ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ ಈ ಮೂವರ ನಡುವೆ ಭಾರಿ ಪೈಪೋಟಿ

T20 World Cup: Next 2 Warm Up Matches Will Decide 1 Slot In Team India Playing XI

ಟಿ20 ವಿಶ್ವಕಪ್ ಆರಂಭಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ. ಪರ್ತ್‌ನಲ್ಲಿ ತರಬೇತಿ ಪಡೆದಿರುವ ಟೀಂ ಇಂಡಿಯಾ, ಈಗ ಬ್ರಿಸ್ಬೇನ್‌ನಲ್ಲಿ ಅಭ್ಯಾಸ ಪಂದ್ಯಗಳನ್ನಾಡಲು ಸಜ್ಜಾಗುತ್ತಿದೆ. ಗುರುವಾರ ವೆಸ್ಟರ್ನ್ ಆಸ್ಟ್ರೇಲಿಯ ಇಲೆವೆನ್ ವಿರುದ್ಧ ಭಾರತ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಸೋತಿತ್ತು.

T20 World Cup 2022: ಸೂಪರ್ 12 ಸುತ್ತಿಗೆ ಅರ್ಹತೆ ಪಡೆಯಬಹುದಾದ 4 ತಂಡಗಳಿವುT20 World Cup 2022: ಸೂಪರ್ 12 ಸುತ್ತಿಗೆ ಅರ್ಹತೆ ಪಡೆಯಬಹುದಾದ 4 ತಂಡಗಳಿವು

ಅಕ್ಟೋಬರ್ 17 ಮತ್ತು 19ರಂದು ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಲಿದೆ. ಭಾರತದ ನಾಯಕ ರೋಹಿತ್ ಶರ್ಮಾ ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸಂಭಾವ್ಯ ಆಡುವ ಹನ್ನೊಂದರ ಬಳಗದಲ್ಲಿ ಒಂದು ಸ್ಥಾನವನ್ನು ನಿರ್ಧರಿಸಲು ಈ ಪಂದ್ಯಗಳು ನಿರ್ಣಾಯಕ ಪಾತ್ರ ವಹಿಸಲಿವೆ.

ಈ ಸ್ಥಾನಕ್ಕಾಗಿ ಅಕ್ಷರ್ ಪಟೇಲ್, ದೀಪಕ್ ಹೂಡಾ ಮತ್ತು ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಡುವೆ ಸ್ಪಷ್ಟ ತ್ರಿಕೋನ ಹೋರಾಟವಿದೆ. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ಮನ್ನಣೆ ಇಲ್ಲದ ಕಾರಣದ ತಂಡದಲ್ಲಿ ಒಬ್ಬ ಸ್ಪಿನ್ನರ್ ಮಾತ್ರ ಆಡುವ ಸಾಧ್ಯತೆ ಇದೆ. ಆದರೆ, ಮೂವರಲ್ಲಿ ಯಾರು ಅಂತಿಮವಾಗಿ ಸ್ಥಾನ ಪಡೆಯುತ್ತಾರೆ ಎನ್ನುವುದು ಈ ಎರಡು ಪಂದ್ಯಗಳಲ್ಲಿ ನೀಡುವ ಪ್ರದರ್ಶನವನ್ನು ಅವಲಂಬಿಸಿದೆ.

ಸಾಮರ್ಥ್ಯ ಸಾಬೀತುಪಡಿಸಬೇಕಿದೆ ಅಕ್ಷರ್

ಸಾಮರ್ಥ್ಯ ಸಾಬೀತುಪಡಿಸಬೇಕಿದೆ ಅಕ್ಷರ್

ಅಶ್ವಿನ್ ಮತ್ತು ದೀಪಕ್ ಹೂಡಾ ಅವರಿಗಿಂತ ಅಕ್ಷರ್ ಪಟೇಲ್ ಟೀಂ ಇಂಡಿಯಾಕ್ಕೆ ಮೊದಲನೇ ಆಯ್ಕೆಯಾಗಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಕ್ಷರ್ ಪಟೇಲ್ ನೀಡಿರುವ ಪ್ರದರ್ಶನ ಅವರ ಸಾಮರ್ಥ್ಯ ಈಗಾಗಲೇ ಸಾಬೀತಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೊಹಾಲಿಯ ಪಂದ್ಯದಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದ ಅಕ್ಷರ್ ಪಟೇಲ್, ನಾಗ್ಪುರದಲ್ಲಿ ಎರಡು ವಿಕೆಟ್ ಪಡೆದರೆ, ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದರು. ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ಉತ್ತಮವಾಗಿ ತಮ್ಮ ಪಾತ್ರ ನಿಭಾಯಿಸುತ್ತಿದ್ದಾರೆ.

ಪವರ್‌ಪ್ಲೇ ಸಮಯದಲ್ಲಿ ಬೌಲ್ ಮಾಡುವ ಮತ್ತು ಕೊಡುಗೆ ನೀಡುವ ಸಾಮರ್ಥ್ಯವನ್ನು ಅಕ್ಷರ್ ಹೊಂದಿದ್ದಾರೆ. ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡಲು ಇಷ್ಟಪಡುತ್ತಾರೆ, ಅಲ್ಲಿ ಬೃಹತ್ ಬೌಂಡರಿಗಳು ಅಕ್ಷರ್ ಪಟೇಲ್‌ ಬೌಲಿಂಗ್‌ಗೆ ಅನುಕೂಲಕರವಾಗಿವೆ.

ಆದರೆ, ಅಕ್ಷರ್ ಪಟೇಲ್‌ಗೆ ಇರುವ ಚಿಂತೆ ಎಂದರೆ, ಆಸ್ಟ್ರೇಲಿಯಾ ನೆಲದಲ್ಲಿ ಟಿ 20 ವಿಶ್ವಕಪ್‌ನಲ್ಲಿ ಒಬ್ಬ ಸ್ಪಿನ್ನರ್ ಆಡಲು ಮಾತ್ರ ಅವಕಾಶವಿದೆ. ತಂಡದ ಪ್ರೀಮಿಯಂ ಸ್ಪಿನ್ನರ್ ಯುಜುವೇಂದ್ರ ಚಹಾಲ್‌ಗೆ ಮಣೆ ಹಾಕಿದರೆ ಅಕ್ಷರ್ ಪಟೇಲ್ ಸ್ಥಾನ ಕಳೆದುಕೊಳ್ಳುವ ಭೀತಿ ಇದೆ. ಆದ್ದರಿಂದ, ಈ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅಕ್ಷರ್ ಪಟೇಲ್ ತಮ್ಮ ಸಾಮರ್ಥ್ಯ ಸಾಬೀತು ಪಡಿಸಬೇಕಾಗಿದೆ.

ಆಸ್ಟ್ರೇಲಿಯಾ vs ಇಂಗ್ಲೆಂಡ್: ಕ್ರೀಸ್ ಬಿಟ್ಟ ಜೋಸ್ ಬಟ್ಲರ್‌ಗೆ ಮಿಚೆಲ್ ಸ್ಟಾರ್ಕ್ ಎಚ್ಚರಿಕೆ

ಅಪಾರ ಅನುಭವ ಹೊಂದಿರುವ ರವಿಚಂದ್ರನ್ ಅಶ್ವಿನ್

ಅಪಾರ ಅನುಭವ ಹೊಂದಿರುವ ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾದ ಪ್ರಮುಖ ಅನುಭವಿ ಆಟಗಾರ. ಆಸ್ಟ್ರೇಲಿಯಾ ನೆಲದಲ್ಲಿ ಕೂಡ ಅವರಿಗೆ ಅಪಾರ ಅನುಭವ ಇದೆ. ಬೌಲಿಂಗ್ ಮಾತ್ರವಲ್ಲ ಬ್ಯಾಟಿಂಗ್‌ನಲ್ಲೂ ಮಿಂಚುವ ಸಾಮರ್ಥ್ಯ ಅವರಿಗೆ ಇದೆ.

ವೆಸ್ಟರ್ನ್ ಆಸ್ಟ್ರೇಲಿಯಾ XI ವಿರುದ್ಧದ ಕೊನೆಯ ಅಭ್ಯಾಸ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್ ಇದನ್ನು ಸಾಬೀತುಪಡಿಸಿದರು. 2ನೇ ಅಭ್ಯಾಸ ಪಂದ್ಯದಲ್ಲಿ ಅಶ್ವಿನ್ ಮೂರು ವಿಕೆಟ್ ಪಡೆದರು. ಎಲ್ಲಾ ವಿಕೆಟ್‌ಗಳು ಒಂದೇ ಓವರ್‌ನಲ್ಲಿ ಬಂದವು.

ಅಶ್ವಿನ್ ಪ್ರಸ್ತುತ ಟಿ20 ವಿಶ್ವಕಪ್‌ಗಾಗಿ ಪ್ಲೇಯಿಂಗ್ XI ನಲ್ಲಿ ಭಾರತದ ಮೊದಲ ಆಯ್ಕೆಯ ಸ್ಪಿನ್ನರ್ ಯುಜ್ವೇಂದ್ರ ಚಹಾಲ್‌ಗೆ ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ.

ಆಸ್ಟ್ರೇಲಿಯಾದ ವಿಕೆಟ್‌ಗಳು ಪ್ರಾಥಮಿಕವಾಗಿ ವೇಗಿಗಳಿಗೆ ಸೂಕ್ತವಾಗಿವೆ. ಆದರೂ ಎಲ್ಲಾ ತಂಡಗಳು ಸ್ಪಿನ್ನರ್ ಜೊತೆ ಆಡಲು ಬಯಸುತ್ತವೆ. ಭಾರತವು ಪಿಚ್‌ಗಳನ್ನು ಲೆಕ್ಕಿಸದೆ ಸ್ಪಿನ್ನರ್‌ಗಳನ್ನು ಆಡಿದ ಇತಿಹಾಸವನ್ನು ಹೊಂದಿದೆ.

ವಿಶ್ವಕಪ್‌ ಆರಂಭಕ್ಕೆ ಮುನ್ನ ಭಾರತ ಕೊನೆಯ ಎರಡು ಪಂದ್ಯಗಳಲ್ಲಿ ಯಾವ ಸಂಯೋಜನೆಗಳನ್ನು ಆಡಲಿದೆ ಎಂಬುದು ಈಗ ಕುತೂಹಲಕಾರಿಯಾಗಿದೆ.

ಉತ್ತಮ ಪ್ರದರ್ಶನ ನೀಡಬೇಕಿದೆ ದೀಪಕ್ ಹೂಡಾ

ಉತ್ತಮ ಪ್ರದರ್ಶನ ನೀಡಬೇಕಿದೆ ದೀಪಕ್ ಹೂಡಾ

ಟಿ20 ವಿಶ್ವಕಪ್‌ನಲ್ಲಿ ದೀಪಕ್ ಹೂಡಾ ಭಾರತದ ಮೊದಲ ಆಯ್ಕೆಯಾಗಿರುವುದಿಲ್ಲ. ಮೊದಲ ಮತ್ತು ಎರಡನೇ ಅಭ್ಯಾಸ ಪಂದ್ಯಗಳೆರಡರಲ್ಲೂ ದೀಪಕ್ ಹೂಡಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದರು.

ಆಫ್-ಸ್ಪಿನ್ ಬೌಲ್ ಮಾಡಬಲ್ಲ ಮತ್ತು ಫ್ಲೋಟರ್ ಆಗಿಯೂ ಕಾರ್ಯನಿರ್ವಹಿಸಬಲ್ಲ ಆಟಗಾರರಲ್ಲಿ ಹೂಡಾ ಒಬ್ಬರು. ಗಾಯ ಅಥವಾ ತಂಡದ ಲೈನ್‌ಅಪ್‌ನಲ್ಲಿ ಬದಲಾವಣೆಯ ಸಂದರ್ಭದಲ್ಲಿ, ಮ್ಯಾನೇಜ್‌ಮೆಂಟ್ ದೀಪಕ್ ಹೂಡಾರನ್ನು ವಿಶ್ವಕಪ್‌ಗೆ ಸಿದ್ಧಗೊಳಿಸಲು ಅಭ್ಯಾಸ ಪಂದ್ಯಗಳನ್ನು ಬಳಸಿಕೊಳ್ಳಬಹುದಾಗಿದೆ.

ಎರಡನೇ ಅಭ್ಯಾಸ ಪಂದ್ಯದಲ್ಲಿ, ಹೂಡಾ ಎರಡು ಓವರ್‌ಗಳನ್ನು ಬೌಲ್ ಮಾಡಿ 22 ರನ್‌ಗಳನ್ನು ಬಿಟ್ಟುಕೊಟ್ಟರು. ಬ್ಯಾಟಿಂಗ್ ಮಾಡಲು ಸಾಕಷ್ಟು ಸಮಯವನ್ನು ಪಡೆದರೂ, ಅವರು ವೆಸ್ಟರ್ನ್ ಆಸ್ಟ್ರೇಲಿಯಾ XI ವಿರುದ್ಧ ಕೇವಲ ಆರು ರನ್ ಗಳಿಸಿದರು.

Story first published: Friday, October 14, 2022, 18:19 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X