Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಏಕೆ ಆಯ್ದುಕೊಂಡರು? ನನಗೆ ನಿಜಕ್ಕೂ ಅರ್ಥವಾಗುತ್ತಿಲ್ಲ ಎಂದ ಸಚಿನ್ ತೆಂಡೂಲ್ಕರ್

Sanju samson and sachin

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸಂಜು ಸ್ಯಾಮ್ಸನ್ ಮೊದಲು ಏಕೆ ಬ್ಯಾಟಿಂಗ್ ಆಯ್ದುಕೊಂಡರು ಎಂದು ಅರ್ಥವಾಗುತ್ತಿಲ್ಲ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಭಾನುವಾರ (ಮೇ.29) ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಏಳು ವಿಕೆಟ್‌ಗಳ ಗೆಲುವು ಸಾಧಿಸಿ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದಿದ್ದೇ ತಡ ಬ್ಯಾಟಿಂಗ್ ಆಯ್ದುಕೊಂಡು ಎಡವಿದ್ರು ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ಕೇವಲ 130ರನ್‌ಗಳ ಸ್ಕೋರ್‌ನಿಂದಾಗಿ ಬಲಿಷ್ಠ ಎದುರಾಳಿಗೆ ಶರಣಾಯಿತು.

ಬಟ್ಲರ್ ಮೇಲೆ ಹೆಚ್ಚು ನಂಬಿಕೊಂಡಿದ್ದ ರಾಜಸ್ತಾನ್ ರಾಯಲ್ಸ್

ಬಟ್ಲರ್ ಮೇಲೆ ಹೆಚ್ಚು ನಂಬಿಕೊಂಡಿದ್ದ ರಾಜಸ್ತಾನ್ ರಾಯಲ್ಸ್

ರಾಜಸ್ತಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದ್ದು, ಎಲ್ಲರ ಊಹೆಯಂತೆ ಫೈನಲ್‌ನಲ್ಲಿ ಮುಳುವಾಯಿತು. ಸೀಸನ್‌ವುದ್ದಕ್ಕೂ ಅಬ್ಬರಿಸಿದ್ದ ಜೋಸ್ ಬಟ್ಲರ್ ಅತ್ಯಮೋಘ ಆಟವಾಡುವ ಮೂಲಕ ಬರೋಬ್ಬರಿ 863ರನ್ ಕಲೆಹಾಕಿದ್ದಾರೆ. ಫೈನಲ್‌ನಲ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್ ಹೊರಬರದೇ ಇದ್ದುದ್ದರ ಜೊತೆಗೆ ಉಳಿದ ಬ್ಯಾಟರ್‌ಗಳ ವೈಫಲ್ಯವು ತಂಡಕ್ಕೆ ಮುಳುವಾಯಿತು.

ಬಟ್ಟರ್ 39, ಜೈಸ್ವಾಲ್ 22 ರನ್‌ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಪರಿಣಾಮ ರಾಜಸ್ತಾನ್ ರಾಯಲ್ಸ್ 9 ವಿಕೆಟ್ ನಷ್ಟಕ್ಕೆ 130ರನ್ ಕಲೆಹಾಕಿತು.

ಇದಕ್ಕೆ ಉತ್ತರವಾಗಿ ಗುಜರಾತ್ ಟೈಟನ್ಸ್ ಪರ ಶುಭಮನ್ ಗಿಲ್ ಅಜೇಯ 45, ಹಾರ್ದಿಕ್ ಪಾಂಡ್ಯ 34, ಡೇವಿಡ್ ಮಿಲ್ಲರ್ ಅಜೇಯ 32ರನ್ ನೆರವಿನಿಂದ 11 ಎಸೆತಗಳು ಬಾಕಿ ಇರುವಂತೆಯೇ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಅಶ್ವಿನ್ ಉತ್ತಮ ಬೌಲರ್, ಆದ್ರೆ ಆತ ಈ ತಪ್ಪನ್ನು ಸರಿ ಪಡಿಸಿಕೊಳ್ಳಬೇಕು ಎಂದ ಸಂಗಕ್ಕಾರ

ಅವರು ಮೊದಲು ಏಕೆ ಬ್ಯಾಟಿಂಗ್ ಆಯ್ದುಕೊಂಡರು ಎಂದು ಅರ್ಥವಾಗದು: ಸಚಿನ್ ತೆಂಡೂಲ್ಕರ್

ಅವರು ಮೊದಲು ಏಕೆ ಬ್ಯಾಟಿಂಗ್ ಆಯ್ದುಕೊಂಡರು ಎಂದು ಅರ್ಥವಾಗದು: ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಯೂಟ್ಯೂಬ್ ಶೋ ಸಚಿನ್ ಸೈಟ್‌ನಲ್ಲಿ ರಾಜಸ್ತಾನ್ ರಾಯಲ್ಸ್‌ನ ಆಶ್ಚರ್ಯದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ಟಾಸ್ ಗೆದ್ದ ಸ್ಯಾಮ್ಸನ್ ಬ್ಯಾಟಿಂಗ್ ಏಕೆ ಆಯ್ದುಕೊಂಡರು ಎಂದು ಅರ್ಥವಾಗಲಿಲ್ಲ ಎಂದು ಸಚಿನ್ ಹೇಳಿದ್ದಾರೆ.

"ಫೈನಲ್ ಪಂದ್ಯದಲ್ಲಿ, ರಾಜಸ್ತಾನ್ ರಾಯಲ್ಸ್‌ ಟಾಸ್ ಗೆದ್ದು ಆಶ್ಚರ್ಯಕರವಾಗಿ ಮೊದಲು ಬ್ಯಾಟಿಂಗ್ ಮಾಡಿತು. ಕಳೆದ ಪಂದ್ಯದಲ್ಲಿ, ಅವರು ಮೊದಲು ಬೌಲಿಂಗ್ ಮಾಡಿದ್ದರ ಜೊತೆಗೆ ಅವರ ಬೌಲರ್‌ಗಳು ಕಳೆದ ಬಾರಿ ಪಡೆದ ಸೀಮ್ ಚಲನೆಯು ತುಂಬಾ ಆಸಕ್ತಿದಾಯಕವಾಗಿತ್ತು. ಆದರೆ ಫೈನಲ್‌ನಲ್ಲಿ ಅವರು ಏಕೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು ಎಂಬುದು ನನಗೆ ತಿಳಿದಿಲ್ಲ'' ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

"ಬಹುಶಃ ದೊಡ್ಡ ಪಂದ್ಯದಲ್ಲಿ ಅವರು ಮೊದಲು ಬ್ಯಾಟ್ ಮಾಡಲು ಬಯಸಿದ್ದರು, ಆದರೆ ಈ ವಿಕೆಟ್ ಮತ್ತು ಈ ಮೈದಾನದಲ್ಲಿ, ಗುಜರಾತ್ ಟೈಟನ್ಸ್‌ ಮೊದಲು ಆಡಿರಲಿಲ್ಲ. ರಾಜಸ್ತಾನವು ಇಲ್ಲಿನ ಪಂದ್ಯವನ್ನಾಡಿದ ಪ್ರಯೋಜನವನ್ನು ಹೊಂದಿತ್ತು ಮತ್ತು ಈ ವಿಕೆಟ್ ಹೇಗೆ ವರ್ತಿಸುತ್ತದೆ ಎಂಬುದರ ಕುರಿತು ಅನುಭವ ಹೊಂದಿತ್ತು'' ಎಂದಿದ್ದಾರೆ.

ಮಾತು ಮುಂದುವರಿಸಿದ ಸಚಿನ್ "ನನ್ನ ಪ್ರಕಾರ, ಅವರು ಮೊದಲು ಬೌಲಿಂಗ್ ಮಾಡಿದ್ರೆ, ಗುಜರಾತ್ ಮೇಲೆ ಸ್ವಲ್ಪ ಒತ್ತಡ ಇರುತ್ತಿತ್ತು. ಏಕೆಂದರೆ, ಆ ಸಂದರ್ಭದಲ್ಲಿ, ಅವರು ಉತ್ತಮ ಮೊತ್ತವನ್ನು ಕಲೆಹಾಕುವ ಬಗ್ಗೆ ಯೋಚಿಸಬೇಕಾಗಿತ್ತು, ವಿಶೇಷವಾಗಿ ಕೊನೆಯ ಪಂದ್ಯದಲ್ಲಿ(ಆರ್‌ಸಿಬಿ ವಿರುದ್ಧ) ಜೋಸ್ ಬಟ್ಲರ್ ಬ್ಯಾಟಿಂಗ್ ನೋಡಿದ ನಂತರ ಉತ್ತಮ ಸ್ಕೋರ್ ಕಲೆಹಾಕುವ ಒತ್ತಡದಲ್ಲಿ ಇರುತ್ತಿದ್ದರು" ಎಂದು ಬ್ಯಾಟಿಂಗ್ ದಂತಕಥೆ ಸಚಿನ್ ಹೇಳಿದರು.

IPL 2022: ಟೀಮ್ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ನಾಯಕ?; ಮಾಜಿ ಕ್ರಿಕೆಟಿಗ ಗವಾಸ್ಕರ್ ಹೇಳಿದ್ದಿಷ್ಟು

ಗೆದ್ದ ಖುಷಿಯಲ್ಲಿ ರೋಡ್ ಶೋ ಮೂಲಕ ಗುಜರಾತ್ ನಲ್ಲಿ ಪಾಂಡ್ಯಾ ಹವಾ ಫುಲ್ ವೈರಲ್ | Oneindia Kannada
ಗುಜರಾತ್ ಟೈಟನ್ಸ್ ಈ ಸಾಧನೆ ಮಾಡಿದ ಎರಡನೇ ತಂಡ!

ಗುಜರಾತ್ ಟೈಟನ್ಸ್ ಈ ಸಾಧನೆ ಮಾಡಿದ ಎರಡನೇ ತಂಡ!

ಗುಜರಾತ್ ಟೈಟನ್ಸ್ ಐಪಿಎಲ್‌ನಲ್ಲಿ ತನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಈ ಸಾಧನೆ ಮಾಡಿದ ಎರಡನೇ ತಂಡವಾಗಿ ಹೊರಹೊಮ್ಮಿದೆ. 2008ರ ಚೊಚ್ಚಲ ಐಪಿಎಲ್ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೀಗ ಆ ತಂಡದ ವಿರುದ್ಧ ಗುಜರಾತ್ ಗೆದ್ದು ಚಾಂಪಿಯನ್ ಆಗಿದ್ದು ವಿಶೇಷ.

Story first published: Tuesday, May 31, 2022, 9:56 [IST]
Other articles published on May 31, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+