ಮಹಿಳಾ ವಿಶ್ವಕಪ್: ಭಾರತ V/S ವೆಸ್ಟ್ ಇಂಡೀಸ್ ಪ್ಲೇಯಿಂಗ್ 11, ಪಿಚ್ ರಿಪೋರ್ಟ್

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಶನಿವಾರ ಭಾರತ-ವೆಸ್ಟ್ ಇಂಡೀಸ್ ಮಹಿಳಾ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್‌ನ 10ನೇ ಪಂದ್ಯದಲ್ಲಿ ಸತತ ಎರಡು ಗೆಲುವು ಸಾಧಿಸಿರುವ ವೆಸ್ಟ್ ಇಂಡೀಸ್ ವನಿತೆಯರು ಮತ್ತು ತಲಾ ಒಂದು ಗೆಲುವು ಮತ್ತು ಸೋಲನ್ನ ಕಂಡಿರುವ ಭಾರತದ ವನಿತೆಯರು ಎದುರಾಗುತ್ತಿದ್ದಾರೆ.
ವೆಸ್ಟ್ ಇಂಡೀಸ್ ತಂಡವು ಮೊದಲೆರಡು ಪಂದ್ಯಗಳಲ್ಲಿ ಬಲಿಷ್ಠ ತಂಡಗಳಾದ ಹಾಗೂ ಟ್ರೋಫಿ ಗೆಲ್ಲುವ ಫೆವರಿಟ್ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಗೆದ್ದು ಅಬ್ಬರಿಸಿದೆ. ಆತಿಥೇಯ ನ್ಯೂಜಿಲೆಂಡ್ ವಿರುದ್ಧ 3 ರನ್ ಮತ್ತು ಇಂಗ್ಲೆಂಡ್ ವಿರುದ್ಧ 7ರನ್‌ಗಳ ಜಯ ಸಾಧಿಸಿದೆ.
ಅತ್ತ ಭಾರತದ ವನಿತೆಯರು ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲುವನ್ನ ಸಾಧಿಸಿ ಉತ್ತಮ ಆರಂಭ ಪಡೆಯಿತಾದ್ರೂ, ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್ ವೈಫಲ್ಯದಿಂದ 62 ರನ್‌ಗಳ ಸೋಲನ್ನ ಕಂಡಿದೆ.

ಹ್ಯಾಮಿಲ್ಟನ್ ಮೈದಾನದಲ್ಲಿ ಭಾರತ-ವಿಂಡೀಸ್ ಮುಖಾಮುಖಿ
ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಭಾರತ-ವೆಸ್ಟ್ ಇಂಡೀಸ್ ಮಹಿಳಾ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯದ ಸಮಯ ಮತ್ತು ನೇರಪ್ರಸಾರದ ಮಾಹಿತಿ ಈ ಕೆಳಗಿದೆ.
ದಿನಾಂಕ & ಸಮಯ: ಮಾರ್ಚ್ 12, 6.30AM IST
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟವರ್ಕ್ ಮತ್ತು ಡಿಸ್ನಿ+ಹಾಟ್‌ಸ್ಟಾರ್
ವಿದಾಯದ ಪಂದ್ಯವನ್ನಾಡಲು ಅವಕಾಶ ನೀಡದಿರುವುದು ಬೇಸರ ತರಿಸಿದೆ: ಎಸ್. ಶ್ರೀಶಾಂತ್

ಪಿಚ್ ರಿಪೋರ್ಟ್
ಹ್ಯಾಮಿಲ್ಟನ್ ಸೆಡ್ಡನ್ ಪಾರ್ಕ್‌ನಲ್ಲಿ ಬೌಲರ್‌ಗಳಿಗಿಂತ ಬ್ಯಾಟಿಂಗ್ ಮಾಡಲು ಉತ್ತಮ ವಿಕೆಟ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಉತ್ತಮ ರನ್‌ಗಳನ್ನ ಹೊಂದುವುದು ಅವಶ್ಯಕ. ಏಕೆಂದರೆ ಇಲ್ಲಿ ಯಾವಾಗಲೂ ಮೊದಲು ಬ್ಯಾಟಿಂಗ್ ಮಾಡುವುದು ಅತ್ಯುತ್ತಮ ಆಯ್ಕೆಯಾಗಿದೆ.
ಐಪಿಎಲ್: ಕಳೆದ ಆವೃತ್ತಿಯಲ್ಲಿ ಕೊಹ್ಲಿ ಸಲ್ಲಿಸಿದ್ದ ರಾಜೀನಾಮೆಯನ್ನು ಇನ್ನೂ ಸ್ವೀಕರಿಸಿಲ್ಲ ಆರ್‌ಸಿಬಿ!

ಭಾರತ-ವೆಸ್ಟ್ ಇಂಡೀಸ್ ಮಹಿಳೆಯರ ಸಂಭಾವ್ಯ ಪ್ಲೇಯಿಂಗ್ 11
ವೆಸ್ಟ್ ಇಂಡೀಸ್ ವನಿತೆಯರು
ಡಿಯಾಂಡ್ರಾ ಡಾಟಿನ್, ಹೇಲಿ ಮ್ಯಾಥ್ಯೂಸ್, ಕೈಸಿಯಾ ನೈಟ್, ಸ್ಟಾಫನಿ ಟೇಲರ್ (ನಾಯಕಿ), ಶೆಮೈನ್ ಕ್ಯಾಂಪ್‌ಬೆಲ್ಲೆ (ವಿಕೆಟ್ ಕೀಪರ್), ಚೆಡಿಯನ್ ನೇಷನ್, ಚಿನೆಲ್ಲೆ ಹೆನ್ರಿ, ಆಲಿಯಾ ಅಲೀನ್, ಅನಿಸಾ ಮೊಹಮ್ಮದ್, ಶಾಮಿಲಿಯಾ ಕಾನ್ನೆಲ್, ಶಕೆರಾ ಸೆಲ್ಮನ್
ಭಾರತದ ವನಿತೆಯರು
ಯಾಸ್ತಿಕಾ ಭಾಟಿಯಾ, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಮಿಥಾಲಿ ರಾಜ್ (ನಾಯಕ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications