For Quick Alerts
ALLOW NOTIFICATIONS  
For Daily Alerts
 

ಸಚಿನ್ ತಲೆಗೆ ಗುರಿ ಮಾಡಿ ಬೌನ್ಸರ್!!: 16 ವರ್ಷದ ಬಳಿಕ ತನ್ನ ಕ್ರೂರ ವರ್ತನೆಯ ಆಘಾತಕಾರಿ ಅಂಶ ಬಿಚ್ಚಿಟ್ಟ ಅಖ್ತರ್

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯ ನಡೆಯುತ್ತಿದೆ. ಮಳೆಯಿಂದಾಗಿ ನಿಗದಿತ ದಿನಾಂಕದಂದು ಪಂದ್ಯ ನಡೆಯಲು ಸಾಧ್ಯವಾಗದೆ ಸೆಪ್ಟೆಂಬರ್ 11ರಂದು ಪಂದ್ಯ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಘಾತಕ ವೇಗಿ ಶೋಯೆಬ್ ಅಖ್ತರ್ ಅವರ ಹೇಳಿಕೆಯೊಂದು ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಭಾರತೀಯ ದಿಗ್ಗಜ ಕ್ರಿಕೆಟಿಗನ ಸಚಿನ್ ತೆಂಡೂಲ್ಕರ್ ಅವರಿಗೆ ಜೀವಕ್ಕೇ ಅಪಾಯವಾಗಬೇಕು ಎನ್ನುವಂತಾ ಗುರಿಯಿಟ್ಟುಕೊಂಡೇ ಅಂದು ಬೌಲಿಂಗ್ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾರೆ ಶೋಯೆನ್ ಅಖ್ತರ್.

ಪಾಕಿಸ್ತಾನ ತಂಡದ ವೇಗದ ಬೌಲರ್ ಶೋಯೆಬ್ ಅಖ್ತರ್ ತಮ್ಮ ವೃತ್ತಿ ಜೀವನದಲ್ಲಿ ಯಾವಾಗಲೂ ಭಾರತದ ವಿರುದ್ಧ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿಕೊಂಡೇ ಬಂದಿದ್ದರು. ಆದರೆ ಟೀಮ್ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ವಿಭಾಗ ಶೋಯೆನ್ ಅಖ್ತರ್ ಅವರನ್ನು ಬಹುತೇಕ ಸಂದರ್ಭದಲ್ಲಿ ನಿರ್ದಯವಾಗಿ ದಂಡಿಸಿತ್ತು ಎನ್ನುವುದು ಕೂಡ ತಿಳಿದಿರದ ಸಂಗತಿಯೇನಲ್ಲ. ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮೊದಲಾದ ಕ್ರಿಕೆಟಿಗರು ಅಖ್ತರ್ ಎಸೆವನ್ನು ಹಿಗ್ಗಾಮುಗ್ಗ ದಂಡಿಸುತ್ತಿದ್ದರು. ಹಾಗಾಗಿ ಅಖ್ತರ್ ಭಾರತ ತಂಡದ ವಿರುದ್ಧ ಯಶಸ್ಸು ಸಾಧಿಸಿದ್ದು ಬಹಳ ಕಡಿಮೆ.

I wanted to Injure Sachin Shoaib Akhtar admitting his Intent to Harm Indian Batsmen Video Viral

ಇದೇ ಕಾರಣಕ್ಕೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದ ಶೋಯೆಬ್ ಅಖ್ತರ್ ತನ್ನ ಗುರಿ ಏನಾಗಿತ್ತು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ತಲೆಯನ್ನೇ ಗುರಿಯಾಗಿಸಿಕೊಂಡು ನಾನು ಅಂದು ಬೌಲಿಂಗ್ ಮಾಡಲು ನಿರ್ಧರಿಸಿದ್ದೆ ಎಂದಿರುವ ಶೋಯೆಬ್ ಅಖ್ತರ್ ಏನಾದರೂ ಆಗಲಿ ಸಚಿನ್‌ಗೆ ಏಟು ನೀಡಲೇ ಬೇಕು ಎಂದು ನಿರ್ಧರಿಸಿದ್ದೆ ಎಂದಿದ್ದಾರೆ ಶೋಯೆಬ್ ಅಖ್ತರ್!

ಇಂದು ಸತ್ಯ ಬಹಿರಂಗಪಡಿಸುತ್ತೇನೆ!!

ಸಾಮಾಜಿಕ ಜಾಲತಾಣದ ಸಂವಾದದಲ್ಲಿ ಭಾಗಿಯಾಗಿದ್ದ ಶೋಯೆನ್ ಅಖ್ತರ್ ಅವರೇ ಸ್ವತಃ ಈ ಮಾತನ್ನು ಹೇಳಿಕೊಂಡಿದ್ದಾರೆ. "ಇಂದು ನಾನು ಆ ಒಂದು ವಿಚಾರವನ್ನು ಬಹಿರಂಗಪಡಿಸುತ್ತೇನೆ.. ಅದೇನಂದರೆ ಆ ಪಂದ್ಯದಲ್ಲಿ ಸಚಿನ್ ಅವರನ್ನು ನಾನು ಗಾಯಗೊಳಿಸಲೇಬೇಕು ಎಂದು ನಾನು ನಿರ್ಧರಿಸಿದ್ದೆ.. ಅದನ್ನೇ ನಾನು ಮಾಡಿದ್ದೆ. ಆದರೆ ಇನ್ಜಮಾಮ್ ಉಲ್ ಹಕ್ ಚೆಂಡನ್ನು ಮುಂದಕೆ ಎಸೆಯುಂತೆ ಹೇಳುತ್ತಿದ್ದರು" ಎಂದು ತಾನು ಕ್ರೀಡಾಸ್ಪೂರ್ತಿಯನ್ನೇ ಬಿಟ್ಟು ಆಡಿದ ಅಂಶವನ್ನು ಹೇಳಿಕೊಂಡಿದ್ದಾರೆ.

ಮುಂದುವರಿದ ಶೋಯೆಬ್ ಅಖ್ತರ್ ಯಾವುದೇ ಪಶ್ಚಾತ್ತಾಪವಿಲ್ಲದೆ ತನ್ನ ಮಾತನ್ನು ಮುಂದುವರಿಸಿದ್ದಾರೆ. "ನಾನು ಉದ್ದೇಶಪೂರ್ವಕವಾಗಿ ಸಚಿನ್‌ಗೆ ಪ್ರಾಣಕ್ಕೆ ಅಪಾಯವಾಗಬಹುದು ಎಂದು ಯೋಚಿಸಿಕೊಂಡೇ ಹೆಲ್ಮೆಟ್‌ಗೆ ಹೊಡೆದಿದ್ದೆ.. ರಿಪ್ಲೇ ನೊಡಿದ ಬಳಿಕ ಅದು ತಲೆಗೆ ಬಡಿದಿತ್ತು. ನಂತರ ಮತ್ತೊಮ್ಮೆ ಅದೇ ರೀತಿ ಚೆಂಡೆಸೆದು ಗಾಯಗೊಳಿಸಲು ಪ್ರಯತ್ನಿನಿಸಿದ್ದೆ" ಎಂದು ಶೋಯೆಬ್ ಅಖ್ತರ್ ಹೇಳಿಕೆಯನ್ನು ನೀಡಿದ್ದಾರೆ.

2006ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯ

ಅಂದಹಾಗೆ ಶೋಯೆಬ್ ಅಖ್ತರ್ 2006ರಲ್ಲಿ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದಾಗ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ್ದರು. ಕರಾಚಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ತಾನು ಈ ರೀತಿಯಾಗಿ ವರ್ತಿಸಿದ್ದೆ ಎಂದು ಸ್ವತಃ ಶೋಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಸ್ಪೋರ್ಟ್ಸ್‌ಕೀಡಾಗೆ ನೀಡಿದ್ದ ಸಂದರ್ಶನದಲ್ಲಿ ಈ ವಿಚಾರವನ್ನು ಅಖ್ತರ್ ಹಂಚಿಕೊಂಡಿದ್ದರು. ಈ ವಿಡಿಯೋ ಈಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಸಂದರ್ಭದಲ್ಲಿ ಸಾಕಷ್ಟು ವೈರಲ್ ಆಗಿದೆ.

Story first published: Monday, September 11, 2023, 14:50 [IST]
Other articles published on Sep 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+