ಸಚಿನ್ ತೆಂಡೂಲ್ಕರನ್ನು 12-13 ಬಾರಿ ಔಟ್ ಮಾಡಿದ್ದೆ: ಶೋಯೆಬ್ ಅಖ್ತರ್

ಕರಾಚಿ, ಏಪ್ರಿಲ್ 18: ಪಾಕಿಸ್ತಾನದ ಮಾಜಿ ಮಾರಕ ವೇಗಿ ಶೋಯೆಬ್ ಅಖ್ತರ್, ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು 'ಸಾರ್ವಕಾಲಿಕ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದಿದ್ದಾರೆ. ಇನ್‌ಸ್ಟಾಗ್ರಾಮ್ ವೀಡಿಯೋದಲ್ಲಿ ಮಾತನಾಡಿರುವ ಅಖ್ತರ್, ಪಂದ್ಯದ ವೇಳೆ ಸಚಿನ್ ಮತ್ತು ತನ್ನ ಮಧ್ಯೆ ನಡೆಯುತ್ತಿದ್ದ ಸಮರವನ್ನು ಸ್ಮರಿಸಿಕೊಂಡಿದ್ದಾರೆ.
'ಸಚಿನ್‌ಗೆ ಬೌಲಿಂಗ್ ಮಾಡುವ ವೇಳೆ ನಾನು ಒಳ್ಳೆಯ ದಿನಗಳಲ್ಲಿದ್ದೆ. ಸಚಿನ್ ಒಬ್ಬರು ಸಾರ್ವಕಾಲಿಕ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರು. ಆದರೆ ನಾನು ತೆಂಡೂಲ್ಕರ್ ಅವರನ್ನು 12-13 ಬಾರಿ ಔಟ್ ಮಾಡಿದ್ದೆ,' ಎಂದು ವೀಡಿಯೋದಲ್ಲಿ ಮಾತನಾಡುತ್ತ ಶೋಯೆಬ್ ಹೇಳಿದ್ದಾರೆ.
ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅಖ್ತರ್ ಅವರು ಸಚಿನ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಿಗೆ 8 ಬಾರಿ ಔಟ್ ಮಾಡಿದ್ದರು. ಇದರಲ್ಲಿ 5 ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಮತ್ತು 3 ಬಾರಿ ಟೆಸ್ಟ್‌ನಲ್ಲಿ ಸಚಿನ್ ವಿಕೆಟ್ ಕೆಡವಿದ್ದರು. ಆದರೆ ಬಹುಶಃ ನಿಖರವಾಗಿ ನೆನಪಾಗದ ಕಾರಣ ಶೋಯೆಬ್ 12-13 ಬಾರಿ ಎಂದಿರಬೇಕು.
ಇನ್ನು ಟಿ20 ಕ್ರಿಕೆಟ್ ಮಾದರಿಗೆ ಬಂದರೆ, ಶೋಯೆಬ್ ಅಖ್ತರ್ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಒಂದೇ ಬಾರಿ ಔಟ್ ಮಾಡಿದ್ದಾರೆ. 2008ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾಗ ಅಖ್ತರ್, ಸಚಿನ್‌ರ ವಿಕೆಟ್ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications