Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SA20 League 2023 Auction: 6 ತಂಡದ ಸಂಪೂರ್ಣ ಸ್ಕ್ವಾಡ್‌, ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರು

SA T20 League 2023

ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿರುವ ಕೇಪ್ ಟೌನ್ ಇಂಟರ್‌ನ್ಯಾಷನಲ್‌ ಕನ್ವೆನ್ಷನ್ ಸೆಂಟರ್‌ನಲ್ಲಿ ಯಶಸ್ವಿಯಾಗಿ ನಡೆದಿದೆ. ಮುಂದಿನ ವರ್ಷ ಅಂದ್ರೆ 2023 ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯಲಿರುವ ನೂತನ ಟಿ20 ಲೀಗ್‌ ಕುರಿತು ಆಟಗಾರರ ಹರಾಜು ಪ್ರಕ್ರಿಯೆ ಅಂತಿಮಗೊಂಡಿದೆ.

ಬಿಡ್ಡಿಂಗ್‌ನಲ್ಲಿ ಒಟ್ಟು ಆರು ಫ್ರಾಂಚೈಸಿಗಳು ಭಾಗಿಯಾಗಿದ್ದು, ವಿಶ್ವದ 314 ಕ್ರಿಕೆಟ್ ಆಟಗಾರರು ಹ್ಯಾಮರ್ ಅಡಿಯಲ್ಲಿ ಬಿಡ್ಡಿಂಗ್‌ಗೆ ಒಳಗಾಗಿದ್ದರು. ಈ ಪ್ರಕ್ರಿಯೆಯಲ್ಲಿ ಡರ್ಬನ್ ಸೂಪರ್ ಜೈಂಟ್ಸ್‌, ಜೋಬರ್ಗ್‌ ಸೂಪರ್ ಕಿಂಗ್ಸ್‌, ಎಂಐ ಕೇಪ್‌ ಟೌನ್, ಪರ್ಲ್ ರಾಯಲ್ಸ್‌, ಪ್ರಿಟೋರಿಯಾ ಕ್ಯಾಪಿಟಲ್ಸ್‌, ಸನ್‌ರೈಸರ್ಸ್ ಈಸ್ಟ್ರನ್ ಕೇಪ್‌ಟೌನ್‌ ಟಿ20 ಲೀಗ್‌ನಲ್ಲಿ ಆಟಗಾರರಿಗೆ ಸಾಕಷ್ಟು ಪೈಪೋಟಿ ನಡೆಸಿವೆ.

ಈ ಬಿಡ್ಡಿಂಗ್‌ನಲ್ಲಿ ಆಶ್ಚರ್ಯಕರ ರೀತಿಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾರನ್ನ ಖರೀದಿಸಲು ಮುಂದಾಗಲಿಲ್ಲ. ಟೆಂಬಾ ಬವುಮಾ ಅಷ್ಟೇ ಅಲ್ಲದೆ ವೆಸ್ಟ್ ಇಂಡೀಸ್‌ನ ಶೈ ಹೋಪ್, ಕಾರ್ಲೋಸ್ ಬ್ರಾಥ್‌ವೈಟ್‌, ಲೆವಿಸ್ ಗ್ರೇಜೊಯ್, ದಕ್ಷಿಣ ಆಫ್ರಿಕಾ ಕೀಗನ್ ಪೀಟರ್ಸನ್, ಡೀನ್ ಎಲ್ಗರ್ ಅನ್‌ಸೋಲ್ಡ್ ಆಗಿ ಉಳಿದಿದ್ದಾರೆ. ರಾಸ್ ಟೇಲರ್, ಸರೆಲ್ ಎರ್ವೀ, ಇಬ್ರಾಹಿಂ ಜದ್ರಾನ್ ಮತ್ತು ಅವಿಷ್ಕಾ ಫೆರ್ನಾಂಡೋ ಹೊಸ ಬ್ಯಾಟ್ಸ್‌ಮನ್‌ಗಳಾಗಿ ಮಾರಾಟವಾಗಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಯಾವೆಲ್ಲಾ ಆಟಗಾರರು ಯಾವ ತಂಡಕ್ಕೆ ಬಿಕರಿಯಾಗಿದ್ದಾರೆ. ಯಾವ ಆಟಗಾರರು ಅತಿ ಹೆಚ್ಚು ಮೊತ್ತ ಪಡೆದಿದ್ದಾರೆ ಎಂಬುದನ್ನು ಈ ಕೆಳಗೆ ಕಾಣಬಹುದು.

 SA20 League 2023 Auction: ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರು (ಬ್ರೆಜಿಲಿಯನ್ ರಿಯಲ್ ಕರೆನ್ಸಿ)

SA20 League 2023 Auction: ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರು (ಬ್ರೆಜಿಲಿಯನ್ ರಿಯಲ್ ಕರೆನ್ಸಿ)

ಟ್ರಿಸ್ಟಾನ್ ಸ್ಟಬ್ಸ್ - R 9.2 ಮಿಲಿಯನ್ - ಸನ್ ರೈಸರ್ಸ್ ಈಸ್ಟರ್ನ್ ಕೇಪ್
ರಿಲೀ ರೊಸ್ಸೌವ್ - R 6.9 ಮಿಲಿಯನ್ - ಪ್ರಿಟೋರಿಯಾ ಕ್ಯಾಪಿಟಲ್ಸ್
ಮಾರ್ಕೊ ಜಾನ್ಸೆನ್ - R 6.1 ಮಿಲಿಯನ್ - ಸನ್ ರೈಸರ್ಸ್ ಈಸ್ಟರ್ನ್ ಕೇಪ್
ವೇಯ್ನ್ ಪಾರ್ನೆಲ್ - R 5.6 ಮಿಲಿಯನ್ - ಪ್ರಿಟೋರಿಯಾ ಕ್ಯಾಪಿಟಲ್ಸ್
ಡೊನಾವನ್ ಫೆರೇರಾ - R 5.5 ಮಿಲಿಯನ್ - ಜೋಬರ್ಗ್ ಸೂಪರ್ ಕಿಂಗ್ಸ್
ಸಿಸಂದಾ ಮಗಲಾ - R 5.4 ಮಿಲಿಯನ್ - ಸನ್ ರೈಸರ್ಸ್ ಈಸ್ಟರ್ನ್ ಕೇಪ್
ಹೆನ್ರಿಕ್ ಕ್ಲಾಸೆನ್ - R 4.5 ಮಿಲಿಯನ್ - ಡರ್ಬನ್ನ ಸೂಪರ್ ಜೈಂಟ್ಸ್
ರೀಜಾ ಹೆಂಡ್ರಿಕ್ಸ್ - R 4.5 ಮಿಲಿಯನ್ - ಜೋಬರ್ಗ್ ಸೂಪರ್ ಕಿಂಗ್ಸ್
ತಬ್ರೈಜ್ ಶಮ್ಸಿ - R 4.3 ಮಿಲಿಯನ್ - ಪರ್ಲ್ ರಾಯಲ್ಸ್
ಡ್ವೈನ್ ಪ್ರಿಟೋರಿಯಸ್ - R 4.1 ಮಿಲಿಯನ್ - ಡರ್ಬನ್ನ ಸೂಪರ್ ಜೈಂಟ್ಸ್

ಡರ್ಬನ್ ಸೂಪರ್ ಜೈಂಟ್ಸ್‌ ಸಂಪೂರ್ಣ ಸ್ಕ್ವಾಡ್

ಡರ್ಬನ್ ಸೂಪರ್ ಜೈಂಟ್ಸ್‌ ಸಂಪೂರ್ಣ ಸ್ಕ್ವಾಡ್

ಆರ್‌ಪಿಎಸ್‌ಜಿ ಸ್ಪೋರ್ಟ್ಸ್‌ ಪ್ರೈವೈಟ್ ಲಿಮಿಟೆಡ್‌ನ ಮಾಲೀಕತ್ವದ ಡರ್ಬನ್ ಸೂಪರ್ ಜೈಂಟ್ಸ್‌ ಒಟ್ಟು 17 ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದ್ದು, ಇದರಲ್ಲಿ 6 ವಿದೇಶಿ ಆಟಗಾರರನ್ನು ಒಳಗೊಂಡಿದೆ. ಇದರಲ್ಲಿ ಬ್ಯಾಟರ್ಸ್‌, ಆಲ್‌ರೌಂಡರ್ಸ್ ಮತ್ತು ಬೌಲರ್‌ಗಳನ್ನ ಈ ಕೆಳಗೆ ಕಾಣಬಹುದು.

ಬ್ಯಾಟ್ಸ್‌ಮನ್ಸ್‌: ಹೆನ್ರಿಚ್ ಕ್ಲಾಸೆನ್, ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್), ಮ್ಯಾಥ್ಯೂ ಬ್ರೀಟ್ಜ್ಕೆ, ಕ್ವಿಂಟನ್ ಡಿ ಕಾಕ್

ಆಲ್‌ರೌಂಡರ್‌ಗಳು: ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕೀಮೋ ಪಾಲ್ (ವೆಸ್ಟ್ ಇಂಡೀಸ್), ವಿಯಾನ್ ಮುಲ್ಡರ್, ಕ್ರಿಶ್ಚಿಯನ್ ಜೋಂಕರ್, ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್), ಕೈಲ್ ಮೇಯರ್ಸ್ (ವೆಸ್ಟ್ ಇಂಡೀಸ್)

ಬೌಲರ್‌ಗಳು: ಕೈಲ್ ಅಬಾಟ್, ಸೈಮನ್ ಹಾರ್ಮರ್, ಜೂನಿಯರ್ ಡಾಲಾ, ದಿಲ್ಶನ್ ಮಧುಶಂಕ (ಶ್ರೀಲಂಕಾ), ರೀಸ್ ಟೋಪ್ಲಿ (ಇಂಗ್ಲೆಂಡ್), ಪೆನೆಲನ್ ಸುಬ್ರಾಯೆನ್

SA20 League 2023 Auction: ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಅನ್‌ಸೋಲ್ಡ್‌

ಜೋಬರ್ಗ್‌ ಸೂಪರ್ ಕಿಂಗ್ಸ್‌ ಸ್ಕ್ವಾಡ್

ಜೋಬರ್ಗ್‌ ಸೂಪರ್ ಕಿಂಗ್ಸ್‌ ಸ್ಕ್ವಾಡ್

ಚೆನ್ನೈ ಸೂಪರ್‌ ಕಿಂಗ್ಸ್‌ ಲಿಮಿಟೆಡ್‌ ಮಾಲಿಕತ್ವದ ದಕ್ಷಿಣ ಆಫ್ರಿಕಾ ಟಿ20 ಲೀಗ್ ಫ್ರಾಂಚೈಸಿ ಜೋಬರ್ಗ್‌ ಸೂಪರ್ ಕಿಂಗ್ಸ್‌ ಒಟ್ಟು 17 ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಇದರಲ್ಲಿ 7 ವಿದೇಶಿ ಆಟಗಾರರು ಸೇರಿದ್ದಾರೆ. ಬಹುತೇಕ ಈ ತಂಡವನ್ನ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ.

ಬ್ಯಾಟರ್ಸ್: ಫಾಫ್ ಡು ಪ್ಲೆಸಿಸ್, ಡೊನಾವೊನ್ ಫೆರೇರಾ, ಜನ್ನೆಮನ್ ಮಲನ್, ರೀಜಾ ಹೆಂಡ್ರಿಕ್ಸ್, ಹ್ಯಾರಿ ಬ್ರೂಕ್ (ಇಂಗ್ಲೆಂಡ್), ಕೈಲ್ ವೆರ್ರೆನ್ನೆ, ಲ್ಯೂಸ್ ಡು ಪ್ಲೂಯ್

ಆಲ್‌ರೌಂಡರ್‌ಗಳು: ಜಾರ್ಜ್ ಗಾರ್ಟನ್ (ಇಂಗ್ಲೆಂಡ್), ಲೆವಿಸ್ ಗ್ರೆಗೊರಿ (ಇಂಗ್ಲೆಂಡ್), ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್)

ಬೌಲರ್‌ಗಳು: ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್), ಲಿಜಾದ್ ವಿಲಿಯಮ್ಸ್, ಕ್ಯಾಲೆಬ್ ಸೆಲೆಕಾ, ನಾಂದ್ರೆ ಬರ್ಗರ್, ಮಾಲುಸಿ ಸೊಬೊಟೊ, ಮಹೇಶ್ ತೀಕ್ಷಣ (ಶ್ರೀಲಂಕಾ), ಗೆರ್ಲ್ಯಾಂಡ್ ಕೊಯೆಟ್ಜಿ

ಎಂಐ ಕೇಪ್‌ ಟೌನ್‌ ಸ್ಕ್ವಾಡ್‌

ಎಂಐ ಕೇಪ್‌ ಟೌನ್‌ ಸ್ಕ್ವಾಡ್‌

ರಿಲಿಯನ್ಸ್ ಇಂಡಿಯನ್ಸ್ ಲಿಮಿಟೆಡ್‌ ಮಾಲೀಕತ್ವದ ಮುಂಬೈ ಕೇಪ್‌ಟೌನ್‌ ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದಿರುವ ಮುಂಬೈ ಮಾಲೀಕತ್ವದ ಫ್ರಾಂಚೈಸಿ ದಕ್ಷಿಣ ಆಫ್ರಿಕಾ ತಂಡಕ್ಕೂ ಉತ್ತಮ ಆಟಗಾರರ ಆಯ್ಕೆಯಲ್ಲಿ ಯಶಸ್ವಿಯಾಗಿದೆ. ಒಟ್ಟು 17 ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದ್ದು, ಇದರಲ್ಲಿ 6 ವಿದೇಶಿ ಆಟಗಾರರನ್ನು ಒಳಗೊಂಡಿದೆ.

ಬ್ಯಾಟರ್ಸ್: ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೆವಾಲ್ಡ್ ಬ್ರೆವಿಸ್, ರಯಾನ್ ರಿಕೆಲ್ಟನ್, ಗ್ರಾಂಟ್ ರೋಲೋಫ್ಸೆನ್, ವೆಬ್ಲಿ ಮಾರ್ಷಲ್

ಆಲ್ ರೌಂಡರ್‌ಗಳು: ಓಡಿಯನ್ ಸ್ಮಿತ್ (ವೆಸ್ಟ್ ಇಂಡೀಸ್), ಜಾರ್ಜ್ ಲಿಂಡೆ, ಡುವಾನ್ ಜಾನ್ಸೆನ್, ಡೆಲಾನೊ ಪಾಟ್‌ಗೀಟರ್, ರಶೀದ್ ಖಾನ್ (ಅಫ್ಘಾನಿಸ್ತಾನ), ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್), ಸ್ಯಾಮ್ ಕುರಾನ್ (ಇಂಗ್ಲೆಂಡ್)

ಬೌಲರ್‌ಗಳು: ಬ್ಯೂರಾನ್ ಹೆಂಡ್ರಿಕ್ಸ್, ಓಲಿ ಸ್ಟೋನ್ (ಇಂಗ್ಲೆಂಡ್), ವಕಾರ್ ಸಲಾಮ್‌ಖೈಲ್ (ಅಫ್ಘಾನಿಸ್ತಾನ), ಜಿಯಾದ್ ಅಬ್ರಹಾನ್ಸ್, ಕಗಿಸೊ ರಬಾಡ.

Ind vs Aus: ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11 ತಿಳಿಸಿದ ವಾಸಿಂ ಜಾಫರ್ , ರಿಷಭ್ ಪಂತ್‌ಗಿಲ್ಲ ಸ್ಥಾನ

ಪರ್ಲ್ ರಾಯಲ್ಸ್‌ ಸಂಪೂರ್ಣ ಸ್ಕ್ವಾಡ್

ಪರ್ಲ್ ರಾಯಲ್ಸ್‌ ಸಂಪೂರ್ಣ ಸ್ಕ್ವಾಡ್

ರಾಜಸ್ತಾನ್ ರಾಯಲ್ಸ್ ಮಾಲೀಕತ್ವದ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್‌ ದಕ್ಷಿಣ ಆಪ್ರಿಕಾ ಟಿ20 ಲೀಗ್‌ನಲ್ಲಿ ಪರ್ಲ್‌ ರಾಯಲ್ಸ್‌ ಎಂಬ ಸ್ಕ್ವಾಡ್ ಅನ್ನು ಖರೀದಿಸಿದೆ. ಒಟ್ಟು 17 ಆಟಗಾರರನ್ನ ಬಿಡ್ಡಿಂಗ್‌ನಲ್ಲಿ ಖರೀದಿಸಿದ್ದು, ಕೇವಲ 5 ಆಟಗಾರರಿಗೆ ಮಾತ್ರ ಮಣೆ ಹಾಕಿದೆ.

ಬ್ಯಾಟರ್ಸ್: ಜೇಸನ್ ರಾಯ್ (ಇಂಗ್ಲೆಂಡ್), ಇಯಾನ್ ಮಾರ್ಗನ್ (ಇಂಗ್ಲೆಂಡ್), ಡೇನ್ ವಿಲಾಸ್, ಮಿಥ್ಸೆಲ್ ವ್ಯಾನ್ ಬ್ಯೂರೆನ್, ವಿಹಾನ್ ಲುಬ್ಬೆ, ಜೋಸ್ ಬಟ್ಲರ್ (ಇಂಗ್ಲೆಂಡ್), ಡೇವಿಡ್ ಮಿಲ್ಲರ್.

ಆಲ್‌ರೌಂಡರ್‌ಗಳು: ಫೆರಿಸ್ಕೊ ಆಡಮ್ಸ್, ಇಮ್ರಾನ್ ಮನಾಕ್, ಕೋಡಿ ಯೂಸುಫ್, ಈವನ್ ಜೋನ್ಸ್.

ಬೌಲರ್‌ಗಳು: ತಬ್ರೈಜ್ ಶಮ್ಸಿ, ಲುಂಗಿ ಎನ್‌ಗಿಡಿ, ಬಿ ಜಾರ್ನ್ ಫಾರ್ಟುಯಿನ್, ರಾಮನ್ ಸಿಮಂಡ್ಸ್ (ವೆಸ್ಟ್ ಇಂಡೀಸ್), ಓಬೆಡ್ ಮೆಕಾಯ್ (ವೆಸ್ಟ್ ಇಂಡೀಸ್), ಕಾರ್ಬಿನ್ ಬಾಷ್

Ind vs Aus 1st T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಂ, ಪಿಚ್ ರಿಪೋರ್ಟ್‌, ಸಂಭಾವ್ಯ ಪ್ಲೇಯಿಂಗ್ 11

ಪ್ರಿಟೋರಿಯಾ ಕ್ಯಾಪಿಟಲ್ಸ್‌ ಸಂಪೂರ್ಣ ಸ್ಕ್ವಾಡ್

ಪ್ರಿಟೋರಿಯಾ ಕ್ಯಾಪಿಟಲ್ಸ್‌ ಸಂಪೂರ್ಣ ಸ್ಕ್ವಾಡ್

ಖ್ಯಾತ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಮಾಲೀಕತ್ವದ ಪ್ರಿಟೋರಿಯಾ ಕ್ಯಾಪಿಟಲ್ಸ್‌ ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 17 ಆಟಗಾರರನ್ನ ತನ್ನ ತಂಡಕ್ಕೆ ಸೇರಿಸಿಕೊಂಡಿದ್ದು, ಇದರಲ್ಲಿ ಆರು ವಿದೇಶಿ ಆಟಗಾರರು ಒಳಗೊಂಡಿದ್ದಾರೆ. ರಾಷ್ಟ್ರೀಯ ತಂಡ ತೊರೆದ ನ್ಯೂಜಿಲೆಂಡ್‌ನ ಜೇಮ್ಸ್‌ ನೀಶಮ್ ಸೇರಿದಂತೆ ಪ್ರಮುಖ ಆಟಗಾರರು ಈ ತಂಡದಲ್ಲಿದ್ದಾರೆ.

ಬ್ಯಾಟರ್ಸ್: ರಿಲೀ ರೊಸ್ಸೌ, ಫಿಲ್ ಸಾಲ್ಟ್ (ಇಂಗ್ಲೆಂಡ್), ಕುಸಲ್ ಮೆಂಡಿಸ್ (ಶ್ರೀಲಂಕಾ), ವಿಲ್ ಜ್ಯಾಕ್ಸ್ (ಇಂಗ್ಲೆಂಡ್), ಕ್ಯಾಮರೂನ್ ಡೆಲ್ಪೋರ್ಟ್, ಥೀನಿಸ್ ಡಿ ಬ್ರುಯಿನ್, ಮಾರ್ಕೊ ಮರೈಸ್.

ಆಲ್ ರೌಂಡರ್‌ಗಳು: ಜೇಮ್ಸ್ ನೀಶಮ್ (ನ್ಯೂಜಿಲೆಂಡ್), ವೇಯ್ನ್ ಪಾರ್ನೆಲ್, ಈಥನ್ ಬಾಷ್, ಶೇನ್ ಡ್ಯಾಡ್ಸ್‌ವೆಲ್

ಬೌಲರ್‌ಗಳು: ಜೋಶ್ ಲಿಟಲ್ (ಐರ್ಲೆಂಡ್), ಆದಿಲ್ ರಶೀದ್ (ಇಂಗ್ಲೆಂಡ್), ಶಾನ್ ವಾನ್ ಬರ್ಗ್, ಡೇರಿನ್ ಡುಪಾವಿಲ್ಲನ್, ಆನ್ರಿಚ್ ನಾರ್ಟ್ಜೆ, ಮೈಕಲ್ ಪ್ರಿಟೋರಿಯಸ್.

ಸನ್‌ರೈಸರ್ಸ್ ಈಸ್ಟ್ರನ್ ಕೇಪ್‌ಟೌನ್‌ ಸ್ಕ್ವಾಡ್

ಸನ್‌ರೈಸರ್ಸ್ ಈಸ್ಟ್ರನ್ ಕೇಪ್‌ಟೌನ್‌ ಸ್ಕ್ವಾಡ್

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ಮಾಲೀಕತ್ವದ ಸನ್‌ ಟಿವಿ ನೆಟ್‌ವರ್ಕ್ ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟ್ರನ್ ಕೇಪ್‌ಟೌನ್‌ ಫ್ರಾಂಚೈಸಿಯನ್ನ ಒಳಗೊಂಡಿದೆ. ಹರಾಜು ಪ್ರಕ್ರಿಯೆಯಲ್ಲಿ ಕಾವ್ಯ ಮಾರನ್ ಭಾಗಿಯಾಗಿದ್ದು, 17 ಆಟಗಾರರ ಖರೀದಿಯಲ್ಲಿ 7 ವಿದೇಶಿ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಿದ್ದಾರೆ.

ಬ್ಯಾಟರ್ಸ್: ಟ್ರಿಸ್ಟಾನ್ ಸ್ಟಬ್ಸ್, ಸರೆಲ್ ಎರ್ವೀ, ಜೋರ್ಡಾನ್ ಕಾಕ್ಸ್ (ಇಂಗ್ಲೆಂಡ್), ಆಡಮ್ ರೋಸಿಂಗ್ಟನ್ (ಇಂಗ್ಲೆಂಡ್), ಮಾರ್ಕ್ವೆಸ್ ಅಕರ್ಮನ್, ಏಡೆನ್ ಮಾರ್ಕ್ರಾಮ್.

ಆಲ್‌ರೌಂಡರ್‌ಗಳು: ಮಾರ್ಕೊ ಜಾನ್ಸೆನ್, ಸಿಸಂಡಾ ಮಗಾಲಾ, ಬ್ರೈಡನ್ ಕಾರ್ಸೆ (ಇಂಗ್ಲೆಂಡ್), ಜೆಜೆ ಸ್ಮಟ್ಸ್, ಟಾಮ್ ಅಬೆಲ್ (ಇಂಗ್ಲೆಂಡ್), ಅಯಾ ಗ್ಕಮಾನೆ, ರೋಫ್ ವ್ಯಾನ್ ಡೆರ್ ಮೆರ್ವೆ, ಜೇಮ್ಸ್ ಫುಲ್ಲರ್ (ಇಂಗ್ಲೆಂಡ್).

ಬೌಲರ್‌ಗಳು: ಮೇಸನ್ ಕ್ರೇನ್ (ಇಂಗ್ಲೆಂಡ್), ಜುನೈದ್ ದಾವೂದ್, ಒಟ್ನೀಲ್ ಬಾರ್ಟ್‌ಮನ್

Story first published: Tuesday, September 20, 2022, 10:21 [IST]
Other articles published on Sep 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+