ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM: ಸೂರ್ಯನ ಆಟಕ್ಕೆ ಮನಸೋತ ಮಾಜಿ ಕ್ರಿಕೆಟಿಗರು; ಸೆಹ್ವಾಗ್ ಟ್ವೀಟ್ ಅದ್ಭುತ!

T20 World Cup: Former Cricketers Including Virender Sehwag Praised Suryakumar Yadavs Batting Performance

ನವೆಂಬರ್ 6ರ ಭಾನುವಾರದಂದು ಮೆಲ್ಬೋರ್ನ್‌ನಲ್ಲಿ ನಡೆದ ಅಂತಿಮ ಪಂದ್ಯವನ್ನು 71 ರನ್‌ಗಳಿಂದ ಗೆದ್ದ ಭಾರತ ತಂಡವು ಟಿ20 ವಿಶ್ವಕಪ್‌ನ ಸೂಪರ್-12 ಹಂತವನ್ನು ಸಮಗ್ರ ಗೆಲುವಿನೊಂದಿಗೆ ಮುಕ್ತಾಯಗೊಳಿಸಿತು.

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತವನ್ನು ಗೆಲ್ಲಿಸಿದರು ಮತ್ತು ಪಂದ್ಯಾವಳಿಯ ಸೆಮಿಫೈನಲ್‌ಗೆ ಅಧಿಕೃತ ಪ್ರವೇಶ ಪಡೆದರು.

ಟಿ20 ವಿಶ್ವಕಪ್ 2022: ಸೂರ್ಯಕುಮಾರ್ ಈಗಾಗಲೇ ನನಗೆ ಸರಣಿ ಶ್ರೇಷ್ಠ ಆಟಗಾರ; ಗೌತಮ್ ಗಂಭೀರ್ಟಿ20 ವಿಶ್ವಕಪ್ 2022: ಸೂರ್ಯಕುಮಾರ್ ಈಗಾಗಲೇ ನನಗೆ ಸರಣಿ ಶ್ರೇಷ್ಠ ಆಟಗಾರ; ಗೌತಮ್ ಗಂಭೀರ್

2022ರ ಟಿ20 ವಿಶ್ವಕಪ್‌ನ ಅಂತಿಮ ಸೂಪರ್ 12ರ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧದ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶ್ಲಾಘಿಸಿದ್ದಾರೆ. ಸೂರ್ಯಕುಮಾರ್ ಜಿಂಬಾಬ್ವೆ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕೇವಲ 25 ಎಸೆತಗಳಲ್ಲಿ 61 ರನ್ ಸಿಡಿಸಿದರು.

ಜಿಂಬಾಬ್ವೆ ವಿರುದ್ಧದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ನಂತರ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ಹಾಡಿಹೊಗಳಿದ್ದಾರೆ.

2021ರಲ್ಲಿ ಪಾದಾರ್ಪಣೆ ಮಾಡಿದ್ದಾರೆ ಎಂದು ನಂಬುವುದು ಕಷ್ಟ

"ಸೂರ್ಯಕುಮಾರ್ ಯಾದವ್ (SKY) ವಿಶೇಷವಾಗಿದ್ದಾರೆ. ಸೂರ್ಯಕುಮಾರ್ ಯಾದವ್ (SKY) ಅಪರಿಮಿತವಾಗಿದ್ದಾರೆ. ಬ್ರಿಲಿಯಂಟ್ ಪ್ರದರ್ಶನ. ಯಾವಾಗಲೂ ವೀಕ್ಷಿಸಬಹುದಾದ ಒಂದು ಬ್ಯಾಟಿಂಗ್ ಟ್ರೀಟ್ ಆಗಿರುತ್ತದೆ," ಎಂದು ವೀರೇಂದ್ರ ಸೆಹ್ವಾಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಲೆಜೆಂಡರಿ ಕ್ರಿಕೆಟಿಗ ಇಯಾನ್ ಬಿಷಪ್ ಕೂಡ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸೂರ್ಯಕುಮಾರ್ ಅವರನ್ನು ಬ್ಯಾಟಿಂಗ್ ಬೀಸ್ಟ್ ಎಂದು ಕರೆದಿದ್ದಾರೆ. "ಸೂರ್ಯಕುಮಾರ್ ಒಬ್ಬ ಬ್ಯಾಟಿಂಗ್ ಮೃಗ. ಅವರು 2021ರಲ್ಲಿ ಪಾದಾರ್ಪಣೆ ಮಾಡಿದ್ದಾರೆ ಎಂದು ನಂಬುವುದು ಕಷ್ಟ. ಎಂತಹ ಅದ್ಭುತ ಆಟಗಾರ," ಎಂದು ಇಯಾನ್ ಬಿಷಪ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪ್ರಪಂಚ ಹಲವು ವಿಷಯಗಳನ್ನು ಕಲಿಯಬಹುದು

ಇನ್ನು ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಕೂಡ ಮೆಲ್ಬೋರ್ನ್‌ ಮೈದಾನದಲ್ಲಿ ಬಿರುಸಿನ ಪ್ರದರ್ಶನ ನೀಡಿದ ನಂತರ ಸೂರ್ಯಕುಮಾರ್ ಯಾದವ್‌ಗೆ ಸಂದೇಶದ ಪೋಸ್ಟ್ ಮಾಡಿದ್ದಾರೆ. "ಸೂರ್ಯಕುಮಾರ್ ಯಾದವ್‌ನಿಂದ ಈ ಪ್ರಪಂಚ ಹಲವು ವಿಷಯಗಳನ್ನು ಕಲಿಯಬಹುದು. ಬ್ಯಾಟಿಂಗ್‌ ಸಿಕ್ರೇಟ್ ಕೋಡ್ ಅನ್ನು ನಮ್ಮೊಂದಿಗೆ ಏಕೆ ಹಂಚಿಕೊಳ್ಳಬಾರದು," ಎಂದು ಲಿಸಿತ್ ಮಾಲಿಂಗ ತಿಳಿಸಿದ್ದಾರೆ.

ಇದೇ ವೇಳೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್ ಕೂಡ ಸೂರ್ಯಕುಮಾರ್ ಯಾದವ್ ಅವರ ಇನ್ನಿಂಗ್ಸ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಟಾಪ್ ಕ್ಲಾಸ್ ವೇಗಿಗಳು ಅಥವಾ ಸ್ಪಿನ್ನರ್‌ಗಳು, ಟರ್ನಿಂಗ್ ಅಥವಾ ಸೀಮಿಂಗ್ ಪಿಚ್‌ಗಳು, ಕಷ್ಟಕರವಾದ ಪಂದ್ಯದ ಪರಿಸ್ಥಿತಿ, ಇದು ಯಾವುದೂ ಸೂರ್ಯಕುಮಾರ್ ಯಾದವ್ ಅವರನ್ನು ಕಾಡುವುದಿಲ್ಲ. ಸೂರ್ಯ ಡೇರಿಂಗ್ ಹೈ," ಎಂದು ಕೈಫ್ ತಮ್ಮ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

2022ರಲ್ಲಿ 28 ಪಂದ್ಯಗಳಲ್ಲಿ 1026 ರನ್

2022ರಲ್ಲಿ 28 ಪಂದ್ಯಗಳಲ್ಲಿ 1026 ರನ್

ಸೂರ್ಯಕುಮಾರ್ ಯಾದವ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಭಾರತದ 4ನೇ ವೇಗದ ಅರ್ಧಶತಕ ಬಾರಿಸಿದರು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಸಮಯದಲ್ಲಿ, ಅವರು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಪಂದ್ಯಗಳಲ್ಲಿ 1000 ರನ್ ಪೂರೈಸಿದ ವಿಶ್ವ ಕ್ರಿಕೆಟ್‌ನಲ್ಲಿ 2ನೇ ಬ್ಯಾಟರ್ ಆದರು. ಇದಕ್ಕೂ ಮೊದಲು, ಅಂದರೆ 2021ರಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 1000 ರನ್ ಪೂರೈಸಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು 2022ರಲ್ಲಿ 28 ಪಂದ್ಯಗಳಲ್ಲಿ 1026 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯರಾದರು. ಸದ್ಯ ಸೂರ್ಯಕುಮಾರ್ 23 ಪಂದ್ಯಗಳಲ್ಲಿ 924 ರನ್‌ಗಳೊಂದಿಗೆ 2022ರ ಬ್ಯಾಟಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರಿಗಿಂತ ಸಾಕಷ್ಟು ಮುಂದಿದ್ದಾರೆ.

ಭಾನುವಾರ ಅಡಿಲೇಡ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡವು ದಕ್ಷಿಣ ಆಫ್ರಿಕಾವನ್ನು ಅಚ್ಚರಿಯಾಗಿ ಸೋಲಿಸಿದ ನಂತರ ಭಾರತ ಆಗಲೇ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

Story first published: Sunday, November 6, 2022, 20:48 [IST]
Other articles published on Nov 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X