Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಪಂತ್‌ಗೆ ಸ್ಥಾನ ಸಿಗೋದೆ ಅನುಮಾನ: ಕೋಚ್ ಮತ್ತು ನಾಯಕನ ನಂಬಿಕೆ ಕಳೆದುಕೊಂಡ ರಿಷಭ್

Rishabh pant

ಕಾಂಗರೂ ನಾಡಿನಲ್ಲಿ ಈಗಾಗಲೇ ಬೀಡು ಬಿಟ್ಟಿರುವ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್‌ಗೆ ಭರ್ಜರಿಯಾಗಿ ಸಿದ್ಧತೆ ನಡೆಸಿದೆ. ಟಿ20 ವಿಶ್ವಕಪ್‌ಗಾಗಿ ಬೇಗನೇ ಆಸ್ಟ್ರೇಲಿಯಾಕ್ಕೆ ತೆರಳಿರುವ ಟೀಂ ಇಂಡಿಯಾ ಪ್ರಶಸ್ತಿಗಾಗಿ ಸಜ್ಜಾಗಿದೆ. ಈಗಾಗಲೇ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದೆ. ಇನ್ನು ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ.

ಭಾರತ ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಿಂದ ತನ್ನ ಪ್ರಶಸ್ತಿ ಬೇಟೆ ಆರಂಭಿಸಲಿದೆ. ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರಾಗಿರುವುದು ವಿಶ್ವಕಪ್‌ನ ರೋಚಕತೆಯನ್ನ ಹೆಚ್ಚಿಸಿದೆ. ಭಾರತ ಉಳಿದ ಎರಡು ಅಭ್ಯಾಸ ಪಂದ್ಯಗಳ ನಂತರ ಅಂತಿಮ ಪ್ಲೇಯಿಂಗ್ 11 ತೀರ್ಮಾನಿಸಲಿದ್ದು, ಬಹುತೇಕ ಬದಲಾವಣೆ ಇಲ್ಲದೆ ಟೂರ್ನಿಯಲ್ಲಿ ಮುನ್ನಡೆಯಲಿದೆ.

ಆದ್ರೆ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ವಿಶ್ವಕಪ್‌ನಲ್ಲಿ ಬೆಂಚ್‌ಗೆ ಸೀಮಿತವಾಗಬೇಕಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಎರಡು ಅಭ್ಯಾಸ ಪಂದ್ಯಗಳಲ್ಲಿ ರಿಷಬ್ ಪಂತ್ (9, 9) ಸಂಪೂರ್ಣ ವಿಫಲರಾಗಿದ್ದರು. ಈ ಮೂಲಕ ಅವರು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ವಿಶ್ವಾಸವನ್ನು ಕಳೆದುಕೊಂಡರು.

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

ಮತ್ತೊಂದೆಡೆ, ದಿನೇಶ್ ಕಾರ್ತಿಕ್ ತಂಡದ ಫಿನಿಶರ್ ಆಗಿದ್ದಾರೆ. ಕೊನೆಯಲ್ಲಿ ಬ್ಯಾಟಿಂಗ್ ಗೆ ಬಂದ ಅವರು ತಂಡಕ್ಕೆ ಅಗತ್ಯವಿದ್ದ ಅಮೂಲ್ಯ ರನ್ ಗಳಿಸಿದರು. ಇದರೊಂದಿಗೆ ರಿಷಭ್ ಪಂತ್ ಸ್ಥಾನಕ್ಕೆ ಕಾರ್ತಿಕ್ ಎಂಟ್ರಿ ಕೊಟ್ಟಂತಾಯಿತು. ತಂಡದಲ್ಲಿ ಯಾರಾದರೂ ಗಾಯಗೊಂಡ್ರೆ ಮಾತ್ರ ಅವರು ತಂಡಕ್ಕೆ ಬರಲು ಅವಕಾಶವಿದೆ. ಅಭ್ಯಾಸ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಕೂಡ ವಿಫಲರಾಗಿದ್ದರು. ಆದರೆ ತಂಡ ಅವರನ್ನು ಫಿನಿಶರ್ ಎಂದು ನಂಬಲಾಗಿದೆ.

ಟಿ20 ವಿಶ್ವಕಪ್ 2022: ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಅಧಿಕೃತ ಆಯ್ಕೆ, ಅಂತಿಮ 15 ಆಟಗಾರರ ಸ್ಕ್ವಾಡ್‌ ಇಲ್ಲಿದೆ

ದಿನೇಶ್ ಕಾರ್ತಿಕ್ ವರ್ಸಸ್ ರಿಷಭ್ ಪಂತ್

ದಿನೇಶ್ ಕಾರ್ತಿಕ್ ವರ್ಸಸ್ ರಿಷಭ್ ಪಂತ್

ಈ ವರ್ಷ ಟಿ20ಯಲ್ಲಿ ದಿನೇಶ್ ಕಾರ್ತಿಕ್ 181 ಎಸೆತಗಳನ್ನು ಎದುರಿಸಿದ್ದು 273 ರನ್ ಗಳಿಸಿದ್ದಾರೆ. ಅವರು 19 ಇನ್ನಿಂಗ್ಸ್‌ಗಳಲ್ಲಿ ಈ ಅಂಕಿಅಂಶಗಳನ್ನು ದಾಖಲಿಸಿದ್ದಾರೆ. ಇನ್ನೊಂದೆಡೆ ರಿಷಬ್ ಪಂತ್ 17 ಇನ್ನಿಂಗ್ಸ್ ಗಳಲ್ಲಿ 338 ರನ್ ಗಳಿಸಿದ್ದರೂ ತಂಡ ಬಯಸಿದ ಪಾತ್ರಕ್ಕೆ ಸೆಟ್ ಆಗುತ್ತಿಲ್ಲ. ಕಾರ್ತಿಕ್ 150.82 ಸ್ಟ್ರೈಕ್ ರೇಟ್‌ನೊಂದಿಗೆ ಫಿನಿಶರ್ ಆಗಿ ಆಡಿದರು. ಪಂತ್ 136.84 ಸ್ಟ್ರೈಕ್ ರೇಟ್‌ನೊಂದಿಗೆ 5 ನೇ ಸ್ಥಾನದಲ್ಲಿ ಆಡಿದರು. ಆದರೆ ಇದು ತಂಡಕ್ಕೆ ಬೇಕಿಲ್ಲದ ಕಾರಣ ಕಾರ್ತಿಕ್‌ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ತಂಡಕ್ಕೆ ಕೊನೆಯಲ್ಲಿ ಆಡಿದ ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸುವ ಫಿನಿಶರ್ ಅಗತ್ಯವಿದೆ.

T20 World Cup: ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ ಈ ಮೂವರ ನಡುವೆ ಭಾರಿ ಪೈಪೋಟಿ

ರಿಷಭ್ ಪಂತ್ ಆಡಿಸಬೇಕಾದ್ರೆ, ಓರ್ವ ಆಲ್‌ರೌಂಡರ್ ಹೊರಗುಳಿಯಬೇಕು!

ರಿಷಭ್ ಪಂತ್ ಆಡಿಸಬೇಕಾದ್ರೆ, ಓರ್ವ ಆಲ್‌ರೌಂಡರ್ ಹೊರಗುಳಿಯಬೇಕು!

ಒಂದು ವೇಳೆ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಂಡರೆ 5-6 ಸ್ಥಾನಗಳಲ್ಲಿ ಆಡುವ ಆಲ್ ರೌಂಡರ್ ಹೊರಗುಳಿಯಬೇಕಾಗುತ್ತದೆ. ಪಂತ್ ತಂಡಕ್ಕೆ ಬಂದರೆ ಅಕ್ಷರ್ ಪಟೇಲ್, ದೀಪಕ್ ಹೂಡಾ, ಅಶ್ವಿನ್ ರಂತಹ ಆಲ್ ರೌಂಡರ್ ಗಳು ಆಡುವಂತಿಲ್ಲ. ಪಂತ್ ಕೂಡ ಇದುವರೆಗೆ ಟಿ20ಯಲ್ಲಿ ತಮ್ಮ ಛಾಪು ತೋರಿಸಿಲ್ಲ. ಆದರೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅಂತಿಮ ತಂಡದ ಆಯ್ಕೆಯ ಬಗ್ಗೆ ನಿರ್ಧಾರಕ್ಕೆ ಬರುತ್ತಾರೆ. ಈ ಪಂದ್ಯಗಳಲ್ಲಿ ಪಂತ್ ಜೊತೆಗೆ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲಿದ್ದಾರೆ. ಈ ಅಭ್ಯಾಸ ಪಂದ್ಯಗಳಲ್ಲಿ ಪಂತ್ ಯಾವುದೇ ಅದ್ಭುತಗಳನ್ನು ಮಾಡದ ಹೊರತು, ಅವರು ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವಿಲ್ಲ.

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಅಂತಿಮ 15 ಆಟಗಾರರ ಸ್ಕ್ವಾಡ್

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಅಂತಿಮ 15 ಆಟಗಾರರ ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್.

Story first published: Friday, October 14, 2022, 19:16 [IST]
Other articles published on Oct 14, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+