ನಿನಗೆ ಅರ್ಧಂಭರ್ದ ಗೊತ್ತಿದ್ರೆ, ಬಾಯಿ ಮುಚ್ಚಿಕೊಂಡಿರು ಎಂದ ರಿಷಭ್ ಪಂತ್ !

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟಕ್ಕೆ ಈಗಾಗಲೇ ಮಳೆ ಅಡ್ಡಿಪಡಿಸಿದೆ. ದಕ್ಷಿಣ ಆಫ್ರಿಕಾಗೆ ಪಂದ್ಯ ಗೆಲ್ಲಲು 122 ರನ್‌ಗಳ ಅವಶ್ಯಕತೆಯಿದ್ದು, ಟೀಂ ಇಂಡಿಯಾ ಗೆಲುವಿಗೆ 8 ವಿಕೆಟ್‌ಗಳು ಬಾಕಿ ಇದೆ.
ಮೂರನೇ ದಿನದಾಟದಲ್ಲಿ ಸಾಕಷ್ಟು ಏರಿಳಿತ ಕಂಡ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಮತ್ತು ರಹಾನೆ ಟೀಂ ಇಂಡಿಯಾವನ್ನ 200ರ ಗಡಿದಾಟಿಸಲು ನೆರವಾದ್ರು. ಹನುಮ ವಿಹಾರಿ ಕೂಡ ಉತ್ತಮ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ್ರು. ಇದ್ರ ನಡುವೆ ಅತ್ಯಂತ ಕೆಟ್ಟದಾಗಿ ವಿಕೆಟ್ ಒಪ್ಪಿಸಿದ್ದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್.
ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಸ್ಲೆಡ್ಜಿಂಗ್ ನಡುವೆ ತನ್ನ ತಾಳ್ಮೆ ಕಳೆದುಕೊಂಡ ರಿಷಭ್ ಪಂತ್ ಆತುರದ ನಿರ್ಧಾರಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ರು.

ರಿಷಭ್ ಪಂತ್ ಮತ್ತು ರಾಸ್ಸಿ ನಡುವೆ ಆನ್‌ಫೀಲ್ಡ್ ಕಿರಿಕ್
ರಿಷಭ್ ಪಂತ್ ಬ್ಯಾಟಿಂಗ್‌ಗೆ ಕಣಕ್ಕಿಳಿಯುವ ಮೊದಲೇ ಪಂತ್ ಮೇಲೆ ಸಾಕಷ್ಟು ಕೋಪಗೊಂಡಿದ್ದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಪಂತ್‌ರ ಕ್ರೀಡಾಸ್ಫೂರ್ತಿಯ ಕುರಿತು ಸ್ಲೆಡ್ಜಿಂಗ್ ಮಾಡಿದ್ರು.
ಇದ್ರಿಂದ ತಂಡಕ್ಕೆ ಅತ್ಯಂತ ಅಗತ್ಯ ಸಂದರ್ಭದಲ್ಲಿ ಬ್ಯಾಟ್ ಬೀಸುವುದನ್ನೇ ಮರೆತ ರಿಷಭ್ ಪಂತ್, ಅನಗತ್ಯ ಹೊಡೆತಕ್ಕೆ ಕೈ ಹಾಕುವ ಮೂಲಕ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಟೀಕೆಗೆ ಒಳಗಾದ್ರು. ರಬಾಡ ಬೌಲಿಂಗ್‌ನಲ್ಲಿ ಮುಂದೆ ಬಂದು ಸಿಕ್ಸರ್ ಸಿಡಿಸಲು ಹೋಗಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತರು.

ರಿಷಭ್ ಪಂತ್‌ಗೆ ಕ್ಯಾಚ್ ನೀಡಿ ಔಟಾಗಿದ್ದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ವೇಳೆಯಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ರಿಷಭ್ ಪಂತ್‌ಗೆ ಕ್ಯಾಚ್ ನೀಡಿ ರಾಸ್ಸಿ ಔಟಾಗಿದ್ದರು. ಕೇವಲ 1 ರನ್‌ಗೆ ಶಾರ್ದೂಲ್ ದಾಳಿಯಲ್ಲಿ ಚೆಂಡು ಬ್ಯಾಟ್ ಎಡ್ಜ್ ಆಗಿ ರಿಷಭ ಪಂತ ಕೈ ಸೇರಿತು. ಆನ್‌ಫೀಲ್ಡ್ ಅಂಪೈರ್ ಔಟ್ ನೀಡಿದ ತಕ್ಷಣ ಯಾವುದೇ ಪರಿಶೀಲನೆಗೆ ಮುಂದಾಗದೆ ಆತ ಪೆವಿಲಿಯನ್‌ಗೆ ಹಿಂದಿರುಗಿದರು.
ಆದಾಗ್ಯೂ, ಎರಡು ತಂಡಗಳು ವಿರಾಮವನ್ನು ತೆಗೆದುಕೊಳ್ಳುತ್ತಿರುವಾಗ, ವೀಡಿಯೋ ರೀಪ್ಲೇನಲ್ಲಿ ಚೆಂಡು ಪಂತ್ ಗ್ಲೌಸ್ ತಲುಪುವ ಮೊದಲು ನೆಲಕ್ಕೆ ತಾಗಿ ಪುಟಿಯುತ್ತಿರುವಂತೆ ಗೋಚರಿಸುತ. ಇದು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್‌ರ ಕೋಪಕ್ಕೆ ಕಾರಣವಾಗಿತ್ತು.

ಕ್ಯಾಚ್ ಕುರಿತು ಪಂತ್‌ಗೆ ಸ್ಲೆಡ್ಜ್ ಮಾಡಿದ ರಾಸ್ಸಿ
ರಿಷಭ್ ಪಂತ್ ಕ್ಲೀನ್ ಕ್ಯಾಚ್ ತೆಗೆದುಕೊಳ್ಳದೆ ಕ್ರೀಡಾಸ್ಫೂರ್ತಿ ಮೆರೆದಿಲ್ಲ ಎಂಬುದು ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ರಾಸ್ಸಿ ವಾದವಾಗಿತ್ತು. ಹೀಗಾಗಿಯೇ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದಾಗ ಅವರನ್ನ ಹೀಯಾಳಿಸುತ್ತ ಮಾತನಾಡಿದರು. ಇದರಿಂದ ಕೋಪಗೊಂಡ ರಿಷಭ್ ಪಂತ್ ಸರಿಯಾದ ಉತ್ತರವನ್ನೇ ನೀಡಿದ್ರು.
ಭಾರತದ ಬೌಲರ್‌ಗಳಿಂದ, ಪ್ರತಿ ಓವರ್‌ನಲ್ಲೂ ಹಾರ್ಟ್ ಅಟ್ಯಾಕ್ ಆದಂಗೆ ಆಗ್ತಿದೆ: ಅಂಪೈರ್
ಸರಿಯಾಗಿ ಗೊತ್ತಿಲ್ಲದಿದ್ರೆ, ಬಾಯಿ ಮುಚ್ಚಿಕೋ ಎಂದ ಪಂತ್
ಪಂತ್ ಕ್ರೀಸ್‌ಗಿಳಿಯುತ್ತಿದ್ದಂತೆ ಅವರೊಂದಿಗೆ ವಾದ ನಡೆಸುತ್ತಲೇ ಇದ್ದ ರಾಸ್ಸಿಗೆ ಪಂತ್ ಸರಿಯಾದ ಉತ್ತರ ನೀಡಿದ್ರು. ನಿನಗೆ ಆ ವಿಷಯದ ಬಗ್ಗೆ ಅರ್ಧಂಭದ್ರ ಗೊತ್ತಿದ್ರೆ ಬಾಯಿ ಮುಚ್ಚುವಂತೆ ಹೇಳಿದ್ದು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ. ಈ ಘಟನೆಯು 38 ನೇ ಓವರ್‌ನ ಕೊನೆಯಲ್ಲಿ ಸಂಭವಿಸಿತು. ಇದು ಒಂದು ರೀತಿಯಲ್ಲಿ ಪಂತ್ ಏಕಾಗ್ರತೆಯನ್ನ ಅಡ್ಡಿಪಡಿಸುವಂತಿದ್ದರೂ, ಬಹಳ ಬೇಗ ತಾಳ್ಮೆ ಕಳೆದುಕೊಂಡ ರಿಷಭ್ ಶೂನ್ಯಕ್ಕೆ ಕ್ಯಾಚಿತ್ತು ಪೆವಿಲಿಯನ್ ಸೇರಿಬಿಟ್ರು.
ಪಂತ್ ಔಟಾದ ರೀತಿಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ರ ಬ್ಯಾಟಿಂಗ್ ದಿನೇ ದಿನೇ ಕಳೆಗುಂದುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications