ರಿಷಭ್ ಪಂತ್ ಓಪನರ್ ಆಗಿ ಕಳುಹಿಸಬೇಡಿ, ಆತ ಫಿನಿಷರ್ ಆಗ್ಬೇಕು: ಸುನಿಲ್ ಗವಾಸ್ಕರ್

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರು ಓಪನರ್ ಆಗಿ ಕಣಕ್ಕಿಳಿದ ಕುರಿತು ಸುನಿಲ್ ಗವಾಸ್ಕರ್ ಆಶ್ಚರ್ಯ ವ್ಯಕ್ತಪಡಿಸಿದ್ದು, ಈ ನಿರ್ಧಾರ ತನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.
ರಿಷಬ್ ಪಂತ್ ಓಪನರ್ ಆಗಿ ಕಳುಹಿಸುವ ಪ್ರಯತ್ನ ವಿಫಲಗೊಂಡಿದ್ದು, ಆತ ಫಿನಿಷರ್ ಆಗಿ ಆಡಬೇಕು ಎಂದು ಟೀಕಿಸಿದ್ದಾರೆ. ಕೆ.ಎಲ್ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಉದ್ದೇಶದಿಂದ ರೋಹಿತ್ ಈ ಪ್ರಯೋಗ ಮಾಡಿದ್ದಾರೆ. ಆದರೆ ಈ ಪ್ರಯೋಗವು ಸಂಪೂರ್ಣ ವಿಭಿನ್ನವಾಗಿ ಕಂಡುಬಂದಿತು.
ಓಪನರ್ ಆಗಿ ಎಡವಿದ ಪಂತ್ 34 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಕ್ಯಾಚ್ ಔಟ್ ಆಗಿ ಪೆವಿಲಿಯನ್ ಸೇರಿದರು. ಈ ಕುರಿತಾಗಿ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರ ತಪ್ಪು ಎಂದಿದ್ದಾರೆ.
"ರಿಷಬ್ ಪಂತ್ ಓಪನರ್ ಆಗಿ ಕಾಣಿಸಿಕೊಂಡಾಗ ನನಗೆ ಆಘಾತವಾಯಿತು. ನನ್ನ ಅಭಿಪ್ರಾಯದಲ್ಲಿ, ಸ್ಕೋರ್‌ಗೆ ಅನುಗುಣವಾಗಿ ಅವರು ಆರನೇ ಅಥವಾ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬರಬೇಕು. ಆರಂಭಿಕ ಜೋಡಿಯಾಗಿ ರೋಹಿತ್‌ಗೆ ರಾಹುಲ್ ಸರಿಯಾದ ಜೋಡಿ. ಸೂರ್ಯಕುಮಾರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ಒಳ್ಳೆಯದು. ಆಮೇಲೆ ಪಂತ್, ವಾಷಿಂಗ್ಟನ್ ಸುಂದರ್ ಬರಬೇಕು'' ಎಂದಿದ್ದಾರೆ.

ಜಡೇಜಾರನ್ನ ಟೀಂ ಇಂಡಿಯಾ ಮಿಸ್ ಮಾಡಿಕೊಳ್ಳುತ್ತಿದೆ!
ಈ ಸಂದರ್ಭದಲ್ಲಿ ಗವಾಸ್ಕರ್ ಅವರು ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ಶ್ಲಾಘಿಸಿದ್ದಾರೆ. ಟೀಂ ಇಂಡಿಯಾ ಜಡೇಜಾ ಸೇವೆಯನ್ನು ಕಳೆದುಕೊಂಡಿದೆ. ಎಂದು ಗವಾಸ್ಕರ್ ಹೇಳಿದ್ದಾರೆ. ಆತ ಇದ್ದಿದ್ದರೆ ಏಳನೇ ಅಥವಾ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್ ಕುರಿತು ಚಿಂತಿಸಬೇಕಾಗಿಲ್ಲ. ದೊಡ್ಡ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ವಿಕೆಟ್‌ಗಳನ್ನು ಉರುಳಿಸುವ ಆಲ್‌ರೌಂಡರ್ ಆಗಿದ್ದಾರೆ. ಹೀಗಾಗಿ ಭಾರತ ಅವರ ಅಮೂಲ್ಯ ಸೇವೆಯನ್ನು ಕಳೆದುಕೊಳ್ಳುತ್ತಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಐಪಿಎಲ್ 2022: ಹರಾಜಿಗೆ ಕೆಲವೇ ಗಂಟೆಗಳಿರುವಾಗ ಎಲ್ಲಾ ಫ್ರಾಂಚೈಸಿಗಳಿಗೆ ಶಾಕ್ ಕೊಟ್ಟ ಬಿಸಿಸಿಐ!

ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸೇವೆ
ಉತ್ತಮ ದಾಖಲೆ ಹೊಂದಿರುವ ಕೆಎಲ್ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಉದ್ದೇಶದಿಂದ ರಿಷಬ್ ಪಂತ್ ಅವರನ್ನು ಆರಂಭಿಕರಾಗಿ ಕಳುಹಿಸಲಾಯಿತು ಎಂದು ರೋಹಿತ್ ಶರ್ಮಾ ಹೇಳಿದ್ದರು. ಕೊರೊನಾದಿಂದಾಗಿ ಶಿಖರ್ ಧವನ್ ಅಲಭ್ಯರಾಗಿದ್ದು, ಮುಂದಿನ ಏಕದಿನಕ್ಕೆ ಲಭ್ಯವಿದ್ದರೆ ಪಂತ್ ತಮ್ಮ ಐದನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಬ್ಯಾಟ್ ಮಾಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
''ನಾವು ಹೊಸದನ್ನು ಮಾಡುವ ಉದ್ದೇಶದಿಂದ ರಿಷಬ್ ಪಂತ್ ಅವರನ್ನು ಓಪನರ್ ಆಗಿ ಆಡಿಸಿದ್ದೇವೆ. ಆದರೆ ಅದು ಶಾಶ್ವತವಲ್ಲ. ಮುಂದಿನ ಏಕದಿನ ಪಂದ್ಯಕ್ಕೆ ಶಿಖರ್ ಲಭ್ಯವಾಗುವ ಸಾಧ್ಯತೆ ಇದೆ. ಅವನಿಗೆ ಸ್ವಲ್ಪ ಆಟದ ಸಮಯ ಬೇಕು. ಫಲಿತಾಂಶಗಳ ನಿರೀಕ್ಷೆಯಲ್ಲಿ ಇದೇ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತದೆ. ದೀರ್ಘಾವಧಿಯ ಗುರಿಗಳ ಆಧಾರದ ಮೇಲೆ ನಾವು ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಈ ವಿಧಾನವು ಕೆಲವೊಮ್ಮೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದಿದ್ದಾರೆ.

ಓಪನರ್ ಆಗಿ ವಿಫಲಗೊಂಡ ರಿಷಭ್ ಪಂತ್
ಬುಧವಾರ ನಡೆದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 44 ರನ್‌ಗಳಿಂದ ಗೆದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ (83 ಎಸೆತಗಳಲ್ಲಿ 64 ರನ್) ಅರ್ಧಶತಕ ಗಳಿಸಿದರೆ, ಕೆ.ಎಲ್ ರಾಹುಲ್ (48 ಎಸೆತಗಳಲ್ಲಿ 49 ರನ್) ಒಂದು ರನ್‌ನಿಂದ ಅರ್ಧಶತಕ ಮಿಸ್ ಮಾಡಿಕೊಂಡ್ರು. ಇದಕ್ಕೂ ಮೊದಲು ರಿಷಭ್ ಪಂತ್ ಹಾಗೂ ಕೊಹ್ಲಿ ತಲಾ 18 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.
ಭಾರತ ನೀಡಿದ 238 ರನ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 46 ಓವರ್ ಗಳಲ್ಲಿ 193 ರನ್ ಗಳಿಸಿತು. ಶಮರ್ ಬ್ರೂಕ್ಸ್ (64 ಎಸೆತಗಳಲ್ಲಿ 44 ರನ್) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತ ಪರ ಪ್ರಸಿದ್ಧ ಕೃಷ್ಣ ಕೇವಲ 12 ರನ್‌ಗೆ 4 ವಿಕೆಟ್ ಕಬಳಿಸಿ ಮಿಂಚಿದರು.
ಭಾರತ -ವೆಸ್ಟ್ ಇಂಡೀಸ್ ಶುಕ್ರವಾರ (ಫೆ. 11) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಂತಿಮ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications