ಶಿಖರ್ ಧವನ್ ರೀಲ್ಸ್ ವೀಡಿಯೋದಲ್ಲಿ ಕಾಣಿಸಿಕೊಂಡ ರಾಹುಲ್ ದ್ರಾವಿಡ್: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಹಿನ್ನಲೆಯಲ್ಲಿ ಟೀಂ ಇಂಡಿಯಾ ಕೆರಿಬಿಯನ್ ಅಂಗಳಕ್ಕೆ ಬುಧವಾರ (ಜು.20) ಕಾಲಿಟ್ಟಿದ್ದು, ಶುಕ್ರವಾರದಿಂದ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ.
ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿರುವ ಹಿನ್ನಲೆಯಲ್ಲಿ, ಶಿಖರ್ ಧವನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಮುನ್ನಡೆಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ಧವನ್ ನಾಯಕನಾಗಿದ್ರೆ, ಐದು ಪಂದ್ಯಗಳ ಟಿ20 ಸರಣಿಗೆ ರೋಹಿತ್ ವಾಪಸ್ ಹಿಂದಿರುಗಲಿದ್ದಾರೆ.

ಏಕದಿನ ಸರಣಿಗೆ ಪ್ರಮುಖ ಸ್ಟಾರ್‌ಗಳಿಗೆ ವಿಶ್ರಾಂತಿ
ಹೌದು, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ಸೇರಿದಂತೆ ಪ್ರಮುಖ ಸ್ಟಾರ್ ಆಟಗಾರರಿಗೆ ಏಕದಿನ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಇದಲ್ಲದೆ ಐದು ಪಂದ್ಯಗಳ ಟಿ20 ಸರಣಿಗೆ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾಗೆ ಮತ್ತೊಮ್ಮೆ ವಿಶ್ರಾಂತಿ ಬಯಸಿದ್ದಾರೆ.
ಶಿಖರ್ ಧವನ್ ಮುಂದಾಳತ್ವದಲ್ಲಿ ವಿಂಡೀಸ್‌ಗೆ ಬಂದಿಳಿದ ಟೀಂ ಇಂಡಿಯಾ
ಮಂಗಳವಾರ(ಜು. 19) ಶಿಖರ್ ಧವನ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತದಿಂದ ಪ್ರಯಾಣ ಬೆಳೆಸಿತ್ತು. ಬುಧವಾರ ಬೆಳಿಗ್ಗೆ ಭಾರತದ ಆಟಗಾರರು ವೆಸ್ಟ್ ಇಂಡೀಸ್ ತಲುಪಿದ್ದಾರೆ. ಇದರ ಜೊತೆಗೆ ಶಿಖರ್ ಧವನ್ ಮತ್ತೊಮ್ಮೆ ತನ್ನ ತಮಾಶೆಯ ರೀಲ್ಸ್ ಮೂಲಕ ಸುದ್ದಿಯಾಗಿದ್ದಾರೆ.
ಗಬ್ಬರ್ ಖ್ಯಾತಿಯ ಶಿಖರ್ ಧವನ್ ಇನ್‌ಸ್ಟಾಗ್ರಾಮ್ ರೀಲ್ಸ್ ವೀಡಿಯೋದಲ್ಲಿ ಟೀಂ ಇಂಡಿಯಾದ ಯುವ ಆಟಗಾರರು ಭಾಗಿಯಾಗಿದ್ದು, ಕೋಚ್ ರಾಹುಲ್ ದ್ರಾವಿಡ್‌ರನ್ನೂ ಸಹ ಇದರಲ್ಲಿ ಕಾಣಿಸಿಕೊಂಡಿರುವುದು ವೀಡೀಯೋ ವೈರಲ್‌ಗೆ ಕಾರಣವಾಗಿದೆ.
ರೋಹಿತ್ ಶರ್ಮಾ ಜೊತೆ ಈತನೇ ಬ್ಯಾಟಿಂಗ್ ತೆರೆಯಬೇಕು ಎಂದ ಸಂಜಯ್ ಮಂಜ್ರೇಕರ್
ಶಿಖರ್ ಧವನ್ ರೀಲ್ಸ್‌ನಲ್ಲಿ 'ಹೇ' ಎಂದ ರಾಹುಲ್ ದ್ರಾವಿಡ್
ಶಿಖರ್ ಧವನ್ ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡೋದ್ರಲ್ಲಿ ಎತ್ತಿದ ಕೈ. ಐಪಿಎಲ್ ವೇಳೆಯಲ್ಲಿಯೂ ಸಾಕಷ್ಟು ರೀಲ್ಸ್ ಮೂಲಕ ಸುದ್ದಿಯಾಗಿದ್ದರು. ಇದೀಗ ವಿಂಡೀಸ್ ಅಂಗಳಕ್ಕೆ ಕಾಲಿಟ್ಟ ಬೆನ್ನಲ್ಲೇ ರೀಲ್ಸ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಈ ವೀಡಿಯೋದಲ್ಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ರೀಲ್ಸ್‌ನಲ್ಲಿ ಭಾಗಿಯಾಗುವಂತೆ ಮನವೊಲಿಸಿ ಯಶಸ್ವಿಯಾಗಿದ್ದಾರೆ.
ಕೊಹ್ಲಿ vs ರೋಹಿತ್: 2022ರಲ್ಲಿ ಹೆಚ್ಚು ರನ್ ಮತ್ತು ಅರ್ಧಶತಕಗಳು ಗಳಿಸಿರುವವರು ಯಾರು?

ಶಿಖರ್ ಧವನ್‌ಗೆ ಮಾತ್ರ ಇದು ಸಾಧ್ಯ ಎಂದ ದಿನೇಶ್ ಕಾರ್ತಿಕ್
ಶಿಖರ್ ಧವನ್‌ಗೆ ರೀಲ್ಸ್‌ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟಿ20 ಫಾರ್ಮೆಟ್‌ಗೆ ಮರಳಿರುವ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ರೀಲ್ಸ್‌ಗೆ ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ವೀಡೀಯೋಗಳನ್ನ ಮಾಡಲು ಶಿಖರ್ ಧವನ್‌ರಿಂದ ಮಾತ್ರ ಸಾಧ್ಯ ಎಂದಿದ್ದಾರೆ.
ಇನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಸಹ ರೀಲ್ಸ್‌ಗೆ ಕಾಮೆಂಟ್ ಮಾಡಿದ್ದಾರೆ. ಜೋರಾಗಿ ನಗುವಂತೆ ಕಾಮೆಂಟ್ ಮಾಡಿರುವ ರಣವೀರ್ ''Hahahahahahaha ek number !'' ಎಂದು ಪ್ರತಿಕ್ರಿಯಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ Squad
ಜುಲೈ 22, 24, 27ರಂದು ಭಾರತ ಮತ್ತು ವೆಸ್ಟ್ ಇಂಡೀಸ್ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದ್ದು, ಟೀಂ ಇಂಡಿಯಾದ 16 ಆಟಗಾರರನ್ನೊಳಗೊಂಡ ಸ್ಕ್ವಾಡ್ ಈ ಕೆಳಗಿದೆ.
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ವೆಸ್ಟ್ ಇಂಡೀಸ್ ಒಡಿಐ ಸ್ಕ್ವಾಡ್
ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ರೋವ್‌ಮನ್ ಪೊವೆಲ್, ಜೇಡನ್ ಸೀಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications