1983ರ ಏಕದಿನ ವಿಶ್ವಕಪ್ ಯಶೋಗಾಥೆ ಕೊನೆಗಾಣಿಸಿ, 2011ರ ವಿಶ್ವಕಪ್ ಗೆಲ್ಲಿ ಎಂದು ಗಂಭೀರ್‌ಗೆ ನೀಡಿದ್ರಂತೆ ಸಂದೇಶ!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾರತ ಕಂಡಂತಹ ಬಿಗ್ ಮ್ಯಾಚ್ ಪ್ಲೇಯರ್‌ಗಳಲ್ಲಿ ಒಬ್ಬರು. ಖ್ಯಾತ ಓಪನರ್‌ಗಳಲ್ಲಿ ಒಬ್ಬರಾದ ಗೌತಿ, ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು.
ಉಳಿದ ಸ್ಟಾರ್ ಆಟಗಾರರಿಗೆ ಹೋಲಿಸಿದ್ರೆ, ಗಂಭೀರ್ ಅವಧಿಯಲ್ಲಿ ಅವರಿಗೆ ಸಿಗಬೇಕಾದ ಮನ್ನಣೆ ಹೆಚ್ಚಾಗಿ ಸಿಗಲಿಲ್ಲ ಎಂದು ಹಲವು ಬಾರಿ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ 2011ರ ಏಕದಿನ ವಿಶ್ವಕಪ್ ವೇಳೆ ನಡೆದ ಮತ್ತೊಂದು ಘಟನೆಯನ್ನು ಗಂಭೀರ್ ಬಹಿರಂಗಪಡಿಸಿದ್ದಾರೆ.
1983ರ ಏಕದಿನ ವಿಶ್ವಕಪ್ ಗೆಲುವಿನ ವೀರಾವೇಶಕ್ಕೆ ಅಂತ್ಯ ಹಾಡಲು ಈ ಬಾರಿ ಕಠಿಣವಾಗಿ ಆಡಬೇಕು ಎಂದು ಹಿರಿಯ ಆಟಗಾರರು ತಮ್ಮ ಬಳಿಗೆ ಬಂದು ಹೇಳಿದ್ದರು ಎಂದು ಗಂಭೀರ್ ಬಹಿರಂಗಪಡಿಸಿದ್ದಾರೆ. ಹಿರಿಯ ಆಟಗಾರರ ಹೆಸರನ್ನು ಬಹಿರಂಗಪಡಿಸಲು ಗಂಭೀರ್ ನಿರಾಕರಿಸಿದ್ದಾರೆ.

ಹಿರಿಯ ಆಟಗಾರರು ನನ್ನ ಬಳಿ ಬಂದು ಮಾತನಾಡಿದ್ರು!
''ಇಬ್ಬರು ಮೂರು ಹಿರಿಯ ಆಟಗಾರರು ನನ್ನ ಬಳಿ ಬಂದಿದ್ದರು. 1983ರ ಏಕದಿನ ವಿಶ್ವಕಪ್ ಸಾಧನೆಯ ವೀರಗಾಥೆಗಳನ್ನು ಕೊನೆಗಾಣಿಸಲು ಈ ಬಾರಿ ಪ್ರಶಸ್ತಿ ಗೆಲ್ಲಬೇಕು ಎಂದರು. ಅವರಿಗೆ ಸಿಗುವ ವೀರಾವೇಶ ಕೊನೆಯಾಗಬೇಕು. ಯಾರ ಸಾಧನೆಯನ್ನೂ ಮುಗಿಸಲು ನಾನಿಲ್ಲಿಲ್ಲ'' ಎಂದು ಉತ್ತರಿಸಿದರು. 1983-2011ರ ವಿಶ್ವಕಪ್ ಸಾಧನೆಗಳನ್ನು ತುಲನೆ ಮಾಡುವುದು ಮಾಧ್ಯಮಗಳ ಕೆಲಸ. ಇದು ನಮ್ಮ ಕೆಲಸವಲ್ಲ. ದೇಶವನ್ನು ಸಂತೋಷಪಡಿಸಲು ನಾನು ಪ್ರಶಸ್ತಿ ಗೆಲ್ಲಲು ಬಯಸುತ್ತೇನೆ'' ಎಂದು ಗಂಭೀರ್ ಹೇಳಿದ್ದಾರೆ.
2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಗಂಭೀರ್ ಭಾರತದ ಪರ ಗರಿಷ್ಠ ಸ್ಕೋರರ್ ಆಗಿದ್ದರು. ಮೂರನೇ ಸ್ಥಾನದಲ್ಲಿ ಗಂಭೀರ್ 97 ರನ್ ಗಳಿಸಿದರು. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಸಣ್ಣ ಸ್ಕೋರ್‌ಗಳೊಂದಿಗೆ ಪೆವಿಲಿಯನ್ ಸೇರಿಕೊಂಡ್ರೆ, ಗಂಭೀರ್ ಅವರ ಇನ್ನಿಂಗ್ಸ್ ಭಾರತವನ್ನು ಬೃಹತ್ ಕುಸಿತದಿಂದ ರಕ್ಷಿಸಿತು. ಆದರೆ ಫೈನಲ್ ನಲ್ಲಿ ಸಿಕ್ಸರ್ ಸಿಡಿಸಿದ ಧೋನಿ ಹೀರೋ ಆದ ಮೇಲೆ ಯಾರೂ ಗಂಭೀರ್ ಪ್ರದರ್ಶನವನ್ನು ಹೆಚ್ಚಾಗಿ ಪರಿಗಣಿಸಲಿಲ್ಲ ಎಂಬುದು ನಿಜಕ್ಕೂ ಅವರ ಅಭಿಮಾನಿಗಳಲ್ಲಿ ಬೇಸರ ತರಿಸಿತು.
ICC T20 ವಿಶ್ವಕಪ್ 2022: ಬಲಿಷ್ಟ ಸ್ಕ್ವಾಡ್ ಘೋಷಿಸಿದ ನ್ಯೂಜಿಲೆಂಡ್, ಕೇನ್ ವಿಲಿಯಮ್ಸನ್ ಮುಂದಾಳತ್ವ

2007ರ ವಿಶ್ವಕಪ್‌ನಲ್ಲೂ ಮಿಂಚಿದ್ದ ಗೌತಮ್ ಗಂಭೀರ್
ಇದಾದ ನಂತರ ಹಲವು ಬಾರಿ ಧೋನಿಯನ್ನು ಟೀಕಿಸುವ ಮೂಲಕ ಗಂಭೀರ್ ಹೆಚ್ಚು ಸುದ್ದಿಯಾಗಿದ್ದರು. 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಭಾರತದ ಗೆಲುವಿನಲ್ಲಿ ಗಂಭೀರ್ ಅವರ ಅದ್ಭುತ ಪ್ರದರ್ಶನ ನಿರ್ಣಾಯಕವಾಗಿತ್ತು. ಗಂಭೀರ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಎರಡು ಕಪ್ ಗೆದ್ದು ಕೊಟ್ಟ ನಾಯಕ. ಇನ್ನು, ಭಾರತ ತಂಡದಲ್ಲಿ ಗಂಭೀರ್‌ಗೆ ನಾಯಕನಾಗಿ ಹೆಚ್ಚಿನ ಅವಕಾಶ ನೀಡಲಿಲ್ಲ. ಟೀಂ ಇಂಡಿಯಾ ಮುನ್ನಡೆಸಿದ ಕೆಲವೇ ಪಂದ್ಯಗಳಲ್ಲಿ ಶೇಕಡಾ 100ರಷ್ಟು ಗೆಲುವಿನ ದಾಖಲೆ ಹೊಂದಿರುವ ಗಂಭೀರ್‌ಗೆ ನಾಯಕತ್ವ ಒಲಿದು ಬರದೇ ಇರುವುದು ಅವರನ್ನ ಇನ್ನಷ್ಟು ಕೋಪಗೊಳಿಸಿತು.
SA20 League 2023 Auction: 6 ತಂಡದ ಸಂಪೂರ್ಣ ಸ್ಕ್ವಾಡ್, ಅತಿ ಹೆಚ್ಚು ಮೊತ್ತ ಪಡೆದ ಆಟಗಾರರ ಪಟ್ಟಿ

ಕಾಮೆಂಟೇಟರ್ ಮತ್ತು ರಾಜಕೀಯದಲ್ಲಿ ಗಂಭೀರ್ ಬ್ಯುಸಿ
ಪ್ರಸ್ತುತ, ಗಂಭೀರ್ ಆಂಕರ್ ಮತ್ತು ಕಾಮೆಂಟೇಟರ್ ಆಗಿ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಗಂಭೀರ್ ಫೌಂಡೇಶನ್ ಸಹ ಪರೋಪಕಾರಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಗಂಭೀರ್ ಅವರ ಹಲವು ಕಾಮೆಂಟ್‌ಗಳು ಹಲವು ವಿವಾದಗಳಿಗೆ ಕಾರಣವಾಗಿವೆ. ಇತ್ತೀಚೆಗಷ್ಟೇ ಭಾರತ ತಂಡದಲ್ಲಿ ಗಂಭೀರ್ ಅವರನ್ನು ಬೇರೆ ಯಾರೂ ಇಷ್ಟಪಡುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications