|
200 ಹೊಡೆಯುತ್ತೇನೆಂದವ 0 ಗೆ ಔಟ್
ಭಾರತ ವಿರುದ್ಧ ಪಂದ್ಯ ಶುರುವಾಗುವ ಕೆಲವು ದಿನಗಳ ಮುನ್ನಾ ಪಾಕಿಸ್ತಾನದ ಲೀಡ್ ಬೌಲರ್ ಹುಸನ್ ಅಲಿ ಹೇಳಿದ್ದರು ನಾನು ಭಾರತದ ಎಲ್ಲ ವಿಕೆಟ್ ಕಬಳಿಸುತ್ತೇನೆ ಎಂದು ಆದರೆ ಒಂದೂ ವಿಕೆಟ್ ಪಡೆಯಲಿಲ್ಲ. ಪಾಕಿಸ್ತಾನದ ಬ್ಯಾಟ್ಸ್‌ಮನ್ ಫಕರ್ ಅಲಿ, ಭಾರತದ ವಿರುದ್ಧ 200 ಭಾರಿಸುತ್ತಾರೆ ಎಂದು ಶೋಯೆಬ್ ಅಖ್ತರ್ ಹೇಳಿದ್ದರು ಆದರೆ 0 ಗೆ ಔಟಾದರು.
|
ವಿಭಜನೆಯ ನೋವು!!!
ನಿನ್ನೆ ಭಾರತ ಪಾಕಿಸ್ತಾನ ಪಂದ್ಯ ನೋಡಲು ಬಂದಿದ್ದ ಸುಂದರ ಯುವತಿಯರ ಚಿತ್ರ ಹಾಕಿರುವ ಚಮನ್ ಪಾಂಡೆ, 'ಈ ಚಿತ್ರಗಳನ್ನು ನೋಡಿದರೆ ಗೊತ್ತಾಗುತ್ತದೆ, ನಾವು ವಿಭಜನೆ ಸಮಯದಲ್ಲಿ ಏನೇನೂ ಕಳೆದುಕೊಂಡಿದ್ದೇವೆಂದು, ಬಹಳ ನೋವಾಗುತ್ತದೆ' ಎಂದು ತರ್ಲೆ ಟ್ವೀಟ್ ಮಾಡಿದ್ದಾರೆ.
|
24 ಗಂಟೆಯಲ್ಲಿ ಮೂರು ಬಾರಿ ಪಾಕಿಸ್ತಾನಕ್ಕೆ ಸೋಲುಣುಸಿದ ಭಾರತ
ಭಾರತವು ಪಾಕಿಸ್ತಾನ ತಂಡವನ್ನು ವ್ಹೀಲ್‌ಚೇರ್ ಕ್ರಿಕೆಟ್‌ನಲ್ಲಿ ಸೋಲಿಸಿದೆ, 16ರ ಒಳಗಿನ ಮಹಿಳಾ ಫುಟ್‌ಬಾಲ್ ತಂಡವು ಪಾಕಿಸ್ತಾನವನ್ನು ಸೋಲಿಸಿದೆ. ಏಷ್ಯಾಕಪ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದೆ. ಕೇವಲ 24 ಗಂಟೆಯಲ್ಲಿ ಪಾಕಿಸ್ತಾನದ ಮೇಲೆ ಮೂರು ವಿಜಯವನ್ನು ಭಾರತ ಸಾಧಿಸಿದೆ ಎಂದು ಚಿತ್ರ ಸಹಿತ ಮಾಹಿತಿ ನೀಡಿದ್ದಾರೆ ಜೆ.ಮಿತ್ರಾ.
|
ಲೆಕ್ಕ ಅಂದ್ರ ಇದು!!
ಭಾರತದ ವಿರುದ್ಧ ಹಾಂಕಾಂಗ್ ತಂಡವು 174 ರನ್ ಗಳಿಸಿ ಒಂದೂ ವಿಕೆಟ್ ಕಳೆದುಕೊಂಡಿರಲಿಲ್ಲ ಆದರೆ ಪಾಕಿಸ್ತಾನವು 162 ರನ್‌ಗಳಿಗೆ ಆಲ್‌ಔಟ್ ಆಯಿತು. ಹಾಗಾಗಿ ಹಾಂಕಾಂಗ್ ತಂಡವು ಪಾಕಿಸ್ತಾನವನ್ನು 12 ರನ್ ಹಾಗೂ 10 ವಿಕೆಟ್‌ಗಳಿಂದ ಸೋಲಿಸಿದೆ ಎಂದು ಭಿನ್ನವಾದ ಲೆಕ್ಕಕೊಟ್ಟಿದ್ದಾರೆ ನಿಖಿಲ್ ಜೈನ್.
|
ವಿರಾಟ್ ಬದಲಿಗೆ ರೋಹಿತ್‌ಗೆ ನಾಯಕತ್ವ ಕೊಡಿ
ವಿರಾಟ್ ಕೊಹ್ಲಿ ಉತ್ತಮ ಬ್ಯಾಟ್ಸ್‌ಮನ್ ಇರಬಹುದು ಆದರೆ ರೋಹಿತ್ ಶರ್ಮಾ ಅತ್ಯುತ್ತಮ ನಾಯಕ. ಆತ ಉತ್ತಮವಾಗಿ ಬೌಲಿಂಗ್ ಚೇಂಜ್ ಮಾಡುತ್ತಾನೆ, ಹಾಗೂ ಫೀಲ್ಡಿಂಗ್ ಸೆಟ್ ಮಾಡುತ್ತಾರೆ. ಐಪಿಎಲ್‌ನಲ್ಲಿ ಅದಾಗಲೇ ರೋಹಿತ್ ನಾಯಕತ್ವದ ಬಗ್ಗೆ ಸಾಕ್ಷಿ ಸಿಕ್ಕಿದೆ ಹಾಗಾಗಿ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್‌ಗೆ ನಾಯಕತ್ವ ನೀಡಬೇಕು ಎಂದು ಸಲಹೆ ನೀಡಿದ್ದಾರೆ ಮಹೇಂದ್ರ ಸ್ವಾಮಿ.
|
ಚಂದನೆಯ ಚಿತ್ರ
ಭಾರತೀಯ ಆಟಗಾರ ಹಾರ್ದಿಕ್ ಪಾಂಡ್ಯಾ ಪಾಕಿಸ್ತಾನಿ ಆಟಗಾರ ಉಸ್ಮಾನ್ ಅವರ ಶೂ ದರ ಕಟ್ಟುತ್ತಿರುವ ಚಿತ್ರ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಕ್ರೀಡಾ ಸ್ಪೂರ್ಥಿಗೆ ಅತ್ಯುತ್ತಮ ಉದಾಹರಣೆ ಇದು. ಚಿತ್ರವನ್ನು ನೋಡಿ ಪಾಕಿಸ್ತಾನ ಹಾಗೂ ಭಾರತ ಎರಡರ ರಾಜಕಾರಣಿಗಳೂ ಕಲಿಯಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
|
ಅಪ್ಪ ಅಪ್ಪನೇ, ಮಗ ಮಗನೇ
ಜಿಡಿಪಿ, ಕ್ರಿಕೆಟ್, ಹಾಕಿ, ಫುಟ್‌ಬಾಲ್, ಕಬಡ್ಡಿ, ಒಲಿಂಪಿಕ್ಸ್, ಅಥ್ಲೆಟಿಕ್ಸ್, ಯುದ್ಧದಲ್ಲೂ ಸಹ ಭಾರತವೇ ಗೆಲ್ಲುವುದು. ಏಷ್ಟೆ ಆಗಲಿ ಅಪ್ಪ ಅಪ್ಪನೇ, ಮಗ ಮಗನೇ ಎಂದು ಪಾಕಿಸ್ತಾನವನ್ನು ಗೇಲಿ ಮಾಡಿದೆ ಸರ್ ರವಿಂದ್ರ ಜಡೇಜಾ ಎಂಬ ಪ್ಯಾರೆಡಿ ಖಾತೆ.
|
ಸಚಿನ್ ಅಭಿಮಾನಿ ಸುಧೀರ್ ಟ್ವೀಟ್
ಮೈಗೆಲ್ಲಾ ಭಾರತ ಧ್ವಜದ ರೀತಿ ಬಣ್ಣ ಬಳಿದುಕೊಂಡು ಕ್ರೀಡಾಂಗಣದಲ್ಲಿ ಭಾರತ ಧ್ವಜ ಹಾರಿಸುವ ಸಚಿನ್ ಅಭಿಮಾನಿ ಸುಧೀರ್ ಟ್ವೀಟ್ ಮನಕರಗುವಂತಿದೆ. ಅವರಿಗೆ ದುಬೈಗೆ ಹೋಗಲು ಟಿಕೆಟ್‌ಗೆ ಹಣ ಇರಲಿಲ್ಲವಂತೆ. ಪಾಕಿಸ್ತಾನ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿ ಚಾಚಾ ಅವರು ಹಣ ಕೊಟ್ಟು ಟಿಕೆಟ್ ಕಳುಹಿಸಿದ್ದಾರೆ. ಇಬ್ಬರೂ ಅಭಿಮಾನಿಗಳು ಜೊತೆಗೆ ನಿಂತ ಚಿತ್ರವನ್ನು ಸುಧೀರ್ ಟ್ವೀಟ್ ಮಾಡಿದ್ದಾರೆ.
|
ಗಡಿಯಲ್ಲಿ ಸೆರೆಯಾದ ಪಾಕಿಸ್ತಾನಿ
ಮನೀಷ್ ಪಾಂಡೆ ಬೌಂಡರಿ ಗೆರೆ ಬಳಿ ಹಿಡಿದ ಅದ್ಭುತ ಕ್ಯಾಚಿನ ಚಿತ್ರ ಹಾಕಿರುವ ರಹಿ, ಮತ್ತೊಬ್ಬ ಪಾಕಿಸ್ತಾನಿ ಗಡಿ ರೇಖೆ ಬಳಿ ಸೆರೆಯಾದ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
|
ಸೋತನಂತರ ಹೀಗಿದೆ ಪಾಕಿಸ್ತಾನದ ಸ್ಥಿತಿ
ಸೋತನಂತರ ಪಾಕಿಸ್ತಾನದ ಸ್ಥಿತಿ ಹೇಗಿರಬಹುದು ಎಂದು ವಿಡಿಯೋ ಟ್ವೀಟ್ ಹಾಕಿದ್ದಾರೆ. ಜೈಲಿನಿಂದ ತಪ್ಪಿಸಿಕೊಂಡು ಹೋಗುವ ನವಾಜುದ್ದೀನ್ ಸಿದ್ಧಿಕಿಯ ಮುಖಕ್ಕೆ ಪಾಕಿಸ್ತಾನ ನಾಯಕನ ಮುಖ ಎಡಿಟ್ ಮಾಡಿ ಹಾಕಿ ನಗೆ ಉಕ್ಕಿಸಿದ್ದಾರೆ.
|
ಚಾಂಪಿಯನ್ಸ್ ಟ್ರೋಫಿ ಸೋಲಿಗೆ ಮುಯ್ಯಿ
ಚಾಂಪಿಯನ್ಸ್ ಟ್ರೋಫಿಗೆ ಈ ರೀತಿ ಮುಯ್ಯಿ ತೀರಿಸಿಕೊಂಡಿದೆ ಭಾರತ ಎಂದು ಆಪ್ಲಾ ಹಾಕಿರುವ ವಿಡಿಯೋ ಟ್ವೀಟ್ ನಗು ಉಕ್ಕಿಸುತ್ತದೆ. ಅಜೆಯ್ ದೇವಗನ್ ಯಾರಿಗೋ ಸತತವಾಗಿ ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋ ನಿನ್ನೆ ರೋಹಿತ್ ಶರ್ಮಾರ ಬ್ಯಾಟಿಂಗ್ ನೆನಪಿಸುತ್ತದೆ.