For Quick Alerts
ALLOW NOTIFICATIONS  
For Daily Alerts
 

ಅಂಡರ್-19 ವಿಶ್ವಕಪ್‌: ಫೈನಲ್ ಪ್ರವೇಶಿಸಿದ ಇಂಗ್ಲೆಂಡ್, ಅಫ್ಘಾನಿಸ್ತಾನದ ಕನಸು ನುಚ್ಚುನೂರು

England Under 19 Team

ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನ ಮಣಿಸಿದ ಇಂಗ್ಲೆಂಡ್ ಜ್ಯೂನಿಯರ್ ತಂಡವು ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ ಅಫ್ಘಾನಿಸ್ತಾನದ ಕಪ್‌ ಗೆಲ್ಲುವ ಕನಸು ಅಂತ್ಯಗೊಂಡಿದೆ.

ಆ್ಯಂಟಿಗುವಾದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ಆರಂಭಿಕ ಆಘಾತದ ನಡುವೆ ಓಪನರ್ ಜಾರ್ಜ್ ಥಾಮಸ್‌ ಅರ್ಧಶತಕದ ಮೂಲಕ ನೆರವಾದ್ರು. 69 ಎಸೆತಗಳಲ್ಲಿ 50 ರನ್ ಕಲೆಹಾಕಿದ ಜಾರ್ಜ್‌ಗೆ ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ ಕೂಡ ನೆರವಾಗಲಿಲ್ಲ. ಆದ್ರೆ ಕೆಳಕ್ರಮಾಂಕದಲ್ಲಿ ಜಾರ್ಜ್‌ ಬೆಲ್ 56 ರನ್‌ ಕಲೆಹಾಕಿ ಕುಸಿದಿದ್ದ ತಂಡಕ್ಕೆ ಆಧಾರವಾದ್ರು.

ಜಾರ್ಜ್ ಬೆಲ್ 67 ಎಸೆತಗಳಲ್ಲಿ 56 ರನ್ ಕಲೆಹಾಕುವ ಮೂಲಕ ತಂಡದ ಮೊತ್ತ 200ರ ಗಡಿದಾಟುವಲ್ಲಿ ನೆರವಾದ್ರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್‌ ಹೊರ್ಟನ್ 36 ಎಸೆತಗಳಲ್ಲಿ 53 ರನ್‌ ಕಲೆಹಾಕುವ ಮೂಲಕ ಇಂಗ್ಲೆಂಡ್ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಸಾಧ್ಯವಾಯಿತು. ಮಳೆಯಿಂದಾಗಿ ಪಂದ್ಯವು ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ 47 ಓವರ್‌ಗಳಿಗೆ ಸೀಮಿತಗೊಂಡಿತ್ತು. ಇಂಗ್ಲೆಂಡ್ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 231 ರನ್ ಕಲೆಹಾಕಿತು.

232 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನದ ಮೊದಲ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡಿತಾದ್ರೂ, ಮತ್ತೊಬ್ಬ ಓಪನರ್ ಮೊಹಮ್ಮದ್ ಇಶಾಕ್ 43, ಅಲ್ಲಾ ನೂರ್ 60ರನ್‌ಗಳ ಕಲೆಹಾಖಿ ಎರಡನೇ ವಿಕೆಟ್‌ಗೆ ಉತ್ತಮ ಜೊತೆಯಾಟವಾಡಿದ್ರು. ಈ ಇಬ್ಬರು ಆಟಗಾರರ ವಿಕೆಟ್ ಪತನದ ಬಳಿಕ ಅಫ್ಘನ್ ನಾಯಕ ಸುಲಿಮನ್ ಸೈಫ್ ಶೂನ್ಯಕ್ಕೆ ಔಟಾಗಿ ತಂಡಕ್ಕೆ ಆಘಾತ ನೀಡಿದ್ರು.

ಅಬ್ದುಲ್ ಹಲ್ದಿ ಅಜೇಯ 37, ಬಿಲಾಲ್ ಅಹ್ಮದ್ 33 ರನ್‌ಗಳ ಕೊಡಗೆ ನೀಡಿದಾದ್ರೂ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ವೈಫಲ್ಯವು ಅಫ್ಘಾನಿಸ್ತಾನ ತಂಡವನ್ನ ಸೋಲಿನ ದವಡೆಗೆ ನೂಕಿತು. ಅಂತಿಮವಾಗಿ 47 ಓವರ್‌ಗಳಲ್ಲಿ ಅಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 215 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಪರಿಣಾಮ 15 ರನ್‌ಗಳ ಗೆಲುವು ಸಾಧಿಸಿದ ಇಂಗ್ಲೆಂಡ್ ವಿಶ್ವಕಪ್‌ ಫೈನಲ್ ಪ್ರವೇಶ ಪಡೆದಿದೆ. ಚೊಚ್ಚಲ ಫೈನಲ್ ಪ್ರವೇಶಿಸುವ ಅವಕಾಶ ಹೊಂದಿದ್ದ ಅಫ್ಘಾನಿಸ್ತಾನ ನಿರಾಸೆಯಿಂದ ತವರಿನತ್ತ ಹೊರಟಿದೆ. ಇಂಗ್ಲೆಂಡ್ ಪರ 6 ಓವರ್‌ಗಳಲ್ಲಿ 41 ರನ್ ನೀಡಿ 4 ವಿಕೆಟ್ ಕಬಳಿಸಿದ ರೆಹನ್ ಅಹ್ಮದ್ ಯಶಸ್ವಿ ಬೌಲರ್ ಎನಿಸಿಕೊಂಡ್ರು.

ಇಂದು ಭಾರತ v/s ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯ
ಬುಧವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಜ್ಯೂನಿಯರ್ ತಂಡಕ್ಕೆ ಆಸ್ಟ್ರೇಲಿಯಾ ಕಿರಿಯರ ತಂಡ ಸವಾಲೊಡ್ಡಲಿದೆ. ಅಂಡರ್ -19 ವಿಶ್ವಕಪ್‌ನಲ್ಲಿ 10ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವ ಭಾರತವು ಈಗಾಗಲೇ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಐದನೇ ಬಾರಿಗೆ ಭಾರತದ ಹುಡುಗರು ಕಪ್ ಎತ್ತಿ ಹಿಡಿಯುವ ವಿಶ್ವಾಸ ಹೊಂದಿದ್ದಾರೆ.

ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವ ಭಾರತ- ಆಸ್ಟ್ರೇಲಿಯಾ ತಂಡದ ಸ್ಕ್ವಾಡ್ ಹೀಗಿದೆ

ಭಾರತ ಅಂಡರ್ 19 ಸ್ಕ್ವಾಡ್:

ಯಶ್ ಧುಲ್ (ನಾಯಕ), ದಿನೇಶ್ ಬಾನಾ (ವಿಕೆಟ್ ಕೀಪರ್), ಆಂಗ್ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಸಿದ್ದಾರ್ಥ್ ಯಾದವ್, ರಾಜ್ ಬಾವಾ, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್ಗೇಕರ್, ವಿಕ್ಕಿ ಓಸ್ತ್ವಾಲ್, ರವಿಕುಮಾರ್, ಮಾನವ್ ಪರಾಖ್, ನಿಶಾಂತ್ ಸಿಂಧು, ಅನೀಶ್ವರ್ ಗೌತಮ್, ಆರಾಧ್ಯ ಯಾದವ್, ಗರ್ವ್ ಸಾಂಗ್ವಾನ್

ಆಸ್ಟ್ರೇಲಿಯಾ ಅಂಡರ್ 19 ಸ್ಕ್ವಾಡ್:

ಪಟ್ಟ ಇರ‌್ಲಿ ಬಿಡ್ಲಿ ಯಾವತ್ತಿದ್ರೂ ನಾನೇ ನಾಯಕ ಎಂದು Rohit ಗೆ ಟಾಂಗ್ ಕೊಟ್ಟ Kohli | Oneindia Kannada

ಕೂಪರ್ ಕೊನೊಲಿ (ನಾಯಕ), ಟೋಬಿಯಾಸ್ ಸ್ನೆಲ್ (ವಿಕೆಟ್ ಕೀಪರ್), ಕ್ಯಾಂಪ್‌ಬೆಲ್ ಕೆಲ್ಲವೇ, ಟೀಗ್ ವೈಲ್ಲಿ, ಕೋರೆ ಮಿಲ್ಲರ್, ಲಾಚ್ಲಾನ್ ಶಾ, ಏಡನ್ ಕಾಹಿಲ್, ವಿಲಿಯಂ ಸಾಲ್ಜ್‌ಮನ್, ಟಾಮ್ ವಿಟ್ನಿ, ಜ್ಯಾಕ್ ಸಿನ್‌ಫೀಲ್ಡ್, ಜ್ಯಾಕ್ ನಿಸ್ಬೆಟ್, ಹರ್ಕಿರತ್ ಬಾಜ್ವಾ, ಜೋಶ್ವಾಕ್ ಗಾರ್ವಾ ಹಿಗ್ಗಿನ್ಸ್, ನಿವೇತನ್ ರಾಧಾಕೃಷ್ಣನ್

Story first published: Wednesday, February 2, 2022, 13:58 [IST]
Other articles published on Feb 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+