್ಟ್ರೆಚರ್ ಮೂಲಕ ಹೊರ ಬಂದ ಅವರಿಗೆ ಬಹಳ ಕಾಲ ಏಳಲು ಸಾಧ್ಯವಾಗಲಿಲ್ಲ. ಆದರೆ ಈಗ ಅವರು ಅಲ್ಪ ಸುಧಾರಿಸಿಕೊಂಡಿದ್ದು, ನಡೆಯಲು ಆರಂಭಿಸಿದ್ದಾರೆ. ಪೂರ್ಣ ವೈದ್ಯಕೀಯ ಬರುವ ವರೆಗೆ ಅವರ ಆರೋಗ್ಯದ ಬಗ್ಗೆ ಖಚಿತ ಮಾಹಿತಿ ನೀಡಲಾಗದು ಎಂದು ಮ್ಯಾನೆಜ್‌ಮೆಂಟ್ ಹೇಳಿದೆ.

ದುಬೈನ ಅತಿಯಾದ ಬಿಸಿಲು ಬವಳಿಸುತ್ತಿದೆ
ನಿನ್ನೆಯ ಪಂದ್ಯದಲ್ಲಿ 4.5 ಓವರ್ ಬೌಲಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ 24 ರನ್ ನೀಡಿದ್ದರು. ಉಳಿದ ಒಂದು ಬಾಲನ್ನು ಅಂಬಟಿ ರಾಯುಡು ಪೂರ್ಣ ಮಾಡಿದರು. ದುಬೈನಲ್ಲಿ ಅತಿಯಾದ ಬಿಸಿಲಿರುವುದು ಸಹ ಆಟಗಾರರಿಗೆ ಸ್ನಾಯು ಸೆಳೆತಕ್ಕೆ ಕಾರಣವಾಗುತ್ತಿದೆ.
ಏಷ್ಯಾ ಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

ಭುವನೇಶ್ವರ್ ಕುಮಾರ್ ಗಾಯದಿಂದ ಮರಳಿದ್ದಾರೆ
ಇತ್ತೀಚೆಗಷ್ಟೆ ಭುವನೇಶ್ವರ್ ಕುಮಾರ್ ಅವರು ಗಾಯದಿಂದ ಗುಣಮುಖರಾಗಿ ತಂಡಕ್ಕೆ ಮರಳಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ ಪೂರ್ಣ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಕೇದಾರ್ ಜಾದವ್ ಸಹ ಭುಜದ ಗಾಯದಿಂದಾಗಿ ಒಂದು ವರ್ಷದಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ಹಾರ್ದಿಕ್ ಪಾಂಡ್ಯಾ ಸರಣಿಯಿಂದ ಹೊರಕ್ಕೆ
ಗಾಯಗೊಂಡಿರುವ ಹಾರ್ದಿಕ್ ಪಟೇಲ್ ಸರಣಿಯಿಂದ ಹೊರಗುಳಿಯುವ ಕಾರಣ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಈಗಾಗಲೇ ತಂಡದಲ್ಲಿ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಕೇದಾರ್ ಜಾದವ್ ಮೂವರು ಸ್ಪಿನ್ನರ್‌ಗಳು ಇದ್ದಾರೆ ಹಾಗಾಗಿ ಮತ್ತೊಬ್ಬ ಸ್ಪಿನ್ನರ್ ಆಲ್‌ರೌಂಡರ್ ಆದ ಅಕ್ಷರ್ ಪಟೇಲ್‌ಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ಹಾರ್ದಿಕ್ ಪಟೇಲ್ ಬದಲು ಫಾರ್ಮ್‌ನಲ್ಲಿ ಇಲ್ಲದ ಶಾರ್ದೂಲ್ ಠಾಕೂರ್ ಅವರನ್ನು ಕಣಕ್ಕಿಳಿಸುತ್ತಾರಾ ಅಥವಾ ಹೊಸ ಆಟಗಾರರಿಗೆ ಅವಕಾಶ ಸಿಗುತ್ತದೆಯೋ ನೋಡಬೇಕು.
ಪಾಕಿಸ್ತಾನದ ವಿರುದ್ಧ ಭಾರತ ವಿರೋಜಿತ ವಿಜಯ: ಟ್ವಿಟ್ಟರ್‌ನಲ್ಲಿ ಸಂಭ್ರಮಾಚರಣೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications