ಭಾರತ- ಪಾಕ್ ಪಂದ್ಯಕ್ಕೆ ಯುದ್ಧದ ಟಚ್- ಮಾಧ್ಯಮಗಳ ಹೈಪ್ : ಕೊಹ್ಲಿ
ಮುಂಬೈ, ಮೇ 25: ವಿಶ್ವಕಪ್ಗಿಂತ ಚಾಂಪಿಯನ್ಸ್ ಟ್ರೋಫಿ ಗುಣಮಟ್ಟದಿಂದ ಕೂಡಿರುತ್ತದೆ. ಅಗ್ರ 8 ತಂಡಗಳಷ್ಟೇ ಆಡುವುದರಿಂದ ಟೂರ್ನಿ ವಿಶ್ವಕಪ್ಗಿಂತಲೂ ಕಠಿಣವಾಗಿರುತ್ತದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳನ್ನು ಯುದ್ಧದಂತೆ ಬಿಂಬಿಸುವುದು ಮಾಧ್ಯಮಗಳ ಕೆಲಸ. ನಮಗೆ ಮತ್ತೊಂದು ಏಕದಿನ ಪಂದ್ಯ ಅಷ್ಟೆ ಎಂದು ಕೊಹ್ಲಿ ಹೇಳಿದ್ದಾರೆ.
'ವಿಶ್ವಕಪ್ನಲ್ಲಿ ಹೆಚ್ಚಿನ ಲೀಗ್ ಪಂದ್ಯಗಳು ಲಭಿಸುತ್ತವೆ. ಆದರೆ, ಚಾಂಪಿಯನ್ಸ್ ಟ್ರೋಫಿ ಅಂಥ ಅವಕಾಶ ಇರುವುದಿಲ್ಲ. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದರಷ್ಟೇ ಟೂರ್ನಿಯಲ್ಲಿ ಉಳಿಗಾಲ' ಎಂದು ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲು ಲಂಡನ್ಗೆ ತೆರಳುವುದಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ತಿಳಿಸಿದರು.[ಚಾಂಪಿಯನ್ಸ್ ಟ್ರೋಫಿ : ಸ್ಪರ್ಧಾ ಕಣದಲ್ಲಿರುವ 8 ತಂಡಗಳಿವು]

ಜೂನ್ 4 ರಂದು ಭಾರತ ತಂಡ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. 'ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಆಡುತ್ತಿರುವುದರಿಂದ ಒತ್ತಡವಿಲ್ಲ. ಯುವ ಆಟಗಾರರಿಂದ ಕೂಡಿರುವ ನಮ್ಮ ತಂಡಕ್ಕೆ ಗೆಲುವೇ ಗುರಿ ' ಎಂದು ಕೊಹ್ಲಿ ತಿಳಿಸಿದರು.[#INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]
ಎಲ್ಲ ಮಾದರಿಯ ಕ್ರಿಕೆಟ್ನಲ್ಲೂ ನಂ.1ಪಟ್ಟಕ್ಕೇರುವುದೇ ತಂಡದ ಗುರಿ. ತಂಡದ ಅನುಭವಿ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಎಂಎಸ್ ಧೋನಿ ಕೂಡ ತಂಡದ ಯೋಜನೆ ರೂಪಿಸಲಿದ್ದು, ಕಳೆದ ಬಾರಿಯಂತೆಯೇ ಈ ಬಾರಿಯೂ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಇನಿಂಗ್ಸ್ ಆರಂಭಿಸಲಿದ್ದಾರೆ.[15 ಸದಸ್ಯರ ಟೀಂ ಇಂಡಿಯಾ ಪ್ರಕಟ]
ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಟೂರ್ನಿ ಜೂನ್ 1 ರಿಂದ 18ರ ತನಕ ವಿಶ್ವದ 8 ತಂಡಗಳ ನಡುವೆ ನಡೆಯಲಿದೆ. ಜೂನ್ 1ರಂದು ಟೂರ್ನಿ ಆರಂಭಗೊಂಡರೆ ಜೂನ್ 04ರಂದು ಬಿ ಗುಂಪಿನ ಮಹಾನ್ ಕದನ ನಡೆಯಲಿದೆ.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications