
25 ಎಸೆತಗಳಲ್ಲಿ ಅಜೇಯ 61 ರನ್ ಕಲೆಹಾಕಿದ ಸೂರ್ಯ
ನಾಲ್ಕನೇ ಕ್ರಮಾಂಕದಲ್ಲಿ ಭಾರತದ ಪರ ಕಣಕ್ಕಿಳಿಯುವ ಸೂರ್ಯಕುಮಾರ್ ಯಾದವ್ ಜಿಂಬಾಬ್ವೆ ವಿರುದ್ಧ ಅತ್ಯಮೋಘ ಆಟವನ್ನು ಪ್ರದರ್ಶಿಸಿದರು. ರೋಹಿತ್ ಶರ್ಮಾ 15, ವಿರಾಟ್ ಕೊಹ್ಲಿ 26 ರನ್‌ಗಳಿಸಿ ನಿರ್ಗಮಿಸಿದ ಬಳಿಕ ಕ್ರೀಸ್‌ಗಿಳಿದ ಸೂರ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಜಿಂಬಾಬ್ವೆ ಬೌಲರ್‌ಗಳನ್ನ ಧೂಳೀಪಟ ಮಾಡಿದರು.
25 ಎಸೆತಗಳಲ್ಲಿ ಅಜೇಯ 61 ರನ್ ಸಿಡಿಸಿದ ಸೂರ್ಯಕುಮರ್ ಯಾದವ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ಗಳು ಒಳಗೊಂಡಿದ್ದವು. 244.00 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ ಮಿಂಚಿನ ಆಟವಾಡುವ ಮೂಲಕ ಟೀಂ ಇಂಡಿಯಾ ಸ್ಕೋರ್ ಅನ್ನು 180ರ ಗಡಿದಾಟಿಸಿದ್ರು.
ಕೆ.ಎಲ್ ಅರ್ಧಶತಕ ದಾಖಲಿಸಿ ಔಟಾದ ಬಳಿಕ ಸೂರ್ಯಕುಮಾರ್‌ಗೆ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಸಾಥ್ ನೀಡಲಿಲ್ಲ. ಆದ್ರೂ ಸೂರ್ಯ ತನ್ನ ಸಿಡಿಲಬ್ಬರದ ಆಟವನ್ನು ಮುಂದುವರಿಸಿದರ ಪರಿಣಾಮ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು. ಈ ಸವಾಲಿನ ಗುರಿ ಬೆನ್ನತ್ತಿದ ಜಿಂಬಾಬ್ವೆ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿದ್ದಲ್ಲದೆ ಕೇವಲ 115 ರನ್‌ಗಳಿಗೆ ಸರ್ವಪತನಗೊಂಡಿತು. ಪರಿಣಾಮ ಭಾರತ 71ರನ್‌ಗಳ ಬೃಹತ್ ಗೆಲುವಿನ ಜೊತೆಗೆ ಗ್ರೂಪ್ 2 ಅಗ್ರಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿತು.
IND vs NED: ಸೂರ್ಯನ ಆಟಕ್ಕೆ ಮನಸೋತ ಮಾಜಿ ಕ್ರಿಕೆಟಿಗರು; ಸೆಹ್ವಾಗ್ ಟ್ವೀಟ್ ಅದ್ಭುತ!

ಎಬಿ ಡಿವಿಲಿಯರ್ಸ್‌ಗೆ ಸೂರ್ಯಕುಮಾರ್ ಯಾದವ್ ಹೋಲಿಕೆ!
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್‌ರನ್ನು ಲೆಜೆಂಡರಿ ಬ್ಯಾಟರ್ ಮಿಸ್ಟರ್ 360 ಎಬಿ ಡಿವಿಲಿಯರ್ಸ್‌ಗೆ ಹೋಲಿಗೆ ಮಾಡಿದ್ದರೆ ಜೊತೆಗೆ ಹೇಗೆ ಸೂರ್ಯನಿಗೆ ಈ ಮಟ್ಟಿನ ಪ್ರದರ್ಶನ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಭಾರತದ ಪರ 360 ಡಿಗ್ರಿ ಪ್ಲೇಯರ್ ಆಗಿರುವ ಸೂರ್ಯಕುಮಾರ್ ಯಾದವ್ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಕಡಿಮೆ ಸಮಯದಲ್ಲೇ ಭಾರೀ ಚಾಪು ಮೂಡಿಸಿದ್ದಾರೆ.
'' ನಾನು ಯಾರೊಂದಿಗೆ ಆಟಗಾರರನ್ನ ಹೋಲಿಸಲು ಇಷ್ಟ ಪಡುವುದಿಲ್ಲ. ಆದ್ರೆ ಎಬಿ ಡಿವಿಲಿಯರ್ಸ್ ಸಮೀಪದಲ್ಲಿ ಯಾರಾದ್ರೂ ಬ್ಯಾಟಿಂಗ್ ಮಾಡುತ್ತಿದ್ರೆ ಅದು ಸೂರ್ಯಕುಮಾರ್ ಯಾದವ್. ಆತ 360 ಡಿಗ್ರಿ ಪ್ಲೇಯರ್ ಆಗಿದ್ದು ಆತನ್ನು ಕಟ್ಟಿ ಹಾಕುವುದು ಅಸಾಧ್ಯವಾಗಿದೆ. ವೇಗದ ಬಾಲ್ ಆಗಿರಲಿ, ಔಟ್‌ಸೈಡ್ ಆಫ್ ಅಥವಾ ಶಾರ್ಟ್ ಬಾಲ್ ಹಾಕಿದರೂ ಆತನಿಗೆ ಎಲ್ಲಿಗೆ ಚೆಂಡನ್ನು ಎಸೆದರೂ ತಲೆಕೆಡಿಸಿಕೊಳ್ಳುವುದಿಲ್ಲ, ಚೆಂಡು ಬೌಂಡರಿ ಗೆರೆ ದಾಟುತ್ತದೆ. ಸೂರ್ಯ ತನ್ನ ಜೀವನದ ಅತ್ಯುನ್ನತ ಫಾರ್ಮ್‌ನಲ್ಲಿದ್ದಾರೆ. ಆತನ ಕೆಲವು ಶಾಟ್‌ಗಳಂತೂ ಅದ್ಭುತವಾಗಿವೆ. ಆತ ಶಾಟ್‌ಗಳು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತವೆ'' ಎಂದು ಬ್ಯಾಟ್‌ಬ್ರಿಕ್ಸ್ 7 ಪ್ರಸ್ತುತ ಪಡಿಸುವ ರನ್ ಕಿ ರಣನೀತಿ ಕಾರ್ಯಕ್ರಮದಲ್ಲಿ ಕೋಬಸ್ ತಿಳಿಸಿದ್ದಾರೆ.
ಸೂರ್ಯಕುಮಾರ್ ಬ್ಯಾಟಿಂಗ್ ಉಲ್ಲೇಖಿಸಿ ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ ಸುನಿಲ್ ಗವಾಸ್ಕರ್!

ಸೂರ್ಯಕುಮಾರ್ ತನ್ನದೇ ಆದ ಲೋಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ!
ಐದು ಪಂದ್ಯಗಳಲ್ಲಿ 225 ರನ್ ಕಲೆ ಹಾಕಿರುವ ಸೂರ್ಯಕುಮಾರ್ ಯಾದವ್ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಆತ ಭಾರತದ ಗೆಲುವಿನಲ್ಲಿ ಬಹಳ ಪ್ರಮುಖ ಪಾತ್ರವಹಿಸಿದ್ದು, ವಿರಾಟ್ ಕೊಹ್ಲಿ ಜೊತೆಯಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 193.96 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಸೂರ್ಯ, ಪ್ರಸ್ತುತ ಟೂರ್ನಮೆಂಟ್‌ನಲ್ಲ ಕನಿಷ್ಠ 50 ರನ್ ಕಲೆಹಾಕಿದ ಬ್ಯಾಟರ್‌ಗಳಲ್ಲಿ ಅತಿ ಹೆಚ್ಚಿನ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.
'' ಟಿ20 ವಿಶ್ವಕಪ್‌ಗಾಗಿ ಸಿದ್ಧಪಡಿಸಿರುವ ಆಸ್ಟ್ರೇಲಿಯಾದ ತುಂಬಾ ಚೆನ್ನಾಗಿವೆ. ಚೆಂಡು ನೇರವಾಗಿ ಬ್ಯಾಟ್‌ಗೆ ಬರುತ್ತಿದೆ, ಇದ್ರಿಂದಾಗಿ ಬ್ಯಾಟ್ಸ್‌ಮನ್ ಆ ರೀತಿಯಾದಂತಹ ಶಾಟ್‌ಗಳನ್ನು ಹೊಡೆಯಲು ಸಾಧ್ಯವಾಗಿದೆ. ಆತ (ಸೂರ್ಯಕುಮಾರ್) ತನ್ನ ಆದೇ ಲೋಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಆ ರೀತಿಯ ಅದ್ಭುತ ಶಾಟ್‌ಗಳನ್ನು ಹೊಡೆಯಲು ಸಾಧ್ಯವಾಗಿದೆ'' ಎಂದು ಕೋಬಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ.


Click it and Unblock the Notifications












