ಕೊಹ್ಲಿ 3ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೋ Or ಇಲ್ಲವೋ?: ಮಹತ್ವದ ಸುಳಿವು ನೀಡಿದ ರಾಹುಲ್ ದ್ರಾವಿಡ್

ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಗಾಯಾಳು ವಿರಾಟ್ ಕೊಹ್ಲಿ ಕುರಿತಾಗಿ ಪ್ರಮುಖ ಮಾಹಿತಿ ನೀಡಿದ್ದಾರೆ. ಜನವರಿ 11ರಂದು ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯವಿದ್ದಾರೆಯೇ? ಅಥವಾ ಇಲ್ಲವೇ ಎಂಬ ಮಾಹಿತಿ ನೀಡಿದ್ದಾರೆ.
33 ವರ್ಷದ ವಿರಾಟ್ ಕೊಹ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಬೆನ್ನು ಮೂಳೆಯ ಸೆಳೆತದಿಂದಾಗಿ ಬಳಲುತ್ತಿದ್ದ ವಿರಾಟ್, ಟಾಸ್ ಆಗುವ ಕೆಲವು ಹೊತ್ತಿನಲ್ಲಿ ಪಂದ್ಯದಿಂದ ಹೊರಗುಳಿಯುವ ನಿರ್ಧಾರ ಮಾಡಿದ್ರು. ಹೀಗಾಗಿ ವಾಂಡರರ್ಸ್ ಮೈದಾನದಲ್ಲಿ ಕೊಹ್ಲಿ ಬದಲಿಗೆ ಓಪನರ್ ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಮುನ್ನಡೆಯಿತು.

ಕೊಹ್ಲಿ ಇಲ್ಲದೆ ಪಂದ್ಯ ಕಳೆದುಕೊಂಡಿತೇ ಟೀಂ ಇಂಡಿಯಾ?
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ಕಂಡಂತಹ ಬೆಸ್ಟ್ ನಾಯಕರಾಗಿದ್ದಾರೆ. ಭಾರತಕ್ಕೆ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟಿರುವ ನಾಯಕ ಎಂಬ ಬಿರುದು ಹೊಂದಿರುವ ಕೊಹ್ಲಿ ಅಡಿಯಲ್ಲಿ 67 ಪಂದ್ಯಗಳಲ್ಲಿ 40 ಪಂದ್ಯ ಜಯಿಸಿದ್ದಾರೆ, 16 ಪಂದ್ಯಗಳಲ್ಲಿ ಭಾರತ ಸೋತಿದೆ ಮತ್ತು 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ. ಕೊಹ್ಲಿ ನಾಯಕತ್ವದಡಿಯಲ್ಲಿ ಗೆಲುವಿನ ಸರಾಸರಿ ಶೇಕಡಾ 59.7ರಷ್ಟಿದೆ.
ವಿರಾಟ್ ಕೊಹ್ಲಿ ಮೈದಾದನಲ್ಲಿ ತಮ್ಮ ಅಗ್ರೆಸ್ಸಿವ್ ಆಟದ ಜೊತೆಗೆ ರಣತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಇವರ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸಿದ ಕೆ.ಎಲ್ ರಾಹುಲ್ ಬೌಲಿಂಗ್ ಬದಲಾವಣೆ ಸೇರಿದಂತೆ ಕಾರ್ಯತಂತ್ರ ರೂಪಿಸುವಲ್ಲಿ ಹಿಂದೆ ಬಿದ್ದಿದ್ದರು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹಿ ಅನುಪಸ್ಥಿತಿ ತಂಡದಲ್ಲಿ ಎದ್ದು ಕಾಣುವಂತಿತ್ತು.
ಚೇತೇಶ್ವರ ಪೂಜಾರಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಬೆಂಬಲ!

ಕೊಹ್ಲಿ ಫಿಟ್ನೆಸ್ ಕುರಿತು ರಾಹುಲ್ ದ್ರಾವಿಡ್ ಏನೆಂದು ಹೇಳಿದ್ದಾರೆ?
"ವಿರಾಟ್ ಕೊಹ್ಲಿ ಎಲ್ಲಾ ವಿಭಾಗದಲ್ಲೂ ಚೆನ್ನಾಗಿರಬೇಕು. ಅವನಿಗೆ ಸ್ವಲ್ಪ ಓಡುವ ಅವಕಾಶ ಸಿಕ್ಕಿದೆ, ಸ್ವಲ್ಪಮಟ್ಟಿಗೆ ಪರೀಕ್ಷಿಸುವ ಅವಕಾಶವಿದೆ. ಆಶಾದಾಯಕವಾಗಿ ಕೇಪ್ ಟೌನ್‌ನಲ್ಲಿ ಒಂದೆರಡು ಸೆಷನ್ ಬಳಿಕ ಕಣಕ್ಕಿಳಿಯಬಹುದು. ನಾನು ಹೇಳುತ್ತಿರುವ ಎಲ್ಲವೂ ಆತನೊಂದಿಗೆ ಮಾತನಾಡಿದ ವಿಚಾರವಾಗಿದೆ. ಹೀಗಾಗಿ ಇನ್ನು ನಾಲ್ಕು ದಿಗನಳಲ್ಲಿ ಆತ ಫಿಟ್ ಆಗಿ ಕಣಕ್ಕಿಳಿಯಬಹುದು''ಎಂದು ದ್ರಾವಿಡ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಿನಗೆ ಅರ್ಧಂಭರ್ದ ಗೊತ್ತಿದ್ರೆ, ಬಾಯಿ ಮುಚ್ಚಿಕೊಂಡಿರು ಎಂದ ರಿಷಭ್ ಪಂತ್ !

ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಶಾಕ್ ನೀಡಿದ್ದ ಕೊಹ್ಲಿ ಅನುಪಸ್ಥಿತಿ
ಜೋಹಾನ್ಸ್‌ಬರ್ಗ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ವೇಳೆವರೆಗೂ ವಿರಾಟ್ ಕೊಹ್ಲಿ ಈ ಪಂದ್ಯ ಆಡುತ್ತಿಲ್ಲ ಎಂಬ ಯಾವುದೇ ಸುಳಿವು ಕೂಡ ಸಿಕ್ಕಿರಲಿಲ್ಲ. ಟಾಸ್ ವೇಳೆಯಲ್ಲಿ ಭಾರತ ಪರ ಕೆ.ಎಲ್ ರಾಹುಲ್ ಕಣಕ್ಕಿಳಿದ ನಂತರವಷ್ಟೇ ವಿರಾಟ್ ಕೊಹ್ಲಿ ಈ ಪಂದ್ಯದಿಂದ ಮಿಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಬಿಸಿಸಿಐ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಕೊಹ್ಲಿ ಆಡುತ್ತಿಲ್ಲ, ಕೆ.ಎಲ್ ರಾಹುಲ್ ನಾಯಕನಾಗಿದ್ದಾರೆ ಎಂದು ತಿಳಿಸಿತು. ವಿರಾಟ್ ಕೊಹ್ಲಿ ಬದಲಿಗೆ ಹನುಮ ವಿಹಾರಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ರು.

ಕೇಪ್‌ಟೌನ್‌ನಲ್ಲಿ ಡಿಸೈಡರ್ ಪಂದ್ಯ
ಈಗಾಗಲೇ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿರುವ ಉಭಯ ತಂಡಗಳು ಕೇಪ್‌ಟೌನ್‌ನಲ್ಲಿ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ದ್ವಿತೀಯ ಟೆಸ್ಟ್ ಪಂದ್ಯವನ್ನ ಸುಲಭವಾಗಿ ಗೆದ್ದ ದಕ್ಷಿಣ ಆಫ್ರಿಕಾ ದೊಡ್ಡ ಮಟ್ಟಿನ ಆತ್ಮವಿಶ್ವಾಸದಿಂದ ಕೊನೆಯ ಟೆಸ್ಟ ಪಂದ್ಯವನ್ನಾಡಲಿದೆ. ಆದ್ರೆ ಭಾರತದ ಪಾಳಯದಲ್ಲಿ ವಿರಾಟ್ ಕೊಹ್ಲಿ ಆಡುತ್ತಾರ ಅಥವಾ ಇಲ್ಲವೆ ಎಂಬುದು ಇನ್ನೂ ಖಚಿತವಾಗಿಲ್ಲ. ಇದರ ನಡುವೆ ಜೋಹಾನ್ಸ್‌ಬರ್ಗ್ ಸೋಲು ಟೀಂ ಇಂಡಿಯಾಗೆ ಪೆಟ್ಟು ನೀಡಿದೆ. ಹೀಗಾಗಿ ಅಂತಿಮ ಪಂದ್ಯವು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications