For Quick Alerts
ALLOW NOTIFICATIONS  
For Daily Alerts
 

ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಚೆನ್ನೈ ಗೆಲುವಿಗೆ ಪ್ರಮುಖ ಕಾರಣಗಳು ಇಲ್ಲಿವೆ

How CSK Turned Match Against Sunrisers Hyderabad: Reasons Here

ದುಬೈ ಇಂಟರ್‌ನ್ಯಾಷ್‌ನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ಗೆಲುವಿನ ನಗೆ ಬೀರಿದ್ದು, ಒಟ್ಟು ಆರು ಪಾಯಿಂಟ್ಸ್‌ಗಳೊಂದಿಗೆ ಏಳನೇ ಸ್ಥಾನದಿಂದ ಆರನೇ ಸ್ಥಾನಕ್ಕೇರಿದೆ.

ಪ್ಲೇ ಆಫ್ ಕಳೆದುಕೊಳ್ಳುವ ಭೀತಿಯಲ್ಲಿದ್ದ ಹೈದ್ರಾಬಾದ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಅಂತೆಯೇ ತನ್ನ ಹಳೆಯ ಸ್ಟ್ರೈಲ್‌ನಲ್ಲಿ 20 ರನ್‌ಗಳ ಅಂತರದಿಂದ ಎದುರಾಳಿಯಿಂದ ಗೆಲುವನ್ನು ಕಸಿದುಕೊಂಡಿತು.

ಇತರೇ ಯಾವುದೇ ಚಾಂಪಿಯನ್ ತಂಡಗಳಂತೆ ಸಿಎಸ್‌ಕೆ ಕೂಡ ಹಲವಾರು ಪ್ರದೇಶಗಳಲ್ಲಿ ಇನ್ನೂ ಕೊರತೆ ಇದೆ ಎಂದು ಒಪ್ಪಿಕೊಂಡಿದೆ ಮತ್ತು ತಿರುಗಿಸುವ ಪ್ರಯತ್ನವನ್ನು ಮುಂದುವರಿಸಿದೆ. ಆದರೆ ಸನ್‌ರೈಸರ್ಸ್ ಹೈದ್ರಾಬಾದ್‌ ವಿರುದ್ಧ ಹಳದಿ ಬ್ರಿಗೇಡ್ ರೂಪಾಂತರ ಹೇಗೆ ಸಾಧ್ಯವಾಯಿತು, ವಾರ್ನರ್ ಪಡೆಯನ್ನು ಸೋಲಿಸಿದ್ದು ಹೇಗೆ ಎಂಬುದರ ಕುರಿತಾಗಿ ಇಲ್ಲಿ ಬೆಳಕು ಚೆಲ್ಲಲಾಗಿದೆ.

1. ಓಪನರ್ ಆಗಿ ಸ್ಯಾಮ್ ಕರ್ರನ್

1. ಓಪನರ್ ಆಗಿ ಸ್ಯಾಮ್ ಕರ್ರನ್

ಐಪಿಎಲ್ 2020 ರ ಆರಂಭದಿಂದಲೂ ಆಲ್‌ರೌಂಡರ್ ಸ್ಯಾಮ್ ಕರ್ರನ್ ಉತ್ತಮ ಸ್ಟ್ರೈಕ್‌ರೇ್ ಹೊಂದಿದ್ದರು. ಆದರೆ ಆಗಾಗ್ಗೆ ಅವರು ಈ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಸಿಕ್ಕಿದ್ದರಿಂದ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಿರಲಿಲ್ಲ. ಆದರೆ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಇದು ಸಂಭವಿಸಿದೆ.

ಸ್ಯಾಮ್ ಕರ್ರನ್ ಎರಡು ಸಿಕ್ಸರ್‌ಗಳೊಂದಿಗೆ 21 ಎಸೆತಗಳಲ್ಲಿ 31 ರನ್ ಗಳಿಸಿದರು.ಅದು ಚೆನ್ನೈ ಸೂಪರ್ ಕಿಂಗ್ಸ್‌ಗೆ ಮುಂದೆ ಬೇಕಾದ ಪ್ರಚೋದನೆಯನ್ನು ನೀಡಿತು ಮತ್ತು ಅವರು ಪವರ್ ಪ್ಲೇ ವಿಭಾಗದಲ್ಲಿ 50 ದಾಟಿದರು. ಇದೇ ವಿಶ್ವಾಸವು ಡೇವಿಡ್ ವಾರ್ನರ್ ಅವರಂತಹ ಪ್ರಮುಖ ವಿಕೆಟ್ ಪಡೆದಾಗ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಯಿತು.

ನಾಯಕ ಎಂ.ಎಸ್.ಧೋನಿ ಸ್ಯಾಮ್ ಕರ್ರನ್ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. "ಕರ್ರನ್ ನಮಗೆ ಸಂಪೂರ್ಣ ಕ್ರಿಕೆಟಿಗ ಮತ್ತು ನಿಮಗೆ ಆ ಸೀಮಿಂಗ್ ಆಲ್‌ರೌಂಡರ್ ಬೇಕು. ಅವನು ಚೆಂಡನ್ನು ಚೆನ್ನಾಗಿ ಹೊಡೆಯುತ್ತಾನೆ, ಅವನು ಬ್ಯಾಟ್ ಮಾಡಬಹುದು, ಅವನು ಸ್ಪಿನ್ನರ್‌ಗಳನ್ನು ಚೆನ್ನಾಗಿ ಆಡುತ್ತಾನೆ. ನಿಮಗೆ ಆ ವೇಗ ಬೇಕಾದರೆ ಆ 15-45 ರನ್‌ಗಳನ್ನು ಅವನು ನಮಗೆ ನೀಡಬಹುದು. ಪಂದ್ಯಾವಳಿ ಮುಂದುವರೆದಂತೆ, ಆತ ಡೆತ್ ಬೌಲಿಂಗ್‌ನಲ್ಲಿ ಇನ್ನಷ್ಟು ಆರಾಮದಾಯಕವಾಗಿರುತ್ತಾನೆ. ನಾವು ಆತನನ್ನು ಡೆತ್‌ ಓವರ್‌ಗಳಿಂದ ದೂರವಿಡಲು ಇದು ಒಂದು ಕಾರಣವಾಗಿದೆ'' ಎಂದು ಎಂ.ಎಸ್ ಧೋನಿ ಹೇಳಿದ್ದಾರೆ.

2. ಸರ್ ರವೀಂದ್ರ ಜಡೇಜಾ ಕಂಬ್ಯಾಕ್

2. ಸರ್ ರವೀಂದ್ರ ಜಡೇಜಾ ಕಂಬ್ಯಾಕ್

ಜಡೇಜಾ ಒಂದು ದಶಕದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಆತ ನಿಜವಾದ ಮೂರು ಆಯಾಮದ ಆಟಗಾರನಾಗಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಸಮಾನ ಮೌಲ್ಯವನ್ನು ನೀಡುತ್ತಾರೆ. ಆದರೆ ಐಪಿಎಲ್ 2020 ರಲ್ಲಿ ಜಡೇಜಾ ಪ್ರದರ್ಶನ ಉತ್ತಮವಾಗಿರ್ಲಿಲ್ಲ. ಪ್ರತಿ ಓವರ್‌ಗೆ 9 ರನ್‌ಗಳಿಗಿಂತ ಹೆಚ್ಚಿನ ರನ್ಗಳನ್ನು ಸೋರಿಕೆ ಮಾಡಿದರು, ಕ್ಯಾಚ್‌ಗಳನ್ನು ಕೈಬಿಟ್ಟರು ಮತ್ತು ಕೊನೆಯಲ್ಲಿ ವೇಗವನ್ನು ಪಡೆಯುವಲ್ಲಿ ವಿಫಲರಾದರು. ಆದರೆ ಎಸ್‌ಆರ್‌ಹೆಚ್ ವಿರುದ್ಧದ ಆಟ ವಿಭಿನ್ನವಾಗಿತ್ತು. ಹಳೆಯ ಜಡೇಜಾ ಮತ್ತೆ ಕಂಬ್ಯಾಕ್ ಮಾಡಿದರು.

ದ್ವಿತೀಯಾರ್ಧದಲ್ಲಿ ತಾಹಿರ್ ಆಟವನ್ನು ಕಣ್ತುಂಬಿಕೊಳ್ಳಲಿದ್ದೀರಿ: ಸಿಎಸ್‌ಕೆ ಸಿಇಒ ಹೇಳಿಕೆ

ಅವರು 10 ಎಸೆತಗಳಲ್ಲಿ 25 ರನ್ ಗಳಿಸಿದರು, ಇದು ಸಿಎಸ್‌ಕೆ 6ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲು ಸಹಾಯ ಮಾಡಿತು, ನಿಧಾನಗತಿಯ ಪಿಚ್‌ನಲ್ಲಿ ಹೋರಾಟದ ಮೊತ್ತ, ಮತ್ತು ನಂತರ ಜಾನಿ ಬೈರ್ಸ್ಟೋವ್ ಅವರ ಪ್ರಮುಖ ವಿಕೆಟ್ ತೆಗೆದುಕೊಂಡು ನಂತರ ಮೈದಾನದಲ್ಲಿ ಎರಡು ಕ್ಯಾಚ್‌ಗಳನ್ನು ಪಡೆದು ಮಿಂಚಿದರು. ಜಡೇಜಾ ಪಂದ್ಯಶ್ರೇಷ್ಠನಾಗಿ ಆಯ್ಕೆಯಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

3. ವಿಂಟೇಜ್ ಎಂ.ಎಸ್ ಧೋನಿ

3. ವಿಂಟೇಜ್ ಎಂ.ಎಸ್ ಧೋನಿ

ಕೆಲವು ವರ್ಷಗಳ ಹಿಂದೆ ಹೊಡೆದಂತೆ ಎಂ.ಎಸ್. ಧೋನಿ ಆ ದೊಡ್ಡ ಹೊಡೆತವನ್ನು ಸಿಡಿಸಲು ಸಾಧ್ಯವಾಗದಿರಬಹುದು. ಆದರೆ 100 ಮೀಟರ್ ಸ್ಪ್ರಿಂಟರ್‌ನಂತೆ, ಅವರು ಇನ್ನೂ ಸಣ್ಣ ಸ್ಫೋಟಗಳಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮಂಗಳವಾರ ಎಸ್‌ಆರ್‌ಹೆಚ್ ವಿರುದ್ಧದ 13 ಎಸೆತಗಳ 21ರನ್‌ಗಳಿಸಿದ್ದು ಇದಕ್ಕೆ ಉದಾಹರಣೆ.

2011 ರ ವಿಶ್ವಕಪ್ ಫೈನಲ್‌ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಹೊಡೆದ ಸಿಕ್ಸರ್ ರೀತಿಯಲ್ಲಿ ಧೋನಿ ಟಿ ನಟರಾಜನ್ ಅವರ ಬೌಲಿಂಗ್‌ನಲ್ಲಿ ಬೃಹತ್ ಸಿಕ್ಸರ್ ಸಿಡಿಸಿ ದಶಕದ ಹಿಂದಿನ ಶಾಟ್ ನೆನೆಪಿಸಿದರು.

4. ಸಿಎಸ್‌ಕೆ ಇನ್ನೂ ಸುಧಾರಿಸಬೇಕಾದ ಅಂಶಗಳು

4. ಸಿಎಸ್‌ಕೆ ಇನ್ನೂ ಸುಧಾರಿಸಬೇಕಾದ ಅಂಶಗಳು

ಹೌದು, ಚೆನ್ನೈ ಸದ್ಯ ಎಸ್‌ಆರ್‌ಹೆಚ್ ವಿರುದ್ಧ ಗೆದ್ದಿದ್ದಾರೆ ಮತ್ತು ಐಪಿಎಲ್ 2020 ರಲ್ಲಿ ಆರು ಅಂಕಗಳೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆದರೆ ಇದರರ್ಥ ಅವರು ಪರಿಪೂರ್ಣರಾಗಿದ್ದಾರೆಂದು ಇದರ ಅರ್ಥವಲ್ಲ. ಸುಧಾರಿಸಲು ಹಲವಾರು ಕ್ಷೇತ್ರಗಳಿವೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಿಜವಾದ ಡೆತ್ ಓವರ್ ಬೌಲರ್ ಅಂದರೆ ಅದು ಡ್ವೇನ್ ಬ್ರಾವೋ. ಹಲವಾರು ವರ್ಷಗಳಿಂದ ಡ್ವೇನ್ ಬ್ರಾವೋ ಈ ಕೆಲಸ ಮುಗಿಸಿದ್ದಾರೆ. ಆದರೆ ಅವರ ಬೌಲಿಂಗ್ ಸ್ಪೆಲ್ ಮುಗಿದ ಬಳಿಕ ನಂತರ ಸಾಥ್ ನೀಡಬಲ್ಲ ಬೌಲರ್ ಅವರ ಬಳಿ ಇಲ್ಲ. ಸ್ಯಾಮ್ ಕರ್ರನ್ ಮತ್ತು ದೀಪಕ್ ಚಹರ್ ನಿಜವಾಗಿಯೂ ಒಂದು ಆಯ್ಕೆಯಾಗಿಲ್ಲ ಏಕೆಂದರೆ ಅವರು ಪ್ರಧಾನವಾಗಿ ಸ್ವಿಂಗ್ ಬೌಲರ್‌ಗಳಾಗಿದ್ದು, ಶಾರ್ದೂಲ್ ಠಾಕೂರ್ ಮಾತ್ರ ಅವರ ಮತ್ತೊಂದು ಆಯ್ಕೆಯಾಗಿದೆ. ಹೀಗಾಗಿ ಧೋನಿ ಮತ್ತೊಬ್ಬ ಪರಿಣಾಮಕಾರಿ ಡೆತ್ ಓವರ್ ಬೌಲರ್‌ ಅನ್ನು ಹುಡುಕಿಕೊಳ್ಳಬೇಕಿದೆ.

ಇನ್ನು ಇದರ ಜೊತೆಗೆ ಓಪನಿಂಗ್ ಬ್ಯಾಟ್ಸ್‌ಮನ್‌ಗಳ ಪ್ರಯೋಗ ಕೇವಲ ಒಂದು ಪಂದ್ಯಕಷ್ಟೇ ಸೀಮಿತವಾಗಿದ್ಯಾ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.

Story first published: Wednesday, October 14, 2020, 17:36 [IST]
Other articles published on Oct 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+