ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಸಿಎಸ್‌ಕೆ ಸಹವಾಸ ಬೇಡ ಎನ್ನುತ್ತಿರುವುದ್ಯಾಕೆ ಜಡೇಜಾ? ಮಿನಿ ಹರಾಜಿಗೆ ಬರುತ್ತಾರ ಸ್ಟಾರ್ ಆಲ್‌ ರೌಂಡರ್

IPL 2023:All Rounder Ravindra Jadeja Likely To Be Leave CSK, Likely will be part of the Mini-Auction

2012 ರಿಂದ ಸಿಎಸ್‌ಕೆ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ರವೀಂದ್ರ ಜಡೇಜಾ ಈಗ ತಂಡವನ್ನು ತೊರೆಯಲು ಮುಂದಾಗಿದ್ದಾರೆ. 2022ರ ಐಪಿಎಲ್‌ನಲ್ಲಿ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ತಂಡದಿಂದ ದೂರವಾಗಲು ಜಡೇಜಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.

 "ಹೆಸರು ನೆನಪಿಟ್ಟುಕೊಳ್ಳಿ": ಲಂಕಾ ವಿರುದ್ಧ ಗೆದ್ದ ನಮೀಬಿಯಾ ಉಲ್ಲೇಖಿಸಿದ ಸಚಿನ್ ಮಾಡಿದ ಟ್ವೀಟ್ ವೈರಲ್

ಆದರೆ, ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಸಿಎಸ್‌ಕೆ ಕಸರತ್ತು ಮಾಡುತ್ತಿದೆ. ಜಡೇಜಾ ಸಿಎಸ್‌ಕೆ ಜೊತೆ ಇರುತ್ತಾರಾ? ಸಿಎಸ್‌ಕೆ ಅವರನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ಭಾರತೀಯ ಆಲ್‌ರೌಂಡರ್‌ನನ್ನು ಬಿಡುಗಡೆ ಮಾಡುತ್ತದೆಯೇ? ಡಿಸೆಂಬರ್‌ನಲ್ಲಿ ಅವರು ಮಿನಿ ಹರಾಜಿಗೆ ಬರುತ್ತಾರೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಶೀಘ್ರದಲ್ಲೇ ಸಿಗಲಿವೆ. ಆಲ್‌ರೌಂಡರ್ ಜಡೇಜಾರನ್ನು ಬಿಟ್ಟುಕೊಡಲು ಸಿಎಸ್‌ಕೆಗೆ ಮನಸ್ಸಿಲ್ಲ, ಅವರನ್ನು ಏನಾದರೂ ಮಾಡಿ ತಂಡದಲ್ಲಿ ಉಳಿಸಿಕೊಳ್ಳಬೇಕೆಂದು ಕೊನೆಯ ಹಂತದ ಪ್ರಯತ್ನ ಮಾಡುತ್ತಿದೆ.

"ಜಡೇಜಾ ಮತ್ತು ಸಿಎಸ್‌ಕೆ ನಡುವಿನ ಸಂಬಂಧವು ಉತ್ತಮ ಸ್ಥಿತಿಯಲ್ಲಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಜಡೇಜಾ ಕಳೆದ ಕೆಲವು ತಿಂಗಳುಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಸಂದೇಶಗಳಿಗೆ ಅಥವಾ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ಆದರೆ ಅವರು ಕಾನೂನುಬದ್ಧ ಒಪ್ಪಂದದಲ್ಲಿದ್ದಾರೆ. ಸಿಎಸ್‌ಕೆ ಕೊನೆಯ ಬಾರಿಗೆ ಜಡೇಜಾ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತದೆ. ಅವರು ಪ್ರತಿಕ್ರಿಯಿಸದಿದ್ದರೆ, ತಂಡವು ಬಿಸಿಸಿಐ ಅನ್ನು ಲೂಪ್‌ನಲ್ಲಿ ಇರಿಸಿಕೊಂಡು ಆಟಗಾರನನ್ನು ಬಿಡುಗಡೆ ಮಾಡಬೇಕಾಗುತ್ತದೆ" ಎಂದು ಸಿಎಸ್‌ಕೆ ತಂಡದ ಮೂಲಗಳು ತಿಳಿಸಿವೆ.

ಆಟಗಾರರ ಪಟ್ಟಿ ಸಲ್ಲಿಸಲು ನವೆಂಬರ್ 15 ಕೊನೆ ದಿನ

ಆಟಗಾರರ ಪಟ್ಟಿ ಸಲ್ಲಿಸಲು ನವೆಂಬರ್ 15 ಕೊನೆ ದಿನ

10 ಐಪಿಎಲ್ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸುವಂತೆ ಕೇಳಲಾಗಿದೆ ಎಂದು ಫ್ರಾಂಚೈಸಿಯ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಐಪಿಎಲ್‌ನ ಮುಂದಿನ ಆವೃತ್ತಿಗೆ ಬಿಸಿಸಿಐ ಬಾಲ್ ರೋಲಿಂಗ್ ಅನ್ನು ನಿಗದಿಪಡಿಸಿದೆ ಮತ್ತು ಮಿನಿ ಹರಾಜು ಡಿಸೆಂಬರ್ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಮಂಗಳವಾರದ ಮಂಡಳಿಯ ಎಜಿಎಂ ನಂತರ ಬಿಸಿಸಿಐ ಹರಾಜಿನ ಅಧಿಕೃತ ದಿನಾಂಕವನ್ನು ಬಿಡುಗಡೆ ಮಾಡಲಿದೆ. ಆದರೆ ಡಿಸೆಂಬರ್ 16 ರಂದು ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ ಹೇಳಲಾಗಿದೆ.

T20 World Cup: ದುರ್ಬಲ ತಂಡಗಳು ಬಲಿಷ್ಠ ತಂಡಗಳಿಗೆ ಶಾಕ್ ನೀಡಿದ ಐದು ಪ್ರಮುಖ ಪಂದ್ಯಗಳು ಇವು

ವೇತನದ ಮಿತಿ 5 ಕೋಟಿ ರುಪಾಯಿ ಹೆಚ್ಚಳ

ವೇತನದ ಮಿತಿ 5 ಕೋಟಿ ರುಪಾಯಿ ಹೆಚ್ಚಳ

ವೇತನದ ಮಿತಿಯನ್ನು 90 ಕೋಟಿ ರುಪಾಯಿಗಳಿಂದ 95 ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ. ಮಿನಿ-ಹರಾಜಿನಲ್ಲಿ, ಫ್ರಾಂಚೈಸಿಗಳು ಕಳೆದ ಮೆಗಾ ಹರಾಜಿನ ಸಮಯದಲ್ಲಿ ಅವರು ಖರ್ಚು ಮಾಡಿದ ನಂತರ ಉಳಿದಿರುವ ಬಾಕಿ ಮೊತ್ತದೊಂದಿಗೆ ಆಟಗಾರರನ್ನು ಬಿಡ್ ಮಾಡಬಹುದು ಮತ್ತು ಆಟಗಾರರನ್ನು ಬಿಡುಗಡೆ ಮಾಡಿದ ನಂತರ ಉಳಿಯುವ ಮೊತ್ತವನ್ನು ಹರಾಜಿಗೆ ವಿನಿಯೋಗಿಸಬಹುದು.

ಸಿಎಸ್‌ಕೆ ಜಡೇಜಾ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದರೆ ಅವರು ಮಿನಿ ಹರಾಜಿನಲ್ಲಿ ಖರ್ಚು ಮಾಡಲು 19.45 ಕೋಟಿ ರುಪಾಯಿ ಹೊಂದಿರುತ್ತಾರೆ ಮತ್ತು ಅವರ ಆಯ್ಕೆಯ ಆಟಗಾರರನ್ನು ಖರೀದಿಸಬಹುದು.

ಸಿಎಸ್‌ಕೆ ಮೇಲೆ ಜಡೇಜಾಗೆ ಮುನಿಸು

ಸಿಎಸ್‌ಕೆ ಮೇಲೆ ಜಡೇಜಾಗೆ ಮುನಿಸು

ಜಡೇಜಾ 2012 ರಲ್ಲಿ ಸಿಎಸ್‌ಕೆ ತಂಡವನ್ನು ಸೇರಿದರು, ಆದರೆ ಈಗ ಸಿಎಸ್‌ಕೆಯಿಂದ ಹೊರಗುಳಿದಿದ್ದಾರೆ. ಐಪಿಎಲ್‌ 2022 ರ ಮಧ್ಯದಲ್ಲಿ ಅವರನ್ನು ನಾಯಕತ್ವದಿಂದ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಲಾಯಿತು ಮತ್ತು ಎಂಎಸ್‌ ಧೋನಿಯನ್ನು ನಾಯಕನಾಗಿ ಮತ್ತೆ ನೇಮಿಸಲಾಯಿತು. ಸಿಎಸ್‌ಕೆ ಕೇವಲ ನಾಲ್ಕು ಗೆಲುವಿನೊಂದಿಗೆ 9ನೇ ಸ್ಥಾನ ಗಳಿಸಿತು.

ಐಪಿಎಲ್ 2022 ರಿಂದ ಜಡೇಜಾ ಫ್ರಾಂಚೈಸಿಯೊಂದಿಗೆ ಸಂಪರ್ಕದಲ್ಲಿಲ್ಲ . ಅವರು ಸಿಎಸ್‌ಕೆಯೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಹೊಂದಿದ್ದರೂ, ಸರಿಯಾಗಿ ನಡೆಸಿಕೊಳ್ಳದ ಕಾರಣ ಫ್ರಾಂಚೈಸಿಯೊಂದಿಗೆ ಅವರು ಅಸಮಾಧಾನಗೊಂಡಿದ್ದಾರೆ. ಜಡೇಜಾ ಈಗಾಗಲೇ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತಮ್ಮ ಸಿಎಸ್‌ಕೆ ದಿನಗಳ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಅಳಿಸಿದ್ದಾರೆ. ಅವರು ಸಿಎಸ್‌ಕೆಯನ್ನು ಸಹ ಅನ್‌ಫಾಲೋ ಮಾಡಿದ್ದಾರೆ.

ಸಿಎಸ್‌ಕೆ ತಂಡಕ್ಕೆ ಬರುವ ಸಾಧ್ಯತೆ ಕಡಿಮೆ

ಸಿಎಸ್‌ಕೆ ತಂಡಕ್ಕೆ ಬರುವ ಸಾಧ್ಯತೆ ಕಡಿಮೆ

ಜಡೇಜಾ ಗಾಯಕ್ಕಾಗಿ ಎನ್‌ಸಿಎನಲ್ಲಿ ಪುನರ್ವಸತಿಗೆ ಒಳಗಾಗಿದ್ದರು. ಆದರೆ ಇನ್ನೂ ಸಿಎಸ್‌ಕೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ತನ್ನ ಗಾಯದ ಬಗ್ಗೆ ತಂಡಕ್ಕೆ ಏನನ್ನೂ ತಿಳಿಸಿಲ್ಲ.

ಜಡೇಜಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸಿಎಸ್‌ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಅಳಿಸಿದ್ದಾರೆ. ನಾಯಕ ಧೋನಿ ಅವರ ಜನ್ಮದಿನದಂದು ಶುಭ ಹಾರೈಸಲು ಸಿಎಸ್‌ಕೆ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಕೂಡ ಜಡೇಕಾ ಇರಲಿಲ್ಲ.

"ಜಡೇಜಾ ಸಿಎಸ್‌ಕೆ ವರ್ತನೆಯಿಂದ ಅತೃಪ್ತಿ ಹೊಂದಿದ್ದಾರೆ ಮತ್ತು ತುಂಬಾ ಬೇಸರಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರು ಆಯ್ಕೆಗಳನ್ನು ಹುಡುಕುತ್ತಾರೆ, ಮುಂದಿನ ಬೆಳವಣಿಗೆಗಳು ಏನಾಗುತ್ತದೆ ನೋಡಬೇಕು" ಎಂದು ಜಡೇಜಾಗೆ ನಿಕಟವಾಗಿ ಕೆಲಸ ಮಾಡುವ ವ್ಯಕ್ತಿ ಹೇಳಿದ್ದಾರೆ.

Story first published: Monday, October 17, 2022, 11:37 [IST]
Other articles published on Oct 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X